ದೇಹದಲ್ಲಿ ರಕ್ತ ವೇಗವಾಗಿ ಹೆಚ್ಚಿಸಲು ಸೇವಿಸಬೇಕಾದ ಆಹಾರಗಳು

Posted By: Lekhaka
Subscribe to Boldsky

ಮಾನವನ ದೇಹವು ಮೂಳೆ ಹಾಗೂ ಮಾಂಸದ ಹೊದಿಕೆ ಎನ್ನುತ್ತೇವೆ. ಅದು ನಿಜವೆನ್ನಬಹುದಾದರೂ ಈ ಭಾಗಗಳಿಗೆ ಬೇಕಾಗಿರುವ ಆಮ್ಲಜನಕ ಮತ್ತು ಪೋಷಕಾಂಶವನ್ನು ಸರಬರಾಜು ಮಾಡುವಂತಹ ಮಹತ್ವದ ಕಾರ್ಯ ನಿರ್ವಹಿಸುವುದು ರಕ್ತ. ದೇಹದ ಪ್ರತಿಯೊಂದು ಭಾಗಕ್ಕೂ ರಕ್ತಸಂಚಾರವಾಗಲೇಬೇಕು. ಇಲ್ಲವೆಂದಾದರೆ ದೇಹವು ಸರಿಯಾಗಿ ಕಾರ್ಯನಿರ್ವಹಿಸದೆ ಏನಾದರೊಂದು ಕಾಯಿಲೆಗಳು ಬರುವುದು. ರಕ್ತದಲ್ಲಿ ಕೆಂಪುರಕ್ತಕಣ, ಬಿಳಿರಕ್ತಕಣ ಮತ್ತು ಕಿರುಬಿಲ್ಲೆಗಳಿರುವುದು. ಕೆಂಪು ರಕ್ತದ ಕಣದಲ್ಲಿ ಕಬ್ಬಿಣವೆಂಬ ಖನಿಜಾಂಶವಿದೆ. ಇದನ್ನು ವೈದ್ಯಕೀಯ ವಿಜ್ಞಾನದ್ಲಲಿ ಹಿಮೋಗ್ಲೋಬಿನ್ ಎಂದು ಕರೆಯಲಾಗುತ್ತದೆ.

ಹಿಮೋಗ್ಲೋಬಿನ್‌ನ ಪ್ರಮುಖ ಕೆಲಸವೆಂದರೆ ಹೃದಯದಿಂ ಆಮ್ಲಜನಕವನ್ನು ದೇಹದ ಇತರ ಎಲ್ಲಾ ಭಾಗಗಳಿಗೆ ಸರಬರಾಜು ಮಾಡುವುದು. ದೇಹದ ಕೋಶಗಳಿಗೆ ಕಾರ್ಬನ್ ಡೈಯಾಕ್ಸೈಡ್ ಅನ್ನು ತೆಗೆದುಕೊಳ್ಳುವ ಹಿಮೋಗ್ಲೋಬಿನ್ ಇದನ್ನು ಶ್ವಾಸಕೋಶಕ್ಕೆ ಕೊಂಡುಹೋಗಿ ಅದನ್ನು ಹೊರಹಾಕುವುದು. ಹಿಮೋಗ್ಲೋಬಿನ್ ಅಂಶವು ರಕ್ತದಲ್ಲಿ ಕಡಿಮೆಯಾದಾಗ ದೇಹದ ಎಲ್ಲಾ ಭಾಗಗಳಿಗೆ ಸರಿಯಾಗಿ ಆಮ್ಲಜನಕದ ಸರಬರಾಜು ಆಗದೆ ದೇಹವು ಕೃಶವಾಗುವುದು.

ಯಾವ್ಯಾವ ಜನರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿದೆ?

ಹಿಮೋಗ್ಲೋಬಿನ್ ಅಂಶವು ತುಂಬಾ ಕಡಿಮೆ ಇರುವಾಗ ದೇಹದ ಕೋಶಗಳು ಕಾರ್ಯನಿರ್ವಹಿಸದೆ ಇರುವ ಕಾರಣ ದೇಹದಲ್ಲಿ ನಿಶ್ಯಕ್ತಿ ಕಾಣಿಸಿಕೊಳ್ಳಬಹುದು. ರಕ್ತಹೀನತೆಯಿಂದ ಬಳಲುತ್ತಾ ಇರುವಂತಹ ಜನರು ಕೆಲವೊಂದು ಆಹಾರಗಳನ್ನು ಸೇವನೆ ಮಾಡಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿಕೊಳ್ಳುವುದು ಅತೀ ಅಗತ್ಯ. ರಕ್ತಹೀನತೆಯನ್ನು ಅತೀ ವೇಗವಾಗಿ ಸರಿದೂಗಿಸುವಂತಹ ಹತ್ತು ಆಹಾರಗಳನ್ನು ಈ ಲೇಖನದಲ್ಲಿ ನಿಮ್ಮ ಮುಂದಿಡಲಾಗಿದೆ. ರಕ್ತಹೀನತೆ ಸಮಸ್ಯೆ ಇರುವವರು ಇದರ ಸೇವನೆ ಮಾಡಿಕೊಂಡು ಆರೋಗ್ಯ ಕಾಪಾಡಿ....

ಮಾಂಸ

ಮಾಂಸ

ದೇಹದಲ್ಲಿ ಹಿಮೋಗ್ಲೋಬಿನ್ ಅಂಶವು ಹೆಚ್ಚಾಗಬೇಕಾದರೆ ಅದಕ್ಕೆ ಪ್ರಾಣಿಗಳ ಪ್ರೋಟೀನ್ ಅಗತ್ಯವಾಗಿ ಬೇಕೇಬೇಕು. ಬೀಫ್, ಮಾಂಸ ಮತ್ತು ಪ್ರಾಣಿಗಳ ಯಕೃತ್ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚು ಮಾಡುವಂತಹ ಪ್ರಮುಖ ಆಹಾರವಾಗಿದೆ. ಕೋಳಿಯನ್ನು ನೇರಮಾಂಸವೆಂದು ಕರೆಯಲಾಗುವುದು. ಆದರೆ ನಿಯಮಿತವಾಗಿ ಇದರ ಸೇವನೆ ಮಾಡಿದರೆ ದೇಹಕ್ಕೆ ಬೇಕಾಗಿರುವ ಹೆಚ್ಚಿನ ಪ್ರಮಾಣದ ಕಬ್ಬಿನಾಂಶವು ಸಿಗುವುದು.

ಹಣ್ಣುಗಳು

ಹಣ್ಣುಗಳು

ರಸಭರಿತವಾಗಿರುವಂತಹ ಮಾವು, ಲಿಂಬೆ ಮತ್ತು ಕಿತ್ತಳೆಯಲ್ಲಿ ವಿಟಮಿನ್ ಸಿ ಅಂಶವು ಸಮೃದ್ಧವಾಗಿದೆ. ಇದು ದೇಹದ ಕೋಶಗಳು ವೇಗವಾಗಿ ಕಬ್ಬಿನಾಂಶವನ್ನು ಹೀರಿಕೊಳ್ಳಲು ನೆರವಾಗುವುದು ಮತ್ತು ಇದರಿಂದ ಹಿಮೋಗ್ಲೋಬಿನ್ ವೃದ್ಧಿಸುವುದು. ಸ್ಟ್ರಾಬೆರಿ, ಸೇಬು, ಕಲ್ಲಂಗಡಿ, ಸೀಬೆಹಣ್ಣು ಮತ್ತು ದಾಳಿಂಬೆ ಹಣ್ಣಿನಲ್ಲಿ ಕಬ್ಬಿನಾಂಶವು ಅಧಿಕವಾಗಿದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು.

ಸಮುದ್ರದ ಆಹಾರ

ಸಮುದ್ರದ ಆಹಾರ

ವಿವಿಧ ರೀತಿಯ ಸಮುದ್ರದ ಆಹಾರಗಳಲ್ಲಿ ಕಬ್ಬಿನಾಂಶ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಹಿಮೋಗ್ಲೋಬಿನ್ ಬೆಳವಣಿಗೆ ಅತೀ ಅಗತ್ಯವಾಗಿರುವುದು. ಸಿಂಪಿ ಮತ್ತು ಇನ್ನಿತರ ಕೆಲವು ಆರೋಗ್ಯಕರ ಸಮುದ್ರದ ಆಹಾರಗಳ ಸೇವನೆ ಮಾಡಿದರೆ ಅದರಿಂದ ರಕ್ತಹೀನತೆಯು ಕಡಿಮೆಯಾಗುವುದು. ಇದು ದೇಹದಲ್ಲಿ ವೇಗವಾಗಿ ರಕ್ತವನ್ನು ಹೆಚ್ಚು ಮಾಡುವುದು.

 ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳಲ್ಲಿ ಕಬ್ಬಿನಾಂಶವು ಸಮೃದ್ಧವಾಗಿದೆ ಎನ್ನಲಾಗಿದೆ. ಅದರಲ್ಲೂ ಸೋಯಾಬಿನ್, ಕಡಲೆ ಮತ್ತು ಬೀನ್ಸ್ ಅನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಕೊರತೆಯನ್ನು ನೀಗಿಸಬಹುದು. ಸೋಯಾಬೀನ್ ನ್ನು ಇಂದಿನ ದಿನಗಳಲ್ಲಿ ಆರೋಗ್ಯಕಾರಿ ಆಹಾರವೆಂದು ಪರಿಗಣಿಸಲಾಗಿದೆ ಮತ್ತು ಇದು ವೇಗವಾಗಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುವುದು.

ಇಡೀ ಧಾನ್ಯಗಳು

ಇಡೀ ಧಾನ್ಯಗಳು

ಇಡೀ ಧಾನ್ಯಗಳು ತುಂಬಾ ಆರೋಗ್ಯಕಾರಿ ಮತ್ತು ಈ ಧಾನ್ಯಗಳಲ್ಲಿ ಕಬ್ಬಿನಾಂಶವು ಅಧಿಕವಾಗಿದೆ ಎನ್ನುವುದು ತಿಳಿದಿರುವ ಸಂಗತಿಯಾಗಿದೆ. ಅಕ್ಕಿ, ಗೋಧಿ, ಬಾರ್ಲಿ ಮತ್ತು ಓಟ್ಸ್ ರಕ್ತಹೀನತೆ ಇರುವವರಿಗೆ ತುಂಬಾ ಪರಿಣಾಮಕಾರಿ ಆಹಾರ. ಇದು ದೇಹಕ್ಕೆ ಅಗತ್ಯವಿರುವ ಕಾರ್ಬ್ರೋಹೈಡ್ರೇಟ್ಸ್ ನ್ನು ದೇಹಕ್ಕೆ ಒದಗಿಸುವುದು. ಕಂದು ಅಕ್ಕಿಯಲ್ಲಿ ಕಬ್ಬಿನಾಂಶವು ಉತ್ತಮ ಪ್ರಮಾಣದಲ್ಲಿದೆ. ಇದು ಎಲ್ಲಾ ವಯಸ್ಸಿನವರಿಗೆ ಒಳ್ಳೆಯದು.

 ತಾಜಾ ತರಕಾರಿಗಳು

ತಾಜಾ ತರಕಾರಿಗಳು

ಕಬ್ಬಿನಾಂಶ, ವಿಟಮಿನ್ ಮತ್ತು ಇತರ ಕೆಲವೊಂದು ಖನಿಜಾಂಶಗಳು ದೇಹಕ್ಕೆ ಸಿಗಬೇಕೆಂದರೆ ನಿಯಮತವಾಗಿ ತರಕಾರಿಗಳ ಸೇವನೆ ಮಾಡಬೇಕು. ಆಲೂಗಡ್ಡೆ, ಬ್ರೋಕೋಲಿ, ಟೊಮೆಟೋ, ಕುಂಬಳಕಾಯಿ ಮತ್ತು ಬೀಟ್ ರೂಟ್ ದೇಹದಲ್ಲಿ ಕಬ್ಬಿನಾಂಶದ ಕೊರತೆ ನೀಗಿಸುವಂತಹ ತರಕಾರಿಗಳು. ಬಸಳೆ ಮತ್ತು ಇತರ ಕೆಲವು ಹಸಿರೆಳೆ ತರಕಾರಿಗಳನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಕಬ್ಬಿನಾಂಶವು ದೇಹಕ್ಕೆ ಲಭ್ಯವಾಗುವುದು.

ಮೊಟ್ಟೆಗಳು

ಮೊಟ್ಟೆಗಳು

ಉನ್ನತ ಮಟ್ಟದ ಕಬ್ಬಿನಾಂಶ ಮತ್ತು ಪೋಷಕಾಂಶಗಳು ಇರುವಂತಹ ಮತ್ತೊಂದು ಆಹಾರವೆಂದರೆ ಅದು ಮೊಟ್ಟೆ. ಮೊಟ್ಟೆಯ ಹಳದಿ ಭಾಗದಲ್ಲಿ ಖನಿಜಾಂಶಗಳು ಮತ್ತು ವಿಟಮಿನ್ ಸಮೃದ್ಧವಾಗಿದೆ. ತುಂಬಾ ನಿಶ್ಯಕ್ತಿಯಿಂದ ಬಳಲುತ್ತಿರುವವರು ದಿನಕ್ಕೊಂದು ಮೊಟ್ಟೆ ಸೇವನೆ ಮಾಡಿದರೆ ಒಳ್ಳೆಯದು.

ಒಣ ಹಣ್ಣುಗಳು

ಒಣ ಹಣ್ಣುಗಳು

ದ್ರಾಕ್ಷಿ, ಅಂಜೂರ ಮತ್ತು ಖರ್ಜೂರದಲ್ಲಿ ಕಬ್ಬಿನಾಂಶ, ವಿಟಮಿನ್ ಮತ್ತು ನಾರಿನಾಂಶವು ಅಧಿಕ ಮಟ್ಟದಲ್ಲಿದೆ. ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಲು ದಿನಿನಿತ್ಯವು ಈ ಹಣ್ಣುಗಳ ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

ಬೀಜಗಳು

ಬೀಜಗಳು

ಎಲ್ಲಾ ರೀತಿಯ ಬೀಜಗಳ ಸೇವನೆ ಮಾಡುವುದು ಮಾನವ ದೇಹಕ್ಕೆ ತುಂಬಾ ಆರೋಗ್ಯಕಾರಿ ಎಂದು ನಂಬಲಾಗಿದೆ. ಯುವ ಜನರು ಬಾದಾಮಿ, ಗೋಡಂಬಿ, ಕಡಲೆಬೀಜ ಮತ್ತು ಆಕ್ರೋಟ್ ಸೇವನೆ ನಿಯಮಿತವಾಗಿ ಮಾಡಿದರೆ ದೇಹಕ್ಕೆ ಬೇಕಾಗುವ ಕಬ್ಬಿನಾಂಶವು ಸಿಗುವುದು.

ಕಡು ಚಾಕಲೇಟ್

ಕಡು ಚಾಕಲೇಟ್

ಚಾಕಲೇಟ್ ಹೆಚ್ಚಿನವರಿಗೆ ತುಂಬಾ ಪ್ರಿಯವಾಗಿರುವ ವಸ್ತು. ಅದರಲ್ಲೂ ಮಕ್ಕಳಿಗೆ ಇದು ತುಂಬಾ ಇಷ್ಟ. ಇದರಿಂದ ರಕ್ತಹೀನತೆ ಇರುವಂತಹವರು ಕಡು ಚಾಕಲೇಟ್ ತಿಂದರೆ ಅದರಿಂದ ದೇಹಕ್ಕೆ ಬೇಕಾಗಿರುವಂತಹ ಕಬ್ಬಿನಾಂಶವು ಲಭ್ಯವಾಗುವುದು. ಮೇಲೇ ಹೇಳಿರುವಂತಹ ಆಹಾರಗಳು ದೇಹದಲ್ಲಿ ಕಬ್ಬಿನಾಂಶದ ಕೊರತೆ ನೀಗಿಸಿ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗುವಂತೆ ಮಾಡುವುದು. ಈ ಆಹಾರಗಳನ್ನು ಸೇವಿಸಿ ನಿಮ್ಮ ದೇಹದಲ್ಲಿ ರಕ್ತದ ಮಟ್ಟ, ಶಕ್ತಿ ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಳ ಮಾಡಿ.

English summary

10 Foods That Increases Blood In Body Quickly

Blood is one of the essential components of the human body that is responsible for carrying oxygen and all nutrients to all parts of the body. Hence, it is not possible for a person to survive with low blood content in the body system. The blood is composed of red blood corpuscles, white blood corpuscles, and platelets. Red blood cells are composed of a certain chemical compound of iron, which is medically termed as hemoglobin. The sole function of hemoglobin is to carry oxygen from the heart to all other organs of the body. So, here you go 10 foods that increase blood level at faster pace.
Please Wait while comments are loading...
Subscribe Newsletter