For Quick Alerts
ALLOW NOTIFICATIONS  
For Daily Alerts

  ಮನೆ ಔಷಧಿ: ನೋವು ನಿವಾರಕ ನೈಸರ್ಗಿಕ ಆಹಾರಗಳು

  By Arshad
  |

  ಊಟ ಬಲ್ಲವನಿಗೆ ರೋಗವಿಲ್ಲ ಎಂಬುದೊಂದು ಕನ್ನಡದ ಗಾದೆ. ಅಂತೆಯೇ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿಯೂ ಕೆಡಿಸುವಲ್ಲಿಯೂ ಮಹತ್ತರ ಪಾತ್ರ ವಹಿಸುತ್ತದೆ. ಕೆಲವಾರು ಕಾರಣಗಳಿಂದ ನಮಗೆ ಆಗಾಗ ನೋವುಗಳು ಕಾಡುತ್ತಿರುತ್ತವೆ. ಅತಿಯಾದ ವ್ಯಾಯಾಮದ ಬಳಿಕ ಮೈಯೆಲ್ಲಾ ಮುರಿಯುವಂತಾದರೆ ಶೀತ ಹಿಡಿಯುವ ಸಮಯದಲ್ಲಿಯೂ ಮೈಕೈ ನೋವು ಬಾಧಿಸುತ್ತದೆ.

  ನಮ್ಮಲ್ಲಿ ಹೆಚ್ಚಿನವರು ಈ ಸಮಯದಲ್ಲಿ ಮಾಡುವುದೇನೆಂದರೆ ನೋವು ನಿವಾರಕ ಗುಳಿಗೆಯನ್ನು ಸೇವಿಸುವುದು. ಆದರೆ ಇವು ನೋವನ್ನು ಕಡಿಮೆ ಮಾಡುವುದಿಲ್ಲ, ಬದಲಿಗೆ ನೋವಿನ ಸೂಚನೆಗಳನ್ನು ಮೆದುಳಿಗೆ ತಲುಪದಂತೆ ಮಾಡುವ ಮೂಲಕ ನೋವಿಲ್ಲದಿರುವ ಭಾವನೆಯನ್ನು ಮೂಡಿಸುತ್ತವೆ ಅಷ್ಟೇ. ಆದ್ದರಿಂದ ನೋವಿಗೆ ಇರುವ ಕಾರಣದಿಂದ ಆಗಬೇಕಾದ ಪ್ರಭಾವ ಹಾಗೂ ಔಷಧಿಯ ಅಡ್ಡ ಪರಿಣಾಮ ಆಗೇ ಆಗುತ್ತದೆ. ಇದರ ಬದಲಿಗೆ ನಿಸರ್ಗವೇ ನೀಡಿರುವ ಕೆಲವು ಹಣ್ಣು, ಧಾನ್ಯ ತರಕಾರಿಗಳನ್ನು ನಮ್ಮ ಆಹಾರದಲ್ಲಿ ಅಳವಡಿಸಿಕೊಂಡರೆ ನೋವಿಗೆ ಕಾರಣವಾದ ಮೂಲವನ್ನೇ ಇಲ್ಲವಾಗಿಸುವ ಮೂಲಕ ನೈಸರ್ಗಿಕ ಹಾಗೂ ಯಾವುದೇ ಅಪಾಯ, ಅಡ್ಡಪರಿಣಾಮಗಳಿಲ್ಲದ ಚಿಕಿತ್ಸೆಯನ್ನು ಪಡೆಯಬಹುದು.

  ನೋವು ನಿವಾರಕ ಎಣ್ಣೆಗಳು-ಕಡಿಮೆ ಖರ್ಚು ಅಧಿಕ ಲಾಭ!

  ಆದರೆ ಔಷಧಿಗಳು ನೀಡುವ ಪರಿಣಾಮದಷ್ಟೇ ಪರಿಣಾಮವನ್ನು ಹಾಗೂ ಅಷ್ಟೇ ಕ್ಷಿಪ್ರವಾಗಿ ಆಹಾರಗಳು ನೀಡಲಾರವು. ನೋವಿಗೆ ಒಂದು ಮಾತ್ರೆ ತಿಂದರೆ ಸಾಕಾದರೆ ಆಹಾರದಲ್ಲಿ ಮಾಡಿಕೊಳ್ಳುವ ಬದಲಾವಣೆ ಕೆಲವಾರು ದಿನಗಳ ಬಳಿಕವೇ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಕೊಂಚ ನಿಧಾನವಾಗಿದೆ ಎಂಬ ಒಂದೇ ಕಾರಣ ಬಿಟ್ಟರೆ ಬೇರೆಲ್ಲಾ ವಿಷಯದಲ್ಲಿ ಈ ಆಹಾರಗಳನ್ನು ನಮ್ಮ ನಿತ್ಯದ ಆಹಾರಗಳಲ್ಲಿ ಅಳವಡಿಸಿಕೊಳ್ಳುವುದೇ ಅತ್ಯುತ್ತಮ ಆಯ್ಕೆಯಾಗಿದೆ. ಬನ್ನಿ, ಈ ನಿಟ್ಟಿನಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುವ ಹಾಗೂ ಔಷಧಿಗಳ ಬದಲಾಗಿ ಕೆಲಸ ನಿರ್ವಹಿಸುವ ಹದಿನಾಲ್ಕು ಆಹಾರಗಳನ್ನು ನೋಡೋಣ...

  ಚೆರ್ರಿ ಹಣ್ಣುಗಳು

  ಚೆರ್ರಿ ಹಣ್ಣುಗಳು

  ಇವುಗಳಲ್ಲಿ ಆಂಥೋಸೈಯಾನಿನ್ ಎಂಬ ಸಂಯುಕ್ತಗಳಿದ್ದು ಇವು ಪ್ರಬಲವಾದ ಆಂಟಿ ಆಕ್ಸಿಡೆಂಟುಗಳಾಗಿವೆ. ವಿಶೇಷವಾಗಿ ಇವು ಜ್ವರವನ್ನು ಕಡಿಮೆಮಾಡಲು ನೆರವಾಗುತ್ತವೆ. ಜ್ವರದಿಂದ ಉಂಟಾಗಿದ್ದ ಉರಿಯೂತವನ್ನು ನಿವಾರಿಸುವ ಮೂಲಕ ನೋವನ್ನು ಮೂಲದಿಂದಲೇ ನಿವಾರಿಸುತ್ತದೆ. ಇದೇ ಕೆಲಸವನ್ನು ಮಾಡಲು ನೋವುನಿವಾರಕ ಆಸ್ಪಿರಿನ್ ಕೆಲವು ನೋವಿನ ಸಂಜ್ಞೆಗಳನ್ನು ತಡೆಹಿಡಿಯುವ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಆದರೆ ನೋವಿನ ಮೂಲ ಹಾಗೇ ಉಳಿಯುತ್ತದೆ. ಆದ್ದರಿಂದ ಜ್ವರವಿದ್ದಾಗ ಚೆರ್ರಿ ಹಣ್ಣುಗಳು ಉತ್ತಮ ಆಯ್ಕೆಯಾಗಿದೆ.

  ಹಸಿ ಶುಂಠಿ

  ಹಸಿ ಶುಂಠಿ

  ಹಸಿಶುಂಠಿ ಒಂದು ಅದ್ಭುತವಾದ ಗಡ್ಡೆಯಾಗಿದ್ದು ಹಲವಾರು ಬಗೆಯ ರೋಗಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ವಿಶೇಷವಾಗಿ ಪ್ರಯಾಣದ ವಾಕರಿಕೆ, ವಾಂತಿ ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ. ಇದರ ಪ್ರಬಲ ಉರಿಯೂತ ನಿವಾರಕ ಗುಣ ಶೀತ ಕೆಮ್ಮು ಮೊದಲಾದ ವೈರಸ್ ಧಾಳಿಯಿಂದ ಎದುರಾದ ಕಾಯಿಲೆಗಳಿಗೆ ಮಾತ್ರವಲ್ಲ, ಸಂಧಿವಾತ, ಪೆಟ್ಟು ಬಿದ್ದ ಭಾಗದಲ್ಲಿ ಆಗಿರುವ ಊತ, ಪೆಡಸಾಗಿರುವುದು ಮೊದಲಾದವುಗಳನ್ನು ಗುಣಪಡಿಸಲೂ ನೆರವಾಗುತ್ತದೆ.

  ಸಾಲ್ಮನ್ ಮೀನು

  ಸಾಲ್ಮನ್ ಮೀನು

  ಒಮೆಗಾ 3 ಕೊಬ್ಬಿನ ಆಮ್ಲ ಹೆಚ್ಚಿರುವ ಆಹಾರಗಳಲ್ಲಿ ಸಾಲ್ಮನ್ ಮೀನು ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ಇದು ವಿಶೇಷವಾಗಿ ಬೆನ್ನು ನೋವಿಗೆ ಅತ್ಯುತ್ತಮವಾದ ಔಷಧಿಯಾಗಿದೆ. ಈ ಮೀನು ರುಚಿಕರ ಮಾತ್ರವಲ್ಲ ಬೆನ್ನುನೋವಿಗ ಸಹಿತ ಸಂಧಿವಾತ, ಕುತ್ತಿಗೆ ನೋವು, ಕೆಳಬೆನ್ನುನೋವುಗಳಿಗೂ ಅತ್ಯುತ್ತಮವಾದ ಔಷಧಿಯಂತೆ ಕೆಲಸ ಮಾಡುತ್ತದೆ.

  ಕ್ರ್ಯಾನ್ಬೆರಿ ರಸ

  ಕ್ರ್ಯಾನ್ಬೆರಿ ರಸ

  ಈ ಹಣ್ಣಿನ ರಸದಲ್ಲಿ ಕರುಳಿನ ಹುಣ್ಣುಗಳನ್ನು ಗುಣಪಡಿಸುವ ಕ್ಷಮತೆ ಇದೆ. ಆದ್ದರಿಂದ ಕರುಳಿನ ಹುಣ್ಣು ಹಾಗೂ ಜಠರದಲ್ಲಿ ಉರಿ ಮೊದಲಾದ ತೊಂದರೆಗಳು ಎದುರಾದರೆ ಮಾತ್ರೆ ತೆಗೆದುಕೊಳ್ಳುವ ಮುನ್ನ ಈ ಹಣ್ಣಿನ ಜ್ಯೂಸ್ ಸೇವಿಸುವುದನ್ನು ಪ್ರಾರಂಭಿಸುವುದೇ ಉತ್ತಮ. ಈ ಜ್ಯೂಸ್ ನಲ್ಲಿರುವ ಉರಿಯೂತ ನಿವಾರಕ ಗುಣ ಉರಿಯುತ್ತಿರುವ ಹೊಟ್ಟೆ ಮತ್ತು ಕರುಳುಗಳ ಒಳಪದರದ ಮೇಲೆ ತೆಳುವಾಗಿ ಔಷಧಿಯಂತೆ ಲೇಪಿಸುವ ಮೂಲಕ ಉರಿಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ ಹಾಗೂ ನಿಯಮಿತವಾಗಿ ಸೇವಿಸುವ ಮೂಲಕ ಕೆಲದಿನಗಳಲ್ಲಿಯೇ ಗುಣಪಡಿಸುತ್ತದೆ.

  ಕಿತ್ತಳೆ ಹಣ್ಣು

  ಕಿತ್ತಳೆ ಹಣ್ಣು

  ನಮ್ಮ ದೇಹದ ಮೇಲೆ ನಿರಂತರವಾಗಿ ಧಾಳಿ ಮಾಡುವ ವೈರಸ್ಸುಗಳಿಂದ ರಕ್ಷಣೆ ನೀಡುವ ರೊಗ ನಿರೋಧಕ ಶಕ್ತಿಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವೆಂದರೆ ವಿಟಮಿನ್ ಸಿ. ಕಿತ್ತಳೆಯಲ್ಲಿ ಈ ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿದೆ. ಅಲ್ಲದೇ ಬೀಟಾ-ಕ್ರಿಪ್ಟೋಕ್ಸಾಂಥಿನ್ ಎಂಬ ಇನ್ನೊಂದು ಪೋಷಕಾಂಶ ಉರಿಯೂತದ ಮೂಲಕ ಎದುರಾಗುವ ಸಂಧಿವಾತ (rheumatoid arthritis) ನಂತಹ ತೊಂದರೆಗಳನ್ನೂ ಗುಣಪಡಿಸುತ್ತದೆ.

  Evening Primrose (ವಸಂತ ಋತುವಿನಲ್ಲಿ ಹೂ ಬಿಡುವ ಒಂದು ಜಾತಿಯ ಹಳದಿ ಹೂವು)

  Evening Primrose (ವಸಂತ ಋತುವಿನಲ್ಲಿ ಹೂ ಬಿಡುವ ಒಂದು ಜಾತಿಯ ಹಳದಿ ಹೂವು)

  ಚರ್ಮವೆಲ್ಲಾ ಕೆಂಪಗಾಗಿ ಚಿಕ್ಕ ಚಿಕ್ಕ ಬೊಕ್ಕೆಗಳು ಮೂಡುವ atopic dermatitis ಎಂಬ ಕಾಯಿಲೆ ಇದ್ದವರಿಗೆ ಈ ಹೂವಿನ ಸೇವನೆ ಅತ್ಯುತ್ತಮವಾಗಿದೆ. ಈ ಹೂವಿನ ಮಕರದಿಂದ ತಯಾರಾದ ತೈಲ ಸಿದ್ಧ ರೂಪದಲ್ಲಿ ಸಿಗುತ್ತದೆ. ಇದರ ಸೇವನೆಯಿಂದ ಮಾಸಿಕ ದಿನಗಳ ಬಳಿಕ ಎದುರಾಗುವ ನೋವುಗಳು ಹಾಗೂ ಉರಿಯೂತದ ಮೂಲಕ ಎದುರಾಗುವ ಸಂಧಿವಾತ (rheumatoid arthritis) ಗಳನ್ನೂ ಕಡಿಮೆ ಮಾಡುತ್ತದೆ. ಈ ಹೂವಿನಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವುದನ್ನು ತಡೆಯುವ ಶಕ್ತಿ ಇರುವ ಕಾರಣ ಕೆಲವಾರು ಹೃದಯ ಹಾಗೂ ನರಸಂಬಂಧಿ ತೊಂದರೆಗಳಿಂದಲೂ ರಕ್ಷಣೆ ಪಡೆದಂತಾಗುತ್ತದೆ.

  ಕಾಫಿ

  ಕಾಫಿ

  ಕೆಲವಾರು ಸಂಶೋಧನೆಗಳಲ್ಲಿ ಕಂಡುಕೊಂಡ ಪ್ರಕಾರ ನೋವಿದ್ದಾಗ ಕೆಫೀನ್ ಸೇವನೆ ಉತ್ತಮ ಪರಿಹಾರ ಒದಗಿಸುತ್ತದೆ. ವಿಶೇಷವಾಗಿ ವ್ಯಾಯಾಮವನ್ನು ಈಗತಾನೇ ಪ್ರಾರಂಭಿಸಿರುವವರಲ್ಲಿ ಎದುರಾಗುವ ಮೈ ಕೈ ನೋವು, ಸ್ನಾಯುಗಳು ತುಂಡಾಗಿರುವುದು ಮೊದಲಾದ ತೊಂದರೆಗಳಿಗೆ ಕಾಫಿ ಸೇವನೆಯಿಂದ ಉತ್ತಮ ಪರಿಹಾರ ಪಡೆಯಬಹುದು. ಆದರೆ ಕಾಫಿಯನ್ನು ಸಂಜೆಯ ನಂತರ ಸೇವಿಸಬಾರದು.

  ಲವಂಗ

  ಲವಂಗ

  ಹಲ್ಲುನೋವಿದ್ದರೆ ಲವಂಗದ ಎಣ್ಣೆಯನ್ನು ತಕ್ಷಣ ಹಚ್ಚಿಕೊಳ್ಳುವ ಮೂಲಕ ದಂತವೈದ್ಯರಲ್ಲಿ ಹೋಗಬೇಕಾದ ಹೆದರಿಕೆಯನ್ನು ತಳ್ಳಿ ಹಾಕಬಹುದು. ಉತ್ತಮವೆಂದರೆ ನೋವಿರುವ ಹಲ್ಲುಗಳಲ್ಲಿ ಲವಂಗವೊಂದನ್ನು ಜಗಿದು ರಸ ಇಳಿಯುವಂತೆ ಮಾಡುವುದು. ಇದರಿಂದ ಕನಿಷ್ಠ ಎರಡು ಗಂಟೆಗಳವರೆಗಾದರೂ ನೋವು ಇಲ್ಲವಾಗುತದೆ. ಇದರಲ್ಲಿರುವ ಅರಿವಳಿಕೆ ಗುಣ ಹಲ್ಲುಗಳ ಬೇರುಗಳ ಸೋಂಕನ್ನು ನಿವಾರಿಸಿ ನೋವಿನಿಂದ ಶಮನ ಒದಗಿಸುತ್ತದೆ.

  ಅರಿಶಿನ

  ಅರಿಶಿನ

  ಅರಿಶಿನ ಒಂದು ಅದ್ಭುತವಾವ ಸಾಂಬಾರ ಪದಾರ್ಥವಾಗಿದ್ದು ಕೆಲವಾರು ನೋವುಗಳಿಗೆ ಔಷಧಿಯೂ ಆಗಿದೆ ಹಾಗೂ ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ. ಇದರಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ದೇಹದ ಅಂಗಾಂಶಗಳ ನಷ್ಟತೆಯನ್ನು ತಡೆಯುವ ಮೂಲಕ ಆರೋಗ್ಯ ವೃದ್ಧಿಸುತ್ತದೆ ಹಾಗೂ ವಿಶೇಷವಾಗಿ ಸಂಧಿವಾತವನ್ನು ಗುಣಪಡಿಸಲು ನೆರವಾಗುತ್ತದೆ.

  ಸೇಬಿನ ಶಿರ್ಕಾ (Apple Cider Vinegar)

  ಸೇಬಿನ ಶಿರ್ಕಾ (Apple Cider Vinegar)

  ಒಂದು ವೇಳೆ ನಿಮಗೆ ಆಗಾಗ ಎದೆಯುರಿ ಅಥವಾ ಹುಳಿತೇಗು ಎದುರಾಗುತ್ತಿದ್ದರೆ ಈ ಬಾರಿ ಸೇಬಿನ ಶಿರ್ಕಾವನ್ನು ಪ್ರಯತ್ನಿಸಿ. ಇದರಲ್ಲಿರುವ ಟಾರ್ಟಾರಿಕ್ ಆಮ್ಲ ಹಾಗೂ ಜೀರ್ಣಕ್ರಿಯೆಗೆ ಸಹಕರಿಸುವ ಕೆಲವಾರು ಪೋಷಕಾಂಶಗಳು ಆಹಾರದಲ್ಲಿರುವ ಕೊಬ್ಬು ಮತ್ತು ಪ್ರೋಟೀನುಗಳನ್ನು ತ್ವರಿತವಾಗಿ ಒಡೆದು ಜೀರ್ಣಿಸಿ ಮುಂದೆ ಸಾಗಹಾಕುವ ಮೂಲಕ ಹೊಟ್ಟೆಯಲ್ಲಿ ಎದುರಾಗಿದ್ದ ಅಮ್ಲೀಯತೆಯನ್ನು ನಿವಾರಿಸಲು ನೆರವಾಗುತ್ತದೆ.

  ಮೊಸರು

  ಮೊಸರು

  ಇದೊಂದು ನೈಸರ್ಗಿಕ ನೋವು ನಿವಾರಕವಾಗಿದ್ದು ವಿಶೇಷವಾಗಿ ಮಾಸಿಕ ದಿನಗಳ ಮುನ್ನಾ ಅವಧಿಯಲ್ಲಿ ಎದುರಾಗುವ ತೊಂದರೆಗಳನ್ನು ನಿವಾರಿಸಲು ನೆರವಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು ಮೂಳೆಗಳು ದೃಢವಾಗಲು ನೆರವಾಗುವ ಜೊತೆಗೇ ರಸದೂತಗಳ ಪರಿಣಾಮದಿಂದ ಎದುರಾಗುವ ನರ ವ್ಯವಸ್ಥೆಯಲ್ಲಿ ನೋವು ಉಂಟಾಗುವ ಸಂವೇದನೆಗಳನ್ನು ಶಾಂತಗೊಳಿಸಿ ಈ ಮೂಲಕ ನೋವನ್ನೂ ಕಡಿಮೆ ಮಾಡುತ್ತದೆ.

  ಓಟ್ಸ್

  ಓಟ್ಸ್

  ನಿತ್ಯವೂ ಒಂದು ಬಟ್ಟಲಿನಷ್ಟು ಓಟ್ಸ್ ಅನ್ನು ಸೇವಿಸುವ ಮೂಲಕ ಕೆಲವು ಮಹಿಳೆಯರಿಗೆ ಮಾಸಿಕ ದಿನಗಳಿಗೂ ಮುನ್ನ ಎದುರಾಗುವ endometriosis pain ಎಂಬ ನೋವಿನಿಂದ ಪರಿಹಾರ ದೊರಕುತ್ತದೆ. ಈ ತೊಂದರೆಯಲ್ಲಿ ಗರ್ಭಾಶಯದ ಒಳಪದರದ ಕೆಲವು ಅಂಶಗಳು ಅಲ್ಲಿಂದ ಕಳಚಿಕೊಂಡು ಗರ್ಭಾಶಯದ ಹೊರಭಾಗದ ಅಂಗಗಳಿಗೆ ಅಂಟಿಕೊಂಡಿರುತ್ತವೆ. ಇದನ್ನು ನಿವಾರಿಸಲು ದೇಹ ಹೆಚ್ಚಿನ ಸ್ರಾವದ ಮೊರೆ ಹೋಗುತ್ತದೆ. ಪರಿಣಾಮವಾಗಿ ಈ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ಓಟ್ಸ್ ಈ ತೊಂದರೆಯನ್ನು ನಿವಾರಿಸಿ ನೋವಿನಿಂದ ಸಾಕಷ್ಟು ಮಟ್ಟಿಗೆ ಪರಿಹಾರ ಒದಗಿಸುತ್ತದೆ.

  ಅನಾನಾಸು

  ಅನಾನಾಸು

  ಒಂದು ವೇಳೆ ವಾಯುಪ್ರಕೋಪದಿಂದ ಹೊಟ್ಟೆಯುಬ್ಬರಿಕೆ ಹಾಗೂ ಹೊಟ್ಟೆಯಲ್ಲಿ ನೋವು ಎದುರಾಗಿದ್ದರೆ ನಿತ್ಯವೂ ಕೊಂಚ ಅನಾನಾಸು ಹಣ್ಣಿನ ತುಂಡುಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಲ್ಲಿರುವ ಪ್ರೋಟೀನುಗಳನ್ನು ಚಿಕ್ಕದಾಗಿ ಒಡೆಯುವ ಕಿಣ್ವಗಳು(proteolytic enzymes) ಹಾಗೂ ಜೀರ್ಣಕ್ರಿಯೆಗೆ ನೆರವಾಗುವ ಪೋಷಕಾಂಶಗಳು ವಾಯುಪ್ರಕೋಪದ ಮೂಲವನ್ನು ಇಲ್ಲವಾಗಿಸುವ ಮೂಲಕ ಇವುಗಳಿಂದ ಎದುರಾಗುವ ಪರಿಣಾಮಗಳನ್ನೂ ಇಲ್ಲವಾಗಿಸುತ್ತವೆ.

  ದ್ರಾಕ್ಷಿ

  ದ್ರಾಕ್ಷಿ

  ಒಂದು ವೇಳೆ ಬೆನ್ನುನೋವು ಸತತವಾಗಿದ್ದರೆ ದ್ರಾಕ್ಷಿ ಹಣ್ಣುಗಳನ್ನು ತಿನ್ನುವುದರಿಂದ ಉತ್ತಮ ಪರಿಹಾರ ದೊರಕುತ್ತದೆ. ಈ ಹಣ್ಣುಗಳ ಸೇವನೆಯಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ವಿಶೇಷವಾಗಿ ಬೆನ್ನುನೋವಿಗೆ ಮೂಲವಾಗಿರುವ ಘಾಸಿಗೊಂಡ ಬೆನ್ನಿನ ಸ್ನಾಯುಗಳು ಮತ್ತೆ ಮೊದಲಿನ ಆರೋಗ್ಯ ಪಡೆಯಲು ನೆರವಾಗುತ್ತದೆ.

  English summary

  14 Foods That Are Natural Painkillers For Pain Relief

  There are certain foods that ease aches by fighting inflammation, blocking pain signals and even healing an underlying disease. You will find those foods right in your kitchen and you do not need to waste your money behind buying a huge stack of medicines. Stay committed to a good nutrition plan by including these 14 foods that are natural painkillers, which will heal you instantly.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more