Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿಟಮಿನ್ ಕೊರತೆಗಳ ಲಕ್ಷಣಗಳಿವು! ಆದರೆ ಚಿಂತೆ ಬೇಡ-ಪರಿಹಾರ ಇದೆ...
ಒಂದು ವೇಳೆ ನಿಮಗೆ ಸದಾ ಸುಸ್ತು ಆವರಿಸಿದ್ದು ಇದಕ್ಕೆ ದೇಹದಲ್ಲಿ ವಿಟಮಿನ್ನುಗಳ ಕೊರತೆ ಇರಬಹುದೆಂದು ನಿಮಗೆ ಅನುಮಾನ ಬಂದಿರಬಹುದು. ಒಂದು ವೇಳೆ ನಿಮ್ಮ ಕುಟುಂಬ ವೈದ್ಯರಿಗೂ ಇದೇ ಅನುಮಾನ ಬಂದರೆ ಅವರು ಇದನ್ನು ಪರಿಹರಿಸಿಕೊಳ್ಳಲು ಕೆಲವು ಪರೀಕ್ಷೆಗೆ ಒಳಪಡಲು ಸಲಹೆ ನೀಡಬಹುದು. ಇದರಲ್ಲಿ ಕೆಲವು ರಕ್ತಪರೀಕ್ಷೆಗಳು ದುಬಾರಿಯೂ ಆಗಿರಬಹುದು. ಈ ಪರೀಕ್ಷೆಗಳ ಮೂಲಕ ನಿಮ್ಮ ದೇಹದಲ್ಲಿ ಯಾವ ಪೋಷಕಾಂಶದ ಕೊರತೆ ಇದೆ ಹಾಗೂ ಎಷ್ಟು ಕಡಿಮೆ ಇದೆ ಎಂಬುದನ್ನು ಅರಿಯಬಹುದು.
ನಮ್ಮ ಮುಖ ನಮ್ಮ ಆರೋಗ್ಯದ ಕೈಗನ್ನಡಿ ಇದ್ದಂತೆ. ಕೆಲವು ಮುಖಚರ್ಯೆಗಳು ಈ ಪೋಷಕಾಂಶಗಳ ಕೊರತೆಯನ್ನು ಸ್ಪಷ್ಟವಾಗಿ ಹಾಗೂ ಸುಲಭವಾಗಿ ತಿಳಿಸುತ್ತವೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ದುಬಾರಿ ಪರೀಕ್ಷೆಗಳಿಗೆ ಹಣ ವ್ಯರ್ಥಮಾಡುವುದನ್ನು ತಪ್ಪಿಸುವುದು ಮಾತ್ರವಲ್ಲ, ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಈ ಕೊರತೆಯನ್ನು ನೀಗಿಸಿಕೊಳ್ಳಲೂಬಹುದು....

ಪೇಲವ ವರ್ಣ
ಒಂದು ವೇಳೆ ನಿಮ್ಮ ಚರ್ಮದ ಬಣ್ಣ ದಿನದಿಂದ ದಿನಕ್ಕೆ ಪೇಲವವಾಗುತ್ತಾ ಹೋಗುತ್ತಿದ್ದರೆ ಇದಕ್ಕೆ ನಿಮ್ಮ ದೇಹದಲ್ಲಿ ವಿಟಮಿನ್ B12 ಕೊರತೆಯ ಕಾರಣವಿರಬಹುದು. ನಾಲಿಗೆಯನ್ನು ಹೊರಚಾಚಿ ಪರೀಕ್ಷಿಸಿದರೆ ಸಾಮಾನ್ಯವಾಗಿ ನಡುವಿನಲ್ಲಿ ಕೊಂಚ ಉಬ್ಬಿದಂತಿರಬೇಕು. ಆದರೆ ಇದು ಚಪ್ಪಟೆಯಾಗಿದ್ದು ನಯವಾಗಿದ್ದರೆ ಸಹಾ ಇದಕ್ಕೆ ವಿಟಮಿನ್ B12 ಕೊರತೆ ಕಾರಣವಾಗಿರಬಹುದು. ಈ ವಿಟಮಿನ್ನಿನ ಕೊರತೆಯಿಂದ ಸುಸ್ತು ಮತ್ತು ಮರೆಗುಳಿತನ ಹೆಚ್ಚುತ್ತದೆ.
ಪರಿಹಾರವೇನು?
ನದಿ ಅಥವಾ ಸಮುದ್ರದ ಮೀನು, ಹಾಗೂ ನೈಸರ್ಗಿಕ ಆಹಾರ ಸೇವಿಸಿದ ಕೋಳಿಮಾಂಸವನ್ನು ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಬೇಕು.

ಕೂದಲ ಆರೋಗ್ಯ ಕೆಡುವುದು
ಒಂದು ವೇಳೆ ನಿಮ್ಮ ಚರ್ಮ ಒಣಗಿ ತಲೆಯಲ್ಲಿ ತಲೆಹೊಟ್ಟು ಉಟಾದರೆ ಹಾಗೂ ಇವು ನಿತ್ಯವೂ ಕಾಡುವ ಚಿಂತೆಯ ವಿಷಯವಾದರೆ ಇದು ನಿಮ್ಮ ದೇಹದಲ್ಲಿ ವಿಟಮಿನ್ B7 ಅಥವಾ ಬಯೋಟಿನ್ ಎಂಬ ಪೋಷಕಾಂಶದ ಕೊರತೆಯನ್ನು ತಿಳಿಸುತ್ತಿರಬಹುದು. ಒಂದು ವೇಳೆ ಬೇರೆ ಯಾವುದಾದರೊಂದು ಕಾಯಿಲೆಗೆ ಆಂಟಿ ಬಯಾಟಿಕ್ ಔಷಧಿ ತೆಗೆದುಕೊಳ್ಳುತ್ತಿದ್ದು ಇದರ ಪ್ರಮಾಣ ಹೆಚ್ಚಾದರೂ ಈ ತೊಂದರೆ ಎದುರಾಗುತ್ತದೆ.
ಪರಿಹಾರವೇನು?
ನಿಮ್ಮ ಆಹಾರದಲ್ಲಿ ಹೂಕೋಸು, ಮೊಟ್ಟೆಯ ಬಿಳಿಭಾಗ ಹಾಗೂ ಅಣಬೆಯನ್ನು ಸೇವಿಸುವ ಮೂಲಕ ಈ ಕೊರತೆಯನ್ನು ತುಂಬಿಕೊಳ್ಳಬಹುದು.

ತುಂಬಿಕೊಂಡಿರುವ ಕಣ್ಣುಗಳು
ಒಂದು ವೇಳೆ ನಿಮ್ಮ ಕಣ್ಣುಗಳ ಸುತ್ತಲ ಭಾಗ, ವಿಶೇಷವಾಗಿ ಕಣ್ಣ ಕೆಳಗಿನ ಭಾಗ ಉಬ್ಬಿಕೊಂಡು ಚೀಲದಂತಾಗಿದ್ದರೆ ಇದಕ್ಕೆ ನಿಮ್ಮ ದೇಹದಲ್ಲಿ ಅಯೋಡಿನ್ ಲವಣದ ಕೊರತೆ ಇರಬಹುದು. ಇದರ ಪರಿಣಾಮವಾಗಿ ಹೆಚ್ಚಿದ ತೂಕ, ಒಣ ಚರ್ಮ ಹಾಗೂ ಸುಲಭವಾಗಿ ತುಂಡಾಗುವ ಉಗುರುಗಳು ಮೊದಲಾದ ತೊಂದರೆಗಳು ಎದುರಾಗಬಹುದು.
ಇದಕ್ಕೇನು ಪರಿಹಾರ?
ಒಂದು ವೇಳೆ ನೀವು ಇದುವರೆಗೆ ಉಪ್ಪು ಕಡಿಮೆ ಇರುವ ಆಹಾರವನ್ನೇ ನೆಚ್ಚಿಕೊಂಡಿದ್ದರೆ ಈಗ ಈ ಅಭ್ಯಾಸವನ್ನು ನಿಲ್ಲಿಸುವುದು ಅನಿವಾರ್ಯ. ನಿಮ್ಮ ಆಹಾರದಲ್ಲಿ ಉಪ್ಪಿನಂಶ ಇರಲೇಬೇಕು. ಸಾಮಾನ್ಯ ಆಡುಗೆ ಉಪ್ಪು, ಸಾಗರ ಉತ್ಪನ್ನಗಳು ಹಾಗೂ ಸಾಗರದ ಸಸ್ಯಗಳಿಂದ ತಯಾರಾದ ಆಹಾರಗಳನ್ನು ಸೇವಿಸುವ ಮೂಲಕ ಈ ಕೊರತೆಯನ್ನು ನೀಗಿಸಬಹುದು.

ಕಳೆಗುಂದಿದ ತುಟಿಗಳು
ಒಂದು ವೇಳೆ ತುಟಿಗಳನ್ನು ಕೊಂಚವೇ ಹೊರಗೆಳೆದು ನೋಡಿದರೆ ತುಟಿಗಳ ಒಳಭಾಗ, ಒಸಡುಗಳ ಬಣ್ಣ ಕಳೆಗುಂದಿರುವುದು ಕಂಡುಬರುತ್ತದೆ. ಈ ತೊಂದರೆ ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಕಾಣಬರುತ್ತದೆ. ಈಗ ಮನಃಸ್ಥಿತಿ ಕೊಂಚ ಬದಲಾಗಿದ್ದು ಕಬ್ಬಿಣ, ಜೇಡಿ ಐಸ್ ಮೊದಲಾದವುಗಳನ್ನು ತಿನ್ನುವ ಬಯಕೆಯುಂಟಾಗುತ್ತದೆ. ಏಕೆಂದರೆ ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಈ ತೊಂದರೆ ಎದುರಾಗುತ್ತದೆ.
ಇದಕ್ಕೆ ಪರಿಹಾರವೇನು
ನಿಮ್ಮ ಅಹಾರದಲ್ಲಿ ಕೆಂಪು ಮಾಂಸ, ಒಣಗಿಸಿದ ಬೀನ್ಸ್ ಕಾಳು ಹಾಗೂ ಪಾಲಕ್ - ಬಸಲೆ ಸೊಪ್ಪುಗಳನ್ನು ಪ್ರಮುಖವಾಗಿ ಸೇವಿಸಬೇಕು. ಈ ಆಹಾರಗಳಲ್ಲಿ ಕಬ್ಬಿಣದ ಅಂಶ ಹೆಚ್ಚಿರುತ್ತದೆ.

ದುರ್ಬಲ, ರಕ್ತ ಒಸರುವ ಒಸಡುಗಳು
ಒಂದು ವೇಳೆ ನಿಮ್ಮ ಒಸಡುಗಳಲ್ಲಿ ರಕ್ತ ಒಸರುತ್ತಿದ್ದರೆ ಹಾಗೂ ಹಲ್ಲುಗಳು ಅಂಕುಡೊಂಕಾಗಿದ್ದರೆ ಇದಕ್ಕೆ ವಿಟಮಿನ್ ಸಿ ಕಾರಣ. ಕಬ್ಬಿಣದ ಕೊರತೆಯಿಂದ ಮುಖದ ಸ್ನಾಯುಗಳ ನೋವು ಮೊದಾಲಾದ ಹಲವಾರು ಆರೋಗ್ಯದ ತೊಂದರೆಗಳು ಎದುರಾಗುತ್ತದೆ. ಒಂದು ವೇಳೆ ಇದು ತೀರಾ ಕಡಿಮೆಯಾದರೆ ಒಸಡುಗಳು ಹಲ್ಲುಗಳನ್ನು ಹಿಡಿದಿಡಲು ಅಸಮರ್ಥವಾಗಿ ಉದುರಲೂಬಹುದು.
ಇದಕ್ಕೆ ಪರಿಹಾರವೇನು?
ನಿಮ್ಮ ಆಹಾರದಲ್ಲಿ ಸಾಧ್ಯವಾದಷ್ಟು ಲಿಂಬೆ ಜಾತಿಯ ಆಹಾರವನ್ನು ಸೇವಿಸಬೇಕು. ಆಹಾರದಲ್ಲಿ ಬೆರ್ರಿಗಳು, ಕಿವಿ, ಮಾವು ಹಾಗೂ ಪಪ್ಪಾಯಿಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು



Click it and Unblock the Notifications
