For Quick Alerts
ALLOW NOTIFICATIONS  
For Daily Alerts

ದೇವತೆಗಳ ಹಣ್ಣು, 'ಪಪ್ಪಾಯ' ಹಣ್ಣನ್ನು ಎಷ್ಟು ಹೊಗಳಿದರೂ ಸಾಲದು!!

By Manohar
|

ಭೂಮಿ ಮೇಲೆ ಸಿಗುವ ಪ್ರತಿಯೊಂದು ವಸ್ತುವೂ ಮಾನವನ ಉಪಯೋಗಕ್ಕೆ ಬರುವಂತದ್ದಾಗಿದೆ. ಅದರಲ್ಲೂ ಹಣ್ಣು ಹಾಗೂ ತರಕಾರಿ ಜನರಿಗೆ ತುಂಬಾ ಹತ್ತಿರವಾಗಿರುವಂತಹದ್ದು. ಮಾಂಸಹಾರಿಗಳಾಗಳಲಿ ಅಥವಾ ಸಸ್ಯಹಾರಿಗಳಾಗಲಿ ಹಣ್ಣು ಹಾಗೂ ತರಕಾರಿಗಳನ್ನು ಬಳಸಿಯೇ ಬಳಸುತ್ತಾರೆ. ಹಣ್ಣುಗಳಲ್ಲಿ ಇರುವಂತಹ ಕೆಲವೊಂದು ವಿಟಮಿನ್, ಖನಿಜಾಂಶಗಳು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸಿ ದೇಹವು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

ಹೆಚ್ಚಿನ ಹಣ್ಣುಗಳಲ್ಲಿ ವಿಟಮಿನ್, ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ, ಮೆಗ್ನಿಶಿಯಂ, ಕಬ್ಬಿಣಾಂಶ ಮತ್ತು ಇತರ ಕೆಲವೊಂದು ಪೋಷಕಾಂಶಗಳಿವೆ. ಕೆಲವೊಂದು ಹಣ್ಣುಗಳು ದ್ವಿಪಾತ್ರದಲ್ಲಿ ಕೆಲಸ ಮಾಡುತ್ತವೆ. ಇದನ್ನು ಹಣ್ಣು ಹಾಗೂ ತರಕಾರಿಯಾಗಿ ಬಳಸುತ್ತಾರೆ. ಇಂತಹ ಜಾತಿಗೆ ಸೇರುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಒಂದಾಗಿದೆ. ಇದಕ್ಕೆಲ್ಲಾ ಕಾರಣ ಪಪ್ಪಾಯಿ ಹಣ್ಣಿನಲ್ಲಿರುವ ಸುವಾಸನೆಯ ರುಚಿ, ಮೃದು ಬೆಣ್ಣೆಯಂತಿರುವ ಸಾಂದ್ರತೆ ಇವುಗಳನ್ನು ಕಂಡುಕೊಂಡ ಕ್ರಿಸ್ಟೋಫರ್ ಕೊಲಂಬಸ್ ಈ ಹಣ್ಣಿಗೆ "ದೇವತೆಗಳ ಹಣ್ಣು - ಫ್ರೂಟ್ಸ್ ಆಫ್ ಏಂಜೆಲ್ಸ್" ಎಂದು ಅಡ್ಡ ಹೆಸರಿಟ್ಟನು.

ನೆನಪಿಡಿ ಪಪ್ಪಾಯಿ ಹಣ್ಣು, ಎಲ್ಲರೂ ತಿನ್ನುವ ಹಾಗಿಲ್ಲ! ಯಾಕಿರಬಹುದು?

ಪಪ್ಪಾಯಿಹಣ್ಣು ಒಳ್ಳೆಯ ಕಾರಣಕ್ಕಾಗಿ ಪ್ರಪಂಚಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಅಷ್ಟೇ ಅಲ್ಲದೆ, ಪಪ್ಪಾಯಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುವುದರ ಜೊತೆಗೆ ಕೆರೋಟಿನ್‌ಗಳು, ವಿಟಮಿನ್ ಸಿ ಮತ್ತು ಫ್ಲಾವೊನಾಯ್ಡ್‌ಗಳಂತಹ ಪೋಷಕಾಂಶಗಳು ಸಹ ಅಧಿಕ ಪ್ರಮಾಣದಲ್ಲಿರುವುದರಿಂದ, ಇದು ಆರೋಗ್ಯ ಮತ್ತು ಸೌಂದರ್ಯದ ಪ್ರಯೋಜನಗಳನ್ನು ದೇಹಕ್ಕೆ ನೀಡುವಲ್ಲಿ ಪ್ರಮುಖ ಪಾತ್ರವಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಹಣ್ಣಿನ ತಿರುಳನ್ನು ಮುಖಕ್ಕೆ ಫೇಶಿಯಲ್ ಆಗಿ ಮತ್ತು ಕ್ರೀಮ್ ಆಗಿ ಹಾಗು ವಿವಿಧ ಬಗೆಯ ಶಾಂಪೂವಾಗಿ ಸಹ ಬಳಸಲಾಗುತ್ತಿದೆ... ಬನ್ನಿ ಪಪ್ಪಾಯಿ ಹಣ್ಣಿನಲ್ಲಿರುವ ಇನ್ನಷ್ಟು ಪ್ರಯೋಜನಗಳೇನು ಎಂಬುದನ್ನು ನೋಡೋಣ...

ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು...

ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು...

ಪಪ್ಪಾಯಿ ತಿನ್ನುವ ದೊಡ್ಡ ಲಾಭವೆಂದರೆ ಅದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದರಲ್ಲಿನ ಪಪೈನ್ ಎನ್ನುವ ಕಿಣ್ವವು ಜೀರ್ಣ ಕ್ರಿಯೆಗೆ ಉತ್ತಮ ಪರಿಣಾಮವನ್ನು ಉಂಟುಮಾಡುತ್ತದೆ. ಪಪ್ಪಾಯಿ ನಿಯಮಿತವಾಗಿ ತಿನ್ನುವುದರಿಂದ ಹೊಟ್ಟೆಯ ಕೆಲವೊಂದು ಸಣ್ಣಪುಟ್ಟ ರೋಗಗಳನ್ನು ನಿವಾರಿಸುವುದರೊಂದಿಗೆ ಇದು ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.

ಕ್ಯಾನ್ಸರ್ ರೋಗ ವಿರುದ್ಧ ಹೋರಾಡುವ ಶಕ್ತಿ ಈ ಹಣ್ಣಿಗಿದೆ

ಕ್ಯಾನ್ಸರ್ ರೋಗ ವಿರುದ್ಧ ಹೋರಾಡುವ ಶಕ್ತಿ ಈ ಹಣ್ಣಿಗಿದೆ

ಪಪ್ಪಾಯಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಎನ್ನುವ ವಿಚಾರವನ್ನು ಇತ್ತೀಚೆಗೆ ಅಧ್ಯಯನವೊಂದು ಅಲ್ಲಗಳೆದಿದೆ. ಆದರೆ ಇದರಲ್ಲಿನ ಕೆಲವೊಂದು ಅಂಶಗಳನ್ನು ಬಳಸಿಕೊಂಡು ಕ್ಯಾನ್ಸರ್ ನ ಕೋಶಗಳ ವಿರುದ್ಧ ಹೋರಾಡುವ ಔಷಧಿಗಳಲ್ಲಿ ಬಳಸಲಾಗುತ್ತಿದೆ ಎನ್ನಲಾಗಿದೆ. ಇದು ಎಲ್ಲಾ ರೀತಿಯ ಕ್ಯಾನ್ಸರ್ ಗಳನ್ನು ತಡೆಯಲು ಪರಿಣಾಮಕಾರಿಯಾಗಿದೆ. ಅದರಲ್ಲಿ ಮೇಧೋಜೀರಕ ಗ್ರಂಥಿ ಮತ್ತು ಸ್ತನದ ಕ್ಯಾನ್ಸರ್ ವಿರುದ್ಧ ಇದು ಹೆಚ್ಚು ಪರಿಣಾಮಕಾರಿ. ಕ್ಯಾನ್ಸರ್ ಗೆ ಬಳಸುವ ಕೆಲವೊಂದು ಔಷಧಿಗಳು ಪಪ್ಪಾಯಿಯನ್ನು ಮೂಲ ಅಂಶವಾಗಿ ಬಳಸುತ್ತಿದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.

ಪಪ್ಪಾಯಿ ಹಣ್ಣಿನ ಬಗ್ಗೆ ತಪ್ಪು ತಿಳಿಯಬೇಡಿ

ಪಪ್ಪಾಯಿ ಹಣ್ಣಿನ ಬಗ್ಗೆ ತಪ್ಪು ತಿಳಿಯಬೇಡಿ

ಪಪ್ಪಾಯಿಯಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ ಎಂದು ಅದನ್ನು ಕಡೆಗಣಿಸುವವರು ಈ ವಿಷಯವನ್ನು ಗಂಭೀರವಾಗಿ ಪರಿಣಿಸಬೇಕು. ಮೊಡವೆ, ಗುಳ್ಳೆ ಹಾಗೂ ಚರ್ಮದ ಇತರ ಕೆಲವೊಂದು ಸಮಸ್ಯೆಗಳಿಗೆ ಪಪ್ಪಾಯಿ ಅತ್ಯುತ್ತಮ ಔಷಧಿಯಾಗಿದೆ. ಇಷ್ಟೆಲ್ಲಾ ಗುಣಗಳು ಪಪ್ಪಾಯಿಯಲ್ಲಿ ಇರುವಾಗ ಅದನ್ನು ಕಣ್ಣುಮುಚ್ಚಿಕೊಂಡು ತಿನ್ನಬೇಕು. ದೇಹದ ಉಷ್ಣತೆ ಹೆಚ್ಚಾಗುತ್ತದೆ ಎನ್ನುವ ಚಿಂತೆ ಬಿಡಬೇಕು. ಪಪ್ಪಾಯಿ ತಿಂದ ಕೂಡಲೇ ಅದರ ಪರಿಣಾಮಗಳು ನಿಮಗೆ ತಿಳಿದುಬರಲಿದೆ.

ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಎತ್ತಿದೆ ಕೈ

ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಎತ್ತಿದೆ ಕೈ

ಈ ಹಣ್ಣು ತ್ವಚೆಗೆ ಅವಶ್ಯಕವಾದಂತಹ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ, ತ್ವಚೆಯಲ್ಲಿರುವ ನಿರ್ಜೀವ ಜೀವ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ತ್ವಚೆಗೆ ತಕ್ಷಣ ತಾಜಾತನವನ್ನು ನೀಡುತ್ತದೆ. ಅಲ್ಲದೆ, ಇದರಲ್ಲಿರುವ ಶುದ್ಧೀಕರಣ ಗುಣಗಳಿಂದ ನಿಮ್ಮ ಚರ್ಮದಲ್ಲಿರುವ ಕಲ್ಮಶಗಳನ್ನು ತೆರವುಗೊಳಿಸಲು ಸಹಾಯಮಾಡುತ್ತದೆ, ಹಾಗೂ ಇದರಲ್ಲಿರುವ ವಿಟಮಿನ್ ಸಿ ಚರ್ಮದ ಜೀವಕೋಶಗಳನ್ನು ಬಿಸಿಲಿನ ಹೊಡೆತದಿಂದ ರಕ್ಷಿಸುತ್ತದೆ.

ಪಪ್ಪಾಯಿ ಹಣ್ಣಿನ ಫೇಸ್ ಪ್ಯಾಕ್ ತಯಾರಿಸುವ ವಿಧಾನ

ಪಪ್ಪಾಯಿ ಹಣ್ಣಿನ ಫೇಸ್ ಪ್ಯಾಕ್ ತಯಾರಿಸುವ ವಿಧಾನ

ಪಪ್ಪಾಯಿ ಹಣ್ಣಿನ ನುಣ್ಣನೆಯ ಪೇಸ್ಟನ್ನು ಮುಖದ ಮೇಲೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷಗಳ ಕಾಲ ಬಿಟ್ಟು, ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಒಂದು ವಾರದ ತನಕ ಪುನರಾವರ್ತಿಸಿ. ಆಗ ನಿಮ್ಮ ಮುಖದಲ್ಲಿರುವ ಕಲೆಗಳು ಮಾಯವಾಗಿರುವುದನ್ನು ನೀವೇ ನೋಡುವಿರಿ. ಮತ್ತೊಂದು ವಿಧಾನವೆಂದರೆ:ಅರ್ಧ ಕಪ್ ಮಾಗಿದ ಮತ್ತು ಹಿಸುಕಿದ ಹಣ್ಣಿನ ಜೊತೆ ಒಂದು ಲಿಂಬೆಹಣ್ಣಿನ ರಸವನ್ನು ಸೇರಿಸಿ ಒಂದು ಫೇಸ್ ಪ್ಯಾಕ್ ತಯಾರಿಸಿ. ಈ ಮಿಶ್ರಣವನ್ನು ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕುತ್ತಿಗೆಗೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷಗಳ ಸಮಯ ಹಾಗೆಯೇ ಬಿಟ್ಟು ತಣ್ಣಗಿರುವ ನೀರಿನಿಂದ ತೊಳೆದುಕೊಳ್ಳಿ. ಹೀಗೆ ವಾರಕೊಮ್ಮೆ ಮಾಡಿಕೊಳ್ಳಿ.

ತೂಕ ಇಳಿಸಿ ಕೊಳ್ಳಲು ಬಯಸುವವರು

ತೂಕ ಇಳಿಸಿ ಕೊಳ್ಳಲು ಬಯಸುವವರು

ದೇಹದ ತೂಕ ಅತಿಯಾಗಿದ್ದರೆ ಅದರಿಂದ ಬರುವಂತಹ ರೋಗಗಳು ಹಲವಾರು. ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳಿ. ಮೂರು ಗಂಟೆಯಲ್ಲಿ ಇಷ್ಟು ಕೆ.ಜಿ. ತೂಕ ಇಳಿಯದಿದ್ದರೆ ಹಣ ವಾಪಸ್ ಎನ್ನುವಂತಹ ಜಾಹೀರಾತುಗಳನ್ನು ನೋಡುತ್ತಾ ಇರುತ್ತೇವೆ. ಆದರೆ ಇಂತಹ ಜಾಹೀರಾತುಗಳ ಹಿಂದಿರುವ ಸತ್ಯ. ಅದನ್ನು ಬಳಸಿಕೊಂಡವರಿಗೆ ಗೊತ್ತು! ಚಿಂತಿಸದಿರಿ ಹಸಿ ಪಪ್ಪಾಯಿಯನ್ನು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಇತರ ಹಣ್ಣುಗಳೊಂದಿಗೆ ಬೆಳಿಗ್ಗಿನ ಉಪಹಾರಕ್ಕೆ ಸೇವಿಸಿ. ಇದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು. ಹಸಿ ಪಪ್ಪಾಯಿಯು ಬೊಜ್ಜಿನ ಸಮಸ್ಯೆಗೆ ರಾಮಬಾಣವಾಗಿದೆ. ಗರ್ಭಿಣಿಯರಿಗೆ ಇದು ನಿಷಿದ್ಧ.

ಪಪ್ಪಾಯಿ ಬೀಜಗಳು ಕೂಡ ಆರೋಗ್ಯಕಾರಿ

ಪಪ್ಪಾಯಿ ಬೀಜಗಳು ಕೂಡ ಆರೋಗ್ಯಕಾರಿ

ವಾಸ್ತವವಾಗಿ ಪಪ್ಪಾಯಿಯ ಬೀಜವೂ ಆರೋಗ್ಯಕ್ಕೆ ಪೂರಕವಾಗಿದ್ದು ಹಲವು ರೀತಿಯಲ್ಲಿ ರಕ್ಷಣೆ ನೀಡುತ್ತದೆ. ಆದ್ದರಿಂದ ಮುಂದಿನ ಬಾರಿ ಪಪ್ಪಾಯಿ ಹಣ್ಣನ್ನು ಕತ್ತರಿಸಿದ ಬಳಿಕ ಅದರ ಕಪ್ಪು ಬೀಜಗಳನ್ನು ಎಸೆಯದೇ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಬಳಿಕ ಕುಟ್ಟಿ ಪುಡಿಮಾಡಿ ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿದರೆ ಸುಮಾರು ಒಂದು ವರ್ಷದವರೆಗೂ ಉಪಯೋಗಿಸಬಹುದು. ಇದರಲ್ಲಿರುವ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಗುಣಗಳು ಜೀರ್ಣವ್ಯವಸ್ಥೆ, ಮೂತ್ರಪಿಂಡ ಮತ್ತು ಯಕೃತ್‌ನ ಕ್ಷಮತೆಯನ್ನು ವಿಶೇಷವಾಗಿ ಹೆಚ್ಚಿಸುತ್ತವೆ. ಕೆಲವು ಕಾರಣಗಳಿಂದ ಯಕೃತ್ ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಮದ್ಯಪಾನ ಇದಕ್ಕೆ ಪ್ರಮುಖ ಕಾರಣ. ಆಗ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡದೇ ಕೆಲವು ಭಾಗ ಕಲ್ಮಶದಿಂದ ತುಂಬಿಕೊಳ್ಳುತ್ತಾ ಹೋಗುತ್ತದೆ. ಇದನ್ನು ತೊಡೆಯಲು ಪ್ರತಿದಿನ ಮುಂಜಾನೆ ಒಂದು ಲೋಟ ಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕ ಚಮದ ಪಪ್ಪಾಯಿ ಬೀಜದ ಪುಡಿ ಮತ್ತು ಒಂದು ಲಿಂಬೆಯ (ದೊಡ್ಡದಾದರೆ ಅರ್ಧ) ರಸ ಹಿಂಡಿ ಕುಡಿಯುತ್ತಾ ಬಂದರೆ ಎರಡು ತಿಂಗಳಲ್ಲಿಯೇ ಈ ತೊಂದರೆ ಸಾಕಷ್ಟು ಕಡಿಮೆಯಾಗುತ್ತದೆ.

 ಸಂಧಿವಾತವನ್ನು ಗುಣಪಡಿಸುತ್ತದೆ

ಸಂಧಿವಾತವನ್ನು ಗುಣಪಡಿಸುತ್ತದೆ

ಈ ಸಂಯೋಜನೆಯೊಂದು ಅದ್ಭುತ ಉರಿಯೂತ ನಿವಾರಕವಾಗಿರುವ ಕಾರಣ ರಕ್ತಪರಿಚಲನೆ ಹೆಚ್ಚಿಸಲು ಮತ್ತು ದೇಹದ ಒಳಗೆ ಪ್ರಾರಂಭವಾಗಿರುವ ಊತಗಳನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಮೂಳೆಗಳ ಸಂದುಗಳಲ್ಲಿ ಪ್ರಾರಂಭವಾಗಿರುವ ನೋವಿನಿಂದ ಕೂಡಿದ ಸಂಧಿವಾತ, ತಲೆನೋವು ಮೊದಲಾದವುಗಳನ್ನು ಕಡಿಮೆಗೊಳಿಸುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುತ್ತದೆ

ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುತ್ತದೆ

ವಿಟಮಿನ್ ಎ ಮತ್ತು ಸಿ ಉತ್ತಮ ಪ್ರಮಾಣದಲ್ಲಿರುವ ಪಪ್ಪಾಯ ಜ್ಯೂಸ್ ಅನ್ನು ದಿನಾ ಸೇವಿಸುವುದರಿಂದ ದೃಷ್ಟಿನರದ ಪೋಷಣೆಗೆ ನೆರವಾಗುತ್ತದೆ. ತನ್ಮೂಲಕ ಕಣ್ಣಿನ ಆರೋಗ್ಯ ಉತ್ತಮವಾಗಿರುವಂತೆನೋಡಿಕೊಳ್ಳುತ್ತದೆ. ಅಂತೆಯೇ ಕಣ್ಣಿನ ದೃಷ್ಟಿದೋಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿವಾರಿಸಲು ನೆರವಾಗುತ್ತದೆ.

ವಯಸ್ಸಾಗುವಿಕೆಯ ಚಿಹ್ನೆಗಳನ್ನು ತಗ್ಗಿಸುತ್ತದೆ

ವಯಸ್ಸಾಗುವಿಕೆಯ ಚಿಹ್ನೆಗಳನ್ನು ತಗ್ಗಿಸುತ್ತದೆ

ಈ ಹಣ್ಣಿನಲ್ಲಿರುವ ಆಲ್ಫಾ ಹೈಡ್ರಾಕ್ಸಿಲ್ ಆಮ್ಲಗಳು ವಯಸ್ಸಾಗುವ ಚಿಹ್ನೆಗಳನ್ನು, ಉದಾಹರಣೆಗೆ ಚರ್ಮದ ಸುಕ್ಕುಗಳು ಮತ್ತು ಗೆರೆಗಳು ಇವುಗಳನ್ನು ತಡೆಯಲು ಸತ್ತ ಚರ್ಮದ ಜೀವಕೋಶಗಳನ್ನು ಕರಗಿಸಲು ಸಹಾಯಮಾಡುತ್ತದೆ. ಅಲ್ಲದೆ ಹಣ್ಣಿನಲ್ಲಿರುವ ಆಲ್ಫಾ ಹೈಡ್ರಾಕ್ಸಿಲ್ ಆಮ್ಲಗಳು ವಯಸ್ಸಾಗುವ ಚಿಹ್ನೆಗಳನ್ನು, ಉದಾಹರಣೆಗೆ ಚರ್ಮದ ಸುಕ್ಕುಗಳು ಮತ್ತು ಗೆರೆಗಳು ಇವುಗಳನ್ನು ತಡೆಯಲು ಸತ್ತ ಚರ್ಮದ ಜೀವಕೋಶಗಳನ್ನು ಕರಗಿಸಲು ಸಹಾಯಮಾಡುತ್ತದೆ.

English summary

Amazing Benefits of Papaya for Health and Skin

This is a fruit which you come to love once you develop a taste for it. It is not everyone’s favourite, but those who love it find it hard to get by a morning without digging into a bowl of freshly cubed papayas. The orange-coloured flesh is very tempting indeed, but what puts most people off, is the slight bitter aftertaste that accompanies the otherwise sweet fruit.
X
Desktop Bottom Promotion