ಕುತ್ತಿಗೆಯ ಈ ಭಾಗದ ಮೇಲೆ ಐಸ್‌ ಕ್ಯೂಬ್‌ ಇಟ್ಟರೆ ಆರು ಲಾಭಗಳಿವೆ!

By: Arshad
Subscribe to Boldsky

ಮಳೆಗಾಲದಲ್ಲಿ ಅತಿ ಹೆಚ್ಚಾಗಿ ಕಾಡುವ ಶೀತ, ತಲೆನೋವು, ಅಜೀರ್ಣ ಮೊದಲಾದವುಗಳಿಗೆ ವೈದ್ಯರ ಬಳಿ ಓಡುವುದಕ್ಕಿಂತಲೂ ಸುಲಭವಾದ ಮನೆಮದ್ದೊಂದಿದೆ. ಭಾರತದಲ್ಲಿ ನಾವು ಬಿಸಿಯಾದ ಜೀರಿಗೆ, ಕಾಳುಮೆಣಸಿನ ಕಷಾಯ ಮಾಡಿ ಕುಡಿದರೆ ಚೀನಾದಲ್ಲಿ ಬೇರೆಯೇ ವಿಧದ ಕ್ರಮವನ್ನು ಅನುಸರಿಸಲಾಗುತ್ತದೆ.

ಫೆಂಗ್ ಫೂ ಥೆರಪಿ ಎಂಬ ಅತ್ಯಂತ ಜನಪ್ರಿಯ ವಿಧಾನವನ್ನು ಇಂದು ಪ್ರಸ್ತುತಪಡಿಸಲಾಗುತ್ತಿದ್ದು ಈ ವಿಧಾನದಲ್ಲಿ ಐಸ್ ತುಂಡನ್ನು ಶೀತಕ್ಕೆ ಉಪಶಮನದ ರೀತಿಯಲ್ಲಿ ಬಳಸಲಾಗುತ್ತಿದೆ. ಅರೆ, ಶೀತವೆಂದರೆ ದೇಹವನ್ನು ಬೆಚ್ಚಗಿರಿಸುವುದು ಬಿಟ್ಟು ಐಸ್ ತುಂಡನ್ನು ಬಳಸಿ ಇನ್ನಷ್ಟು ತಣ್ಣಗೆ ಮಾಡುವುದೆಂದರೆ? ಇಲ್ಲೇ ಇರುವುದು ಗುಟ್ಟು, ಸೂಜಿಯನ್ನು ತೆಗೆಯಲು ಸೂಜಿಯೇ ಬೇಕು ಎಂಬಂತೆ ಶೀತಕ್ಕೆ ಶೀತಲವೇ ಮದ್ದು ಎಂಬುದನ್ನು ಚೀನೀಯರು ಕಂಡುಕೊಂಡಿದ್ದಾರೆ. 

ತಾಜಾ ತ್ವಚೆಗಾಗಿ ಐಸ್ ಕ್ಯೂಬ್ ಮಸಾಜ್ ಈ ರೀತಿ ಮಾಡಿ

ಇದಕ್ಕೆ ಬೇಕಾಗಿರುವುದು ಎಂದರೆ ಒಂದು ಚಿಕ್ಕ ಮಂಜುಗಡ್ಡೆಯ ತುಂಡು ಅಷ್ಟೇ! ಆದರೆ ಈ ತುಂಡನ್ನು ಎಲ್ಲಿ ಇರಿಸಬೇಕು ಎಂಬುದೇ ಈ ವಿಧಾನದ ಗುಟ್ಟು. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಮಂಜುಗಡ್ಡೆ ಇರಿಸುವ ಸ್ಥಾನವನ್ನು ಅರಿಯಿರಿ. ಈ ವಿಧಾನವನ್ನು ಅನುಸರಿಸಲು ಹೊಟ್ಟೆಯ ಮೇಲೆ ಮಲಗುವುದು ಅತ್ಯುತ್ತಮ ಭಂಗಿಯಾಗಿದ್ದು ದಿಂಬಿನ ಮೇಲೆ ಮುಖ ಎಡಬದಿಗೆ ಹೊರಳಿಸಿ ಕೂದಲನ್ನು ಕುತ್ತಿಗೆಯ ಭಾಗದಿಂದ ತೆರವಾಗಿರಿಸಬೇಕು. ಚಿತ್ರದಲ್ಲಿ ತೋರಿಸಿರುವ ಈ ಭಾಗದ ಮೇಲೆ ಐಸ್ ತುಂಡನ್ನು ಜಾರಿಹೋಗದಂತೆ ಇರಿಸಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಕನಿಷ್ಠ ದಿನಕ್ಕೊಂದು ಬಾರಿ ಹಾಗೂ ವಾರಕ್ಕೆ ಮೂರರಿಂದ ನಾಲ್ಕು ದಿನ ಆಚರಿಸಿದರೆ ಸಾಕು. ಈ ವಿಧಾನದಿಂದ ಲಭಿಸುವ ಪ್ರಯೋಜನಗಳು ಇಂತಿವೆ.....   

ಹೊಟ್ಟೆಯ ನೋವಿದ್ದರೆ...

ಹೊಟ್ಟೆಯ ನೋವಿದ್ದರೆ...

ಹೊಟ್ಟೆಯಲ್ಲಿ ನೋವು ಬರಲು ಪ್ರಮುಖ ಕಾರಣಗಳೆಂದರೆ ಅಜೀರ್ಣತೆ, ಆಮ್ಲೀಯತೆ, ಮಲಬದ್ಧತೆ, ಕೆಲವು ಆಹಾರಗಳಿಗೆ ಅಲರ್ಜಿ ಹೊಂದಿರುವುದು, ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳುವುದು, ವಿಷಾಹಾರ ಸೇವನೆ, ಆಮಶಂಕೆ, ಹೊಟ್ಟೆ ಅಥವಾ ಕರುಳುಗಳ ಒಳಭಾಗದಲ್ಲಿ ಹುಣ್ಣುಗಳಾಗುವುದು ಒಟ್ಟಾರೆ ಹೇಳಬೇಕೆಂದರೆ ಹೊಟ್ಟೆನೋವಿಗೆ ಹೊಟ್ಟೆಯ ಯಾವುದೇ ಅಂಗ ಕಾರಣವಾಗಬಹುದು. ಒಳ್ಳೆಯ ಸುದ್ದಿ ಎಂದರೆ ಕಾರಣವೇನೇ ಇದ್ದರೂ ಹೊಟ್ಟೆನೋವನ್ನು ಶೀಘ್ರವಾಗಿ ಕಡಿಮೆಗೊಳಿಸಲು ಕುತ್ತಿಗೆಯ ಹಿಂಭಾಗದಲ್ಲಿ ಸಣ್ಣ ತುಂಡು ಐಸ್ ತುಂಡನ್ನಿರಿಸುವ, ಮೂಲಕ ಹೊಟ್ಟೆನೋವು, ಹೊಟ್ಟೆ ಉಬ್ಬರಿಕೆ, ಅಜೀರ್ಣತೆ ಮೊದಲಾದವು ಕಡಿಮೆಯಾಗುತ್ತವೆ. ಈ ವಿಧಾನ ಎಲ್ಲ ವಯೋಮಾನದ ಜನರಿಗೂ ಸೂಕ್ತವಾಗಿದೆ.

ಯಮಯಾತನೆ ನೀಡುವ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರವೇನು?

Image Courtesy

ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ

ಕುತ್ತಿಗೆಯ ಹಿಂಭಾಗದಲ್ಲಿ ಐಸ್ ತುಂಡನ್ನಿರಿಸುವ ಮೂಲಕ ದೇಹದಲ್ಲಿ ಎಂಡೋಕ್ರೈನ್ ಗ್ರಂಥಿಗೆ ಹೆಚ್ಚಿನ ಪ್ರಚೋದನೆ ದೊರಕುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಹಲವಾರು ಸೋಂಕುಗಳನ್ನು ಎದುರಿಸುವ ಶಕ್ತಿ ನೀಡುತ್ತದೆ. ಸಾಮಾನ್ಯ ಶೀತ ಮೊದಲಾದವು ಶೀಘ್ರದಲ್ಲಿಯೇ ಇಲ್ಲವಾಗುತ್ತವೆ.

ಥೈರಾಯ್ಡ್ ಗ್ರಂಥಿ

ಥೈರಾಯ್ಡ್ ಗ್ರಂಥಿ

ಒಂದು ವೇಳೆ ನಿಮಗೆ ಥೈರಾಯ್ಡ್ ಗ್ರಂಥಿಯ ತೊಂದರೆ ಇದ್ದರೆ ಈ ವಿಧಾನದ ಮೂಲಕ ಬಹಳಷ್ಟು ಪ್ರಯೋಜನ ಪಡೆಯಬಹುದು.

ನೈಸರ್ಗಿಕ ಜ್ಯೂಸ್ ಸೇವಿಸಿ-ಥೈರಾಯ್ಡ್ ಸಮಸ್ಯೆಯಿಂದ ಮುಕ್ತರಾಗಿ

ಸಂಧಿವಾತ

ಸಂಧಿವಾತ

ಫೆಂಗ್ ಫೂ ಪಾಯಿಂಟ್ ಅಥವಾ ಕೇಂದ್ರ ಸ್ಥಳಗಳು ಸ್ನಾಯುಗಳು ಮತ್ತು ಮೂಳೆಗಳ ಸಂಧಿಗಳಿಗೆ ಹೆಚ್ಚಿನ ಪ್ರಚೋದನೆ ಒದಗಿಸುತ್ತವೆ. ನಿಯಮಿತವಾಗಿ ಈ ವಿಧಾನವನ್ನು ಅನುಸರಿಸುವ ಮೂಲಕ ಮೂಳೆಸಂಧುಗಳ ನೋವು ಕಡಿಮೆಯಾಗುತ್ತದೆ.

ಸಂಧಿವಾತ ಸಮಸ್ಯೆಗೆ 'ಎಲೆಕೋಸಿನ ಎಲೆಗಳೇ' ಪರ್ಫೆಕ್ಟ್ ಮನೆಮದ್ದು

ಒಟ್ಟಾರೆ ಮನೋಭಾವ

ಒಟ್ಟಾರೆ ಮನೋಭಾವ

ಈ ವಿಧಾನದಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಮೆದುಳಿಗೆ ಅಹ್ಲಾದವೆನಿಸುವ ಹಲವು ರಸದೂತಗಳು ಲಭಿಸುತ್ತವೆ. ಇವೆಲ್ಲವೂ ಒಟ್ಟಾರೆ ಮನೋಭಾವವನ್ನು ಉತ್ತಮಗೊಳಿಸುತ್ತವೆ.

Image Courtesy

ನಿದ್ರೆಯ ಸಮಸ್ಯೆ ಇದ್ದರೆ

ನಿದ್ರೆಯ ಸಮಸ್ಯೆ ಇದ್ದರೆ

ಫೆಂಗ್ ಫು ವಿಧಾನದಿಂದ ನರವ್ಯವವಸ್ಥೆ ನಿರಾಳಗೊಳ್ಳುವ ಮೂಲಕ ನಿದ್ದೆಯನ್ನು ಉತ್ತಮಗೊಳಿಸುತ್ತದೆ.

ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

English summary

A Simple Trick Of Placing An Ice Cube At This Point Of Your Neck

When it comes to taking care of your health, especially treating the common problems of cold, headaches, digetion etc. you need not rush to a doctor. Traditional ways and some ingredients in your kitchen will see you through. Today, we tell you about a unique Chinese therapy of Feng fu that is highly popular. It uses an ice cube to cure common health problems. All you need to do is open your fridge, take out some ice cubes and put them on the back of your neck at the point shown in the picture here.
Subscribe Newsletter