For Quick Alerts
ALLOW NOTIFICATIONS  
For Daily Alerts

ಸಿಹಿ ಗೆಣಸಿನ ಜ್ಯೂಸ್ ಬಗ್ಗೆ ಕೇಳಿದ್ದೀರಾ? ಇದು ತುಂಬಾ ಆರೋಗ್ಯಕಾರಿ

By Lekhaka
|

ಹಿಂದೆ ಕಾಡಿನಲ್ಲಿ ಇರುವಾಗ ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ ಇದ್ದ ಜನರಿಗೆ ಯಾವುದೇ ರೀತಿಯ ಅನಾರೋಗ್ಯಗಳು ಬರುತ್ತಾ ಇರಲಿಲ್ಲ. ಮಾನವ ವಿಕಸಿತನಾದಂತೆ ಆತನನ್ನು ಒಂದೊಂದು ರೀತಿಯ ಕಾಯಿಲೆಗಳು ಕೂಡ ಅಟ್ಟಾಡಿಸಿಕೊಂಡು ಬಂದವು. ಆದರೆ ಹಿಂದಿನಿಂದಲೂ ಪ್ರಕೃತಿ ದತ್ತವಾಗಿ ಸಿಗುವಂತಹ ಮತ್ತು ಬೆಳೆಸಲ್ಪಡುವಂತಹ ಕೆಲವೊಂದು ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ನೆಲದ ಅಡಿಯಲ್ಲಿ ಬೆಳೆಯುವಂತಹ ಗೆಣಸು ಸಿಹಿಯಾಗಿದ್ದು, ಪಿಷ್ಠವನ್ನು ಹೊಂದಿರುವುದು.

ಇದು ಪೋಷಕಾಂಶಗಳ ಆಗರವಾಗಿದೆ. ಗೆಣಸಿನಲ್ಲಿ ಕ್ಯಾರೋಟಿನ್ ಸಮೃದ್ಧವಾಗಿದೆ. ಕಬ್ಬಿನಾಂಶ, ತಾಮ್ರ, ಫಾಲಟ್ ಮತ್ತು ಮೆಗ್ನಿಶಿಯಂ ಇದರಲ್ಲಿದೆ. ಬೇರೆ ಯಾವುದೆ ರೀತಿಯ ಗೆಡ್ಡೆಗಳಲ್ಲಿ ಇರದಂತಹ ನಾರಿನಾಂಶವು ಇದರಲ್ಲಿ ಅಧಿಕವಾಗಿದೆ. ಗೆಣಸು ಮಾನವನ ಆರೋಗ್ಯಕ್ಕೆ ಹೆಚ್ಚಿನ ಲಾಭಗಳನ್ನು ಒದಗಿಸಲಿದೆ. ಅದರಲ್ಲೂ ಗೆಣಸಿನಿಂದ ಮಾಡಿದಂತಹ ಜ್ಯೂಸ್ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ.

ಮನೆ ಔಷಧ: ಮಧುಮೇಹ ರೋಗಕ್ಕೆ ರಾಮಬಾಣ-'ಸಿಹಿ ಗೆಣಸು'

ಗೆಣಸನ್ನು ತುಂಡುಗಳನ್ನಾಗಿ ಮಾಡಿಕೊಂಡು ಬಳಿಕ ಅದನ್ನು ರುಬ್ಬಿಕೊಂಡು ತಿರುಳನ್ನು ತೆಗೆದು ರಸ ಹಿಂಡಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಹೆಚ್ಚು ರುಚಿ ಬರಲು ಕ್ಯಾರೆಟ್ ಮತ್ತು ಶುಂಠಿ ಹಾಕಿಕೊಳ್ಳಬಹುದು. ಗೆಣಸಿನಲ್ಲಿ ವಿಟಮಿನ್ ಸಿ, ಬಿ2, ಬಿ6, ಇ ಮತ್ತು ಬಿಯೊಟಿನ್ ಸಮೃದ್ಧವಾಗಿದೆ. ಇದರಲ್ಲಿ ಪಾಂಟೊಥೆನಿಕ್ ಆಮ್ಲ ಮತ್ತು ಆಹಾರದ ನಾರಿನಾಂಶವು ಸಮೃದ್ಧವಾಗಿದೆ. ಇದರಲ್ಲಿ ಕಡಿಮೆ ಕ್ಯಾಲರಿ ಮತ್ತು ಅಧಿಕ ಪ್ರೋಟೀನ್ ಇದೆ. ಪ್ರತಿನಿತ್ಯ ಗೆಣಸಿನ ಜ್ಯೂಸ್ ಮಾಡಿಕೊಂಡು ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಗೆಣಸಿನ ಜ್ಯೂಸ್ ನ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳಲು ಮುಂದೆ ಓದುತ್ತಾ ಸಾಗಿ.....

 ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ

ಗೆಣಸಿನಲ್ಲಿ ಕ್ಯಾರೋಟಿನ್ ಮತ್ತು ವಿಟಮಿನ್ ಬಿ6 ಸಮೃದ್ಧವಾಗಿದೆ. ಇನ್ಸುಲಿನ್ ಗೆ ಪ್ರತಿಕ್ರಿಯೆ ನೀಡುವ ಕ್ಯಾರೋಟಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುವುದು.

ವಿಟಮಿನ್ ಡಿ ಸಮೃದ್ಧ

ವಿಟಮಿನ್ ಡಿ ಸಮೃದ್ಧ

ಹಲ್ಲುಗಳು, ಮೂಳೆ, ಚರ್ಮ, ನರಗಳು ಮತ್ತು ಥೈರಾಯ್ಡ್ ಗ್ರಂಥಿಗಳ ಆರೋಗ್ಯಕ್ಕೆ ವಿಟಮಿನ್ ಡಿ ತುಂಬಾ ಪ್ರಾಮುಖ್ಯವಾಗಿದೆ. ಇದರಲ್ಲಿ ಇರುವಂತಹ ವಿಟಮಿನ್ ಡಿ ಮೂಳೆಗಳನ್ನು ಒಳ್ಳೆಯ ವಿನ್ಯಾಸ ಮತ್ತು ಆರೋಗ್ಯವಾಗಿಡುವುದು. ಇದು ಗೆಣಸಿನಿಂದ ಸಿಗುವ ಅತ್ಯುತ್ತಮ ಆರೋಗ್ಯ ಲಾಭ.

ಆರೋಗ್ಯಕರ ಜೀರ್ಣಕ್ರಿಯೆಗೆ

ಆರೋಗ್ಯಕರ ಜೀರ್ಣಕ್ರಿಯೆಗೆ

ಗೆಣಸು ಆರೋಗ್ಯಕರ ಜೀರ್ಣಕ್ರಿಯೆಗೆ ನೆರವಾಗುವುದು. ಯಾಕೆಂದರೆ ಗೆಣಸಿನಲ್ಲಿ ಆಹಾರದ ನಾರಿನಾಂಶವಿದೆ. ಇದು ಕರುಳನ್ನು ಸ್ವಚ್ಛ ಮಾಡುವುದು ಮತ್ತು ನಾರಿನಾಂಶವು ಆರೋಗ್ಯಕರ ಜೀರ್ಣಕ್ರಿಯೆಗೆ ನೆರವಾಗುವುದು. ಇದು ಮಲಬದ್ಧತೆಗೂ ಸಹಕಾರಿ.

ಹೊಟ್ಟೆಯ ಹುಣ್ಣು ನಿವಾರಣೆ

ಹೊಟ್ಟೆಯ ಹುಣ್ಣು ನಿವಾರಣೆ

ಗೆಣಸಿನ ಜ್ಯೂಸ್ ನಲ್ಲಿ ವಿಟಮಿನ್ ಡಿ, ಬೆಟಾ ಕ್ಯಾರೋಟಿನ್, ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಹೊಟ್ಟೆಯ ಹುಣ್ಣಿನ ಸಾಧ್ಯತೆ ಕಡಿಮೆ ಮಾಡುವುದು. ಇದು ಗೆಣಸಿನ ಜ್ಯೂಸ್ ನ ಆರೋಗ್ಯ ಲಾಭಗಳಲ್ಲಿ ಒಂದು.

ಭ್ರೂಣದ ಬೆಳವಣಿಗೆಗೆ

ಭ್ರೂಣದ ಬೆಳವಣಿಗೆಗೆ

ಗೆಣಸಿನ ಜ್ಯೂಸ್ ನಲ್ಲಿ ಫೋಲೇಟ್ ಸಮೃದ್ಧವಾಗಿದೆ. ಇದು ಭ್ರೂಣದ ಬೆಳವಣಿಗೆಗೆ ಅತೀ ಅಗತ್ಯ. ನೀವು ಗರ್ಭಿಣಿಯಾಗಿದ್ದರೆ ಗೆಣಸಿನ ಜ್ಯೂಸ್ ಕುಡಿಯುವುದು ತುಂಬಾ ಆರೋಗ್ಯಕಾರಿ.

ಉರಿಯೂತ ಶಮನಕಾರಿ ಗುಣ

ಉರಿಯೂತ ಶಮನಕಾರಿ ಗುಣ

ಎದೆಯುರಿ, ಅಸಿಡಿಟಿ ಮತ್ತು ಇತರ ಉರಿಯೂತದ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಗೆಣಸಿನ ಜ್ಯೂಸ್ ಮಾಡಿಕೊಂಡು ಕುಡಿಯಿರಿ. ಈ ಜ್ಯೂಸ್ ನಲ್ಲಿ ಹಲವಾರು ರೀತಿಯ ಖನಿಜಾಂಶಗಳು ಮತ್ತು ವಿಟಮಿನ್ ಗಳಿವೆ.

ವಿಟಮಿನ್ ಬಿ6 ಅತ್ಯಧಿಕವಾಗಿದೆ

ವಿಟಮಿನ್ ಬಿ6 ಅತ್ಯಧಿಕವಾಗಿದೆ

ಗೆಣಸಿನಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದೆ. ಇದು ದೇಹದಲ್ಲಿರುವ ಹೊಮೊಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡಲು ಅತೀ ಅಗತ್ಯ. ಇದು ನರಗಳ ಕಾರ್ಯಚಟುವಟಿಕೆ ಮತ್ತು ಹೃದಯ ರಕ್ತನಾಳದ ವ್ಯವಸ್ಥೆಗೆ ನೆರವಾಗುವುದು.

ಮೆಗ್ನಿಶಿಯಂನ ಮೂಲ

ಮೆಗ್ನಿಶಿಯಂನ ಮೂಲ

ಗೆಣಸಿನಲ್ಲಿ ಮೆಗ್ನಿಶಿಯಂ ಹೆಚ್ಚಿನ ಮಟ್ಟದಲ್ಲಿದೆ. ಮೆಗ್ನಿಶಿಯಂ ಒತ್ತಡ ನಿವಾರಣ ಖನಿಜಾಂಶವಾಗಿದ್ದು, ಇದು ದೇಹ ಹಾಗೂ ಮನಸ್ಸಿಗೆ ಆರಾಮ ನೀಡುವುದು.

ವಿಟಮಿನ್ ಸಿ ಸಮೃದ್ಧ

ವಿಟಮಿನ್ ಸಿ ಸಮೃದ್ಧ

ಶೀತ, ಜ್ವರ ಮತ್ತು ಇತರ ಕೆಲವೊಂದು ವೈರಲ್ ಸೋಂಕನ್ನು ತಡೆಯಲು ವಿಟಮಿನ್ ಸಿ ಅತೀ ಅಗತ್ಯ. ವಿಟಮಿನ್ ಸಿ ಮೂಳೆ, ಹಲ್ಲುಗಳು ಮತ್ತು ರಕ್ತದ ಕೋಶಗಳ ನಿರ್ಮಾಣಕ್ಕೆ ಅತೀ ಅಗತ್ಯ. ಗೆಣಸಿನ ಜ್ಯೂಸ್ ನಿಂದ ಸಿಗುವ ಆರೋಗ್ಯ ಲಾಭಗಲ್ಲಿ ಇದು ಒಂದಾಗಿದೆ.

ಕಬ್ಬಿನಾಂಶ ಹೆಚ್ಚಿದೆ

ಕಬ್ಬಿನಾಂಶ ಹೆಚ್ಚಿದೆ

ಕಬ್ಬಿಣವು ದೇಹಕ್ಕೆ ಶಕ್ತಿ ನೀಡುವುದು. ಗೆಣಸಿನ ಜ್ಯೂಸ್ ನಿಂದ ದೇಹಕ್ಕೆ ಒಳ್ಳೆಯ ಮಟ್ಟದ ಕಬ್ಬಿನಾಂಶವು ಲಭ್ಯವಾಗುವುದು. ಬಿಳಿ ರಕ್ತದ ಕಣಗಳನ್ನು ನಿರ್ಮಿಸುವ ಗೆಣಸಿನಲ್ಲಿರುವ ಕಬ್ಬಿನಾಂಶವು ಒತ್ತಡವನ್ನುಸ ಸರಿಯಾದ ರೀತಿಯಲ್ಲಿ ನಿವಾರಿಸಲು ನೆರವಾಗುವುದು.

English summary

Add sweet potato juice to your everyday diet

Sweet potato is a vegetable that is both sweet and starchy. It is a very rich source of nutrition. Sweet potatoes are rich in carotene. They contain iron, copper, folate and manganese. Sweet potatoes are also an excellent source of vitamins C, B2, B6, E and biotin. It also has pantothenic acid and is rich in dietary fibre. It is an excellent source of plant proteins with very low calories.
X
Desktop Bottom Promotion