Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ಇಂತಹ ಚಿಕ್ಕ ಪುಟ್ಟ ಅಭ್ಯಾಸಗಳೇ ಆರೋಗ್ಯ ಉಳಿಸುವ ಗುಟ್ಟುಗಳು!
ಆರೋಗ್ಯವೇ ಭಾಗ್ಯ ಎಂಬ ಗಾದೆಯೇ ಇದೆ. ಆರೋಗ್ಯ ಕೆಟ್ಟಾಗ ಇದನ್ನು ಸರಿಪಡಿಸಲು ಔಷಧಿ ಬೇಕಾಗುತ್ತದೆ. ಆದರೆ ಆರೋಗ್ಯ ಕೆಡಲಿಕ್ಕೂ ನಮ್ಮ ಕೆಲವು ಅಭ್ಯಾಸಗಳೇ ಕಾರಣ. ಇವನ್ನು ನಿಲ್ಲಿಸುವ ಹಾಗೂ ಕೆಲವು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸ್ಥಿತಿಗೆ ಬರದೇ ಇರುವಂತೆ ನೋಡಿಕೊಳ್ಳಬಹುದು. ಅಂದರೆ ಅಷ್ಟರ ಮಟ್ಟಿಗೆ ಮಾತ್ರೆ, ಔಷಧಿಗಳಿಂದ ದೂರವಿರಲು ಸಾಧ್ಯ. ಅಲ್ಲದೇ ನಿಸರ್ಗ ನೀಡಿರುವ ಸುಲಭ ಸಾಮಾಗ್ರಿಗಳನ್ನು ಬಳಸಿಯೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಈ ಮೂಲಕವೂ ಮಾತ್ರೆಯ ಮೇಲಿನ ಅವಲಂಬನೆಯನ್ನು ಸಾಕಷ್ಟು ಕಡಿಮೆ ಮಾಡಬಹುದು. ಕೆಲವು ಸರಳ ಅಭ್ಯಾಸಗಳಂತೂ ಅದ್ಭುತವಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ ಕೆಲಸದ ಸ್ಥಳದಲ್ಲಿ ಒತ್ತಡವಿದ್ದಾಗ ಹಸಿರು ಎಲೆಗಳು ನಳನಳಿಸುತ್ತಿರುವ ಮರವನ್ನು ತದೇಕದೃಷ್ಟಿಯಿಂದ ನೋಡಿ. ಕೆಲವು ಕ್ಷಣಗಳಲ್ಲಿಯೇ ಒತ್ತಡ ಮಾಯವಾದಂತೆ ಅನ್ನಿಸುತ್ತದೆ.
ಒಂದು ವೇಳೆ ಖಿನ್ನತೆ ಆವರಿಸುತ್ತಿದೆ ಎಂದು ಅನ್ನಿಸಿದರೆ ತಕ್ಷಣ ಬಿಸಿಲಿಗೆ ದೇಹವನ್ನು ಒಡ್ಡಿಕೊಳ್ಳಿ. ಈಗ ಕೊಂಚ ಸಮಾಧಾನವಾಗುತ್ತದೆ. ಇದೇ ರೀತಿಯ ಕೆಲವಾರು ಸುಲಭ ಅಭ್ಯಾಸಗಳಿದ್ದು ನಿಯಮಿತವಾಗಿ ಅನುಸರಿಸುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಬನ್ನಿ, ಇವುಗಳಲ್ಲಿ ಕೆಲವು ಸಲಹೆಗಳನ್ನು ಈಗ ನೋಡೋಣ....

ಸಲಹೆ #1
ಒಂದು ವೇಳೆ ನಿಮ್ಮ ಮೂಗು ಕಟ್ಟಿಕೊಂಡಿದ್ದರೆ ರಾತ್ರಿ ಮಲಗುವ ಮುನ್ನ ಒಂದು ಈರುಳ್ಳಿಯನ್ನು ಉದ್ದನೆ ಕತ್ತರಿಸಿ ಎರಡು ಭಾಗಗಳನ್ನಾಗಿಸಿ ತಲೆದಿಂಬಿನ ಅಕ್ಕ ಪಕ್ಕದಲ್ಲಿ ಒಂದೊಂದು ಭಾಗವನ್ನು, ಕತ್ತರಿಸಿದ ಭಾಗ ಮೇಲೆ ಬರುವಂತೆ ಇರಿಸಿ ಮಲಗಿ. ಬೆಳಿಗ್ಗೆದ್ದ ಬಳಿಕ ಕಟ್ಟಿಕೊಂಡಿದ್ದ ಮೂಗು ಪೂರ್ಣವಾಗಿ ತೆರೆದಿರುತ್ತದೆ.

ಸಲಹೆ #2
ಸೊಳ್ಳೆ ಕಚ್ಚಿದ ಕೆಲವೇ ಕ್ಷಣಗಳಲ್ಲಿ ಚರ್ಮ ಊದಿಕೊಂಡು ಭಾರೀ ತುರಿಕೆ ಉರಿ ಎದುರಾಗುತ್ತದೆ. ಇದು ಆಗದೇ ಇರದಂತೆ ನೋಡಿಕೊಳ್ಳಲು ಸೊಳ್ಳೆ ಕಚ್ಚಿದ ಭಾಗಕ್ಕೆ ಕೊಂಚ ಸುಗಂಧ (ಡಿಯೋಡೋರೆಂಟ್) ಸಿಂಪಡಿಸಿ. ಇದರಿಂದ ಉರಿ ಹಾಗೂ ನವೆಯಾಗುವುದಿಲ್ಲ.

ಸಲಹೆ #2
ಒಂದು ವೇಳೆ ರಾತ್ರಿ ಸರಿಯಾಗಿ ನಿದ್ದೆ ಬರದೇ ಇದ್ದರೆ ರಾತ್ರಿ ಮಲಗುವ ಮುನ್ನ ತಣ್ಣೀರಿನ ಸ್ನಾನ ಮಾಡಿ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ದೇಹದ ತಾಪಮಾನ ಕಡಿಮೆಯಾಗಿ ನಿದ್ದೆ ಬರಲು ನೆರವಾಗುತ್ತದೆ. ಅಷ್ಟೇ ಅಲ್ಲ, ದಿನದ ಕೆಲಸದ ಒತ್ತಡ ಕಡಿಮೆಯಾಗುತ್ತದೆ ಹಾಗೂ ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ.

ಸಲಹೆ #4
ದುಃಖದ ಸಮಯದಲ್ಲಿ ಕಣ್ಣೀರು ಅವಿರತವಾಗಿ ಹರಿಯುತ್ತಿದ್ದು ಕೊಂಚ ಹೊತ್ತಿನ ಬಳಿಕ ದುಃಖವನ್ನು ನಿಯಂತ್ರಿಸಿದ ಬಳಿಕವೂ ಕಣ್ಣೀರು ಹರಿಯುತ್ತಲೇ ಇದ್ದರೆ ಕಣ್ಣುಗಳನ್ನು ಕೊಂಚ ಹೊತ್ತು ತೆರೆದೇ ಇರಿಸಿ. ಇದರಿಂದ ಕಣ್ಣೀರು ಹರಿಯುವುದು ನಿಲ್ಲುತ್ತದೆ.

ಸಲಹೆ #5
ಒಂದು ವೇಳೆ ಮದ್ಯಪಾನದ ಬಳಿಕ ಭಾರೀ ತಲೆನೋವು ಆವರಿಸಿದರೆ ಒಂದು ಪಾತ್ರೆಯಲ್ಲಿ ಕೊಂಚ ನೀರು ಮತ್ತು ಐಸ್ ತುಂಡುಗಳನ್ನು ಹಾಕಿ ಐಸ್ ಕರಗುತ್ತಿದ್ದಂತೆ ಎರಡೂ ಕೈಗಳನ್ನು ಈ ನೀರಿನಲ್ಲಿರಿಸಿ.

ಸಲಹೆ #6
ಹೆಚ್ಚಿನ ವಿದ್ಯಾರ್ಥಿಗಳು ಹೊಸ ವಿಷಯವನ್ನು ಕಲಿಯಲು ಪ್ರಾತಃಕಾಲವೇ ಸೂಕ್ತ ಎಂದು ಬೆಳಿಗ್ಗೆ ಬೇಗನೇ ಏಳುತ್ತಾರೆ. ವಾಸ್ತವವಾಗಿ ಬೆಳಗ್ಗಿನ ಸಮಯದಲ್ಲಿ ನಮ್ಮ ಮೆದುಳು ರಾತ್ರಿ ಮಲಗುವ ಮುನ್ನ ಏನೇನು ಓದಿದ್ದಿರಿ ಎಂಬುದನ್ನು ಮೆಲುಕು ಹಾಕುತ್ತಿರುತ್ತದೆ.

ಸಲಹೆ #7
ಒಂದು ವೇಳೆ ಬೆಳಿಗ್ಗೆದ್ದ ತಕ್ಷಣ ಎಚ್ಚರಾಗದೇ ಇದ್ದರೆ ಹಾಗೂ ತಲೆ ತಿರುಗುತ್ತಿದೆ, ವಾಪಸ್ ಮಲಗೋಣ ಎಂದು ಮನಸ್ಸಾದರೆ ತಕ್ಷಣ ಹಾಸಿಗೆಯ ಮೇಲೆ ಕುಳಿತು ಬಲಗಾಲನ್ನು ನೆಲದ ಮೇಲೆ ಇರಿಸಿ. ಇದರಿಂದ ಮೆದುಳಿಗೆ ಪರಿಸರಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.

ಸಲಹೆ #8
ಒಂದು ವೇಳೆ ಮೂತ್ರವಿಸರ್ಜನೆಗೆ ವಿಪರೀತವಾಗಿ ಅವಸರವಾಗಿದ್ದರೆ ಹಾಗೂ ಆ ಕ್ಷಣದಲ್ಲಿ ಅವಕಾಶವಿಲ್ಲದೇ ಇದ್ದರೆ ತಕ್ಷಣ ಮನಸ್ಸಿನಲ್ಲಿ ಪ್ರೇಮದ ಕುರಿತಾದ ಯಾವುದಾದರೂ ವಿಷಯವೊಂದನ್ನು ಕಲ್ಪಿಸಿಕೊಳ್ಳಿ. ಪೋಲಿ ವಿಷಯವಾದರೂ ಸರಿ. ಇದರಿಂದ ರಕ್ತಪರಿಚಲನೆ ಮೂತ್ರಕೋಶದಿಂದ ಕಡಿಮೆಯಾಗಿ ಮೂತ್ರಕ್ಕೆ ಅವಸರವಾಗುವುದು ತಪ್ಪುತ್ತದೆ. ಈಗ ಹತ್ತಿರದ ಶೌಚಾಲಯ ಹುಡುಕುವುದು ಸುಲಭವಾಗುತ್ತದೆ.



Click it and Unblock the Notifications











