Latest Updates
-
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ
ಇದು ಹತ್ತಾರು ರೋಗ ಗುಣಪಡಿಸುವ ಅನಾದಿ ಕಾಲದ ಔಷಧಿ!
ಅನಾದಿ ಕಾಲದಿಂದಲೂ ರೋಗಗಳು ಮನುಷ್ಯರನ್ನು ಕಾಡುತ್ತಲೇ ಇದ್ದವು. ಆದರೆ ಹಿಂದಿನ ಕಾಲದ ರೋಗಗಳು ಹಾಗೂ ಆಧುನಿಕ ಯುಗದಲ್ಲಿ ಕಾಣಿಸಿಕೊಳ್ಳುವ ರೋಗಗಳಿಗೆ ಭಾರೀ ವ್ಯತ್ಯಾಸವಿದೆ. ಆಧುನಿಕ ಯುಗದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದೆ ಇರುವಂತಹ ರೋಗಗಳಿಗೆ ಹಿಂದಿನ ಕಾಲದಲ್ಲಿ ಚಿಕಿತ್ಸೆ ನೀಡಲಾಗುತ್ತಾ ಇತ್ತು. ಸಣ್ಣ ಸಣ್ಣ ರೋಗಗಳಿಗೆ ಈಗಲೂ ಕೆಲವರು ಗಿಡಮೂಲಿಕೆ ಔಷಧಿಗಳನ್ನು ಬಳಸಿಕೊಳ್ಳುತ್ತಾರೆ. ಆಧುನಿಕ ಔಷಧಿಗಳು ಬರುವ ಮೊದಲು ಕೂಡ ರೋಗಗಳು ಇದ್ದವು. ಇಂತಹ ಪ್ರತಿಯೊಂದು ರೋಗಗಳಿಗೆ ಹಿಂದಿನಿಂದಲೂ ಚಿಕಿತ್ಸೆ ನೀಡಲಾಗುತ್ತಾ ಇತ್ತು.
ಕೆಲವೊಂದು ರೋಗಗಳು ಬೇಗನೆ ಶಮನವಾಗುತ್ತಾ ಇದ್ದರೆ ಇನ್ನು ಕೆಲವು ರೋಗಗಳು ದೀರ್ಘ ಕಾಲದ ತನಕ ಕಾಡುತ್ತಾ ಇದ್ದವು. ಹಿಂದಿನ ಕಾಲದಲ್ಲಿ ಸೇವಿಸುತ್ತಿದ್ದ ಆಹಾರ ಹಾಗೂ ಮಾಡುತ್ತಿದ್ದ ಕೆಲಸದಿಂದ ಜನರಿಗೆ ಸಣ್ಣ ಸಣ್ಣ ರೋಗಗಳು ಗಮನಕ್ಕೆ ಬರುತ್ತಾ ಇರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಒತ್ತಡದ ಜೀವನ ಹಾಗೂ ಸರಿಯಾಗಿಲ್ಲದ ಆಹಾರ ಕ್ರಮದಿಂದಾಗಿ ಹಲವಾರು ರೀತಿಯ ರೋಗಗಳು ಭಾದಿಸುತ್ತಾ ಇರುತ್ತದೆ.

ಇವುಗಳಲ್ಲಿ ಸಾಮಾನ್ಯವಾಗಿ ಕಾಡುವಂತಹ ರೋಗಗಳೆಂದರೆ ಬಂಜೆತನ, ಖಿನ್ನತೆ, ಸೋಂಕು ಇತ್ಯಾದಿ ಆಧುನಿಕ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ ಬಳಕೆ, ಒತ್ತಡದ ಕೆಲಸ, ಅನಾರೋಗ್ಯಕರ ಜೀವನ ಶೈಲಿ, ವ್ಯಾಯಾಮದ ಕೊರತೆ, ಕಲುಷಿತ ವಾತಾವರಣ ಇತ್ಯಾದಿ ಆಧುನಿಕ ಯುಗದ ರೋಗಗಳಿಗೆ ಪ್ರಮುಖ ಕಾರಣ. ನಾವು ಸೇವಿಸುವಂತಹ ಆಹಾರದಲ್ಲೇ ವಿಷ ತುಂಬಿರುವ ಕಾರಣದಿಂದ ರೋಗಗಳು ತಿನ್ನುವ ಆಹಾರದಿಂದಲೇ ದೇಹದೊಳಗೆ ಸೇರಿಕೊಳ್ಳುತ್ತದೆ.
ಇಂತಹ ರೋಗಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಅದಕ್ಕೆ ಚಿಕಿತ್ಸೆ ನೀಡಿದರೆ ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅದು ಪ್ರಾಣಹಾನಿಗೂ ಕಾರಣವಾಗಬಹುದು. ಇಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ರಕ್ತಪರೀಕ್ಷೆ, ಸ್ಕ್ಯಾನಿಂಗ್ ಮುಂತಾದ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಇದು ಯಾವುದೂ ಇಲ್ಲದೆ ಹಿಂದಿನ ಕಾಲದಲ್ಲಿ ಹೆಚ್ಚಿನ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಾ ಇತ್ತು ಮತ್ತು ಅದು ಪರಿಣಾಮಕಾರಿಯಾಗಿರುತ್ತಿದ್ದವು.
ಅನಾದಿ ಕಾಲದಿಂದಲೂ ಬಳಸುತ್ತಿರುವಂತಹ ಕೆಲವೊಂದು ಗಿಡಮೂಲಿಕೆ ಔಷಧಿಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ಹೇಗೆ ತಯಾರಿಸಿಕೊಂಡು ಯಾವ ರೀತಿ ಬಳಸಿಕೊಳ್ಳಬಹುದು ಎಂದು ತಿಳಿಯಿರಿ.
ಬೇಕಾಗುವ ಸಾಮಗ್ರಿಗಳು
*ಒಣಗಿಸಿದ ಆಲಿವ್ ಎಲೆಗಳು 5-6
*ನೀರು- 2 ಲೋಟ
ಈ ಮನೆಮದ್ದು ತುಂಬಾ ಪರಿಣಾಮಕಾರಿಯೆಂದು ಈಗಾಗಲೇ ತಿಳಿದುಬಂದಿದೆ ಮತ್ತು ವಿಜ್ಞಾನಿಗಳು ಕೂಡ ಇದು ಹಲವಾರು ರೋಗಗಳನ್ನು ಗುಣಪಡಿಸಬಲ್ಲದು ಎಂದು ಹೇಳಿದ್ದಾರೆ.
ಭಾರತದಲ್ಲಿ ನಾವು ತುಳಸಿಯನ್ನು ಎಷ್ಟು ಪವಿತ್ರವೆಂದು ಭಾವಿಸುತ್ತೆವೆಯಾ ಆಲಿವ್ ಎಲೆಗಳು ಕೂಡ ಅಷ್ಟೇ ಪವಿತ್ರವೆಂದು ಗ್ರೀಕ್ ಮತ್ತು ಇತರ ಕೆಲವು ಯುರೋಪ್ ರಾಷ್ಟ್ರದ ಜನರು ಭಾವಿಸಿದ್ದರು. ಆಲಿವ್ ಎಲೆಗಳಲ್ಲಿ ಇರುವಂತಹ ಹಲವಾರು ರೀತಿಯ ಔಷಧೀಯ ಗುಣಗಳು ಹಲವಾರು ರೋಗಗಳನ್ನು ಗುಣಮಾಡುತ್ತದೆ.
ಸಾವಯವ ಅಂಗಡಿಗಳಲ್ಲಿ ಆಲಿವ್ ಎಲೆಗಳು ಲಭ್ಯವಿದೆ. ಕೆಲವೊಂದು ತೋಟಗಳಲ್ಲಿ ಕೂಡ ಆಲಿವ್ ಮರಗಳನ್ನು ನೆಡಲಾಗಿದೆ. ಆಲಿವ್ ಎಲೆಗಳಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಹಾಗು ಸೂಕ್ಷ್ಮಾಣುಜೀವಿ ವಿರೋಧಿಯಾಗಿರುವ ಕೆಲವೊಂದು ಕಿಣ್ವಗಳು ಇವೆ. ಚಯಾಪಚಾಯ ಕ್ರಿಯೆ ಕಡಿಮೆಯಾಗಿರುವುದು, ಅತಿಯಾದ ಕೊಲೆಸ್ಟ್ರಾಲ್, ಬೊಜ್ಜು, ವಯಸ್ಸಾಗುವ ಲಕ್ಷಣ ಇತ್ಯಾದಿಗಳನ್ನು ಆಲಿವ್ ಎಲೆಗಳಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ನಿವಾರಣೆ ಮಾಡುವುದು.
ವೈರಸ್, ಬ್ಯಾಕ್ಟೀರಿಯಾ, ಫಂಗಲ್ ನಿಂದ ಉಂಟಾಗುವಂತಹ ಸಾಮಾನ್ಯ ರೋಗಗಳಾದ ಶೀತ, ಜ್ವರ, ಗಂಟಲಿನ ಸೋಂಕು, ಯೀಸ್ಟ್ ಸೋಂಕು, ಮೂತ್ರನಾಳದ ಸೋಂಕು, ಕ್ಷಯ, ಹರ್ಪಿಸ್ ಇತ್ಯಾದಿ ರೋಗಗಳನ್ನು ಆಲಿವ್ ಎಲೆಗಳಲ್ಲಿ ಇರುವಂತಹ ಸೂಕ್ಷ್ಮಾಣು ಜೀವಿ ವಿರೋಧಿ ಗುಣಗಳು ತಡೆಯುತ್ತದೆ.
ಆಲಿವ್ ಎಲೆಗಳು ಉರಿಯೂತ ಮತ್ತು ಸೋಂಕನ್ನು ಪರಿಣಾಮಕಾರಿಯಾಗಿ ನಿವಾರಿಸುವ ಗುಣ ಹೊಂದಿರುವ ಕಾರಣದಿಂದ ಈ ರೋಗಗಳನ್ನು ನೈಸರ್ಗಿವಾಗಿ ಗುಣಪಡಿಸಬಲ್ಲದು. ರೋಗ ಹೊಂದಿರುವವರು ವೈದ್ಯರಲ್ಲಿ ಸಮಾಲೋಚನೆ ನಡೆಸಿ ಅವರು ಕೊಟ್ಟಿರುವ ಔಷಧಿಯೊಂದಿಗೆ ಇದನ್ನು ಬಳಸಬಹುದೇ ಎಂದು ಕೇಳಬೇಕು.
ತಯಾರಿಸುವ ವಿಧಾನ
*ಒಣಗಿದ ಆಲಿವ್ ತೈಲವನ್ನು ನೀರಿಗೆ ಹಾಕಿಕೊಂಡು 15 ನಿಮಿಷ ಕಾಲ ನೆನೆಯಲು ಬಿಡಿ.
ಎಲೆಗಳನ್ನು ತೆಗೆದು ನೀರನ್ನು ಬಿಸಿ ಮಾಡಿ.
*ಈ ನೀರನ್ನು ಒಂದು ಕಪ್ ಗೆ ಹಾಕಿಕೊಳ್ಳಿ ಮತ್ತು ದಿನನಿತ್ಯ ಉಪಹಾರದ ಬಳಿಕ ಸೇವಿಸಿ.
*ಈ ನೀರಿಗೆ ಜೇನುತುಪ್ಪ ಬೆರೆಸಿಕೊಂಡು ಸೇವಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














