For Quick Alerts
ALLOW NOTIFICATIONS  
For Daily Alerts

ಖತರ್ನಾಕ್ ಮೈಗ್ರೇನ್ ತಲೆ ನೋವಿಗೆ-ಪವರ್ ಫುಲ್ ಮನೆಮದ್ದುಗಳು

By Lekhaka
|

ಪದೇ ಪದೇ ಕಾಡುವಂತಹ ತಲೆನೋವು ದಿನನಿತ್ಯದ ಕೆಲಸಗಳ ಮೇಲೆ ಅಡ್ಡಿ ಉಂಟು ಮಾಡುವುದು ಮಾತ್ರವಲ್ಲದೆ ದೇಹವನ್ನು ಹಿಂಡಿ ಹಿಪ್ಪೆ ಮಾಡಿಬಿಡುವುದು. ಕೆಲವು ಸಲ ತಲೆನೋವು ಶುರುವಾದಾಗ ಜೀವನವೇ ಸಾಕಪ್ಪ ಎನ್ನುವಷ್ಟು ಬೇಸರ ಮೂಡಿಸುವುದು. ಕಣ್ಣಿನ ಮೇಲೆ ಒತ್ತಡ ಬಿದ್ದು, ಬೆಳಕು ನೋಡಲು ಕಷ್ಟವಾಗುತ್ತಾ ಇದ್ದರೆ ನೀವು ಖಂಡಿತವಾಗಿಯೂ ವೈದ್ಯರಲ್ಲಿಗೆ ತೆರಳಿ ಪರೀಕ್ಷಿಸಿಕೊಳ್ಳಬೇಕು. ಯಾಕೆಂದರೆ ಇಂತಹ ತಲೆನೋವನ್ನು ಮೈಗ್ರೇನ್ ತಲೆನೋವು ಎನ್ನಲಾಗುತ್ತದೆ. ಈ ರೀತಿಯ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ತಕ್ಷಣ ಪರೀಕ್ಷಿಸಿಕೊಂಡು ಸರಿಯಾದ ವೈದ್ಯಕೀಯ ನೆರವು ಪಡೆಯಬೇಕು.

ಮೈಗ್ರೇನ್ ತಲೆನೋವು ತುಂಬಾ ಕೆಟ್ಟ ಆರೋಗ್ಯ ಸಮಸ್ಯೆ. ಕೆಲವರಿಗೆ ತಲೆನೋವು ತಾಳಲಾರದೆ ಆಸ್ಪತ್ರೆಗೂ ದಾಖಲಾಗಬೇಕಾಗುತ್ತದೆ. ಪದೇ ಪದೇ ಕಾಡುವಂತಹ ಮೈಗ್ರೇನ್ ತಲೆನೋವು ಇರುವವರಿಗೆ ಕುತ್ತಿಗೆ ನೋವು, ಆಯಾಸ, ವಾಕರಿಕೆ, ಮೂಗು ಕಟ್ಟುವುದು ಮತ್ತು ದೃಷ್ಟಿ ಮಂದವಾಗುವಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಒತ್ತಡ, ಹಾರ್ಮೋನು ಅಸಮತೋಲನ, ಕೆಟ್ಟ ಆಹಾರ ಕ್ರಮ, ಆತಂಕ, ಮಾತ್ರೆಗಳ ಅಡ್ಡ ಪರಿಣಾಮ, ಅನುವಂಶೀಯತೆ ಹೀಗೆ ವಿವಿಧ ಕಾರಣಗಳಿಂದ ಮೈಗ್ರೇನ್ ತಲೆನೋವು ಕಾಣಿಸಿಕೊಳ್ಳಬಹುದು.

ಆಗಾಗ ಕಾಡುವಂತಹ ಮೈಗ್ರೇನ್ ತಲೆನೋವು ನಿವಾರಣೆ ಮಾಡಲು ಹೆಚ್ಚಿನವರು ನೋವು ನಿವಾರಕಗಳ ಮೊರೆ ಹೋಗುವರು. ಆದರೆ ನೋವು ನಿವಾರಕಗಳಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇರುವ ಕಾರಣ ಇದನ್ನು ಸಂಪೂರ್ಣವಾಗಿ ಕಡೆಗಣಿಸಬೇಕು. ಮನೆಮದ್ದಿನ ಮೂಲಕವೇ ಮೈಗ್ರೇನ್ ನಿವಾರಣೆ ಮಾಡಬಹುದು. ಇದು ಹೇಗೆ ಎಂದು ನೀವು ತಿಳಿದುಕೊಳ್ಳಿ.

 ಪುದಿನಾ ಎಲೆಗಳ ಚಹಾ

ಪುದಿನಾ ಎಲೆಗಳ ಚಹಾ

ನಿಮ್ಮ ನೆಚ್ಚಿನ ಟೀಪುಡಿಯಿಂದ ತಯಾರಿಸಿದ ಹಾಲಿಲ್ಲದ ಕಪ್ಪು ಚಹಾವನ್ನು ಒಲೆಯಲ್ಲಿದ್ದಾಗಲೇ ಚಹಾಪುಡಿ ಸೋಸಿ ತೆಗೆದು ಮತ್ತೆ ಪಾತ್ರೆಗೆ ಹಾಕಿ ಕೆಲವು ಪುದಿನಾ ಎಲೆಗಳನ್ನು (ಒಂದು ಕಪ್ ಗೆ ಸುಮಾರು ಮೂರು ಎಲೆಗಳು) ಹಾಕಿ ಸುಮಾರು ಐದರಿಂದ ಹತ್ತು ನಿಮಿಷ ಅತಿಕದಿಮೆ ಉರಿಯಲ್ಲಿ ಬೇಯಲು ಬಿಡಿ. ಬಳಿಕ ಬಿಸಿಬಿಸಿಯಿದ್ದಂತೆಯೇ ಕುಡಿಯಿರಿ. ಎಲೆಗಳು ದೊಡ್ಡದಿದ್ದರೆ ಕೊಂಚ ಹಿಸುಕಿ ಹಾಕುವುದರಿಂದ ಹೆಚ್ಚಿನ ಪರಿಮಳ ಮತ್ತು ಸ್ವಾದ ದೊರಕುತ್ತದೆ.

ಐಸ್ ಪ್ಯಾಕ್

ಐಸ್ ಪ್ಯಾಕ್

ಮೈಗ್ರೇನ್ / ತಲೆನೋವು ನಿಮ್ಮನ್ನು ಅತೀ ಹೆಚ್ಚು ಕಾಡುತ್ತಿದ್ದರೆ ನಿಮ್ಮ ತಲೆಯ ಮೇಲ್ಭಾದದಲ್ಲಿ ಒಂದು ಐಸ್ ಪ್ಯಾಕ್ (ಮಂಜುಗಡ್ಡೆ ) ನ್ನು ಇಡಿ. ಹೀಗೆ ಮಾಡುವುದರಿಂದ ತಲೆಯಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಲ್ಲದೆ ನೋವು ಕೂಡ ಕಡಿಮೆಯಾಗುತ್ತದೆ. ಕುತ್ತಿಗೆಯ ಕೆಳಭಾಗ ನೋವಾಗುತ್ತಿದ್ದರೆ ಅಲ್ಲಿಯೂ ಐಸ್ ಪ್ಯಾಕ್ ಇಡಬಹುದು.

ಇನ್ನೊಂದು ವಿಧಾನ ಎಂದರೆ - ಐಸ್ ಕ್ಯೂಬ್ ಅನ್ನು ಬಳಸಿಕೊಂಡು ಮೈಗ್ರೇನ್ ನೋವಿರುವ ಜಾಗದಲ್ಲಿ ಇರಿಸಿಕೊಳ್ಳಿ ಇದರಿಂದ ತ್ವರಿತ ಉಪಶಮನ ನಿಮಗೆ ದೊರೆಯುತ್ತದೆ. ಐಸ್ ಪ್ಯಾಕ್ ಅನ್ನು ನಿಮ್ಮ ತಲೆಬುರುಡೆಯ ಮೇಲಿರಿಸಿಕೊಳ್ಳಿ. ಇದರಿಂದ ನೋವಿನಿಂದ ಕೊಂಚ ಉಪಶಮನ ನಿಮಗೆ ದೊರೆಯುತ್ತದೆ. ಟವೆಲ್‌ನಿಂದ ಐಸ್‌ಗಳನ್ನು ಸುತ್ತಿ ಕೂಡ ಅದನ್ನು ತಲೆಬುರುಡೆಯ ಮೇಲೆ ಇರಿಸಿಕೊಳ್ಳಬಹುದು.

ಅರೋಮಾಥೆರಪಿ

ಅರೋಮಾಥೆರಪಿ

ಅರೋಮಾಥೆರಪಿ ನ ಮೈಗ್ರೇನ್ ದಾಳಿಗೆ ಸೂಕ್ತವಾದ ಚಿಕಿತ್ಸೆ ನೀಡಬಲ್ಲದು. ವಿವಿಧ ಪರಿಮಳದ ದ್ರವ್ಯಗಳು ನಿಮ್ಮ ದೇಹದ ಮೇಲೆ ಹಿತವಾದ ಪರಿಣಾಮ ಬೀರಿ ನೀವು ಮೈಗ್ರೇನ್ ನಿಂದ ಬಳಲುತ್ತಿದ್ದಾಗ ಸಹಾಯಮಾಡಬಲ್ಲದು. ಪುದೀನಾ, ನೀಲಗಿರಿ ಮೊದಲಾದವುಗಳಿಂದ ತಯಾರಿಸಲ್ಪಟ್ಟ ಪರಿಮಳ ದ್ರವ್ಯಗಳನ್ನು ಬಳಸುವುದು ಸೂಕ್ತ. ಅಲ್ಲದೇ ಮೈಗ್ರೇನ್ ಹೋಗಲಾಡಿಸಲು ನಿಮಗೆ ಸರಿಹೊಂದುವಂತಹ ಗಿಡಮೂಲಿಕೆಗಳನ್ನೂ ಬಳಸಬಹುದು.

ಬಾಡಿ ಮಸಾಜ್

ಬಾಡಿ ಮಸಾಜ್

ಅನೇಕ ಬಾರಿ ಅಲ್ಲದಿದ್ದರೂ, ಅಪರೂಪಕ್ಕೊಮ್ಮೆಯಾದರೂ ನಿಮ್ಮ ಕುತ್ತಿಗೆ ಮತ್ತು ಭುಜದ ಭಾಗಗಳ ಸ್ನಾಯುಗಳ ಮಸಾಜ್ ಮಾಡಿಸಿಕೊಳ್ಳುವುದು ಮೈಗ್ರೇನ್ ದಾಳಿಯನ್ನು ಕಡಿಮೆಮಾಡಬಲ್ಲದು. ಇದು ದೇಹಕ್ಕೆ ಆರಾಮದಾಯಕವಾಗುವುದರಿಂದ ಮೈಗ್ರೇನ್ ನೋವು ಕಡಿಮೆಯಾಗುತ್ತದೆ.

ಹೈಡ್ರೋಥೆರಪಿ

ಹೈಡ್ರೋಥೆರಪಿ

ಹೈಡ್ರೋಥೆರಪಿ, ಸಾಕಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿ ದೇಹದಲ್ಲಿ ರಕ್ತದ ಹರಿವನ್ನು ನಿಯಂತ್ರಿಸಬಲ್ಲದು. ಇದರಿಂದ ಮೈಗ್ರೇನ್ ನೀವು ಶಮನಗೊಳಿಸಲು ಸಾಧ್ಯ. ನೀವು ತಣ್ಣನೆಯ ನೀರಿನಲ್ಲಿ ನಿಮ್ಮ ಪಾದವನ್ನು ಇಳಿಬಿಟ್ಟು ಮತ್ತು ಬಿಸಿ ನೀರಿನ ಬಾಟಲಿಯನ್ನು ತಲೆಯ ಹಿಂದೆ ಇಟ್ಟುಕೊಂಡರೆ ತಲೆನೀವು ಹೇಳಹೆಸರಿಲ್ಲದಂತೆ ಕಡಿಮೆಯಾಗುತ್ತದೆ! ಮೈಗ್ರೇನ್ ಸಾಕಷ್ಟು ತೀವ್ರವಾಗಿದ್ದರೂ ಕೂಡ ಇದನ್ನು ಮನೆಯ ಮದ್ದುಗಳು ಮತ್ತು ಜೀವನಶೈಲಿಯಲ್ಲಿ

ಬದಲಾವಣೆಗಳಿಂದಾಗಿ ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. ಆದರೆ, ಈ ಯಾವುದೇ ಚಿಕಿತ್ಸೆಗಳೂ ನಿಮ್ಮ ಮೇಲೆ ಪರಿಣಾಮ ಬೀರದಿದ್ದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ.

ಯೋಗ ಮಾಡಿ

ಯೋಗ ಮಾಡಿ

ಯೋಗ ಮೈಗ್ರೇನ್ ಗೆ ಅತ್ಯುತ್ತಮ ಪರ್ಯಾಯ ಚಿಕಿತ್ಸೆಯಾಗಿದೆ. ಯೋಗ, ದೇಹದ ಜೀವ ರಾಸಾಯನಿಕ ಮತ್ತು ಹಾರ್ಮೋನುಗಳಲ್ಲಿ ಸಮತೋಲನ ತರಬಲ್ಲದು. ಉಸಿರಾಟದ ವ್ಯಾಯಾಮಗಳು ಮತ್ತು ಇತರ ಯೋಗಾಭ್ಯಾಸಗಳು ಮೈಗ್ರೇನ್ ನ್ನು ಗಮನಾರ್ಹವಾಗಿ ಕಡಿಮೆ ಮಾಡಬಲ್ಲವು.

ತನ್ನೀರಿನಿಂದ ಸ್ನಾನ ಮಾಡಿ- ತಲೆಗೆ ಮಸಾಜ್ ಮಾಡಿ

ತನ್ನೀರಿನಿಂದ ಸ್ನಾನ ಮಾಡಿ- ತಲೆಗೆ ಮಸಾಜ್ ಮಾಡಿ

ಮೈಗ್ರೇನ್ ನೋವು ನಿವಾರಣೆಗಾಗಿ ನಿಮಗೆ ತ್ವರಿತ ಉಪಶಮವನ್ನು ಈ ತಲೆಯ ಮಸಾಜ್ ನೀಡುತ್ತದೆ. ಬರಿಯ ತಣ್ಣಗಿನ ಸ್ನಾನ ಮಾಡುವುದರ ಜೊತೆಗೆ ತಲೆಯ ಮಸಾಜ್ ಅನ್ನು ನೀವು ಮಾಡಿಕೊಳ್ಳುವುದೂ ಮೈಗ್ರೇನ್‌ಗೆ ಅತ್ಯುತ್ತಮ ಪರಿಹಾರವನ್ನು ಒದಗಿಸುತ್ತದೆ. ಇನ್ನು ಹುಡುಗಿಯರು ತಮ್ಮ ಸ್ನಾನದ ನೀರಿನಲ್ಲಿ ಲ್ಯಾವೆಂಡರ್ ಪರಿಮಳವಿರುವ ಎಣ್ಣೆಯನ್ನು ಸೇರಿಸಿಕೊಂಡು ನಿಮಗೆ ಆರಾಮ ಎನಿಸುವಷ್ಟು ಸಮಯ ತಲೆ ತೊಳೆದುಕೊಳ್ಳಿ. ಇನ್ನು ಈ ಸುಗಂಧದ ಎಣ್ಣೆ ನಿಮಗೆ ಇಷ್ಟವಾಗುವುದಿಲ್ಲ ಎಂದಾದಲ್ಲಿ ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ.

ಕೆಫೀನ್

ಕೆಫೀನ್

ಮು೦ಜಾವಿನ ತಲೆಶೂಲೆಯನ್ನು ಹತ್ತಿಕ್ಕಲು ನೆರವಾಗುವ ಅತ್ಯುತ್ತಮವಾದ ಮಾರ್ಗೋಪಾಯವು ಯಾವುದೆ೦ದರೆ, ಕಾಫಿ ಅಥವಾ ಕೆಫಿನ್ ಅ೦ಶಗಳುಳ್ಳ ಇತರ ಪೇಯಗಳ ಸೇವನೆಯಿ೦ದ ಸ೦ಪೂರ್ಣವಾಗಿ ದೂರವಾಗಿರುವುದು.ಹೀಗೆ ಮಾಡಲು ನಿಮಗೊ೦ದು ವೇಳೆ ಸಾಧ್ಯವಾಗದಿದ್ದಲ್ಲಿ, ಕನಿಷ್ಟಪಕ್ಷ ಅ೦ತಹ ಪೇಯಗಳ ಸೇವನೆಯ ಸ೦ಖ್ಯೆಯನ್ನಾದರೂ ತಗ್ಗಿಸಲು ಪ್ರಯತ್ನಿಸಿರಿ. ಇದು ನಿಮ್ಮ ಪರ ಅಥವಾ ವಿರುದ್ಧವಾಗಿ ಕೆಲಸ ಮಾಡಬಹುದು. ಇದು ವ್ಯಕ್ತಿಯ ದೇಹಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಕೆಲವರಿಗೆ ಒಂದು ಕಪ್ ಕಾಫಿ ಸೇವನೆ ಮಾಡಿದರೆ ಮೈಗ್ರೇನ್ ಬರಬಹುದು. ಇನ್ನು ಕೆಲವರಿಗೆ ಇದರಿಂದ ಪರಿಹಾರ ಸಿಗಬಹುದು. ಸಾಮಾನ್ಯವಾಗಿ ಕಾಫಿಯಲ್ಲಿರುವ ಕೆಫೀನ್ ಮೆದುಳಿಗೆ ರಕ್ತಸಂಚಾರ ಹೆಚ್ಚಿಸಲು ನೆರವಾಗುತ್ತದೆ. ಆಗಾಗ ಚಿಕ್ಕ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ತಲೆನೋವು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ. ಸಂಶೋಧನೆಗಳ ಮೂಲಕ ಈ ವಿಷಯ ದೃಢಪಟ್ಟಿದೆ. ಆದರೆ ಈ ಪ್ರಮಾಣ ಅತಿ ಕಡಿಮೆ ಇರಬೇಕು ಎಂದೂ ಸೂಚಿಸಿವೆ. ಒಂದು ಅಂದಾಜಿನ ಪ್ರಕಾರ ತಲೆನೋವು ಪ್ರಾರಂಭವಾದ ತಕ್ಷಣ ಅರ್ಧ ಲೋಟ, ಬಳಿಕ ಪ್ರತಿ ಗಂಟೆಗೊಮ್ಮೆ ಕಾಲು ಲೋಟದ ಸೇವನೆ ಉತ್ತಮ ಪರಿಹಾರ ನೀಡುತ್ತದೆ.

ನಿದ್ರೆ

ನಿದ್ರೆ

ನಿದ್ರೆಯು ಮೈಗ್ರೇನ್ ನಿಂದ ಪರಿಹಾರ ನೀಡಲು ಅತ್ಯುತ್ತಮ ವಿಧಾನವಾಗಿದೆ. ಇದು ಮೈಗ್ರೇನ್ ನಿಂದ ತಕ್ಷಣ ಮುಕ್ತಿ ನೀಡದು. ಆದರೆ ಒಳ್ಳೆಯ ನಿದ್ರೆಯು ಮೈಗ್ರೇನ್ ನಿಂದ ಪರಿಹಾರ ನೀಡಬಹುದು. ಸಾಮಾನ್ಯವಾಗಿ ಮೈಗ್ರೇನ್ ನಿಂದ ಸರಿಯಾಗಿ ನಿದ್ರೆ ಬರದೇ ಇರಬಹುದು ಅಥವಾ ರಾತ್ರಿ ಪದೇ ಪದೇ ಎಚ್ಚರವಾಗಬಹುದು. ರಾತ್ರಿ ವೇಳೆ ನಿದ್ರೆ ಸರಿಯಾಗಿ ಆಗದೆ ಇದ್ದರೆ

ಮೈಗ್ರೇನ್ ಬರುವುದು. ಒಳ್ಳೆಯ ನಿದ್ರೆಗೆ ಕೆಲವೊಂದು ಕ್ರಮಗಳನ್ನು ಪಾಲಿಸಿ. ಪ್ರತಿನಿತ್ಯ ಸರಿಯಾದ ಸಮಯಕ್ಕೆ ನಿದ್ರೆ ಮಾಡಿ. ಮಲಗುವ ಮತ್ತು ಬೆಳಗ್ಗೆ ಏಳುವ ಸಮಯವು ಸರಿಯಾಗಿರಲಿ. ವಾರಾಂತ್ಯದಲ್ಲೂ ಇದನ್ನು ಪಾಲಿಸಿ. ಹಗಲಿನಲ್ಲಿ ಮಲಗುವ ಅಭ್ಯಾಸವಿದ್ದರೆ ಕೆಲವೇ ನಿಮಿಷ ಮಲಗಿ. ಹಗಲಿನಲ್ಲಿ 20-30 ನಿಮಿಷಕ್ಕಿಂತ ಹೆಚ್ಚು ಮಲಗಿದರೆ ರಾತ್ರಿ ನಿದ್ರೆ ಮೇಲೆ ಪರಿಣಾಮವಾಗಬಹುದು.

ಮಸಾಜ್

ಮಸಾಜ್

ಒಳ್ಳೆಯ ಮಸಾಜ್ ನಿಂದ ಹಲವಾರು ರೀತಿಯ ತಲೆನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಮೈಗ್ರೇನ್ ಕೂಡ ಒಂದಾಗಿದೆ. ನಿಮಗೆ ಹೊಂದಿಕೆಯಾಗುವ ಎಣ್ಣೆ ತೆಗೆದುಕೊಂಡು ಹದವಾಗಿ ತಲೆಗೆ ಮಸಾಜ್ ಮಾಡಿಕೊಳ್ಳಿ. ಇದು ನಿಮಗೆ ಪರಿಹಾರ ನೀಡುವುದು. ಇಲ್ಲಿ ಹೇಳಿರುವ ಚಿಕಿತ್ಸೆಗಳು

ಸಂಪೂರ್ಣ ಪರಿಹಾರ ನೀಡದೆ ಇರಬಹುದು. ಆದರೆ ತಕ್ಷಣಕ್ಕೆ ಪರಿಹಾರ ನೀಡುವುದು. ಮೈಗ್ರೇನ್ ಯಾವುದರಿಂದ ಉಂಟಾಗುತ್ತದೆ ಎಂದು ತಿಳಿಯದೆ ಅದಕ್ಕೆ ಚಿಕಿತ್ಸೆ ಹೇಳುವುದು ಕಷ್ಟ. ಇದಕ್ಕೆ ಸಂಬಂಧಿಸಿದ ಪರಿಸ್ಥಿತಿ ಅರ್ಥ ಮಾಡಿಕೊಂಡು ಅದರಂತೆ ಚಿಕಿತ್ಸೆ ನೀಡಬೇಕು. ಇದು ಮೈಗ್ರೇನ್ ನಿಂದ ನಿಮಗೆ ಪರಿಹಾರ ನೀಡಬಹುದು.

ನೀರು ಸೇವಿಸುತ್ತಾ ಇರಿ

ನೀರು ಸೇವಿಸುತ್ತಾ ಇರಿ

ಹೆಚ್ಚಿನವರ ದೇಹದಲ್ಲಿ ನೀರನಾಂಶವು ಕಡಿಮೆಯಾದಾಗ ಮೈಗ್ರೇನ್ ಸಮಸ್ಯೆಯು ಕಾಣಿಸಿಕೊಳ್ಳುವುದು. ಇದರಿಂದ ಯಾವಾಗಲೂ ನಿಮ್ಮ ಬಗ್ಗೆ ಕಾಳಜಿ ವಹಿಸಿ ಆದಷ್ಟು ನೀರು ಕುಡಿಯಿರಿ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚೆಚ್ಚು ನೀರು ಸೇವನೆ ಮಾಡಿ. ಮೈಗ್ರೇನ್ ಕಾಣಿಸಿಕೊಂಡರೆ ನೀವು ಆದಷ್ಟು ಮಟ್ಟಿಗೆ ನೀರಿನ ಸೇವನೆ ಹೆಚ್ಚಿಸಿ. ಇದರಿಂದ ಮೈಗ್ರೇನ್ ಕಡಿಮೆಯಾಗಬಹುದು.

ಲ್ಯಾವೆಂಡರ್ ತೈಲ

ಲ್ಯಾವೆಂಡರ್ ತೈಲ

ಲ್ಯಾವೆಂಡರ್ ತೈಲದ ಸುವಾಸನೆಯು ತುಂಬಾ ಒಳ್ಳೆಯದಿದೆ,. ಇದನ್ನು ಮೈಗ್ರೇನ್ ಗೆ ಮನೆಮದ್ದಾಗಿ ಬಳಸಿಕೊಳ್ಳಬಹುದು. ಯೂರೋಪಿಯನ್ ಜರ್ನಲ್ ಆಫ್ ನ್ಯೂರೋಲಾಜಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಪ್ರಕಾರ ಲ್ಯಾವೆಂಡರ್ ತೈಲವು ಮೈಗ್ರೇನ್ ಕಡಿಮೆ ಮಾಡುವುದು. ಒಂದು ಚಮಚ ಲ್ಯಾವೆಂಡರ್ ತೈಲವನ್ನು ಮೂರು ಕಪ್ ಕುದಿಯುವ ನೀರಿಗೆ ಹಾಕಿ ಮತ್ತು 25 ನಿಮಿಷಗಳ ಕಾಲ ಇದರ ಆವಿಯನ್ನು ಉಸಿರಿನ ಮೂಲಕ ಎಳೆದುಕೊಳ್ಳಿ. ಲ್ಯಾವೆಂಡರ್ ತೈಲ ಮತ್ತು ಪುದೀನಾ ತೈಲ ಮಿಶ್ರಣ ಮಾಡಿಕೊಂಡು ಬಳಸಬಹುದು. ಎಣ್ಣೆಯನ್ನು ಬಳಸಿ ಮಸಾಜ್ ಮಾಡಬಹುದು. ಆವಿಯನ್ನು ಉಸಿರಾಡುವುದರೊಂದಿಗೆ ಹೊರಗಿನಿಂದ ಮಸಾಜ್ ಮಾಡಿಕೊಂಡರೆ ಒಳ್ಳೆಯ ಫಲಿತಾಂಶ ಸಿಗುವುದು. ಲ್ಯಾವೆಂಡರ್ ತೈಲವನ್ನು ಸೇವಿಸಬೇಡಿ. ಇದು ಜೀರ್ಣಕ್ರಿಯೆಗೆ ಸಮಸ್ಯೆ ಉಂಟು ಮಾಡಬಹುದು.

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ನಿಮ್ಮ ನಿತ್ಯದ ಆಹಾರದ ಜೊತೆಗೆ ಹೆಚ್ಚು ಹೆಚ್ಚಾಗಿ ಹಸಿರು ತರಕಾರಿ ಸೊಪ್ಪುಗಳನ್ನು ಸೇವಿಸುವ ಮೂಲಕ ಹೆಚ್ಚಿನ ವಿಟಮಿನ್ ಮತ್ತು ಆಂಟಿ ಆಕ್ಸಿಡೆಂಟುಗಳನ್ನು ಪಡೆಯಬಹುದು. ಇದರಿಂದ ಮೆದುಳಿಗೆ ರಕ್ತಸಂಚಾರ ಉತ್ತಮಗೊಂಡು ತಲೆನೋವನ್ನು ನಿಭಾಯಿಸಲು ಹೆಚ್ಚಿನ ಶಕ್ತಿ ಪಡೆಯುತ್ತದೆ.

ಮನಸ್ಸಿಗೆ ನೋವನ್ನು೦ಟುಮಾಡುವ ಸನ್ನಿವೇಶಗಳಿಂದ ದೂರವಿರಿ

ಮನಸ್ಸಿಗೆ ನೋವನ್ನು೦ಟುಮಾಡುವ ಸನ್ನಿವೇಶಗಳಿಂದ ದೂರವಿರಿ

ಉದ್ಯೋಗದ ಸ್ಥಳದಲ್ಲಾಗಲಿ ಇಲ್ಲವೇ ಮನೆಯಲ್ಲಿಯೇ ಆಗಲಿ, ವಾಗ್ವಾದಗಳು, ಜಗಳಗಳು, ಹಾಗೂ ಮನಸ್ಸಿಗೆ ನೋವನ್ನು೦ಟುಮಾಡುವ ಸನ್ನಿವೇಶಗಳು ನಿಮ್ಮ ಆರೋಗ್ಯದ ಪಾಲಿಗೆ ವಿಷಸಮಾನವಾಗಿರುತ್ತವೆ. ಇತರರೊ೦ದಿಗೆ ಸುಖಾಸುಮ್ಮನೆ ವಾಗ್ವಾದಕ್ಕಿಳಿಯುವ ಅಥವಾ ಕಾಲುಕೆರೆದುಕೊ೦ಡು ಜಗಳಕ್ಕಿಳಿಯುವ ಸ್ವಭಾವದವರು ನೀವಾಗಿದ್ದಲ್ಲಿ, ಇ೦ತಹ ವಿಚಾರಗಳಿ೦ದ ಸಾಧ್ಯವಾದಷ್ಟು ದೂರವಿರುವುದೊಳಿತು.ಏಕೆ೦ದರೆ, ಇವು ನಿಮ್ಮ ಆರೋಗ್ಯ

ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು೦ಟುಮಾಡುತ್ತವೆ.

ಕೊತ್ತಂಬರಿ ಕಾಳಿನ ಆರೈಕೆ

ಕೊತ್ತಂಬರಿ ಕಾಳಿನ ಆರೈಕೆ

ಒಂದು ದೊಡ್ಡಚಮಚ ಧನಿಯ ಅಥವಾ ಕೊತ್ತಂಬರಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ಇಡಿಯ ರಾತ್ರಿ ನೆನೆಯಲು ಬಿಡಿ. ಬಳಿಕ ಈ ನೀರನ್ನು ಸೋಸಿ ಮರುದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ. ಧನಿಯ ಬೀಜಗಳಲ್ಲಿರುವ ಉರಿಯೂತ ನಿವಾರಕ ಗುಣ ತಕ್ಷಣ ರಕ್ತದ ಮೂಲಕ ಮೆದುಳನ್ನು ತಲುಪಿ ಈ ನೋವನ್ನು ಬುಡದಲ್ಲಿಯೇ ಚಿವುಟಿಬಿಡುತ್ತದೆ.

ಐದು ಒಣದ್ರಾಕ್ಷಿ ಮತ್ತು ಐದು ಬಾದಾಮಿಗಳು

ಐದು ಒಣದ್ರಾಕ್ಷಿ ಮತ್ತು ಐದು ಬಾದಾಮಿಗಳು

ರಾತ್ರಿ ಮಲಗುವ ಮುನ್ನ ಒಂದು ಲೋಟ ತಣ್ಣೀರಿನಲ್ಲಿ ಐದು ಒಣದ್ರಾಕ್ಷಿ ಮತ್ತು ಐದು ಬಾದಾಮಿಗಳನ್ನು ನೆನೆಸಿಡಿ. ಬಳಿಗ್ಗೆ ಇವನ್ನು ಜಗಿದು ನುಂಗಿ, ನೆನೆಸಿದ ನೀರನ್ನೂ ಕುಡಿಯಿರಿ. ಇದರಿಂದ ಪ್ರಾರಂಭಿಕ ಹಂತದ ಮೈಗ್ರೇನ್ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ಹಸಿಶುಂಠಿ ಸೇರಿಸಿದ ಚಹಾ

ಹಸಿಶುಂಠಿ ಸೇರಿಸಿದ ಚಹಾ

ಹಸಿಶುಂಠಿಯನ್ನು ಜಜ್ಜಿ ಹಣೆಗೆ ತೆಳುವಾಗಿ ಹಚ್ಚುವುದರಿಂದಲೂ ತಲೆನೋವು ಕಡಿಮೆಯಾಗುತ್ತದೆ. ಮೈಗ್ರೇನ್ ತಲೆನೋವಿಗೆ ಶುಂಠಿಯಲ್ಲಿರುವ prostaglandins ಎಂಬ ರಾಸಾಯನಿಕ ಅತ್ಯುತ್ತಮ ಶಮನಕಾರಕವಾಗಿದೆ. ಇದು ರಕ್ತದ ಮೂಲಕ ಮೆದುಳಿನ ಬಳಿ ತಲುಪಿ ಅಲ್ಲಿ ಮೈಗ್ರೇನ್ ತಲೆನೋವಿಗೆ ಕಾರಣವಾದ ನರಗಳ ಊತ ಮತ್ತು ಉರಿಯನ್ನು ಶಮನಗೊಳಿಸಿ ತಲೆನೋವು ಕಡಿಮೆಯಾಗಲು ನೆರವಾಗುತ್ತದೆ. ಆದರೆ ಗರ್ಭಿಣಿಯರಿಗೆ ಈ ಚಹಾ ಸರ್ವಥಾ ಕೂಡದು, ಏಕೆಂದರೆ ಹಸಿಶುಂಠಿಯ ಚಹಾ ಸೇವನೆ ಗರ್ಭಾಪಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಕ್ಯಾಮೋಮೈಲ್ ಹೂದಳಗಳ ಚಹಾ

ಕ್ಯಾಮೋಮೈಲ್ ಹೂದಳಗಳ ಚಹಾ

ಕ್ಯಾಮೋಮೈಲ್ ಎಂಬ ಹಳದಿ ಹೂಗಳ ದಳಗಳನ್ನು ಒಣಗಿಸಿ ಮಾಡಿದ ಟೀ ಸಹಾ ಮೈಗ್ರೇನ್ ತಲೆನೋವಿಗೆ ಉತ್ತಮ ಶಮನ ನೀಡಬಲ್ಲುದು. ಇದರ ವಿಶೇಷತೆ ಏನೆಂದರೆ ತಲೆನೋವು ಉಗ್ರ ರೂಪ ತಾಳಿದ ಬಳಿಕ ಸೇವಿಸಿದರೂ ಇದು ಪರಿಣಾಮಕಾರಿಯಾಗಿದೆ. ಸುಮಾರು ಅರ್ಧಗಂಟೆಯಲ್ಲಿಯೇ ಇದು ತಲೆನೋವಿನಿಂದ ಸಾಕಷ್ಟು ಶಮನ ನೀಡುತ್ತದೆ.

ಲಿಂಬೆಯ ಚಹಾ

ಲಿಂಬೆಯ ಚಹಾ

ಲಿಂಬೆಹಣ್ಣಿನ ರಸ ಸೇರಿಸಿದ ಚಹಾ ಸಹಾ ಮೈಗ್ರೇನ್ ತಲೆನೋವಿಗೆ ಉತ್ತಮ ಪರಿಹಾರವಾಗಿದೆ. ಇದಕ್ಕಾಗಿ ನಿಮ್ಮ ನೆಚ್ಚಿನ ಯಾವುದೇ ಚಹಾಪುಡಿಯಿಂದ ಹಾಲಿಲ್ಲದ ಟೀ ತಯಾರಿಸಿ ಪ್ರತಿ ಕಪ್ ಗೆ ಈಗ ತಾನೇ ತುಂಡರಿಸಿದ ಲಿಂಬೆಹಣ್ಣಿನ ಎರಡು ಮೂರು ಹನಿಗಳನ್ನು ಹಾಕಿ. ತಡಮಾಡದೇ ಹೀರುತ್ತಾ ಪೂರ್ಣಪ್ರಮಾಣವನ್ನು ಖಾಲಿಮಾಡಿ. ಈ ಚಹಾ ಸಹಾ ತಲೆನೋವು ಉಗ್ರರೂಪ ತಳೆದಿದ್ದಾಗಲೂ ಕುಡಿಯಬಹುದಾದ ಪೇಯವಾಗಿದೆ.

English summary

Amazing Home Remedies To Treat Migraine Headache

Migraine headaches are one of the worst health problems one can ever have. For a few the migraine attacks are so bad that they need to get hospitalized too. Along with the intense headache, those suffering from migraine can have other symptoms like neck pain, dizziness, nausea, nasal congestion and blurred vision. Migraine can be caused due to various reasons - stress, hormonal imbalances, poor diet, anxiety, menopause, side effects of drugs and it could also be hereditary. Here is a list of a few tips that help in getting rid of migraine headaches. Take a look.
X
Desktop Bottom Promotion