ಮುಟ್ಟಿನ ಅವಧಿಯಲ್ಲಿ ಕಾಡುವ 'ಹೆಪ್ಪುಗಟ್ಟಿರುವ ರಕ್ತದ' ಸಮಸ್ಯೆ! ಯಾಕೆ ಹೀಗೆ?

By: Arshad
Subscribe to Boldsky

ಮಾಸಿಕ ಸ್ರಾವದಲ್ಲಿ ಕಂಡುಬರುವ ದ್ರವ ರಕ್ತಮಿಶ್ರಿತವಾಗಿರುತ್ತದೆ. ಪ್ರತಿತಿಂಗಳೂ ಇದು ಏಕಪ್ರಕಾರವಾಗಿರಲು ಸಾಧ್ಯವಿಲ್ಲ. ಕೊಂಚ ಭಿನ್ನವಾಗಿರಬಹುದು. ಕೆಲವೊಮ್ಮೆ ತೀರಾ ಗಾಢವರ್ಣ ಪಡೆದಿದ್ದರೆ ಕೆಲವೊಮ್ಮೆ ತಿಳಿಯಾಗಿರುತ್ತದೆ. ಬಣ್ಣ ಗಾಢವಾಗಿರಲು ಕೆಲವಾರು ಕಾರಣಗಳಿವೆ. ಅತಿಹೆಚ್ಚು ಗಾಢವಾಗಿದ್ದರೆ ಇದಕ್ಕೆ ಹೆಪ್ಪುಗಟ್ಟಿದ ರಕ್ತ ಮಿಶ್ರಣಗೊಂಡಿರುವುದು ಒಂದು ಕಾರಣವಾಗಿರಬಹುದು. ಇದು ಕೆಲವರಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತದೆಯೇ? ಇಲ್ಲ ಪ್ರತಿ ಮಹಿಳೆಯೂ ತನ್ನ ಜೀವಿತಾವಧಿಯಲ್ಲಿ ಕನಿಷ್ಟ ಒಂದು ಬಾರಿಯಾದರೂ ಇದನ್ನು ಅನುಭವಿಸಿಯೇ ಇರುತ್ತಾರೆ. 

ಅಚ್ಚರಿ, ಕುತೂಹಲ ಕೆರಳಿಸುವ ಮುಟ್ಟಿನ ರಹಸ್ಯ!

ರಕ್ತ ಹೆಪ್ಪುಗಟ್ಟಿರುವುದನ್ನು ಕಂಡುಕೊಳ್ಳುವುದು ಹೇಗೆ? ಅದಕ್ಕೂ ಮುನ್ನ ರಕ್ತ ಹೆಪ್ಪುಗಟ್ಟುವುದು ಏಕೆ? ರಕ್ತ ಯಾವಾಗ ಗಾಳಿಯ ಸಂಪರ್ಕ ಪಡೆದುಕೊಳ್ಳುತ್ತದೆಯೋ (ಉದಾಹರಣೆಗೆ ಗಾಯ) ಆಗ ನಮ್ಮ ರಕ್ತದಲ್ಲಿರುವ ಪ್ಲೇಟ್‌ಲೆಟ್‍ಗಳೆಂಬ ತಟ್ಟೆಗಳು ಒಂದಕ್ಕೊಂದು ಬೆಸೆದು ಘನವಾಗಿಬಿಡುತ್ತದೆ ಹಾಗೂ ಗೋಡೆಯಂತೆ ನಿಂತು ಇನ್ನಷ್ಟು ರಕ್ತ ಹೊರ ಹರಿಯುವುದನ್ನು ನಿಲ್ಲಿಸುತ್ತದೆ. ಹೀಗೆ ಘ್ರನೀಕೃತಗೊಂಡ ರಕ್ತವೇ ಹೆಪ್ಪುಗೊಂಡಿರುವ ರಕ್ತ ಎಂದು ಕರೆಯುತ್ತೇವೆ. ಒಂದು ವೇಳೆ ಮಾಸಿಕ ಸ್ರಾವದಲ್ಲಿ ದೇಹದಿಂದ ಹೊರಹರಿದ ರಕ್ತ ಒಳಗಿಂದಲೇ ಹೆಪ್ಪುಗಟ್ಟಿದ್ದು ಈಗ ಹೊರಬಂದಿದ್ದರೆ ಇದಕ್ಕೆ ಕೆಲವಾರು ಕಾರಣಗಳಿವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ.... 

ರಕ್ತವೇಕೆ ಹೆಪ್ಪುಗಟ್ಟುತ್ತದೆ?

ರಕ್ತವೇಕೆ ಹೆಪ್ಪುಗಟ್ಟುತ್ತದೆ?

ಗಾಯಗೊಂಡಾಗ ಇನ್ನಷ್ಟು ರಕ್ತ ಸ್ರಾವವಾಗದಂತೆ ತಡೆಯುವ ರಕ್ಷಣಾ ವ್ಯವಸ್ಥೆಯೇ ರಕ್ತದ ಹೆಪ್ಪುಗಟ್ಟುವಿಕೆ. ಆದ್ದರಿಂದ ದೇಹದ ಯಾವುದೋ ಭಾಗದಲ್ಲಿ ಗಾಯವಾಗಿದ್ದು ರಕ್ತ ಹೊರಚೆಲ್ಲುತ್ತಿದ್ದರೆ ಆ ಗಾಯದ ಅಂಚಿನ ರಕ್ತ ಹೆಪ್ಪುಗಟ್ಟುತ್ತದೆ. ಕೆಲವೊಮ್ಮೆ ಆಂತರಿಕ ರಕ್ತಸ್ರಾವವಾದರೂ ಇದರ ಕಾರಣದಿಂದಲೂ ರಕ್ತ ಹೆಪ್ಪುಗಟ್ಟಬಹುದು.

ಸಾಮಾನ್ಯ ಮಾಸಿಕ ಸ್ರಾವದಲ್ಲಿ ಏಕೆ ರಕ್ತ ಹೆಪ್ಪುಗಟ್ಟುವುದಿಲ್ಲ?

ಸಾಮಾನ್ಯ ಮಾಸಿಕ ಸ್ರಾವದಲ್ಲಿ ಏಕೆ ರಕ್ತ ಹೆಪ್ಪುಗಟ್ಟುವುದಿಲ್ಲ?

ಸಾಮಾನ್ಯವಾದ ಸ್ಥಿತಿಗಳಲ್ಲಿ ಮಾಸಿಕ ಸ್ರಾವದಲ್ಲಿ ರಕ್ತ ಹೆಪ್ಪುಗಟ್ಟದೇ ಇರಲು ದೇಹ ಈ ಸಮಯದಲ್ಲಿ ಸ್ರವಿಸುವ ಹೆಪ್ಪುರೋಧಕ ರಾಸಾಯನಿಕಗಳು (anticoagulant) ಕಾರಣವಾಗಿದೆ. ಇದರಿಂದ ರಕ್ತ ಹೆಪ್ಪುಗಟ್ಟದೇ ಹಾಗೇ ಹೊರಬರುತ್ತದೆ.

ಮಾಸಿಕಸ್ರಾವದಲ್ಲಿ ರಕ್ತ ಹೆಪ್ಪುಗಟ್ಟಿಯೇ ಹೊರಬರುವುದೇಕೆ?

ಮಾಸಿಕಸ್ರಾವದಲ್ಲಿ ರಕ್ತ ಹೆಪ್ಪುಗಟ್ಟಿಯೇ ಹೊರಬರುವುದೇಕೆ?

ಕೆಲವು ಸ್ಥಿತಿಗಳಲ್ಲಿ ರಕ್ತಸ್ರಾವ ಅತಿ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿಯೂ ದೇಹ ಹೆಪ್ಪುರೋಧಕಗಳನ್ನು ಬಿಡುಗಡೆ ಮಾಡುತ್ತದಾದರೂ ಈ ಪ್ರಮಾಣ ಅಷ್ಟೂ ರಕ್ತವನ್ನು ಹೆಪ್ಪುಗಟ್ಟಿಸದೇ ಇರಲಿಕ್ಕೆ ಸಾಕಾಗದೇ ಹೋಗುತ್ತದೆ. ಪರಿಣಾಮವಾಗಿ ಹೆಚ್ಚಿನ ಪ್ರಮಾಣದ ರಕ್ತ ಹೆಪ್ಪುಗಟ್ಟತೊಡಗುತ್ತದೆ. ಸಮಯ ಕಳೆದಂತೆ ಇದು ಗಾಢಕೆಂಪು ಅಥವಾ ಕಂದುಬಣ್ಣ ಪಡೆದು ಗಟ್ಟಿಯಾದ ತುಂಡುಗಳ ರೂಪದಲ್ಲಿ ಹೊರಬೀಳುತ್ತದೆ.

ಈ ಹೆಪ್ಪುಗಟ್ಟಿದ ರಕ್ತ ಅಪಾಯಕರವೇ?

ಈ ಹೆಪ್ಪುಗಟ್ಟಿದ ರಕ್ತ ಅಪಾಯಕರವೇ?

ಒಂದು ವೇಳೆ ಮಾರಕ ಸೋಂಕು, ಗರ್ಭಾಪಾತ ಅಥವಾ ಬೇರಾವುದಾದರೂ ಗಂಭೀರವಾರ ಆರೋಗ್ಯ ಸಮಸ್ಯೆ ಇಲ್ಲದ ಹೊರತು ಈ ಬಗ್ಗೆ ಹೆಚ್ಚಿನ ಚಿಂತೆಗೆ ಕಾರಣವಿಲ್ಲ. ವೈದ್ಯರು ಈ ಹೆಪ್ಪುಗಟ್ಟುವಿಕೆಗೆ ಕೆಲವು ಪರೀಕ್ಷೆಗಳ ಮೂಲಕ ಕಾರಣವನ್ನು ಕಂಡುಕೊಂಡು ಸೂಕ್ತ ಚಿಕಿತ್ಸೆ ನೀಡುತ್ತಾರೆ. ಒಂದು ವೇಳೆ ರಕ್ತ ಹೆಪ್ಪುಗಟ್ಟುವಿಕೆಯ ಜೊತೆಗೇ ನೋವು ಸಹಾ ಇದ್ದರೆ ಇದು ಹೆಚ್ಚಿನ ಪರೀಕ್ಷೆಗಳ ಮೂಲಕ ಕಂಡುಕೊಳ್ಳಬೇಕಾದ ಸವಾಲಾಗಿರುತ್ತದೆ. ಇಲ್ಲದಿದ್ದರೆ ಕೆಲವು ಮಹಿಳೆಯರಿಗೆ ಇದು ಪ್ರತಿ ಬಾರಿಯೂ ಸ್ವಾಭಾವಿಕವಾಗಿದ್ದು ಚಿಂತಿಸಬೇಕಾದ ಅಗತ್ಯವಿಲ್ಲ. ಆದರೆ ಈ ಹೆಚ್ಚಿನ ಸ್ರಾವವನ್ನು ಹೀರಿಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಮಾತ್ರ ತಪ್ಪದೇ ಅನುಸರಿಸಬೇಕು.

ಈ ಪರಿಸ್ಥಿತಿ ಬೇರಾವುದೊ ಗಂಭೀರ ಸ್ಥಿತಿಯ ಮುನ್ಸೂಚನೆಯೇ?

ಈ ಪರಿಸ್ಥಿತಿ ಬೇರಾವುದೊ ಗಂಭೀರ ಸ್ಥಿತಿಯ ಮುನ್ಸೂಚನೆಯೇ?

ಕೆಲವು ಸಂದರ್ಭಗಳಲ್ಲಿ ಗರ್ಭಕೋಶದಲ್ಲಿ ಆಗಿರುವ ದ್ರಾಕ್ಷಿಗೊಂಚಲಿನಂತಹ ಗಡ್ಡೆಗಳು ಕಾರಣವಿರಬಹುದು (uterine fibroids). ಕೆಲವು ಸಂಶೋಧನೆಗಳ ಮೂಲಕ ನಡುವಯಸ್ಸು ದಾಟಿದ ಬಳಿಕ 70%ರಷ್ಟು ಮಹಿಳೆಯರಿಗೆ ಈ ಸ್ಥಿತಿ ಕಾಣಿಸಿಕೊಳ್ಳುತ್ತದೆ. ಆದರೆ ಇದು ಕ್ಯಾನ್ಸರ್ ಅಲ್ಲವಾದ್ದರಿಂದ ಹೆಚ್ಚು ಚಿಂತೆಗೆ ಕಾಣವಿಲ್ಲ.

ಇದು ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತದೆಯೇ?

ಇದು ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತದೆಯೇ?

ರಕ್ತಸ್ರಾವ ಸಾಮಾನ್ಯವಿರುವ ಮಹಿಳೆಯರಿಗೆ ಈ ಸ್ಥಿತಿ ಹೆಚ್ಚು ಕಾಡುವುದಿಲ್ಲ. ಆದರೆ ಸಾಮಾನ್ಯಕ್ಕಿಂತ ಕೊಂಚ ಹೆಚ್ಚಾದ ಪ್ರಮಾಣದ ಸ್ರಾವವಿದ್ದ ಎಲ್ಲಾ ಮಹಿಳೆಯರಿಗೆ ರಕ್ತ ಹೆಪ್ಪುಗಟ್ಟಿ ಬರುವುದು ಅನಿವಾರ್ಯವಾಗಿದೆ. ಕೆಲವು ಮಹಿಳೆಯರಿಗೆ ಋತುಮತಿಯಾದ ಮೊದಲ ವರ್ಷ ಹಾಗೂ ರಜೋನಿವೃತ್ತಿ ಪಡೆಯುವ ಸಮಯದ ಹಿಂದಿನ ವರ್ಷ ಈ ಸ್ಥಿತಿ ಕಾಣಿಸಿಕೊಳ್ಳುತ್ತದೆ.

ಈ ಸ್ಥಿತಿಯನ್ನು ವೈದ್ಯರಿಗೆ ತಿಳಿಸುವುದು ಅಗತ್ಯವೇ?

ಈ ಸ್ಥಿತಿಯನ್ನು ವೈದ್ಯರಿಗೆ ತಿಳಿಸುವುದು ಅಗತ್ಯವೇ?

ಸಕಾರಣವಿಲ್ಲದೇ ರಕ್ತ ಹೆಪ್ಪುಗಟ್ಟಿದರೆ ಈ ಬಗ್ಗೆ ವೈದ್ಯರಿಗೆ ತಿಳಿಸುವುದು ಅಗತ್ಯ ಹಾಗೂ ಅನಿವಾರ್ಯ. ಇದರೊಂದಿಗೆ ಸುಸ್ತು, ನಿಃಶಕ್ತಿ ಮೊದಲಾದವು ಕಾಣಬಂದರೆ ಇದು ರಕ್ತಹೀನತೆ ಅಥವಾ ಬೇರಾವುದೋ ತೊಂದರೆಯ ಸೂಚನೆಯಾಗಿರಬಹುದು. ರಕ್ತ ಹೆಪ್ಪುಗಟ್ಟುವಿಕೆಯನ್ನು ನೋಡಿದಾಗ ಶರೀರದ ಶಕ್ತಿ ಸೋರಿಹೋದಂತೆ ಹಾಗೂ ತಲೆ ಹಗುರಾದಂತೆ ಅನ್ನಿಸಿದರೆ ಮಾತ್ರ ವೈದ್ಯರನ್ನು ಕಂಡು ಸೂಕ್ತ ಪರೀಕ್ಷೆಗಳಿಗೆ ಒಳಪಡುವುದು ಅಗತ್ಯ. ಗರ್ಭಾವಸ್ಥೆಯಲ್ಲಿ ಅಥವಾ ಗರ್ಭಪಾತದ ಬಳಿಕ ಸ್ರಾವ ಕಂಡುಬಂದರು ತಕ್ಷಣ ವೈದ್ಯರನ್ನು ಕಾಣಬೇಕು. ಸ್ವಾಭಾವಿಕ ಕಾರಣದಿಂದ ರಕ್ತ ಹೆಪ್ಪುಗಟ್ಟಿ ಹೊರಬರುತ್ತಿದ್ದರೂ ವೈದ್ಯರ ಸಲಹೆ ಪಡೆದು ಎಲ್ಲಾ ಸರಿಯಾಗಿದೆ ಎಂದು ಸ್ಪಷ್ಟಪಡಿಸಿಕೊಳ್ಳಲಿಕ್ಕೋಸ್ಕರವಾದರೂ ವೈದ್ಯರನ್ನು ಭೇಟಿಯಾಗುವುದು ಉತ್ತಮ.

English summary

Are There Clots In Blood During Periods?

Did you observe clots in blood during period? Well, period blood may not be the same every month. Sometimes, the colour appears too dark and sometimes the consistency gets thicker due to many reasons. Sometimes, clots may become a cause of concern. Do clots occur only in some women? They could occur in most of the women at least once in a life time.
Subscribe Newsletter