Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಊಟ ಮಾಡುವಾಗ ಈ ರೀತಿಯ ತಪ್ಪನ್ನು ಅಪ್ಪಿತಪ್ಪಿಯೂ ಮಾಡದಿರಿ
ಆಹಾರವು ನಮ್ಮ ಅಸ್ತಿತ್ವದ ಒಂದು ಪ್ರಮುಖ ಭಾಗ ಎಂದು ಹೇಳಬಹುದು. ದಿನವಿಡೀ ಚಟುವಟಿಕೆಯಿಂದ ಸಕ್ರಿಯವಾಗಿ ಕೆಲಸ ನಿರ್ವಹಿಸಿಕೊಂಡು ಇರಬೇಕೆಂದರೆ ಅಥವಾ ಆರೋಗ್ಯ ಪೂರ್ಣವಾಗಿರಬೇಕೆಂದರೆ ದಿನದ ಮೂರು ಹೊತ್ತಿನ ಊಟ ತಿಂಡಿಯು ಸೂಕ್ತ ರೀತಿಯಲ್ಲಿ ಇರಬೇಕು. ಬೆಳಗಿನ ಉಪಹಾರವು ದಿನದ ಅತ್ಯಂತ ಪ್ರಮುಖ ಭೋಜನವೆಂದು ಹೇಳಲಾಗುತ್ತದೆ. ಇದು ಮಧ್ಯಾಹ್ನದ ಊಟಕ್ಕೆ ಸಮನಾಗಿರುತ್ತದೆ. ಕೆಲಸದಿಂದ ವಿಶ್ರಾಂತಿ ಪಡೆದು ಶಾಂತಿಯುತವಾದ ಮತ್ತು ಆರೋಗ್ಯ ಪೂರ್ಣ ಊಟ ಹೊಂದುವುದು ಬಹುಮುಖ್ಯ.
ಉಪಹಾರದ ನಂತರ ನಮ್ಮ ದೇಹವು ಶಕ್ತಿ ಮತ್ತು ಪೋಷಣೆಯನ್ನು ಪಡೆದುಕೊಳ್ಳಲು ಮಧ್ಯಾಹ್ನದ ಊಟವು ಆರೋಗ್ಯ ಪೂರ್ಣವಾಗಿ ಸೂಕ್ತ ಸಮಯದಲ್ಲಿ ಸೇವಿಸಬೇಕು. ನಮ್ಮ ದೇಹವು ಮಧ್ಯಾಹ್ನದ ವೇಳೆ ಸೋಮಾರಿ ತನವನ್ನು ಅನುಭವಿಸುತ್ತದೆ. ನಾವು ಸೇವಿಸುವ ಊಟದಿಂದ ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಿ, ಏಕಾಗ್ರತೆಯನ್ನು ಹೆಚ್ಚಿಸಬಹುದು. ಇದು ನಮ್ಮ ಮೆಟಾಬಾಲಿಸಮ್‍ನ್ನು ಸಕ್ರಿಯಗೊಳಿಸಲು ಸಹಾಯಮಾಡುವುದು.
ಊಟದ ಮಧ್ಯೆ ನೀರು ಕುಡಿಯಬಾರದು ಏಕೆ?
ಕೆಲಸದ ಒತ್ತಡವಿರುವಾಗ ಅಥವಾ ಪ್ರಯಾಣದಲ್ಲಿರುವಾಗ ಹೀಗೆ ವಿವಿಧ ಸಮಸ್ಯೆಗಳಿಂದ ಬಹಳಷ್ಟು ಮಂದಿ ಸೂಕ್ತ ಸಮಯದಲ್ಲಿ ಊಟ ತಿಂಡಿ ಮಾಡುವುದನ್ನು ಮರೆಯುತ್ತಾರೆ. ಅದೆಂತಹದ್ದೇ ಕೆಲಸವಿದ್ದರೂ ಸರಿ ಊಟದ ಸಮಯದಲ್ಲಿ ಊಟವನ್ನು ಮಾಡಬೇಕು. ಆಗಲೇ ದೇಹವು ಆರೋಗ್ಯವಾಗಿರುತ್ತದೆ. ಇಲ್ಲವಾದರೆ ಅಜೀರ್ಣ, ಗ್ಯಾಸ್ಟ್ರಿಕ್, ತಲೆನೋವು, ಆಯಾಸ ಸೇರಿದಂತೆ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕೆಲವರು ಊಟ ಮಾಡುವ ಸಮಯದಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಅದು ಸಹ ಅನಾರೋಗ್ಯಕ್ಕೆ ಕಾರಣವಾಗುವುದು. ನಿತ್ಯವು ನೀವು ಊಟ-ತಿಂಡಿ ಮಾಡುವಾಗ ಮಾಡಬಹುದಾದ ತಪ್ಪುಗಳ ಪಟ್ಟಿ ಇಲ್ಲಿದೆ. ಇವುಗಳನ್ನು ನೋಡಿ, ಮುಂದಿನ ದಿನದಲ್ಲಿ ಆರೋಗ್ಯ ಪೂರ್ಣ ಊಟ ಹೊಂದುವುದನ್ನು ಅನುಸರಿಸಿ...
ನಿತ್ಯವೂ ಹೊರಗಿನ ಊಟ ಮಾಡುವುದು
ಮನೆಯಲ್ಲಿ ಅಡುಗೆ ಮಾಡದೆ ಹೊರಗಡೆ ಊಟ ಮಾಡುವುದು ಕೆಲವರಿ ಅಭ್ಯಾಸವಾಗಿರುತ್ತದೆ. ಹೊಟೇಲ್ ಮತ್ತು ರೆಸಾರ್ಟ್‍ಗಳಲ್ಲಿ ಮಾಡುವ ಆಹಾರಗಳು ಮನೆಯ ಆಹಾರದಷ್ಟು ಶುಚಿ ಹಾಗೂ ತಾಜಾತನದಿಂದ ಕೂಡಿರುವುದಿಲ್ಲ. ಇದರಲ್ಲಿ ಬಳಸುವ ಕೆಲವು ಸಾಮಾಗ್ರಿಗಳು ಅನಾರೋಗ್ಯ ಸೃಷ್ಟಿಸಬಹುದು. ಅಲ್ಲಿ ಬಳಸುವ ಎಣ್ಣೆ ಪದಾರ್ಥವು ಸೂಕ್ತ ರೀತಿಯದ್ದಾಗಿರುವುದಿಲ್ಲ. ಅಂತಹ ತುರ್ತು ಪರಿಸ್ಥಿತಿ ಇದ್ದಾಗ ಮಾತ್ರ ಹೊರಗಡೆ ಊಟ ಮಾಡಿ. ಇಲ್ಲವಾದರೆ ಮನೆಯಲ್ಲಿ ತಯಾರಿಸಿದ ಊಟವನ್ನು ಮಾಡಿ.
ನಿಮ್ಮ ಡೆಸ್ಕ್‌ನಲ್ಲೇ ಕುಳಿತು ಊಟ ಮಾಡುವುದು
ಕೆಲವು ಅಧ್ಯನದ ಪ್ರಕಾರ ಶೌಚಾಲಯವನ್ನು ಹೊರತು ಪಡಿಸಿ, ಕೆಲಸ ಮಾಡುವ ಮೇಜಿನ ಮೇಲೆ 3 ಪಟ್ಟು ಹೆಚ್ಚು ಸೂಕ್ಷ್ಮಾಣುಗಳಿರುತ್ತವೆ ಎಂದು ಹೇಳಲಾಗಿದೆ. ನಾವು ಕುಳಿತುಕೊಳ್ಳುವ ಮೇಜು ನಮಗೆ ಹೆಚ್ಚು ಅನುಕೂಲ ಮತ್ತು ಹೆಚ್ಚು ಆರಾಮದಾಯಕವಾಗಿರುತ್ತದೆ. ಹಾಗಾಗಿ ನಾವು ಊಟ-ತಿಂಡಿಯನ್ನು ಅಲ್ಲೇ ಕುಳಿತು ಮಾಡಲು ಮನಸ್ಸು ಮಾಡುತ್ತೇವೆ. ಆದರೆ ಆ ಕೆಟ್ಟ ಅಭ್ಯಾಸದಿಂದ ಊಟದಲ್ಲಿ ಸೂಕ್ಷ್ಮಾಣು ಜೀವಿಗಳ ಪ್ರವೇಶ ಉಂಟಾಗಿ, ಆರೋಗ್ಯ ಹಾಳಾಗುವುದು.
ಡೈನಿಂಗ್ ಟೇಬಲ್ ಬಿಟ್ಟುಬಿಡಿ-ನೆಲದ ಮೇಲೆ ಕುಳಿತು ಊಟ ಮಾಡಿ!
ಊಟ ಮಾಡುವಾಗ ಮೊಬೈಲ್
ಕೆಲವರು ಮೊಬೈಲ್ ಅನ್ನು ಬಿಟ್ಟಿರಲು ಆಗದವರಂತೆ ವರ್ತಿಸುತ್ತಾರೆ. ಟಾಯ್ಲೆಟ್, ಊಟದ ಸಮಯ ಎಂತಲೂ ನೋಡುವುದಿಲ್ಲ. ಮೊಬೈಲ್ ಸ್ಕ್ರೋಲ್ ಮಾಡುತ್ತಲೇ ಇರುತ್ತಾರೆ. ಮೈಬೈಲ್ ಮೇಲೆ ಅನೇಕ ಸೂಕ್ಷ್ಮಾಣುಗಳು ನೆಲೆಯಾಗಿರುತ್ತವೆ. ಊಟದ ಸಮಯದಲ್ಲಿ ಸ್ಕ್ರೋಲ್ ಮಾಡುತ್ತಾ ಊಟ ಮಾಡಿದರೆ ಆಹಾರದಲ್ಲಿ ಸೂಕ್ಷ್ಮಾಣುಗಳು ನಿಮ್ಮ ಆಹಾರಕ್ಕೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗಬಹುದು.
ಹೆಚ್ಚುವರಿ ಪದಾರ್ಥವನ್ನು ಸೇರಿಸುವುದು
ಕೆಲವರಿಗೆ ಊಟ ಹೆಚ್ಚು ರುಚಿಸುವುದಿಲ್ಲ. ಊಟದ ಜೊತೆ ಕೋಕ್ ಸೇರಿದಂತೆ ಇನ್ನಿತ ಪಾನೀಯಗಳು, ಹೆಚ್ಚು ಮಸಾಲೆ ಸೇರಿಸಿಕೊಳ್ಳುವುದು, ಎಣ್ಣೆಯನ್ನು ಹೆಚ್ಚು ಬಳಸುವುದು, ಈ ರೀತಿ ಊಟಕ್ಕೆ ವಿವಿಧ ಬಗೆಯನ್ನು ಸೆರಿಸಿಕೊಳ್ಳುವುದರಿಂದ ಊಟದ ಸಮತೋಲನ ತಪ್ಪುತ್ತದೆ. ಜೊತೆಗೆ ಆರೋಗ್ಯಪೂರ್ಣ ಆಹಾರ ನಿಮ್ಮದಾಗಿರುವುದಿಲ್ಲ.
ತಡವಾಗಿ ತಿನ್ನುವುದು
ಊಟವನ್ನು ಸೂಕ್ತ ಸಮಯದಲ್ಲಿ ಮಾಡದರೆ ತಮಗೆ ಬಿಡುವಾದ ಸಮಯದಲ್ಲಿ ಒಂದಿಷ್ಟು ತಿಂದು ಸುಮ್ಮನಾಗುವುದು ಅಥವಾ ಊಟವನ್ನು ಬಿಟ್ಟು ಬಿಡುವುದು. ಈ ಹವ್ಯಾಸವು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ತೀರಾ ತಡವಾಗಿ ಊಟ ಮಾಡುವುದರಿಂದ ಚಯಾಪಚಯ ಕ್ರಿಯೆಯು ನಿಧಾನಗೊಳ್ಳುತ್ತದೆ. ಆಹಾರವು ಜೀರ್ಣವಾಗದೆ ಕೊಬ್ಬಿಂಶಗಳು ಸಂಗ್ರಹವಾಗಿ ಉಳಿಯುತ್ತವೆ. ಕೆಲವೊಮ್ಮೆ ಗ್ಯಾಸ್ಟ್ರಿಕ್ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಸಂಸ್ಕರಿಸಿದ ಮಾಂಸಗಳು
ಸಂಸ್ಕರಿಸಿದ ಮಾಂಸಗಳಲ್ಲಿ ಉಪ್ಪು ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತದೆ. ಸಂಸ್ಕರಿಸಿದ ಮಾಂಸಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ಮಾಂಸದಲ್ಲಿರುವ ಎನ್-ನೈಟ್ರೋಸ್ ಸಂಯುಕ್ತಗಳು ಕ್ಯಾನ್ಸರ್‍ಗೆ ಕಾರಣವಾಗುತ್ತದೆ.
ವೈಟ್ ಬ್ರೆಡ್ ಬಳಕೆ
ವೈಟ್ ಬ್ರೆಡ್ ಅನ್ನು ಸ್ಯಾಂಡ್‍ವಿಜ್ ತಯಾರಿಸಲು ಬಳಸುವುದು ಸೂಕ್ತವಲ್ಲ. ಇದರಲ್ಲಿ ನಾರಿನಂಶವು ಶೂನ್ಯವಾಗಿರುತ್ತದೆ. ಇದನ್ನು ಬಳಸುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಆದಷ್ಟು ಬ್ರೌನ್ ಬ್ರೆಡ್ ಬಳಸಿ. ಅದು ನಿಮ್ಮ ಆರೋಗ್ಯ ಹಾಳುಮಾಡುವುದರಲ್ಲಾಗಲೀ ಸ್ಯಾಂಡ್‍ವಿಜ್ ರುಚಿಯನ್ನು ಹಾಳುಮಾಡುವ ಕೆಲಸಕ್ಕೆ ಹೋಗುವುದಿಲ್ಲ.
ಸೋಡಾ ಕುಡಿಯುವುದು
ಸೋಡಾ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ. ಇದು ಕ್ಯಾಲೋರಿಯ ಜೊತೆಗೆ ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ. ಅಲ್ಲದೆ ಹಲ್ಲಿನ ಆರೋಗ್ಯವನ್ನು ಹಾಳುಮಾಡುತ್ತದೆ. ಆದಷ್ಟು ಊಟದ ಸಮಯದಲ್ಲಿ ಅಥವಾ ಹಸಿವಾದ ಸಮಯದಲ್ಲಿ ಸೋಡಾ ಕುಡಿಯುವ ಪ್ರಯತ್ನ ಮಾಡಬೇಡಿ.
ಹಸಿ ತರಕಾರಿಯನ್ನು ಸೇವಿಸದೆ ಇರುವುದು
ಊಟ ಮಾಡುವಾಗ ಆದಷ್ಟು ಹಸಿ ತರಕಾರಿಯನ್ನು ಸಲಾಡ್ ರೂಪದಲ್ಲಿ ಸೇವಿಸಿ. ಇದರಿಂದ ಹೆಚ್ಚು ವಿಟಮಿನ್, ಖನಿಜ ಹಾಗೂ ನಾರಿನಂಶವು ದೇಹಕ್ಕೆ ಸಿಗುತ್ತದೆ. ಇದರಿಂದ ದೇಹದ ಆರೋಗ್ಯವೂ ಉತ್ತಮವಾಗಿರುತ್ತದೆ.
ಕೊಬ್ಬಿನ ಪದಾರ್ಥ ಬಳಕೆ
ಕೆಲವರು ಸೇವಿಸುವ ತರಕಾರಿ ಅಥವಾ ತಿನಿಸುಗಳಿಗೆ ಚೀಸ್ ಹಾಗೂ ಇನ್ನಿತರ ಕೊಬ್ಬಿನ ಪದಾರ್ಥವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡು ಸೇವಿಸುತ್ತಾರೆ. ಇದು ನಿಮ್ಮ ತೂಕವನ್ನು ಹೆಚ್ಚಿಸುವುದಲ್ಲದೆ ಕೆಲವು ಆರೋಗ್ಯ ಸಮಸ್ಯೆಗೆ ಅವಕಾಶ ಕಲ್ಪಿಸಿಕೊಡುತ್ತದೆ.
ಪ್ಲಾಸ್ಟಿಕ್ ಪಾತ್ರೆಯಲ್ಲಿ ಮೈಕ್ರೋವೇವ್‍ನಿಂದ ಬಿಸಿ ಮಾಡುವುದು
ಪ್ಲಾಸ್ಟಿಕ್ ಪಾತ್ರೆಯಲ್ಲಿ ಪದಾರ್ಥವನ್ನು ಹಾಕಿ ಮೈಕ್ರೋವೇವ್‍ನಲ್ಲಿ ಬಿಸಿ ಮಾಡಿಕೊಳ್ಳುವುದರಿಂದ ಬಿಸ್ಫೆನಾಲ್ ಎಂಬ ಪದಾರ್ಥವು ಬಿಡುಗಡೆಯಾಗುತ್ತವೆ. ಇದು ಆರೋಗ್ಯದ ಮೇಲೆ ಗಣನೀಯ ಪರಿಣಾಮ ಬೀರುವುದು. ಈಸ್ಟ್ರೋಜೆನ್ ಹಾರ್ಮೋನ್‍ಗಳಲ್ಲಿ ವ್ಯತ್ಯಾಸ, ಜೀವಕೋಶಗಳ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಹೀಗೆ ಅನೇಕ ತೊಂದರೆಗಳು ಉಂಟಾಗುವುದು.
ಊಟವನ್ನು ಬಿಡುವುದು
ಊಟವನ್ನು ಬಿಡುವುದು ಒಂದು ಕೆಟ್ಟ ಅಭ್ಯಾಸ. ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗದೆ ತೂಕ ನಷ್ಟ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆ ಉಂಟಾಗುವುದು. ನಂತರ ನಿಧಾನವಾಗಿ ದೇಹದಲ್ಲಿ ಶಕ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ.
ಊಟದ ನಂತರ ಸುಮ್ಮನೆ ಕುಳಿತುಕೊಳ್ಳುವುದು
ಅನೇಕರು ಊಟ ಮಾಡಿ ಹೊಟ್ಟೆ ತುಂಬಿಸಿಕೊಂಡ ಮೇಲೆ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಇದು ಆರೋಗ್ಯಕರ ವಿಚಾರವಲ್ಲ. ಊಟದ ನಂತರ ಸಣ್ಣ ವಾಕಿಂಗ್ ಮಾಡಬೇಕು. ಅದು ಕ್ಯಾಲೋರಿಯನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ತೊತೆಗೆ ದೇಹದಲ್ಲಿ ಕೊಬ್ಬಿನಂಶ ಶೇಖರಣೆ ಆಗುವುದನ್ನು ನಿಯಂತ್ರಿಸುತ್ತದೆ.
ಅತಿಯಾದ ಆರೋಗ್ಯ ಪೂರ್ಣ ಆಹಾರದ ಸೇವನೆ
ಕೆಲವರು ಆಗಾಗ ಆರೋಗ್ಯ ಪೂರ್ಣ ಆಹಾರವನ್ನು ತಿನ್ನುತ್ತಲೇ ಇರುತ್ತಾರೆ. ಇದು ದೇಹಕ್ಕೆ ಬೇಕಾದ ಪೋಷಕಾಂಶಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ದೇಹಕ್ಕೆ ನೀಡುತ್ತವೆ. ಆಗ ದೇಹವು ಹೆಚ್ಚು ತೂಕ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಯೂ ಹುಟ್ಟಿಕೊಳ್ಳುತ್ತದೆ. ನಾವು ಸೇವಿಸುವ ಆಹಾರಗಳು ಮಿತಿ ಹಾಗೂ ಸಮತೋಲನದಲ್ಲಿ ಇರಬೇಕು.
ಹೆಚ್ಚು ಉಪ್ಪಿನ ಸೇವನೆ
ಕಲವರು ಊಟ ಮಾಡುವಾಗ ಮೇಲಿನಿಂದ ಒಂದಿಷ್ಟು ಉಪ್ಪನ್ನು ಸೇರಿಸಿಕೊಳ್ಳುತ್ತಾರೆ. ಇದು ಮೂತ್ರ ಪಿಂಡದ ಮೇಲೆ ಹೆಚ್ಚಿನ ಪರಿಣಾಮವನ್ನುಂಟುಮಾಡುತ್ತದೆ. ಅಧಿಕ ಉಪ್ಪಿನಂಶವು ಹೃದಯದ ಆರೋಗ್ಯವನ್ನು ಹಾಳುಮಾಡುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.