For Quick Alerts
ALLOW NOTIFICATIONS  
For Daily Alerts

  ಕಡಲೆಕಾಯಿ-ಇದು 'ಬಡವರ ಬಾದಾಮಿ' ಒಟ್ಟಾರೆ ಆರೋಗ್ಯದ ಕಣಜ

  By Arshad
  |

  ಒಂದು ವಸ್ತುವನ್ನು ಅಗ್ಗವಾಗಿ ಕೊಂಡರೆ ಪಾಶ್ಚಾತ್ಯರು ಇದಕ್ಕೆ ಕಡಲೆಕಾಯಿ ಅಥವಾ ಶೇಂಗಾಬೀಜದ ಬೆಲೆಯನ್ನೇ ಉಪಮಾನವಾಗಿ ಉಪಯೋಗಿಸುತ್ತಾರೆ. ಇದಕ್ಕೆ ಕಾರಣ ಇದರ ಬೆಲೆ ವರ್ಷದ ಎಲ್ಲಾ ದಿನಗಳಲ್ಲಿಯೂ ಅಗ್ಗವಾಗಿರುವುದೇ ಆಗಿದೆ. ಭಾರತದಲ್ಲಿಯೂ ಅಗ್ಗವೇ ಆಗಿದ್ದರೂ ನಾವು ಇದನ್ನು ತ್ವರಿತವಾಗಿ ಮಾರಾಟವಾಗುವ ವಸ್ತುವಿಗೆ ಉಪಮಾನವಾಗಿ ಬಳಸುತ್ತೇವೆ. ಎಲ್ಲವೂ ಬಿಸಿಬಿಸಿ ಕಡ್ಲೆಕಾಯಿಯಂತೆ ಮಾರಾಟವಾಗಿ ಹೋಯ್ತು ಎಂದು ವ್ಯಾಪಾರಿಗಳು ಮಾತಾಡಿಕೊಳ್ಳುತ್ತಾರೆ. ಇದರ ಬೆಲೆ ಅಗ್ಗವಾದರೂ ಇದರ ಆರೋಗ್ಯಕರ ಗುಣಗಳು ಶ್ರೀಮಂತವೇ ಆಗಿರುವ ಕಾರಣ ಇದಕ್ಕೆ ನಮ್ಮ ಹಿರಿಯರು 'ಬಡವರ ಬಾದಾಮಿ' ಎಂಬ ಗುಣವಾಚಕವನ್ನೂ ನೀಡಿದ್ದಾರೆ.

  ಈ ಶೇಂಗಾಬೀಜದಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಹಾಗೂ ಇತರ ಖನಿಜಗಳಿವೆ. ಹುರಿದು ಅಥವಾ ಬೇಯಿಸಿ ತಿನ್ನಲು ಎಲ್ಲರಿಗೂ ಇಷ್ಟ. ಶೇಂಗಾವನ್ನು ಸಿಪ್ಪೆಸಹಿತ ಹುರಿದು ಅಥವಾ ಬೇಯಿಸಿಯೂ ತಿನ್ನಬಹುದು. ಸಮಯ ಕಳೆಯಲು ಇವೆಲ್ಲಾ ರೂಪದ ಶೇಂಗಾ ಪ್ರತಿ ಊರಿನಲ್ಲಿಯೂ ಸಿಗುತ್ತದೆ. ಅಷ್ಟೇ ಅಲ್ಲ, ಪುಳಿಯೋಗರೆ ಸಹಿತ ಹಲವಾರು ರುಚಿಕರ ಖಾದ್ಯಗಳಲ್ಲಿ ಶೇಂಗಾ ಅನಿವಾರ್ಯ ಸಾಮಾಗ್ರಿಯಾಗಿದೆ. ಇದರ ಕುರುಕು ಗುಣವನ್ನು ಕಂಡುಕೊಂಡ ಚಾಕಲೇಟು ಉದ್ದಿಮೆದಾರರು ತಮ್ಮ ಉತ್ಪನ್ನಗಳಲ್ಲಿ ಶೇಂಗಾವನ್ನು ಬೆರೆಸಿ ಹಲವು ಉತ್ಪನ್ನಗಳನ್ನು ಪ್ರಸ್ತುತಪಡಿಸಿದ್ದಾರೆ. ಇದನ್ನು ಅರೆದು ಬೆಣ್ಣೆಯೊಂದಿಗೆ ಬೆರೆಸಿ ಲಭಿಸುವ ಪೀನಟ್ ಬಟರ್ ಮಕ್ಕಳಿಗೆ ತುಂಬಾ ಇಷ್ಟ. ಒಂದು ಚಮಚ ಪೀನಟ್ ಬಟರ್ ಸವರಿದ ಬ್ರೆಡ್ ಇಡಿಯ ದಿನದ ಚಟುವಟಿಕೆಗೆ ಬೇಕಾದ ಪೋಷಕಾಂಶವನ್ನು ನೀಡುತ್ತದೆ. ಉಪ್ಪು ಹಾಕಿ ಹುರಿದ ಶೇಂಗಾ ಸಹಾ ಪ್ಯಾಕೆಟ್ಟುಗಳಲ್ಲಿ ದೊರಕುತ್ತದೆ. ಆದರೆ ಹೆಚಿನ ಉಪ್ಪಿನ ಕಾರಣದಿಂದ ಇದು ರುಚಿಕರವಾದರೂ ಅನಾರೋಗ್ಯಕರವಾಗಿದೆ.

  ಆರೋಗ್ಯದ ಕಣಜ ಕಡಲೆಕಾಯಿಯಲ್ಲಿದೆ

  ಆದರೆ ಟೀವಿ ವೀಕ್ಷಣೆಯ ಸಮಯದಲ್ಲಿ ಹೆಚ್ಚಿನವರು ಉಪ್ಪಿನ ಶೇಂಗಾವನ್ನೇ ಬಯಸುವುದು ಮಾತ್ರ ವಿಪರ್ಯಾಸ. ವಾಸ್ತವವಾಗಿ ಶೇಂಗಾಬೀಜಗಳು ಪ್ರೋಟೀನ್ ಭರಿತ ದ್ವಿದಳಧಾನ್ಯವಾಗಿದೆ. ಇದರಿಂದ ಹಿಂಡಿ ತೆಗೆದ ಎಣ್ಣೆ ಸಹಾ ಅಡುಗೆಯಲ್ಲಿ ಬಳಕೆಯಾಗುವ ಆರೋಗ್ಯಕರ ಎಣ್ಣೆಯಾಗಿದ್ದು ಇದರಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಆಮ್ಲಗಳಿವೆ. ಇದರಲ್ಲಿ ಇನ್ನೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಬನ್ನಿ, ಇವುಗಳಲ್ಲಿ ಪ್ರಮುಖವಾದುದನ್ನು ನೋಡೋಣ..   

  ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

  ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

  ಇದರಲ್ಲಿ ಕೊಬ್ಬಿನ ಅಂಶ ಇರುವ ಕಾರಣಕ್ಕೇ ಶೇಂಗಾಬೀಜವನ್ನು ಕೆಲವೊಮ್ಮೆ ಕಡೆಗಣಿಸಲಾಗುತ್ತದೆ. ಆದರೆ ವಾಸ್ತವಾಗಿ ಇದರಲ್ಲಿ ಒಳ್ಳೆಯ ಹಾಗೂ ಕೆಟ್ಟ ಎರಡೂ ಬಗೆಯ ಕೊಬ್ಬುಗಳಿವೆ. ಒಟ್ಟಾರೆಯಾಗಿ ಇವು ಹೃದಯಕ್ಕೆ ಉಪಯುಕ್ತವೇ ಆಗಿವೆ. ಅಲ್ಲದೇ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳ ಒಳಗೆ ಅಂಟಿಕೊಳ್ಳದಂತೆ ತಡೆಯುವ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

   ಹೃದಯದ ತೊಂದರೆಗಳ ಸಾಧ್ಯತೆ ಕಡಿಮೆಯಾಗಿಸುತ್ತದೆ

  ಹೃದಯದ ತೊಂದರೆಗಳ ಸಾಧ್ಯತೆ ಕಡಿಮೆಯಾಗಿಸುತ್ತದೆ

  ಇದರಲ್ಲಿ ಹೆಚ್ಚಿನ ಪ್ರಮಾಣದ ಒಳ್ಳೆಯ ಕೊಲೆಸ್ಟ್ರಾಲ್ ಅಥವಾ HDL ಇದ್ದು ಜೊತೆಗೇ ಹೃದಯಕ್ಕೆ ಸಹಕಾರಿಯಾಗುವ ಒಮೆಗಾ 3 ಕೊಬ್ಬಿನ ಆಮ್ಲಗಳೂ ಇವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ ಹಾಗೂ ರಕ್ತನಾಳಗಳು ಒಳಗಿನಿಂದ ಶುದ್ಧವಾಗಿರುವಂತೆ ನೋಡಿಕೊಳ್ಳುತ್ತವೆ. ಆದರೆ ಶೇಂಗಾಬೀಜದಲ್ಲಿ ಉಪ್ಪಿಲ್ಲದಂತೆ ನೋಡಿಕೊಳ್ಳುವುದು ಅಗತ್ಯ.

  ಪಿತ್ತಕೋಶದ ಕಾಯಿಲೆಗಳಿಂದ ರಕ್ಷಿಸುತ್ತದೆ

  ಪಿತ್ತಕೋಶದ ಕಾಯಿಲೆಗಳಿಂದ ರಕ್ಷಿಸುತ್ತದೆ

  ಒಂದು ವೇಳೆ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಸಂಭವವನ್ನು ಶೇಂಗಾಬೀಜದಲ್ಲಿರುವ ಪೋಷಕಾಂಶಗಳು ಕಡಿಮೆ ಮಾಡುತ್ತವೆ. ಇತ್ತೀಚೆಗೆ ಪಿತ್ತಕೋಶದಲ್ಲಿ ಕಲ್ಲುಗಳಾಗುವುದು ಹೆಚ್ಚಾಗಿ ಕಂಡುಬರುತ್ತಿದ್ದು ಹೆಚ್ಚಿನವರಿಗೆ ಈ ಬಗ್ಗೆ ಅರಿವೇ ಇರುವುದಿಲ್ಲ. ಆದರೆ ಈ ಕಲ್ಲುಗಳು ದೊಡ್ಡದಾದ ಬಳಿಕವೇ ನೋವು ಕೊಡುವ ಕಾರಣ ತಡವಾಗಿ ಇದು ಬೆಳಕಿಗೆ ಬರುತ್ತದೆ. ಇದನ್ನು ನಿವಾರಿಸಲು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಶೇಂಗಾಬೀಜಗಳನ್ನು ಸೇವಿಸುತ್ತ್ತಾ ಬಂದವರಲ್ಲಿ ಈ ಕಲ್ಲುಗಳಾಗುವ ಸಂಭವ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಈ ಕಲ್ಲುಗಳಿಗೆ ಮೂಲವಾಗಿದ್ದು ಶೇಂಗಾದಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್ ನಿವಾರಿಸುವ ಮೂಲಕ ಪಿತ್ತಕೋಶದ ಕಾಯಿಲೆಗಳಿಂದ ರಕ್ಷಿಸುತ್ತದೆ.

  ತೂಕ ಹೆಚ್ಚುವುದನ್ನು ತಡೆಯುತ್ತದೆ

  ತೂಕ ಹೆಚ್ಚುವುದನ್ನು ತಡೆಯುತ್ತದೆ

  ಶೇಂಗಾಬೀಜಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನುಗಳಿವೆ ಹಾಗೂ ಕ್ಯಾಲೋರಿಗಳು ಕಡಿಮೆ ಇವೆ. ಊಟಕ್ಕೂ ಮುನ್ನ ಕೊಂಚ ಶೇಂಗಾಬೀಜಗಳನ್ನು ತಿಂದರೆ ಆಹಾರ ಸೇವನೆಯ ಪ್ರಮಾಣದಲ್ಲಿ ಕಡಿಮೆಯಾಗಿಸಲು ಸಾಧ್ಯ. ಅಂದರೆ ಶೇಂಗಾಬೀಜ ಹಸಿವನ್ನು ಕಡಿಮೆ ಮಾಡಿ ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸುತ್ತದೆ. ಪರಿಣಾಮವಾಗಿ ಅನಗತ್ಯ ಆಹಾರ ಸೇವನೆಯ ಮೂಲಕ ಏರಬಹುದಾಗಿದ್ದ ತೂಕವನ್ನು ಏರದಂತೆ ತಡೆಯುತ್ತದೆ. ಕ್ಯಾಲೋರಿಗಳೂ ಕಡಿಮೆ ಇರುವ ಕಾರಣ ಶೇಂಗಾ ತಿನ್ನುವುದರಿಂದ ತೂಕ ಏರುವುದಿಲ್ಲ.

  ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗಿಸುತ್ತದೆ

  ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗಿಸುತ್ತದೆ

  ಇದರಲ್ಲಿ ಹೆಚ್ಚಿನ ಪ್ರಮಾಣದ ಅಂಟಿ ಆಕ್ಸಿಡೆಂಟುಗಳಿದ್ದು ಫಾಲಿಫಿನಾಲ್ ಸಹಾ ಉತ್ತಮ ಪ್ರಮಾಣದಲ್ಲಿದೆ. ಇವು ವಿಶೇಷವಾಗಿ ಹೊಟ್ಟೆ ಮತ್ತು ಕರುಳಿನಲ್ಲಿ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಕ್ಯಾನ್ಸರ್ ಗೆ ಕಾರಣವಾಗುವ ಕಾರ್ಸಿನೋಜೆನ್ ಎಂಬ ಕಣಗಳ ಉತ್ಪತ್ತಿಯನ್ನು ನಿಗ್ರಹಿಸಿ ಇವುಗಳಿಂದ ಹೊರಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಇಲ್ಲವಾಗಿಸುವ ಮೂಲಕ ದೇಹದ ಮೇಲೆ ಇವುಗಳ ಧಾಳಿಯಿಂದ ರಕ್ಷಿಸುತ್ತದೆ.

  ಫಲವತ್ತತೆಯನ್ನು ಹೆಚ್ಚಿಸುತ್ತದೆ

  ಫಲವತ್ತತೆಯನ್ನು ಹೆಚ್ಚಿಸುತ್ತದೆ

  ಶೇಂಗಾಬೀಜಗಳಲ್ಲಿ ಉತ್ತಮ ಪ್ರಮಾಣದ ಫೋಲಿಕ್ ಆಮ್ಲವಿದೆ. ಇದು ವಿಶೇಷವಾಗಿ ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಗರ್ಭಾಶಯದಲ್ಲಿ ಮಗುವಿನ ಬೆಳವಣಿಗೆಗೆ ಫೋಲೇಟ್ ಎಂಬ ಪೋಷಕಾಂಶ ಹೆಚ್ಚು ಅಗತ್ಯವಿದೆ. ಈ ಪೋಷಕಾಂಶದ ಪ್ರಮಾಣ ದೇಹದಲ್ಲಿ ಹೆಚ್ಚಿದ್ದಷ್ಟೂ ಮಹಿಳೆಯರಿಗೆ ಗರ್ಭ ಧರಿಸುವ ಸಾಧ್ಯತೆಯೂ ಹೆಚ್ಚುತ್ತದೆ.

  ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ

  ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ

  ಪ್ರತಿದಿನವೂ ಒಂದು ಮುಷ್ಠಿಯಷ್ಟು ಶೇಂಗಾಬೀಜಗಳನ್ನು ತಿನ್ನುತ್ತಾ ಬಂದರೆ ಇದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಈ ಗುಣ ಮಧುಮೇಹಿಗಳಿಗೆ ವರದಾನವಾಗಿದೆ. ಇದರ ಆಂಟಿ ಆಕ್ಸಿಡೆಂಟ್ ಗುಣ ಅಧಿಕ ರಕ್ತದ ಸಕ್ಕರೆಯಿಂದ ಎದುರಾಗಿದ್ದ ರಕ್ತನಾಳಗಳ ಶಿಥಿಲತೆಯ ವಿರುದ್ದ ಕೆಲಸ ಮಾಡುತ್ತದೆ ಹಾಗೂ ರಕ್ತನಾಳಗಳು ಮತ್ತೊಮ್ಮೆ ಹಿಂದಿನ ಆರೋಗ್ಯಕ್ಕೆ ಮರಳಲು ನೆರವಾಗುತ್ತದೆ.

  ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ

  ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ

  ಶೇಂಗಾಬೀಜದ ಸೇವನೆಯಿಂದ ದೇಹದಲ್ಲಿ ಟ್ರಿಪ್ಟೋಫಾನ್ (tryptophan) ಎಂಬ ಪೋಷಕಾಂಶದ ಉತ್ಪತ್ತಿಗೆ ನೆರವಾಗುತ್ತದೆ. ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತ ಸ್ರವಿಸಲು ನೆರವಾಗುತ್ತದೆ. ಈ ಸೆರೋಟೋನಿನ್ ಮಾನಸಿಕವಾದ ನಿರಾಳತೆಗೆ ಅಗತ್ಯವಾದ ರಸದೂತವಾಗಿದೆ. ಭಾವಾವೇಶ ಹಾಗೂ ಇತರ ಕಾರಣಗಳಿಂದ ಎದುರಾಗಿದ್ದ ಖಿನ್ನತೆಯಿಂದ ಹೊರಬರಲು ಈ ಸೆರೋಟೋನಿನ್ ನೆರವಾಗುತ್ತದೆ.

  ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ

  ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ

  ಶೇಂಗಾಬೀಜಗಳಲ್ಲಿ ಉತ್ತಮ ಪ್ರಮಾಣದ ಸತು ಇರುವ ಕಾರಣ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಪರಿಣಾಮವಾಗಿ ಸ್ಮರಣಶಕ್ತಿ, ತಾರ್ಕಿಕ ಯೋಚನಾ ಶಕ್ತಿ ಮೊದಲಾದವು ಉತ್ತಮಗೊಳ್ಳುತ್ತವೆ. ಅಲ್ಲದೇ ಇದರಲ್ಲಿರುವ ವಿಟಿಮಿನ್ ಬಿ೨ ಹಾಗೂ ನಿಯಾಸಿನ್ ಸಹಾ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತವೆ.

  ಆಲ್ಝೈಮರ್ ರೋಗದಿಂದ ರಕ್ಷಣೆ ಒದಗಿಸುತ್ತವೆ

  ಆಲ್ಝೈಮರ್ ರೋಗದಿಂದ ರಕ್ಷಣೆ ಒದಗಿಸುತ್ತವೆ

  ಇದರಲ್ಲಿರುವ ವಿಟಮಿನ್ ಬಿ೨ ಹಾಗೂ ನಿಯಾಸಿನ್ ವಯಸ್ಸಾಗುತ್ತಿದ್ದಂತೆಯೇ ಕುಗ್ಗುವ ಮೆದುಳಿನ ಕ್ಷಮತೆಯನ್ನು ಕುಗ್ಗಲು ಬಿಡದೇ ಕಾಪಾಡುತ್ತವೆ. ತನ್ಮೂಲಕ ವೃದ್ಧಾಪ್ಯದಲ್ಲಿ ಎದುರಾಗುವ ಆಲ್ಝೈಮರ್ ಕಾಯಿಲೆಯಿಂದ ರಕ್ಷಣೆ ಒದಗಿಸುತ್ತದೆ.

  ಹೇರಳ ಪ್ರೊಟೀನ್

  ಹೇರಳ ಪ್ರೊಟೀನ್

  ಕಡಲೆಕಾಯಿಯಲ್ಲಿ ಹೆಚ್ಚು ಪ್ರೊಟೀನ್ ಇದ್ದು, ಬಾಡಿ ಬಿಲ್ಡಿಂಗ್ ಬಯಸುವವರು ಮತ್ತು ಕಡಿಮೆ ತೂಕ ಇರುವವರಿಗೆ ಇದು ಹೆಚ್ಚು ಉಪಯೋಗಕರ. ಅದರಲ್ಲೂ ಕಡಲೆಕಾಯಿಯಿಂದ ತಯಾರಿಸುವ ಪೀನಟ್ ಬಟರ್ ನಲ್ಲಿ ಹೆಚ್ಚಿನ ಪೋಷಕಾಂಶವಿದೆ. ಪೀ ನಟ್ ಬಟರ್ ಒಂದೇ ಅಲ್ಲ, ಕಡಲೆ ಕಾಯಿಯನ್ನು ಯಾವ ರೀತಿ ಸೇವಿಸಿದರೂ ಆರೋಗ್ಯಕ್ಕೆ ಒಳ್ಳೆಯದು.

  ರಕ್ತದಲ್ಲಿನ ಕೊಲೆಸ್ಟ್ರಾಲ್ ಕರಗಿಸುತ್ತೆ

  ರಕ್ತದಲ್ಲಿನ ಕೊಲೆಸ್ಟ್ರಾಲ್ ಕರಗಿಸುತ್ತೆ

  ಉಪ್ಪು ಬೆರೆಸದಿರುವ ಕಡಲೆ ಬೀಜ ರಕ್ತನಾಳಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಮೋನೊಸಾಚುರೇಟೆಡ್ ಫ್ಯಾಟ್ ರಕ್ತದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ

  ಪೈಲ್ಸ್ ಸಮಸ್ಯೆಗೆ ಬಹಳ ಒಳ್ಳೆಯದು...

  ಪೈಲ್ಸ್ ಸಮಸ್ಯೆಗೆ ಬಹಳ ಒಳ್ಳೆಯದು...

  ಕಡಲೆ ಕಾಯಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದವರು ಇದರ ಸೇವನೆಯನ್ನು ಮಾಡಿದರೆ ಉತ್ತಮ. ಅಷ್ಟೇ ಅಲ್ಲ, ಕಡಲೆ ಕಾಯಿ ಸೇವನೆ ಪುರುಷ ಮತ್ತು ಸ್ರೀಯರ ಹಾರ್ಮೋನುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

  ಆಂಟಿಯಾಕ್ಸಿಡಂಟ್

  ಆಂಟಿಯಾಕ್ಸಿಡಂಟ್

  ಕಡಲೆಬೀಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಪಾಲಿಫೆನಾಲ್ ಆಂಟಿಯಾಕ್ಸಿಡಂಟ್ ಇದೆ. ಅದರಲ್ಲೂ ಕಡಲೆ ಬೀಜದಲ್ಲಿರುವ ಪಿ-ಕೌಮ್ಯಾರಿಕ್ ಆಸಿಡ್ ದೇಹಕ್ಕೆ ಹೆಚ್ಚು ಅವಶ್ಯಕ. ಕಡಲೆಕಾಯಿಯನ್ನು ಹುರಿಯುವುದರಿಂದ ಪಿ-ಕೌಮ್ಯಾರಿಕ್ ಇನ್ನಷ್ಟು ಹೆಚ್ಚಾಗಿ ಆಂಟಿಯಾಕ್ಸಿಡಂಟ್ ಗಳೂ ಶೇಕಡಾ 22 ರಷ್ಟು ಅಧಿಕವಾಗುತ್ತದೆ.

  ತ್ವಚೆಯನ್ನು ರಕ್ಷಿಸುತ್ತದೆ

  ತ್ವಚೆಯನ್ನು ರಕ್ಷಿಸುತ್ತದೆ

  ಕಡ್ಲೆಕಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಇದ್ದು ವಿಶೇಷವಾಗಿ ಚರ್ಮದ ಸೂಕ್ಷ್ಮರಂಧ್ರಗಳಿರುವ ಪದರದ ಜೀವಕೋಶಗಳನ್ನು ಪೋಷಿಸುತ್ತದೆ. ಈ ಮೂಲಕ ದೇಹದಲ್ಲಿ ಪ್ರವೇಶಿಸಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ಧಾಳಿಯಿಂದ ತ್ವಚೆ ಹಾಳಾಗುವುದನ್ನು ರಕ್ಷಿಸುತ್ತದೆ.

  ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

  ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

  ಕಡ್ಲೆಕಾಯಿಯ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಒಟ್ಟಾರೆ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ.

  English summary

  Amazing Health Benefits Of Groundnuts (Mungfali)

  We all may have heard the sentence- "I bought this for the price of peanuts". When someone tells this, they are actually implying that they bought something at a very cheap price. Groundnuts, also called peanuts, are often available cheap and hence they are used to imply anything which doesn't cost much. But they sure do pack a punch when it comes to health benefits. Groundnuts are the cheapest nuts available to humans. They are full of protein and other minerals. They are loved by everyone and can be eaten in many ways - roasted, boiled, steamed or shelled.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more