Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೊಟ್ಟೆ ನೋವು, ವಾಕರಿಕೆ, ನಿಶ್ಯಕ್ತಿ ತರಿಸುವ ಆಹಾರಗಳಿವು!-ಎಂದೂ ತಿನ್ನಬೇಡಿ
ನಾವು ತಿನ್ನುವಂತಹ ಆಹಾರವನ್ನು ಅವಲಂಬಿಸಿಕೊಂಡು ನಮ್ಮ ಆರೋಗ್ಯವಿರುವುದು. ತಿನ್ನುವ ಆಹಾರವು ಆರೋಗ್ಯಕಾರಿಯಾಗಿದ್ದರೆ ದೇಹಕ್ಕೆ ಯಾವುದೇ ರೀತಿಯ ಅನಾರೋಗ್ಯವು ಕಾಡದು. ಆದರೆ ಆಹಾರದಲ್ಲಿ ವ್ಯತ್ಯಾಸವಾದರೆ ಅದು ನಮ್ಮ ಆರೋಗ್ಯ ಕೆಡಿಸಿ ಸಮಸ್ಯೆ ಉಂಟು ಮಾಡುವುದು. ಏನು ತಿನ್ನಬೇಕು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.
ಅವರವರ ಇಷ್ಟ ಪ್ರಕಾರ ಆಹಾರ ಸೇವನೆ ಮಾಡುವರು. ಆಯಾಯ ಪ್ರದೇಶಕ್ಕೆ ಹೊಂದಿಕೊಂಡು ಆಹಾರ ಕ್ರಮವಿರುವುದು. ಆದರೆ ಕೆಲವೊಂದು ಸಲ ತಿನ್ನುವ ಆಹಾರವು ತುಂಬಾ ಅಪಾಯಕಾರಿಯಾಗುವುದು. ಯಾಕೆಂದರೆ ನಾವು ಎರಡುಮೂರು ಆಹಾರ ಜತೆಯಾಗಿ ಸೇರಿಸಿ ತಿನ್ನುತ್ತೇವೆ. ಇದರಿಂದ ಆಹಾರದ ಅಲರ್ಜಿ ಕಾಣಿಸಿಕೊಳ್ಳಬಹುದು.
ಮಾಂಸದೊಂದಿಗೆ ಚೀಸ್, ಸಲಾಡ್‌ನಲ್ಲಿ ಹಣ್ಣುಗಳು, ಹಾಲಿನೊಂದಿಗೆ ಹಣ್ಣುಗಳು ಇತ್ಯಾದಿ. ಆಯುರ್ವೇದದ ಪ್ರಕಾರ ಈ ಆಹಾರದ ಸಂಯೋಜನೆಯು ವರ್ಜ್ಯ. ಈ ರೀತಿ ಆಹಾರ ಸೇವನೆ ಮಾಡಿದರೆ ಅದರಿಂದ ಹೊಟ್ಟೆ ಉಬ್ಬರ, ಹೊಟ್ಟೆ ಭಾರವಾಗುವುದು ಮತ್ತು ಜಡ ಉಂಟಾಗಬಹುದು. ಜೀರ್ಣಕ್ರಿಯೆಗೆ ಸಹಕರಿಸದ ಈ ಆಹಾರಗಳು ಹೊಟ್ಟೆ ನೋವು, ವಾಕರಿಕೆ, ನಿಶ್ಯಕ್ತಿ ಮತ್ತು ತ್ಯಾಜ್ಯ ಹೊರಹಾಕಲು ಸಮಸ್ಯೆ ಉಂಟು ಮಾಡಬಹುದು. ನೀವು ತಿನ್ನಲೇಬಾರದ ಕೆಲವು ಕೆಟ್ಟ ಆಹಾರ ಸಂಯೋಜನೆ ಬಗ್ಗೆ ಬೋಲ್ಡ್ ಸ್ಕೈ ತಿಳಿಸಲಿದೆ. ಮುಂದೆ ಓದುತ್ತಾ ಸಾಗಿ....

ಕೋಕಾ ಮತ್ತು ಹಾಲು
ಕೋಕಾದಲ್ಲಿ ಆಕ್ಸಾಲಿಕ್ ಎನ್ನುವ ಆಮ್ಲ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ ಹೀರುವಿಕೆಯ ತಡೆಯುವುದು. ಕ್ಯಾಲ್ಸಿಯಂ ಹೆಚ್ಚಿರುವ ಹಾಲಿನೊಂದಿದೆ ಕೋಕಾ ಸೇವಿಸಿದಾಗ ಅದರಿಂದ ಆಕ್ಸಲೇಟ್ ಹರಳುಗಳು ನಿರ್ಮಾಣವಾಗಿ ಕಿಡ್ನಿಗೆ ಸಮಸ್ಯೆಯಾಗಬಹುದು. ಇದು ತುಂಬಾ ಕೆಟ್ಟ ಆಹಾರ ಸಂಯೋಜನೆಯಾಗಿದೆ.

ಲಿಂಬೆರಸ ಅಥವಾ ವಿನೇಗರ್ ಜತೆ ಸಲಾಡ್
ಕ್ಯಾರೋಟಿನಾಯ್ಡ್‌ನಂತಹ ಕೆಲವೊಂದು ಪ್ರಮುಖ ಹಾಗೂ ಮಹತ್ವದ ಪೋಷಕಾಂಶಗಳು ತರಕಾರಿಗಳಲ್ಲಿ ಇರುವುದರಿಂದ ಇದರ ಹೀರುವಿಕೆಗೆ ಸರಿಯಾದ ಕೊಬ್ಬು ಬೇಕಾಗಿದೆ. ಇದರಿಂದಾಗಿ ನೀವು ಸಲಾಡ್‌ಗೆ ಹೆಚ್ಚಿನ ಕೊಬ್ಬು ಇರುವಂತಹ ಅವಕಾಡೋ, ಆಲಿವ್ ಅಥವಾ ಕೆಲವು ಬೀಜಗಳನ್ನು ಸೇರಿಸಬೇಕು. ಸಲಾಡ್‌ಗೆ ಲಿಂಬೆ ಅಥವಾ ವಿನೇಗರ್‌ನಿಂದ ಅಲಂಕಾರ ಮಾಡುವುದರಿಂದ ಆರೋಗ್ಯಕರ ಪೋಷಕಾಂಶಗಳು ಸಿಗದೇ ಇರಬಹುದು.

ಚೀಸ್ ಪಾಸ್ತಾದೊಂದಿಗೆ ಟೊಮೇಟೊ
ಪಿಷ್ಟದ ಕಾರ್ಬೋಹೈಡ್ರೇಟ್ಸ್‌ಗಳನ್ನು ಹೊಂದಿರುವ ಪಾಸ್ತಾವು ಜೀರ್ಣವಾಗಲು ಪಿಚ್ಚಲಿನ್ ಎಂಬ ವಿಶೇಷ ಅಂಶವು ಬೇಕಾಗುತ್ತದೆ. ಇದು ನಮ್ಮ ಲಾಲಾರಸದಲ್ಲಿರುವುದು. ಟೊಮೇಟೊದಲ್ಲಿ ಮಾಲಿಕ್, ಆಕ್ಸಲಿಕ್ ಮತ್ತು ಸಿಟ್ರಿಕ್ ಆಮ್ಲವು ಸಣ್ಣ ಪ್ರಮಾಣದಲ್ಲಿ ಇದೆ. ಇದು ಕಿಣ್ವವನ್ನು ವಿಘಟಿಸುವುದು. ಇದರಿಂದ ಪಿಷ್ಟ ಜೀರ್ಣವಾಗದೆ ಉಳಿಯುವುದು.

ಚೀಸ್ ಪಾಸ್ತಾದೊಂದಿಗೆ ಟೊಮೇಟೊ
ಬೆಳಗ್ಗಿನ ಉಪಾಹಾರಕ್ಕೆ ಸೀರಲ್‌ನೊಂದಿಗೆ ಕಿತ್ತಳೆ ಜ್ಯೂಸ್ ಸೇವಿಸುವುದು ನಿಮ್ಮ ಶಕ್ತಿಯ ಹೆಚ್ಚಿಸುವುದಿಲ್ಲ. ಇದರಿಂಧ ಹೊಟ್ಟೆ ಭಾರ ಮತ್ತು ತಳಮಳವಾಗಬಹುದು. ಕಿತ್ತಳೆಯಲ್ಲಿರುವ ಆಮ್ಲವು ಕಾರ್ಬೋಹೈಡ್ರೇಟ್ಸ್‌ಗಳ ವಿಭಜನೆಗೆ ಕಾರಣವಾಗುವ ಕಿಣ್ವಗಳ ಚಟುವಟಿಕೆ ಮೇಲೆ ಪ್ರಭಾವ ಬೀರಬಹುದು.

ಚೀಸ್ ಪಾಸ್ತಾದೊಂದಿಗೆ ಟೊಮೇಟೊ
ಪಿಷ್ಟ, ಪ್ರೋಟೀನ್ ಮತ್ತು ಕಾರ್ಬ್ಸ್ ಜತೆಯಾಗಿ ಸೇವಿಸಿದರೆ ಅದರಿಂದ ಜೀರ್ಣಕ್ರಿಯೆಗೆ ತುಂಬಾ ಶಕ್ತಿ ಬೇಕಾಗುವುದು. ಸೋಡಾದಲ್ಲಿರುವ ಸಕ್ಕರೆ ಕೂಡ ಹೊಟ್ಟೆಯ ಪ್ರಕ್ರಿಯೆ ನಿಧಾನಗೊಳಿಸುವುದು. ಹೊಟ್ಟೆಯುಬ್ಬರ ಮತ್ತು ಹೊಟ್ಟೆ ಭಾರವಾಗುವುದು.

ಗೋಧಿ ಬ್ರೆಡ್ ಮತ್ತು ಜಾಮ್
ಸಂಸ್ಕರಿಸಿದ ಗೋಧಿ ಹಿಟ್ಟಿನೊಂದಿಗೆ ಸಕ್ಕರೆಯಂಶವಿರುವ ಆಹಾರ ಸೇವಿಸಿದರೆ ಅದರಿಂದ ಕಾರ್ಬ್ಸ್ ದ್ವಿಗುಣಗೊಂಡು ತ್ವರಿಗತಿ ಉಲ್ಬಣಕ್ಕೆ ಕಾರಣವಾಗುವುದು. ಯೀಸ್ಟ್ ಇರುವ ಹಿಟ್ಟು ಮತ್ತು ಸಕ್ಕರೆ ಸೇರಿಕೊಂಡು ಹೊಟ್ಟೆಯಲ್ಲಿ ತಳಮಳ ಉಂಟು ಮಾಡುವುದು. ಇದು ಭಾರತೀಯರು ಸೇವಿಸುವ ತಪ್ಪು ಆಹಾರ ಸಂಯೋಜನೆ.



Click it and Unblock the Notifications
