ನೆಲ್ಲಿಕಾಯಿ ಎನ್ನುವ ಅಮೃತ ರಸದಲ್ಲಿ ಹಲವು ಬಗೆಯ ಔಷಧಿ ಗುಣಗಳಿವೆ

By: Divya Pandith
Subscribe to Boldsky

ಭಾರತೀಯ ಗೋಸ್ಬೆರ್ರಿ ಎಂದು ಕರೆಯಲ್ಪಡುವ ನೆಲ್ಲಿಕಾಯಿ/ಆಮ್ಲಾ ಪೋಷಕಾಂಶಗಳ ಶಕ್ತಿ ಎಂದು ಕರೆಯುತ್ತಾರೆ. ನೆಲ್ಲಿಕಾಯಿ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಇದರ ರಸದಲ್ಲಿ ಊಹಿಸಲಾಗದಷ್ಟು ಆರೋಗ್ಯದ ಪ್ರಯೋಜನಗಳಿವೆ. ಇದರಿಂದ ಉಂಟಾಗುವ ಲಾಭವನ್ನು ನೀವು ತಿಳಿದುಕೊಂಡರೆ ನೆಲ್ಲಿಕಾಯಿಯನ್ನು ಪ್ರೀತಿಸಲು ಪ್ರಾರಂಭಿಸುವಿರಿ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಹಿಡಿದು ದೊಡ್ಡ ದೊಡ್ಡ ಸಮಸ್ಯೆಗಳಿಗೂ ಇದನ್ನು ದಿವ್ಯ ಔಷಧಿಯನ್ನಾಗಿ ಬಳಕೆ ಮಾಡಬಹುದು.

ವಿಟಮಿನ್ "ಸಿ"ಯನ್ನು ಸಮೃದ್ಧವಾಗಿರುವ ನೆಲ್ಲಿಕಾಯಿ ಕಬ್ಬಿಣಾಂಶದ ಆಗರ ಎಂದು ಹೇಳಬಹುದು. ಇದರ ರಸ ಕುಡಿಯುವುದು ಅಥವಾ ಕಾಯಿಯನ್ನು ಹಾಗೇ ತಿಂದರೂ ಸಹ ಚರ್ಮದ ಆರೋಗ್ಯ ಸುಧಾರಿಸುವುದು. ಹೊಳೆಯುವಂತಹ ಕಾಂತೀಯ ತ್ವಚೆಯನ್ನು ಪಡೆಯಬಹುದು. ಪ್ರಾಣಾಂತಿಕ ಕಾಯಿಲೆಗಳನ್ನು ಸಹ ನಿವಾರಿಸುವ ಶಕ್ತಿಯನ್ನು ಇದು ಹೊಂದಿದೆ. ಇದರ ಸೇವನೆಯಿಂದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಸುಧಾರಿಸುವುದು.

ನೆಲ್ಲಿಕಾಯಿ ಜ್ಯೂಸ್‌+ಮೆಂತೆ ಹುಡಿ-ಬರೋಬ್ಬರಿ 7 ಕಾಯಿಲೆಗೆ ರಾಮಬಾಣ!

ಇದು ಸ್ವಲ್ಪ ಒಗರು, ಕಹಿ ಹಾಗೂ ಸಿಹಿಯ ರುಚಿಯನ್ನು ನೀಡುತ್ತದೆ. ಇದರ ಒಂದು ಗ್ಲಾಸ್ ರಸವನ್ನು ಸೇವಿಸಿದರೆ ನಂಬಲಾಗದಷ್ಟು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಇದನ್ನು ಒಂದು ಔಷಧಿ ಎಂದು ಸಹ ಪರಿಗಣಿಸಲಾಗುತ್ತದೆ. ಗಮನಿಸೇಕಾದ ಒಂದು ಕುತೂಹಲಕಾರಿ ವಿಚಾರವೆಂದರೆ ಇದು ಇತರ ಹಣ್ಣು, ತರಕಾರಿ ಹಾಗೂ ಟಾನಿಕ್ ಔಷಧಿಗಳಿಗಿಂತ ಹೆಚ್ಚು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ಈ ಚಿಕ್ಕ ನೆಲ್ಲಿಕಾಯಿ ರಸದಿಂದ ಯಾವೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಯೋಣ ಬನ್ನಿ...

ಕೊಬ್ಬನ್ನು ಕರಗಿಸುವುದು

ಕೊಬ್ಬನ್ನು ಕರಗಿಸುವುದು

ನೀವು ದೇಹದಲ್ಲಿ ಸಂಗ್ರಹವಾದ ಅನವಶ್ಯಕ ಕೊಬ್ಬುಗಳನ್ನು ಕರಗಿಸುವಲ್ಲಿ ವಿಫಲವಾಗಿದ್ದರೆ ನೆಲ್ಲಿಕಾಯಿ ರಸ ಕುಡಿಯುವ ಪ್ರಯತ್ನ ಮಾಡಬಹುದು. ಹೌದಾ? ಎಂಬ ಆಶ್ಚರ್ಯ ಉಂಟಾಗುತ್ತಿದೆಯಾ? ಹಾಗಿದ್ದರೆ ಹೌದು ಎನ್ನಬೇಕು ಅಷ್ಟೆ. ನೆಲ್ಲಿಕಾಯಿ ರಸವು ನಮ್ಮ ಚಯಾಪಚಯ ಕ್ರಿಯೆ ಹಾಗೂ ಪ್ರೋಟೀನ್ ಸಂಸ್ಲೇಷಣಾ ಕಾರ್ಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ದೇಹದಲ್ಲಿ ಅನಾವಶ್ಯಕವಾಗಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುವುದು. ಇದು ದೇಹದಿಂದ ಜೀವಾಣುಗಳನ್ನು ತಳ್ಳುವುದರೊಂದಿಗೆ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಕೊಬ್ಬನ್ನು ಕರಗಿಸುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಜೊತೆಗೆ ಮಲಬದ್ಧತೆ ಉಂಟಾಗುವುದನ್ನು ತಡೆಯುವುದು. ನೆಲ್ಲಿಕಾಯಿ ರಸದಲ್ಲಿ ನಾರಿನಂಶ(ಫೈಬರ್) ಸಮೃದ್ಧವಾಗಿರುವುದರಿಂದ ಜೀರ್ಣಕ್ರಿಯೆಯು ಸರಿಯಾಗಿ ಆಗುವುದು. ಜೊತೆಗೆ ಬಲಬದ್ಧತೆ ಆಗುವುದನ್ನು ತಡೆಯುವುದು. ಇದರ ರಸ ಕುಡಿಯುವಾಗ ಮಿತ ಪ್ರಮಾಣದಲ್ಲಿ ಸೇವಿಸುವಂತೆ ಕಾಳಜಿ ವಹಿಸಬೇಕು.

ರಕ್ತ ಶುದ್ಧೀಕರಿಸುವುದು

ರಕ್ತ ಶುದ್ಧೀಕರಿಸುವುದು

ನೆಲ್ಲಿಕಾಯಿ ರಸವನ್ನು ನೈಸರ್ಗಿಕವಾದ ರಕ್ತ ಶುದ್ಧೀಕರಣ ಎಂದು ಕರೆಯಬಹುದು. ಇದು ನಮ್ಮ ವ್ಯವಸ್ಥೆಗೆ ಅನಗತ್ಯವಾದ ಜೀವಾಣುಗಳ ಪ್ರಮಾಣವನ್ನು ತಗ್ಗಿಸುತ್ತದೆ. ಹಿಮಗ್ಲೋಬಿನ್ ಮತ್ತು ರಕ್ತ ಕಣಗಳ ಎಣಿಕೆಯನ್ನು ಹೆಚ್ಚಿಸುತ್ತದೆ. ನೈಸರ್ಗಿಕವಾದ ಡಿಟಾಕ್ಸಿಫೈಯರ್ ಆಗಿರುವುದರಿಂದ ಆಂಟಿಆಕ್ಸಿಡೆಂಟ್‍ಗಳ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತ ಶುದ್ಧೀಕರಿಸುವುದರೊಂದಿಗೆ ಅತ್ಯುತ್ತಮ ಹೊಳಪಿನ ಚರ್ಮವನ್ನು ಪಡೆಯಬಹುದು.

ದೃಷ್ಟಿ ಸುಧಾರಿಸುವುದು

ದೃಷ್ಟಿ ಸುಧಾರಿಸುವುದು

ನಿತ್ಯವೂ ನಿಯಮಿತವಾಗಿ ನೆಲ್ಲಿಕಾಯಿ ರಸವನ್ನು ಸೇವಿಸುವುದರಿಂದ ದೃಷ್ಟಿಕೋನವನ್ನು ಸುಧಾರಿಸಬಹುದು. ಇದರಲ್ಲಿ ಸಮೃದ್ಧವಾದ ವಿಟಮಿನ್ ಸಿ ಇರುವುದರಿಂದ ಕಣ್ಣಿನ ಸ್ನಾಯುಗಳು ಬಲವನ್ನು ಪಡೆದುಕೊಳ್ಳುವವು. ಜೊತೆಗೆ ದೃಷ್ಟಿಯು ಉತ್ತಮವಾಗುವುದು.

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ಆಮ್ಲ/ನೆಲ್ಲಿಕಾಯಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು. ಇದರ ರಸವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು. ಹೃದಯ ಹಾಗೂ ಹೃದಯ ನಾಳದಲ್ಲಿ ಉಂಟಾಗುವ ಕೆಲವು ಅಡೆ ತಡೆಗಳನ್ನು ನಿವಾರಿಸುವುದು. ಇದರ ರಸವು ಅಮೈನೋ ಆಮ್ಲ ಮತ್ತು ಆಂಟಿಆಕ್ಸಿಡೆಂಟ್‍ಗಳ ರಸವನ್ನು ಹೆಚ್ಚಿಸುತ್ತದೆ. ಹೃದಯದ ಒಟ್ಟಾರೆ ಕಾರ್ಯ ಚಟುವಟಿಕೆಯಲ್ಲೂ ನೆರವಾಗುವುದು. ಅಲ್ಲದೆ ಅನೇಕ ಹೃದಯ ಸಂಬಂಧಿ ಕಾಯಿಲೆಯಿಂದಲೂ ದೂರ ಇರಬಹುದು.

ಮೂಳೆಗಳಿಗೂ ಒಳ್ಳೆಯದು

ಮೂಳೆಗಳಿಗೂ ಒಳ್ಳೆಯದು

ನಮ್ಮ ದೇಹದ ವ್ಯವರ್ಸತೆಯಲ್ಲಿರುವ ಮೂಳೆಗಳಿಗೂ ಅಗತ್ಯವಾದ ಕ್ಯಾಲ್ಸಿಯಂಅನ್ನು ನೆಲ್ಲಿಕಾಯಿ ರಸ ನೀಡುವುದು. ಮೂಳೆಗಳು ಸಕಾರಾತ್ಮಕ ರೀತಿಯಲ್ಲಿ ಕ್ಯಾಲ್ಸಿಯಂಅನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಇದಕ್ಕೆ ಕಾರಣ ನೆಲ್ಲಿಕಾಯಿ ರಸದಲ್ಲಿರುವ ವಿಟಮಿನ್ ಸಿ ಎಂದು ಹೇಳಬಹುದು.

ಮುಟ್ಟಿನ ಸಮಸ್ಯೆಯನ್ನು ನಿವಾರಿಸುವುದು

ಮುಟ್ಟಿನ ಸಮಸ್ಯೆಯನ್ನು ನಿವಾರಿಸುವುದು

ಋತುಚಕ್ರದ ಸಮಸಯದಲ್ಲಿ ಉಂಟಾಗುವ ಸೆಳೆತ ನೋವುಗಳಿಂದ ಪಾರಾಗಲು ನೆಲ್ಲಿಕಾಯಿ ರಸ ಸಹಾಯ ಮಾಡುವುದು. ಇದನ್ನು ನೈಸರ್ಗಿಕ ಪರಿಹಾರ ಎಂತಲೂ ಸಹ ಕರೆಯಲಾಗುವುದು. ಆಮ್ಲಾ ರಸದಲ್ಲಿ ಜೀವಸತ್ವ ಹಾಗೂ ಖನಿಜಾಂಶಗಳು ವ್ಯಾಪಕ ಶ್ರೇಣಿಯನ್ನು ಹೊಂದಿರುತ್ತವೆ. ಇವು ನಮ್ಮ ದೇಹ ವ್ಯವಸ್ಥೆಯಲ್ಲಿರುವ ಜೀವಾಣುಗಳನ್ನು ಚದುರಿಸುವುದಲ್ಲದೆ ಋತು ಚಕ್ರದ ಸೆಳೆತದ ನಿವಾರಣೆಗೂ ಹಿತಕರವಾದ ಸಂವೇದನೆಯನ್ನು ನೀಡುತ್ತದೆ.

ಅಸ್ತಮಾ ನಿವಾರಿಸುತ್ತದೆ

ಅಸ್ತಮಾ ನಿವಾರಿಸುತ್ತದೆ

ಅಸ್ತಮಾ ಸಮಸ್ಯೆ ಇರುವವರು ಜೇನುತುಪ್ಪದ ಹನಿಗಳೊಂದಿಗೆ ನೆಲ್ಲಿಕಾಯಿ ರಸವನ್ನು ಸೇವಿಸಿದರೆ ಪರಿಣಾಮಕಾರಿಯಾಗಿ ಗುಣಮುಕವಾಗುವುದು. ದಿನಕ್ಕೆ ಎರಡು ಬಾರಿ ನೆಲ್ಲಿಕಾಯಿ ರಸವನ್ನು ಸೇವಿಸುವುದರಿಂದ ಅಸ್ತಮಾ ಹಾಗೂ ಉಸಿರಾಟಕ್ಕೆ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಕ್ಯಾನ್ಸರ್ ತಡೆಯುತ್ತದೆ

ಕ್ಯಾನ್ಸರ್ ತಡೆಯುತ್ತದೆ

ಇಂದು ಕ್ಯಾನ್ಸರ್ ಎನ್ನುವ ಕಾಯಿಲೆ ಸಾಮಾನ್ಯವಾಗುವ ಹಂತಕ್ಕೆ ತಲುಪುತ್ತಿದೆ. ನೆಲ್ಲಿಕಾಯಿ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್‍ನಿಂದ ಪಾರಾಗಬಹುದು. ನೆಲ್ಲಿಕಾಯಿ ರಸವು ರಾಡಿಕಲ್ಸ್‍ಗಳನ್ನು ತಡೆಯುತ್ತದೆ. ಉತ್ಕರ್ಷಣ ನಿರೋಧಕಗಳೊಂದಿಗೆ ದೇಹವನ್ನು ರಕ್ಷಿಸುತ್ತದೆ. ಜೊತೆಗೆ ಕ್ಯಾನ್ಸರ್ ಬರದಂತೆ ಕಾಯುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ನಿಮಗೆ ಮಧುಮೇಹವಿದ್ದರೆ ಅದರಿಂದ ಪಾರಾಗಲು ಅಥವಾ ನಿಯಂತ್ರಣದಲ್ಲಿಡಲು ಸಹಾಯ ಮಾಡುವ ನೈಸರ್ಗಿಕ ಔಷಧ ನೆಲ್ಲಿಕಾಯಿಯ ರಸ. ನೆಲ್ಲಿಕಾಯಿ ರಸದಲ್ಲಿರುವ ಘಟಕಾಂಶವು ಕ್ರೋಮಿಯಂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ಇನ್ಸುಲಿನ್ ಸ್ರವಿಕೆಯನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಮಧು ಮೇಹಕ್ಕೆ ಧನಾತ್ಮಕ ಪರಿಣಾಮ ಪಡೆಯಬೇಕೆಂದರೆ ನೆಲ್ಲಿಕಾಯಿ ರಸಕ್ಕೆ ಅರಿಶಿನ ಮತ್ತು ಜೇನುತುಪ್ಪವನ್ನು ಮಿಶ್ರಗೊಳಿಸಿ ಸೇವಿಸಬಹುದು.

ಅಸ್ತಮಾವನ್ನು ಕಮ್ಮಿ ಮಾಡುತ್ತದೆ

ಅಸ್ತಮಾವನ್ನು ಕಮ್ಮಿ ಮಾಡುತ್ತದೆ

ಇದನ್ನು ನಿಗದಿತ ಪ್ರಮಾಣದಲ್ಲಿ ಜೇನು ಜೊತೆ ತೆಗೆದುಕೊಳ್ಳುತ್ತಾ ಬಂದರೆ ಅಸ್ತಮಾ ಕಾಯಿಲೆ ಕಡಿಮೆಯಾಗುವುದು. ಉಸಿರಾಟದ ತೊಂದರೆ ಅನುಭವಿಸುತ್ತಿರುವವರೆಗೆ ಇದು ಅತ್ಯುತ್ತಮವಾದ ಔಷಧಿಯಾಗಿದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ನೆಲ್ಲಿಕಾಯಿ ರಸವು ನೈಸರ್ಗಿಕವಾಗಿ ಸಿಗುವ ದಿವ್ಯ ಔಷಧ. ನಿಮ್ಮ ಸಮಸ್ಯೆಗಳಿಗೆ ಕೃತಕ ಆರೋಗ್ಯ ಟ್ಯಾಬ್ಲೆಟ್ ಸೇವಿಸುವ ಬದಲು ನೆಲ್ಲಿಕಾಯಿ ರಸವನ್ನು ಸೇವಿಸಿ ಆರೋಗ್ಯದಿಂದಿರಿ.

English summary

Amazing Health Benefits Of Drinking Amla Juice

Its juice can give us unimaginable health benefits and you will simply love it once you get to know them. If you drink its juice, right from a glowing skin to a healthy body, amla offers some amazing range of benefits. Loaded with vitamin C and iron, consumption of amla juice can keep many deadly diseases at bay and can improve our immune system.
Story first published: Thursday, November 2, 2017, 8:30 [IST]
Subscribe Newsletter