ಆಯುರ್ವೇದ ಟಿಪ್ಸ್: ನೀರು ಕುಡಿಯುವ ಸರಿಯಾದ ವಿಧಾನ- ತಪ್ಪದೇ ಅನುಸರಿಸಿ

By: Arshad
Subscribe to Boldsky

ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲ ಮಾಡಬೇಕೆಂದರೆ ನೀರು ಬೇಕೇ ಬೇಕು. ನಾವೆಲ್ಲಾ ತಿಳಿದಿರುವಂತೆ ನೀರಿನಲ್ಲಿರುವ ಪ್ರಮುಖ ಗುಣವೆಂದರೆ ಆರ್ದ್ರತೆ. ಈ ಗುಣವನ್ನು ಹೆಚ್ಚಿಸಲು ಕೆಲವು ವಿಧಾನಗಳಿವೆ. ನೀರು ಅತ್ಯುತ್ತಮವೇನೋ ಹೌದು, ಆದರೆ ಇದನ್ನು ಸೂಕ್ತ ವಿಧಾನದಲ್ಲಿ ಕುಡಿದರೆ ಮಾತ್ರ ಇದರ ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯ. ಆಯುರ್ವೇದ ಇಂತಹ ಕೆಲವು ವಿಧಾನಗಳನ್ನು ಪ್ರಸ್ತುತಪಡಿಸಿದೆ.

ಕೆಲವು ಮೂಲಿಕೆಗಳ ಪುಡಿಗಳನ್ನು ಬೆರೆಸಿ ಕುದಿಸಿ ತಣಿಸಿ ಕುಡಿಯುವ ಮೂಲಕ ನೀರಿನ ಗುಣವನ್ನು ಇನ್ನೂ ಹೆಚ್ಚಿಸಲು ಸಾಧ್ಯ. ಈ ನೀರಿನ ಸೇವನೆಯಿಂದ ಪ್ರಮುಖವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ತನ್ಮೂಲಕ ಕೆಲವಾರು ಕಾಯಿಲೆಗಳ ವಿರುದ್ಧ ರಕ್ಷಣೆ ಪಡೆಯಬಹುದು. ಅಷ್ಟೇ ಅಲ್ಲ, ಕೆಲವಾರು ಅಲರ್ಜಿಗಳ ವಿರುದ್ಧ ರಕ್ಷಣೆ ಹಾಗೂ ಜೀವರಾಸಾಯನಿಕ ಕ್ರಿಯೆಯನ್ನೂ ಚುರುಕುಗೊಳಿಸಬಹುದಾಗಿದೆ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಉದಾಹರಣೆಗೆ ನೀರಿನಲ್ಲಿ ಕೊಂಚ ಹಸಿಶುಂಠಿಯನ್ನು ಕುದಿಸಿ ತಣಿಸಿ ಕುಡಿಯುವ ಮೂಲಕ ಜೀವರಾಸಾಯನಿಕ ಕ್ರಿಯೆಯನ್ನು ತಕ್ಷಣವೇ ಚುರುಕುಗೊಳಿಸಬಹುದು. ಇಂದಿನ ಲೇಖನದಲ್ಲಿ ಆಯುರ್ವೇದ ಸೂಚಿಸಿರುವ ಇಂತಹ ಕೆಲವಾರು ವಿಧಾನಗಳನ್ನು ಪ್ರಸ್ತುತಪಡಿಸಲಾಗಿದ್ದು ಇವು ಕುಡಿಯಲು ಅತ್ಯುತ್ತಮವಾದ ದ್ರವವಾಗಿವೆ....

ಮೆಂತೆ, ಜೀರಿಗೆ ಮತ್ತು ಧನಿಯ ಕಾಳುಗಳು

ಮೆಂತೆ, ಜೀರಿಗೆ ಮತ್ತು ಧನಿಯ ಕಾಳುಗಳು

ಸುಮಾರು ಅರ್ಧ ಕಪ್ ನಷ್ಟು ಕುದಿಯುತ್ತಿರುವ ನೀರಿಗೆ ತಲಾ ಐದು ಕಾಳುಗಳಷ್ಟು ಮೆಂತೆ, ಜೀರಿಗೆ ಮತ್ತು ಧನಿಯ ಕಾಳುಗಳನ್ನು ಹಾಕಿ ಸುಮಾರು ಹತ್ತು ನಿಮಿಷ ಕುದಿಸುವುದನ್ನು ಮುಂದುವರೆಸಿ ಬಳಿಕ ಉರಿ ಆರಿಸಿ ಎರಡು ನಿಮಿಷ ಹಾಗೇ ಬಿಡಿ. ಬಳಿಕ ಈ ನೀರನ್ನು ಸೋಸಿ ನೀರನ್ನು ಸಂಗ್ರಹಿಸಿ. ಈ ನೀರನ್ನು ತಣಿಸಿದ ಬಳಿಕ ಕುಡಿಯುವ ಮೂಲಕ ಕರುಳುಗಳು ಸ್ವಚ್ಛಗೊಳ್ಳುತ್ತವೆ, ತನ್ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಬಾಯಿಯ ದುರ್ವಾಸನೆಯೂ ಇಲ್ಲವಾಗುತ್ತದೆ. ಕುಡಿಯಲು ಈ ನೀರು ಅತ್ಯುತ್ತಮವಾದ ಆಯ್ಕೆಯಾಗಿದೆ.

ಚಂದನ, ಏಲಕ್ಕಿ ಅಥವಾ ಪುದೀನಾ

ಚಂದನ, ಏಲಕ್ಕಿ ಅಥವಾ ಪುದೀನಾ

ಆಯಾಸದಿಂದ ಚೇತರಿಸಿಕೊಳ್ಳಲು ಈ ನೀರು ಅತ್ಯುತ್ತಮವಾದ ಆಯ್ಕೆಯಾಗಿದೆ. ವಿಶೇಷವಾಗಿ ಜೀರ್ಣಕ್ರಿಯೆ ಹಾಗೂ ಜೀವರಾಸಾಯನಿಕ ಕ್ರಿಯೆಯನ್ನು ನಿಯಂತ್ರಿಸುವ ಪಿತ್ತದೋಶದ ಪರಿಣಾಮವಾಗಿ ಎದುರಾದ ಅಸೌಖ್ಯಕ್ಕೆ ಈ ನೀರು ಅತ್ಯುತ್ತಮವಾದ ಪರಿಹಾರ ಒದಗಿಸುತ್ತದೆ.

ಜೇನು

ಜೇನು

ಒಂದು ಲೋಟ ತಣ್ಣೀರಿಗೆ ಅರ್ಧ ಚಿಕ್ಕ ಚಮಚ ಜೇನು ಬೆರೆಸಿ ಕುಡಿಯುವ ಮೂಲಕ ಹೆಚ್ಚುವರಿ ಕಫವನ್ನು ನಿವಾರಿಸಿ ಉಸಿರಾಟವನ್ನು ಸರಾಗಗೊಳಿಸಲು ನೆರವಾಗುತ್ತದೆ. ತನ್ಮೂಲಕ ದೇಹವನ್ನು ರಕ್ಷಿಸುವ ಶಕ್ತಿಯನ್ನು ಸೂಕ್ತ ಮಟ್ಟದಲ್ಲಿರಿಸಿ ಹಲವು ತೊಂದರೆಗಳಿಂದ ರಕ್ಷಿಸುತ್ತದೆ.

ಹಸಿಶುಂಠಿ

ಹಸಿಶುಂಠಿ

ಪ್ರತಿದಿನ ಬೆಳಿಗೆ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕ ತುಂಡು ಹಸಿಶುಂಠಿಯನ್ನು ಜಜ್ಜಿ ಅಥವಾ ಅರ್ಧ ಚಿಕ್ಕಚಮಚ ಒಣಶುಂಠಿಯ ಪುಡಿಯನ್ನು ಬೆರೆಸಿ ಕುಡಿಯುವ ಮೂಲಕ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ, ಜಠರ-ಕರುಳುಗಳಿಂದ ಕಲ್ಮಶಗಳು ನಿವಾರಣೆಯಾಗಲು ನೆರವಾಗುತ್ತದೆ, ತನ್ಮೂಲಕ ದೇಹದ ಕಾರ್ಯಗಳು ಸುಲಲಿತವಾಗಿ ನಿರ್ವಹಿಸಲು ನೆರವಾಗುತ್ತದೆ. ಆಯುರ್ವೇದದ ಪ್ರಕಾರ ಒಟ್ಟಾರೆ ಆರೊಗ್ಯಕ್ಕೆ ಈ ನೀರು ಅತ್ಯುತ್ತಮವಾಗಿದೆ.

 ಸಾಧ್ಯವಾದರೆ ಚಿನ್ನವನ್ನೂ ಬೆರೆಸಿ!!

ಸಾಧ್ಯವಾದರೆ ಚಿನ್ನವನ್ನೂ ಬೆರೆಸಿ!!

ಹೌದು, ಇದು ತಮಾಷೆಯ ಸಂಗತಿಯಲ್ಲ. ನಿಮ್ಮ ಕುಡಿಯುವ ನೀರಿನ ಮಡಕೆಯಲ್ಲಿ ಸಂಸ್ಕರಿಸದ ಚಿನ್ನದ ತುಂಡೊಂದನ್ನು ಅಥವಾ ಚಿನ್ನದ ಆಭರಣವನ್ನು ಮುಳುಗಿಸಿಟ್ಟು ಈ ನೀರನ್ನು ಕುಡಿಯುವ ಮೂಲಕ ಕೆಲವಾರು ಪ್ರಯೋಜನಗಳನ್ನು ಪಡೆಯಬಹುದು. ಆದರೆ ನೀರಿನಲ್ಲಿ ಮುಳುಗಿಸಿರುವ ಚಿನ್ನ ಇಪ್ಪತ್ತೆರಡು ಕ್ಯಾರೆಟ್ಟು ಅಥವಾ ಇದಕ್ಕಿಂತಲೂ ಹೆಚ್ಚಿನ ಶುದ್ಧತೆ ಇರುವಂತೆ ನೋಡಿಕೊಳ್ಳಬೇಕು. ಅಪರಂಜಿಯಾದರೆ ಅತ್ಯುತ್ತಮ. ಚಿನ್ನದಲ್ಲಿರುವ ಸೂಕ್ಷ್ಮ ಕಣಗಳು ನಿಧಾನವಾಗಿ ನೀರಿನಲ್ಲಿ ಬೆರೆತು ದೇಹವನ್ನು ಪ್ರವೇಶಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಏನೇ ಆಗಲಿ ದಿನನಿತ್ಯ ಎಂಟು ಲೋಟಗಳಷ್ಟು ನೀರು ಕುಡಿಯಿರಿ

English summary

Ayurveda Recommends Some Of The Best Ways To Consume Water

Water is definitely required for the better functioning of various processes in the body. Water, as you all know, has hydrating properties and there are methods to enrich the properties of water. Ayurveda suggests several different methods to consume water, in the best possible way. Boiling it with spices or adding herbal powders are some of the best ways you can go for, to enrich the properties of the water that you drink.
Subscribe Newsletter