ಅಡುಗೆಯ ರುಚಿ ಹೆಚ್ಚಿಸುವ ಇಂಗಿನಲ್ಲಿದೆ, ಸಾಕಷ್ಟು ಪ್ರಯೋಜನಗಳು

By: Arshad
Subscribe to Boldsky

ಯಾವುದೇ ಅಡುಗೆಗೆ ರುಚಿ ನೀಡುವ ಉಪ್ಪಿನಂತೆಯೇ ಇಂಗು ಸಹಾ ಇನ್ನೊಂದು ರುಚಿಕಾರಕವಾಗಿದೆ. ವಿಶೇಷವಾಗಿ ಸಾಂಬಾರ್, ರಸಂ ಹಾಗೂ ಒಗ್ಗರಣೆ ನೀಡುವ ಇತರ ಅಡುಗೆಗಳಲ್ಲಿ ಚಿಟಿಕೆಯಷ್ಟು ಇಂಗು ಹಾಕಿದರೆ ರುಚಿ ಹೆಚ್ಚುತ್ತದೆ. ಇಂಗಿಲ್ಲದ ಉಪ್ಪಿನಕಾಯಿ ವಿರಳ. ಇಂಗನ್ನು ಹಾಗೇ ತಿನ್ನುವಂತಿಲ್ಲ ಆಷ್ಟೊಂದು ಕಹಿಯಾಗಿರುತ್ತದೆ.

ಇದೇ ಕಾರಣಕ್ಕೆ 'ಇಂಗು ತಿಂದ ಮಂಗ' ಎಂಬ ವಿಶೇಷಣವನ್ನು ಕನ್ನಡದಲ್ಲಿ ಧಾರಾಳವಾಗಿ ಬಳಸಲಾಗುತ್ತದೆ. ಒಂದು ಬಗೆಯ ಮರದ ತೊಗಟೆಯಿಂದ ಒಸರುವ ಗೋಂದನ್ನು ಒಣಗಿಸಿ ಪುಡಿಯಾಗಿಸಿದ ಇಂಗಿನ ಬಳಕೆ ಸಾವಿರಾರು ವರ್ಷಗಳ ಹಿಂದಿನಿಂದಲೇ ಆಯುರ್ವೇದದಲ್ಲಿದೆ. ಬನ್ನಿ, ಇದರ ಆರೋಗ್ಯಕರ ಪ್ರಯೋಜನಗಳು ಹಾಗೂ ನೈಸರ್ಗಿಕ ಗುಣಗಳ ಬಗ್ಗೆ ಅರಿಯೋಣ.... 

ಜೀರ್ಣಶಕ್ತಿ ಹೆಚ್ಚಿಸಲು

ಜೀರ್ಣಶಕ್ತಿ ಹೆಚ್ಚಿಸಲು

ಯಾವುದೇ ಆಹಾರ ಚೆನ್ನಾಗಿ ಜೀರ್ಣಿಸಲೆಂದು ಒಗ್ಗರಣೆಯಲ್ಲಿ ಚಿಟಿಕೆಯಷ್ಟು ಇಂಗನ್ನು ಸೇರಿಸಲಾಗುತ್ತದೆ. ವಾಯು ಪ್ರಕೋಪವುಂಟು ಮಾಡುವ ಆಹಾರಗಳ ಪ್ರಭಾವದಿಂದ ಹೊಟ್ಟೆಯಲ್ಲಿ ಗಾಳಿ ತುಂಬಿಕೊಳ್ಳದಿರಲೂ ಇದು ನೆರವಾಗುತ್ತದೆ. ಹೊಟ್ಟೆಯುಬ್ಬರಿಕೆ ಎದುರಾದರೆ ತಕ್ಷಣ ಇಂಗು ಬೆರೆಸಿದ್ ಉಗುರುಬೆಚ್ಚನೆಯ ನೀರನ್ನು ಕುಡಿದರೆ ತಕ್ಷಣ ಪರಿಹಾರ ದೊರಕುತ್ತದೆ. ಕೆಲವಾರು ಸಂಶೋಧನೆಗಳಲಿ ಕಂಡುಕೊಂಡಿರುವ ಪ್ರಕಾರ ಇಂಗಿನ ಪುಡಿಯಲ್ಲಿ ಉರಿಯೂತ ಗುಣವಿರುವ ಜೊತೆಗೇ ಉತ್ತಮ ಆಂಟಿ ಆಕ್ಸಿಡೆಂಟು ಗುಣಗಳೂ ಇವೆ. ಅಷ್ಟೇ ಅಲ್ಲ, ಇದರಲ್ಲಿ ವಂಶವಾಹಿ ಧಾತುವನ್ನು ರೂಪಾಂತರಗೊಳಿಸುವ ಗುಣವೂ ಇದೆ.

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ತಡೆಗಟ್ಟುತ್ತದೆ

ಇಂಗಿನಲ್ಲಿ ರುಚಿ ನೀಡುವ ಗುಣದ ಹೊರತಾಗಿ ಕ್ಯಾನ್ಸರ್ ತಡೆಗಟ್ಟುವ ಗುಣವೂ ಇದೆ. ಅಂದರೆ ಒಂದು ವೇಳೆ ದೇಹದ ಯಾವುದಾದರೊಂದು ಅಂಗಾಂಶದ ಜೀವಕೋಶಗಳು ಅಗತ್ಯಕ್ಕೂ ಹೆಚ್ಚು ಬೆಳವಣಿಗೆಯಾದರೆ ಇದು ವಂಶವಾಹಿನಿಯ ಸೂಚನೆಗೆ ವಿರುದ್ದವಾಗಿದ್ದು ಇಂಗಿನಲ್ಲಿರುವ ವಿಶೇಷ ಗುಣ ಈ ಜೀವಕೋಶಗಳನ್ನು ಇನ್ನಷ್ಟು ವೃದ್ದಿಗೊಳ್ಳದಂತೆ ತಡೆಯುತ್ತದೆ.

ಲೈಂಗಿಕ ರೋಗಗಳನ್ನು ತಡೆಗಟ್ಟುತ್ತದೆ

ಲೈಂಗಿಕ ರೋಗಗಳನ್ನು ತಡೆಗಟ್ಟುತ್ತದೆ

ಈಜಿಪ್ಟ್ ನಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ರುಚಿಕಾರಕವಾಗಿ ಬಳಸಲಾಗುವ ಇಂಗಿನಲ್ಲಿ ಪರಾವಲಂಬಿ ಕ್ರಿಮಿ ವಿರೋಧ ಗುಣ ಕೆಲವಾರು ಲೈಂಗಿಕ ರೋಗಗಳನ್ನು ಹರಡುವುದನ್ನು ತಡೆಯುತ್ತದೆ ಹಾಗೂ ಗುಣಪಡಿಸಲು ನೆರವಾಗುತ್ತದೆ. ವಿಶೇಷವಾಗಿ Trichomonas vaginalis ಅಥವಾ Trichomoniasis ಎಂಬ ಮಾರಕ ರೋಗಗಳನ್ನು ವಾಸಿ ಮಾಡಲೂ ಔಷಧಿಯಂತೆ ಕೆಲಸ ಮಾಡುತ್ತದೆ.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ ಮೂಡಿಸುವ ಬ್ರಾಂಕೈಟಿಸ್, ಅಸ್ತಮಾ ಹಾಗೂ ನಾಯಿಕೆಮ್ಮು ಮೊದಲಾದ ರೋಗಗಳಿಗೆ ಬಿಸಿನೀರಿಗೆ ಕೊಂಚ ಇಂಗು, ಜೇನು ಮತ್ತು ಹಸಿಶುಂಠಿ ಬೆರೆಸಿ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ. ವಿಶೇಷವಾಗಿ ಮಕ್ಕಳಿಗೆ ಗಂಟಲು ಕಟ್ಟಿಕೊಂಡಿರುವ ಸ್ಥಿತಿಯನ್ನು ನಿವಾರಿಸಲು ಬಳಸಬಹುದು.

ನರವ್ಯವಸ್ಥೆಯ ಏರುಪೇರು

ನರವ್ಯವಸ್ಥೆಯ ಏರುಪೇರು

ಇಂಗು ಉತ್ತಮವಾದ ಉಪಶಮನಕಾರಿ ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ. ಪರಿಣಾಮವಾಗಿ ಸೆಳೆತಕ್ಕೆ ಒಳಗಾಗಿರುವ ನರಗಳನ್ನು ಶಮನಗೊಳಿಸುತ್ತದೆ ಹಾಗೂ ಸಡಿಲಿಸಿ ನಿರಾಳವಾಗಿಸುತ್ತದೆ. ಇದು ಇಂಗಿನ ಅತ್ಯುತ್ತಮ ಪ್ರಯೋಜನಗಳಲ್ಲೊಂದಾಗಿದೆ. ವಿಶೇಷವಾಗಿ ಖಿನ್ನತೆ, ಮನೋಭಾವನೆಯಲ್ಲಿ ಬದಲಾವಣೆ, ಚಿತ್ತಕ್ಷೋಭೆ, ಅರಳುಮರಳು ಮೊದಲಾದ ನರವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳಿಗೆ ಉತ್ತಮ ಪರಿಹಾರ ಒದಗುತ್ತದೆ. ಒಂದರ್ಥದಲ್ಲಿ ಮಾದಕ ಪದಾರ್ಥವಾದ ಓಪಿಯಂ ಸೇವನೆಯ ಪರಿಣಾಮಗಳಿಗೆ ವಿರುದ್ದ ಪರಿಣಾಮ ನೀಡುವ ಮೂಲಕ ಇದರ ಹಿಡಿತದಿಂದ ಹೊರಬರಲು ನೆರವಾಗುತ್ತದೆ.

ಕಿವಿನೋವನ್ನು ಕಡಿಮೆ ಮಾಡುತ್ತದೆ

ಕಿವಿನೋವನ್ನು ಕಡಿಮೆ ಮಾಡುತ್ತದೆ

ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದಕ್ಕೆ ಚಿಟಿಕೆಯಷ್ಟು ಇಂಗು ಸೇರಿಸಿ ಮಿಶ್ರಣ ಮಾಡಿ ತಣಿಯಲು ಬಿಡಿ.ಇದು ತಣಿದ ಬಳಿಕ ಈ ಮಿಶ್ರಣವನ್ನು ಅಡ್ಡಮಲಗಿ ಕಿವಿಯೊಳಕ್ಕೆ ಒಂದೊಂದಾಗಿ ಹನಿಯಂತೆ ಬಿಡಿ. ಕೊಂಚ ಸಮಯ ಹಾಗೇ ಮಲಗಿದ್ದು ಬಳಿಕ ನಿಂತು ಹೆಚ್ಚಿನ ದ್ರವ ಹೊರಹರಿಯುವಂತೆ ಮಾಡಿ. ಇದರಿಂದ ಕಿವಿನೋವು ಕಡಿಮೆಯಾಗುತ್ತದೆ.

ಇತರ ಆರೋಗ್ಯಕರ ಗುಣಗಳು

ಇತರ ಆರೋಗ್ಯಕರ ಗುಣಗಳು

ಕೀಟಗಳ ಕಡಿತದಿಂದ ಉರಿಯುತ್ತಿರುವ ಚರ್ಮ, ಹಾವಿನ ಕಡಿತ ಮೊದಲಾವುಗಳಿಗೆ ಉತ್ತಮ ಪರಿಹಾರ ಒದಗಿಸುತ್ತದೆ. ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ನೋವಿಗೆ ಬಿಸಿನೀರಿಗೆ ಕೊಂಚ ಇಂಗು ಬೆರೆಸಿ ಕುಡಿಯುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಕೀಟ ಕಡಿದ ಭಾಗ ಅಥವಾ ತಲೆನೋವು ಹೆಚ್ಚಿರುವ ಸ್ಥಳದಲ್ಲಿ ಇಂಗನ್ನು ದಪ್ಪನೆಯ ಲೇಪನವಾಗಿಸಿ ಲೇಪಿಸಿಕೊಂಡರೆ ಅತಿ ಶೀಘ್ರದಲ್ಲಿ ನೋವು ಕಡಿಮೆಯಾಗುತ್ತದೆ.

English summary

Asafetida Health Uses, Benefits And Natural Properties

If the Indian rasams and rice recipes are so tasty then some credit goes to the famous tasting powder “Asafoetida". Asafoetida orHing is a dried sap of the stem or root and is widely used for flavor in culinary dishes. In ancient India, asafoetida was used in Ayurveda for its medicinal properties. Take a look at the asafoetida health benefits and natural properties. Asafoetida Health Benefits And Natural Properties
Subscribe Newsletter