Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯಿರಿ-ಖಂಡಿತ ಕೊಬ್ಬು ಕರಗುತ್ತದೆ...
ಸುದೃಢ ಶರೀರವನ್ನು ಹೊಂದಲು ನೀವು ಬಹಳಷ್ಟು ಕಷ್ಟಪಟ್ಟಿರಬಹುದು ಹಾಗೂ ಇದಕ್ಕಾಗಿ ಶ್ರಮದಾಯಕ ವ್ಯಾಯಾಮಗಳನ್ನೂ ಮಾಡುತ್ತಿರಬಹುದು. ಆದರೆ ನಿಮ್ಮ ಪ್ರಯತ್ನಗಳಿಗೆ ಹೆಚ್ಚಿನ ಫಲ ದೊರಕದೇ ಇರಲು ನಿಮಗೆ ಅರಿವಿಲ್ಲದಂತೆ ಕೆಲವು ಆಹಾರಾಭ್ಯಾಸಗಳು ಕಾರಣವಾಗಿರಬಹುದು. ರಾತ್ರಿಯ ಊಟದ ಬಳಿಕ ಕೊಬ್ಬು ಹೆಚ್ಚು ಸಂಗ್ರಹಗೊಳ್ಳಲು ಕಾರಣವಾಗುತ್ತದೆ.
ಈ ಕೊಬ್ಬನ್ನು ಬಳಸಿಕೊಂಡರೆ ಇದು ದೇಹದಲ್ಲಿ ಸಂಗ್ರಹವಾಗದೇ ತೂಕ ಏರದಿರುವಂತೆ ನೋಡಿಕೊಳ್ಳುತ್ತದೆ ಹಾಗೂ ನಿಮ್ಮ ವ್ಯಾಯಾಮಗಳು ಹೆಚ್ಚು ಫಲಪ್ರದಗೊಳ್ಳುತ್ತವೆ. ಈ ಕೊಬ್ಬನ್ನು ಬಳಸಿಕೊಳ್ಳಲು ಸಮರ್ಥವಾಗಿರುವ ಆಹಾರ, ವಿಶೇಷವಾಗಿ ದ್ರವಾಹಾರವನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ ಹಾಗೂ ತೂಕವೂ ಇಳಿಯುತ್ತದೆ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರಕುವ ತೂಕ ಇಳಿಸುವ ಹೆಚ್ಚುವರಿ ಆಹಾರಗಳು (weight loss supplements) ಈ ಕಾರ್ಯವನ್ನು ಮಾಡುತ್ತವೆ ಎಂದು ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತದೆ. ಆದರೆ ಈ ಆಹಾರಗಳ ಸೇವನೆಯಿಂದ ಅಡ್ಡಪರಿಣಾಮಗಳೂ ಇರುವ ಕಾರಣ ದೇಹದ ಮೇಲೆ ರಸದೂತಗಳ ಪರಿಣಾಮವೂ ಆಗಬಹುದು ಹಾಗೂ ಹೆಚ್ಚಿನ ಪರಿಣಾಮಗಳೂ ವ್ಯತಿರಿಕ್ತವಾಗಿರುವ ಕಾರಣ ಇವುಗಳಿಂದ ದೂರವಿರುವುದೇ ಲೇಸು.
ಆದ್ದರಿಂದ ಈ ನಿಟ್ಟಿನಲ್ಲಿ ನೈಸರ್ಗಿಕ ಆಹಾರಗಳನ್ನು ಸೇವಿಸುವುದೇ ಸುರಕ್ಷಿತ. ರಾತ್ರಿ ಮಲಗುವ ಮುನ್ನ ನೈಸರ್ಗಿಕ ದ್ರವಾಹಾರಗಳನ್ನು ಸೇವಿಸುವ ಮೂಲಕ ಕೊಬ್ಬು ಕರಗುವುದು ಮಾತ್ರವಲ್ಲ, ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ ಹಾಗೂ ದೇಹಕ್ಕೆ ಅಗತ್ಯವಿರುವ ಖನಿಜಗಳು ಹಾಗೂ ಇತರ ಪೋಷಕಾಂಶಗಳ ಪೂರೈಕೆಯೂ ಆಗುತ್ತದೆ. ಈ ದ್ರವಗಳು ವಿವಿಧ ರೀತಿಯಲ್ಲಿ ಆರೋಗ್ಯಕ್ಕೆ ನೆರವಾಗುತ್ತವೆ ಹಾಗೂ ದೇಹವನ್ನು ಸುಂದರ, ಸುದೃಢವಾಗಿಸಲು ನೆರವಾಗುತ್ತವೆ. ಹಾಗೂ ಆರೋಗ್ಯಕರ ಜೀವನಕ್ರಮ ಅನುಸರಿಸಲೂ ನೆರವಾಗುತ್ತದೆ. ಬನ್ನಿ, ಈ ಗುಣಗಳಿರುವ ದ್ರವಾಹಾರಗಳು ಯಾವುವು ಎಂಬುದನ್ನು ನೋಡೋಣ....

ಹಾಲು
ಹಾಲಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಪ್ರೋಟೀನ್, ಸತು, ವಿಟಮಿನ್ ಬಿ ಮೊದಲಾದ ಪೋಷಕಾಂಶಗಳಿವೆ. ಸಾಮಾನ್ಯವಾಗಿ ರಾತ್ರಿ ಮಲಗುವ ಮುನ್ನ ಹೆಚ್ಚಿನವರು ಹಾಲು ಕುಡಿಯುವುದನ್ನು ಇಷ್ಟಪಡುವುದಿಲ್ಲ. ಹಾಲಿನ ರುಚಿ ಈ ಸಮಯದಲ್ಲಿ ಇವರಿಗೆ ಸೇರುವುದಿಲ್ಲವಂತೆ! ಉಳಿದವರು ಹಾಲು ಕುಡಿದರೆ ತೂಕ ಹೆಚ್ಚುತ್ತದೆ ಎಂಬ ನಂಬಿಕೆಗೆ ಬದ್ದರಾಗಿರುತ್ತಾರೆ. ಆದರೆ ಇತ್ತೀಚಿನ ಸಂಶೋಧನೆಗಳು ಈ ಎಲ್ಲಾ ನಂಬಿಕೆಗಳನ್ನು ಹುಸಿಯಾಗಿಸಿದೆ. ಹಾಲಿನಲ್ಲಿ ಒಂದು ಬಗೆಯ YY (PYY) ಎಂಬ ಹೆಸರಿನ ಪೆಪ್ಟೈಡ್ (ಅಮೈನೋ ಆಮ್ಲಗಳ ಶೃಂಖಲೆ) ಇದೆ.

ಹಾಲು
ಇದು ಹಸಿವನ್ನು ಇಂಗಿಸುವ ರಸದೂತವೂ ಆಗಿದೆ. ಪರಿಣಾಮವಾಗಿ ಒಂದು ಲೋಟ ಹಾಲು ಕುಡಿದ ಬಳಿಕ ಹೊಟ್ಟೆ ತುಂಬಿದಂತಾಗಿ ಹೆಚ್ಚು ಹೊತ್ತು ಏನನ್ನೂ ಸೇವಿಸದಿರಲು ಸಾಧ್ಯವಾಗುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವ ಮೂಲಕ ಸುಖನಿದ್ದೆ ಆವರಿಸುತ್ತದೆ ಹಾಗೂ ನಡುರಾತ್ರಿಯಲ್ಲಿ ಹಸಿವಿನಿಂದ ಎಚ್ಚರಾಗಿ ಅನಗತ್ಯವಾಗಿ ಆಹಾರವನ್ನು ಸೇವಿಸುವುದರಿಂದ ತಡೆಯುತ್ತದೆ. ಅಲ್ಲದೇ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಕೊಬ್ಬನ್ನು ಬಳಸಿಕೊಳ್ಳುತ್ತದೆ.

ದ್ರಾಕ್ಷಾರಸ
ದ್ರಾಕ್ಷಿ ಹೆಚ್ಚಿನವರ ನೆಚ್ಚಿನ ಆಹಾರವಾಗಿದೆ. ದ್ರಾಕ್ಷಿಯಿಂದ ತಯಾರಿಸಿದ ರಸವನ್ನು ಸೇವಿಸುವುದೂ ಇವರಿಗೆ ಇಷ್ಟ. ದ್ರಾಕ್ಷಾರಸವನ್ನು ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ. ಇಲ್ಲಿ ದ್ರಾಕ್ಷಾರಸ ಎಂದರೆ ಅಪ್ಪಟ ರಸವೇ ಆಗಬೇಕೇ ವಿನಃ ಹುಳಿ ಬರಿಸಿರಬಾರದು.

ದ್ರಾಕ್ಷಾರಸ
ಅಪ್ಪಟ ರಸದಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಕ್ಯಾಲೋರಿಗಳಿಗೆ ಪರಿವರ್ತಿತಗೊಳ್ಳುವ ಬಿಳಿಯ ಕೊಬ್ಬನ್ನು ಕ್ಯಾಲೋರಿಗಳನ್ನು ಸಂಗ್ರಹಿಸುವ ಕಂದು ಕೊಬ್ಬನ್ನಾಗಿ ಪರಿವರ್ತಿಸುತ್ತವೆ. ಇದು ತೂಕ ಇಳಿಕೆಗೆ ನೆರವಾಗುತ್ತದೆ. ರಾತ್ರಿ ಮಲಗುವ ಮುನ್ನ ಸೇವಿಸುವ ದ್ರಾಕ್ಷಾರಸ ಸವಿನಿದ್ದೆಯನ್ನೂ ತರುತ್ತದೆ.

ಕ್ಯಾಮೋವೈಲ್ ಟೀ
ಈ ಟೀ ಸಹಾ ತೂಕ ಇಳಿಸುವಲ್ಲಿ ನೆರವಾಗುತ್ತದೆ. ಹಲವು ತೊಂದರೆಗಳಿಗೆ ಔಷಧಿಯಂತೆ ಕೆಲಸ ಮಾಡುವುದರ ಜೊತೆಗೇ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದರ ನೈಸರ್ಗಿಕ ವಿಷನಿವಾರಕ ಗುಣ ದೇಹದಿಂದ ವಿಷವಸ್ತುಗಳನ್ನು ಹೊರಹಾಕುತ್ತದೆ ಹಾಗೂ ಹೊಟ್ಟೆಯುಬ್ಬರಿಕೆಯಿಂದ ರಕ್ಷಿಸುತ್ತದೆ.

ಕ್ಯಾಮೋವೈಲ್ ಟೀ
ಅಲ್ಲದೇ ಈ ಟೀ ಸೇವನೆಯ ಬಳಿಕ ಹೊಟ್ಟೆ ತುಂಬಿದಂತಾಗಿ ಐಸ್ ಕ್ರೀಂ ಅಥವಾ ಪೇಸ್ಟ್ರಿಯಂತಹ ಅಧಿಕ ಕ್ಯಾಲೋರಿಗಳುಳ್ಳ ಹೆಚ್ಚುವರಿ ಆಹಾರವನ್ನು ಸೇವಿಸದಂತೆ ತಡೆಯುತ್ತದೆ. ಈ ಟೀಯನ್ನು ಬಿಸಿಬಿಸಿಯಾಗಿಯೇ ಕೊಂಚ ಲಿಂಬೆರಸ ಬೆರೆಸಿ ಸೇವಿಸುವ ಮೂಲಕ ಹೆಚ್ಚು ಪ್ರಯೋಜನ ಪಡೆಯಬಹುದು. ಸಾಧ್ಯವಾದರೆ ಕೊಂಚ ರೋಸ್ಮರಿ ಎಲೆಗಳ ಪುಡಿಯನ್ನೂ ಚಿಮುಕಿಸಿಕೊಳ್ಳಬಹುದು. ಆದರೆ ಇದಕ್ಕೆ ಸಿಹಿಯನ್ನು ಬೆರೆಸದೇ ಸೇವಿಸುವುದು ಉತ್ತಮ.

ಚಕ್ಕೋತದ ಹಣ್ಣಿನ ರಸ
ರಾತ್ರಿ ಮಲಗುವ ಮುನ್ನ ಚಕ್ಕೋತ ಹಣ್ಣಿನ ರಸವನ್ನು ಸೇವಿಸುವ ಮೂಲಕವೂ ಹಸಿವನ್ನು ನಿಗ್ರಹಿಸಬಹುದು ಹಾಗೂ ತನ್ಮೂಲಕ ಹೆಚ್ಚಿನ ಕ್ಯಾಲೋರಿಗಳು ಹೊಟ್ಟೆ ಸೇರದಂತೆ ತಡೆಯಬಹುದು. ಈ ಕ್ರಿಯೆಯಲ್ಲಿ ಅಧಿಕ ಆಹಾರವನ್ನು ಸೇವಿಸದಂತೆ ತಡೆಯುತ್ತದೆ, ತನ್ಮೂಲಕ ತೂಕ ಇಳಿಯಲು ನೆರವಾಗುತ್ತದೆ. ಒಂದು ಲೋಟ ಚಕ್ಕೋತದ ರಸದಲ್ಲಿ ಕೇವಲ 53 ಕ್ಯಾಲೋರಿಗಳಿರುತ್ತವೆ ಹಾಗೂ ಎರಡು ಗ್ರಾಂ ಕರಗದ ನಾರು ಇದೆ. ಇದು ಮರುದಿನ ಬೆಳಿಗ್ಗೆಯವರೆಗೂ ಹಸಿವಾಗದಿರಲು ನೆರವಾಗುತ್ತದೆ.

ಸೋಯಾ ಪ್ರೋಟೀನ್ ಶೇಕ್
ಇದೊಂದು ಸಸ್ಯಜನ್ಯ ಪ್ರೋಟೀನ್ ಆಗಿದ್ದು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ರಾತ್ರಿ ಮಲಗುವ ಮುನ್ನ ಈ ಪೇಯವನ್ನು ಕುಡಿದು ಮಲಗುವ ಮೂಲಕ ಹಸಿವಾಗದಂತೆ ಹಾಗೂ ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುವಂತೆ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ದೇಹದಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ಕೊಬ್ಬು ಕರಗುತ್ತದೆ ಹಾಗೂ ವ್ಯಾಯಾಮ ಹಾಗೂ ಇತರ ದೈಹಿಕ ಪ್ರಯತ್ನಗಳು ಹೆಚ್ಚಿನ ಫಲ ನೀಡುತ್ತದೆ.

ಸೌತೆ+ಲಿಂಬೆ+ಶುಂಠಿಯ ಜ್ಯೂಸ್
ತೂಕ ಇಳಿಸಲು ಅತಿ ಹೆಚ್ಚು ನೆರವಾಗುವ ಪೇಯವೆಂದರೆ ಸೌತೆ, ಲಿಂಬೆ ಹಾಗೂ ಹಸಿಶುಂಠಿಯ ರಸಗಳಿಂದ ತಯಾರಿಸಿದ ಜ್ಯೂಸ್. ಈ ಮೂರೂ ಸಾಮಾಗ್ರಿಗಳು ಪ್ರತ್ಯೇಕವಾಗಿ ಆರೋಗ್ಯಕ್ಕೆ ಪೂರಕವಾಗಿವೆ. ಈ ಮೂರೂ ಸೇರಿದರೆ ತೂಕ ಇಳಿಸಲು ನೆರವಾಗುವುದು ಮಾತ್ರವಲ್ಲ, ಹಸಿವನ್ನು ಹತ್ತಿಕ್ಕಲೂ ನೆರವಾಗುತ್ತದೆ. ಇದಕ್ಕಾಗಿ ಆರು ತುಂಡು ಸೌತೆ, ಎರಡು ದೊಡ್ಡ ಚಮಚ ಲಿಂಬೆರಸ, ಒಂದು ಇಂಚು ಹಸಿಶುಂಠಿಯ ತುರಿ ಅಥವಾ ಒಂದು ದೊಡ್ಡಚಮಚ ಒಣಶುಂಠಿಯ ಪುಡಿಯನ್ನು ಬೆರೆಸಿ ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಗೊಟಾಯಿಸಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಸೇವಿಸಿದರೆ ಸೊಂಟದ ಕೊಬ್ಬು ಶೀಘ್ರವಾಗಿ ಕರಗುತ್ತದೆ.

ಲೋಳೆಸರ ಜ್ಯೂಸ್
ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಲೋಳೆಸರ ಜೀರ್ಣಕ್ರಿಯೆಯಲ್ಲಿ ಸಹಕರಿಸುವ ಜೊತೆಗೇ ಜೀವರಾಸಾಯನಿಕ ಕ್ರಿಯೆಯನ್ನೂ ಚುರುಕುಗೊಳಿಸುತ್ತದೆ ಹಾಗೂ ತನ್ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಲೋಳೆಸರದಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ಕರಗುವ ನಾರು, ಅಮೈನೋ ಆಮ್ಲಗಳು, ವಿಟಮಿನ್ ಎ, ಸಿ ಮತ್ತು ಇ ಇವೆ. ಇದರ ಉರಿಯೂತ ನಿವಾರಕ ಗುಣ ಹಾಗೂ ಕಲ್ಮಶಗಳನ್ನು ಹೊರಹಾಕಲು ನೆರವಾಗುವ ಗುಣ ತೂಕವನ್ನು ಇಳಿಸಲು ನೆರವಾಗುತ್ತದೆ.

ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿದ ಜೇನು
ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕೊಂಚ ಅಪ್ಪಟ ಜೇನನ್ನು ಕದಡಿ ಕುಡಿಯುವುದರಿಂದ ಹಲವಾರು ರೀತಿಯ ಪ್ರಯೋಜನಗಳಿವೆ. ಮಲಬದ್ದತೆಯಾಗದೇ ಇರುವುದು, ಕಲೆರಹಿತ ತ್ವಚೆ, ಜೀರ್ಣಕ್ರಿಯೆ ಉತ್ತಮಗೊಳ್ಳುವುದು ಹಾಗೂ ತೂಕ ಇಳಿಯಲೂ ನೆರವಾಗುತ್ತದೆ. ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೀರು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ದಹಿಸಲ್ಪಡುತ್ತದೆ ಹಾಗೂ ತೂಕವೂ ಇಳಿಯುತ್ತದೆ. ಇದಕ್ಕಾಗಿ ಸುಮಾರು ಮುನ್ನೂರು ಮಿಲಿ ನೀರನ್ನು ಉಗುರುಬೆಚ್ಚಗಾಗಿಸಿ ಒಂದು ಚಿಕ್ಕಚಮಚ ಜೇನು ಬೆರೆಸಿ ಕದಡಿ. ಉತ್ತಮ ಪರಿಣಾಮಕ್ಕಾಗಿ ನಿತ್ಯವೂ ಮಲಗುವ ಮುನ್ನ ಕುಡಿಯಿರಿ.

ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿದ ಜೇನು
ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕೊಂಚ ಅಪ್ಪಟ ಜೇನನ್ನು ಕದಡಿ ಕುಡಿಯುವುದರಿಂದ ಹಲವಾರು ರೀತಿಯ ಪ್ರಯೋಜನಗಳಿವೆ. ಮಲಬದ್ದತೆಯಾಗದೇ ಇರುವುದು, ಕಲೆರಹಿತ ತ್ವಚೆ, ಜೀರ್ಣಕ್ರಿಯೆ ಉತ್ತಮಗೊಳ್ಳುವುದು ಹಾಗೂ ತೂಕ ಇಳಿಯಲೂ ನೆರವಾಗುತ್ತದೆ. ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೀರು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ದಹಿಸಲ್ಪಡುತ್ತದೆ ಹಾಗೂ ತೂಕವೂ ಇಳಿಯುತ್ತದೆ. ಇದಕ್ಕಾಗಿ ಸುಮಾರು ಮುನ್ನೂರು ಮಿಲಿ ನೀರನ್ನು ಉಗುರುಬೆಚ್ಚಗಾಗಿಸಿ ಒಂದು ಚಿಕ್ಕಚಮಚ ಜೇನು ಬೆರೆಸಿ ಕದಡಿ. ಉತ್ತಮ ಪರಿಣಾಮಕ್ಕಾಗಿ ನಿತ್ಯವೂ ಮಲಗುವ ಮುನ್ನ ಕುಡಿಯಿರಿ.

ಲಿಂಬೆ ಮತ್ತು ಶುಂಠಿಯ ಟೀ
ತೂಕ ಇಳಿಸಲು ಲಿಂಬೆ ಮತ್ತು ಶುಂಠಿಯ ಟೀ ಅದ್ಭುತ ಸಂಯೋಜನೆಯಾಗಿದೆ. ಇವೆರಡೂ ಸಾಮಾಗ್ರಿಗಳು ಪ್ರತ್ಯೇಕವಾಗಿ ದೇಹದ ಕಲ್ಮಶಗಳನ್ನು ನಿವಾರಿಸಲು ಹಾಗೂ ಕೊಬ್ಬನ್ನು ದಹಿಸಲು ನೆರವಾಗುತ್ತದೆ. ಈ ಟೀ ತಯಾರಿಸಲು ಒಂದು ಕಪ್ ನೀರನ್ನು ಕುದಿಸಬೇಕು ಹಾಗೂ ಒಂದಿಂಚಿನಷ್ಟು ಹಸಿಶುಂಠಿಯನ್ನು ತುರಿದು ಹಾಕಿ ಸುಮಾರು ಐದು ನಿಮಿಷ ಕುದಿಸಬೇಕು. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಈಗ ಒಂದು ದೊಡ್ಡ ಚಮಚ ಲಿಂಬೆರಸ ಸೇರಿಸಿ ಕುಡಿಯಿರಿ. ನಿತ್ಯವೂ ರಾತ್ರಿ ಮಲಗುವ ಮುನ್ನ ಈ ಪೇಯವನ್ನು ಕುಡಿದರೆ ಮರುದಿನ ಚಟುವಟಿಕೆಯಿಂದಿರಲು ನೆರವಾಗುತ್ತದೆ ಹಾಗೂ ಶೀಘ್ರವಾಗಿ ತೂಕವಿಳಿಸಲೂ ನೆರವಾಗುತ್ತದೆ.



Click it and Unblock the Notifications











