ಸಿಕ್ಕಾಗ ಕುಡಿದುಬಿಡಿ..ಈ ಮಿಶ್ರಣಕ್ಕೆ ಕ್ಯಾನ್ಸರ್ ತಡೆಯುವ ಶಕ್ತಿಯಿದೆ!

By: Divya
Subscribe to Boldsky

ಚಿಕಿತ್ಸಾ ಕ್ಷೇತ್ರದಲ್ಲಿ ಹೊಸ-ಹೊಸ ಬಗೆಯ ಚಿಕಿತ್ಸಾ ಕ್ರಮಗಳ ಆವಿಷ್ಕಾರವಾಗುತ್ತಿದ್ದಂತೆ, ವಿಚಿತ್ರ ಮಾರಣಾಂತಿಕ ಕಾಯಿಲೆಗಳು ಗೋಚರಿಸುತ್ತಿರುವುದು ವಿಪರ್ಯಾಸ. ಒಮ್ಮೆ ದೇಹವನ್ನು ಆವರಿಸಿಕೊಂಡರೆ, ಜೀವವನ್ನೇ ಹೀರಿಕೊಳ್ಳುವ ಕಾಯಿಲೆ ಕ್ಯಾನ್ಸರ್. ವಿವಿಧ ಬಗೆಯನ್ನು ಹೊಂದಿರುವ ಈ ಕಾಯಿಲೆಯ ಹೆಸರು ಕೇಳಿದರೇ ಒಂದು ರೀತಿಯ ಭಯ ಉಂಟಾಗುವುದು. ಇದಕ್ಕೆ ಚಿಕಿತ್ಸೆ ಕಂಡುಹಿಡಿದಿದ್ದೇವೆಯಾದರೂ ತೀವ್ರತೆ ಹೆಚ್ಚಾದರೆ ಯಾವ ಬಗೆಯ ಚಿಕಿತ್ಸೆಗೂ ಬಗ್ಗದು.

ಇತ್ತೀಚೆಗೆ ಮನುಕುಲದಲ್ಲಿ ಸಾಮಾನ್ಯವಾಗಿರುವ ಕಾಯಿಲೆ ಇದಾಗಿದೆ. ವಿವಿಧ ಪ್ರಕಾರಗಳನ್ನು ಹೊಂದಿರುವ ಕ್ಯಾನ್ಸರ್ ದೇಹದ ಕೆಲವು ಅಂಗಾಂಗಗಳನ್ನೇ ನಾಶ ಮಾಡಬಹುದು. ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಅಸಹಜ ಪ್ರಮಾಣದಲ್ಲಿ ಹೆಚ್ಚುತ್ತಾ ಹೋದರೆ ಕೆಲವು ಅಂಗಾಂಶಗಳು ಹಾನಿಗೊಳಗಾಗುತ್ತವೆ. 

Muskmelon

ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ರಕ್ತ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿವೆ. ಆಹಾರ ಪದ್ಧತಿ, ರಾಸಾಯನಿಕಗಳು, ಮಾಲಿನ್ಯ ಮತ್ತು ತಂಬಾಕು ಸೇವನೆಗಳಂತಹ ಕೆಟ್ಟ ಚಟಗಳು ಇವುಗಳ ಹುಟ್ಟಿಗೆ ಕಾರಣಗಳು ಎನ್ನಬಹುದು. ಈ ಕಾಯಿಲೆಯನ್ನು ಕೇವಲ ಔಷಧಗಳಿಂದಷ್ಟೇ ಅಲ್ಲ, ಮನೆ ಔಷಧಿಯಿಂದಲೂ ನಿಯಂತ್ರಣದಲ್ಲಿಟ್ಟು ಕೊಳ್ಳಬಹುದು!

ಕರ್ಬೂಜ ಹಣ್ಣಿನಲ್ಲಿರುವ ಗುಣಗಳು ಒಂದಾ ಎರಡಾ...

ನಿಜ, ಮನೆಯಲ್ಲಿ ಲಭ್ಯವಿರುವ ಕೆಲವು ಸರಳ ಪದಾರ್ಥಗಳ ಬಳಕೆಯಿಂದ ವಿವಿಧ ಬಗೆಯ ಕ್ಯಾನ್ಸರ್ ಗಳನ್ನು ತಡೆಗಟ್ಟಬಹುದು. ಅಂತಹ ಪದಾರ್ಥಗಳಲ್ಲಿ ಕರ್ಬೂಜ ಹಣ್ಣು (ಮಸ್ಕ್‍ಮೆಲನ್)ವೂ ಒಂದು. ಇದರ ರಸಕ್ಕೆ ಕೆಲವು ಪದಾರ್ಥಗಳನ್ನು ಸೇರಿಸಿದರೆ ಔಷಧೀಯ ಗುಣ ದ್ವಿಗುಣವಾಗುತ್ತದೆ. ಅವುಗಳ ತಯಾರಿ ಹೇಗೆ ಎನ್ನುವುದರ ವಿವರ ಈ ಕೆಳಗಿನಂತಿವೆ.  

ಬೇಕಾಗುವ ಸಲಕರಣೆಗಳು

* ಕರ್ಬೂಜದ ರಸ -1 ಗ್ಲಾಸ್

* ಆಲಿವ್ ಎಣ್ಣೆ -2 ಚಮಚ

ಇವುಗಳ ಮಿಶ್ರಣವನ್ನು ನಿತ್ಯವೂ ಸೇವಿಸುತ್ತ ಬಂದರೆ, ಪರಿಣಾಮಕಾರಿ ರೀತಿಯಲ್ಲಿ ಕ್ಯಾನ್ಸರ್‍ಅನ್ನು ತಡೆಯಬಹುದು. ಶುದ್ಧ ವಾತಾವರಣ, ನಿಯಮಿತ ವ್ಯಾಯಾಮ, ಉತ್ತಮ ಆಹಾರ ಸೇವನೆ ಮತ್ತು ಆರೋಗ್ಯಕರ ಜೀವನ ಶೈಲಿಯು ಕ್ಯಾನ್ಸರ್ ನಿಯಂತ್ರಣಕ್ಕೆ ಇನ್ನಷ್ಟು ಪುಷ್ಟಿ ನೀಡುವುದು. 

Muskmelon juice

ಕರ್ಬೂಜದ ಹಣ್ಣಿನಲ್ಲಿ ರೋಗ ನಿರೋಧಕ ಅಂಶವು ಅಧಿಕ ಪ್ರಮಾಣದಲ್ಲಿದೆ. ಇದು ದೇಹದಲ್ಲಿರುವ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ. ಒಟ್ಟಿನಲ್ಲಿ ಇದೊಂದು ಕ್ಯಾನ್ಸರ್ ನಿಯಂತ್ರಣದ ಉತ್ತಮ ಮನೆ ಮದ್ದು ಎನ್ನಬಹುದು. ಆಲಿವ್ ಎಣ್ಣೆಯಲ್ಲಿ ವಿಟಮಿನ್-ಇ ಸಮೃದ್ಧವಾಗಿದೆ. ಅಸಹಜ ರೀತಿಯಲ್ಲಿ ಬೆಳವಣಿಗೆಯಾಗುವ ಕ್ಯಾನ್ಸರ್ ಕೋಶಗಳನ್ನು ತಡೆಯಬಲ್ಲ ಫೈಟೋನ್ಯೂಟ್ರಿಯೆಂಟ್‍ಗಳು ಇದರಲ್ಲಿದೆ. 

Olive Oil

ತಯಾರಿಸುವ ವಿಧಾನ:

* ಮೇಲೆ ಹೇಳಲಾದ ಆಲಿವ್ ಎಣ್ಣೆಯನ್ನು ಕರ್ಬೂಜ ಹಣ್ಣಿನ ರಸಕ್ಕೆ ಸೇರಿಸಬೇಕು.

* ಇದನ್ನು ಎರಡು ನಿಮಿಷ ಚೆನ್ನಾಗಿ ಕಲುಕಿ ಮಿಶ್ರಗೊಳಿಸಬೇಕು.

* ಪ್ರತಿದಿನ ಬೆಳಗ್ಗೆ ತಿಂಡಿ ತಿನ್ನುವ ಮೊದಲು ಕುಡಿಯಬೇಕು.

* ಸಾಧ್ಯವಾದಷ್ಟು ದಿನ ಇದರ ಸೇವನೆಯನ್ನು ಮುಂದುವರಿಸಬಹುದು.

ಹೊಟ್ಟೆಯ ಕ್ಯಾನ್ಸರ್: ನೀವು ತಿಳಿಯಲೇಬೇಕಾದ ಸತ್ಯಾಸತ್ಯತೆ

English summary

Amazing Muskmelon Remedy That Can Prevent Cancer!

Did you know that there are a few home remedies that are capable of preventing fatal diseases like cancer? Yes, in fact consuming this remedy prepared by using simple ingredients that are easily available is known to have prevented many types of cancers, according to research studies. Learn how to prepare and use this remedy, here.
Subscribe Newsletter