ಎಲೆ ಕೋಸಿನ ನೀರನ್ನು ಕುಡಿದರೆ ನಿಮ್ಮೆಲ್ಲಾ ತೊಂದರೆಗಳು ಮಾಯವಾಗುವುದು

Posted By: Divya Pandith
Subscribe to Boldsky

ಎಲೆ ಕೋಸು ಎಂದರೆ ಸಾಮಾನ್ಯವಾಗಿ ಅನೇಕರು ಅಷ್ಟು ಇಷ್ಟ ಪಡುವುದಿಲ್ಲ. ಮೂಗು ಮುರಿಯುವ ತರಕಾರಿಗಳ ಸಾಲಿನಲ್ಲಿ ಎಲೆಕೂಸನ್ನು ಇಟ್ಟಿರುತ್ತಾರೆ. ಇದರಿಂದ ಕೆಲವು ಸೀಮಿತ ಅಡುಗೆಯನ್ನು ತಯಾರಿಸಬಹುದಾದ್ದರಿಂದ ಇದರ ಬಳಕೆಯನ್ನು ಬಹುತೇಕ ಜನರು ಮಾಡುವುದಿಲ್ಲ. ಕೆಲವರು ಇದರ ಪರಿಮಳವನ್ನು ಇಷ್ಟ ಪಡುವುದಿಲ್ಲ. ಎಲೆ ಕೋಸಿನಿಂದ ಪಲ್ಯ, ಸಾಂಬಾರ್, ಕೋಸಂಬರಿ ಹಾಗೂ ಸ್ನ್ಯಾಕ್ ತಯಾರಿಗೆ, ಅಲಂಕಾರಕ್ಕೆ, ಮಂಚೂರಿ, ಬರ್ಗರ್ಗಳಂತಹ ತಿಂಡಿಗಳಿಗೆ ಇದರ ಬಳಕೆಯನ್ನು ಮಾಡುತ್ತಾರೆ. ಆದರೆ ಎಲೆ ಕೋಸಿನ ರಸವನ್ನು ತೆಗೆದು ಸೇವಿಸುವ ಪದ್ಧತಿ ಅನೇಕರಿಗೆ ತಿಳಿದಿಲ್ಲ. ಎಲೆ ಕೋಸಿನ ನೀರು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು ಎನ್ನಲಾಗುತ್ತದೆ.

ಎಲೆಕೋಸಿನಲ್ಲಿ ಅತ್ಯುತ್ತಮವಾದ ಉತ್ಕರ್ಷಣ ನಿರೋಧಕ ಶಕ್ತಿಯಿದೆ. ಇದರಲ್ಲಿರುವ ಪಾಲಿಫಿನಾಲ್ ಗಳು ಅತ್ಯುತ್ತಮ ಉತ್ಕರ್ಷಣ ನಿರೋಧಕಗಳು ಎನ್ನಲಾಗುತ್ತದೆ. ಇದು ಜೀವಕೋಶಗಳನ್ನು ಅತ್ಯುತ್ತಮವಾಗಿ ಆರೈಕೆ ಮಾಡುವುದು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ಇತರ ಖನಿಜಗಳಾದ ಪೊಟ್ಯಾಸಿಮ್, ಮೆಗ್ನಿಸಿಯಮ್, ಕ್ಯಾಲ್ಸಿಯಮ್ಗಳನ್ನು ಒಳಗೊಂಡಿದೆ. ಎಲೆಕೋಸಿನ ನೀರನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅವುಗಳ ಪರಿಚಯವನ್ನು ನೀವು ಮಾಡಿಕೊಳ್ಳಬೇಕು ಎನ್ನುವ ಹವಣಿಕೆಯಲ್ಲಿದ್ದರೆ ಲೇಖನದ ಮುಂದಿನ ಭಾಗದಲ್ಲಿರುವ ವಿವರಣೆಯನ್ನು ಪರಿಶೀಲಿಸಿ...

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಎಲೆಕೋಸಿನಲ್ಲಿ ದೇಹಕ್ಕೆ ತಂಪು ನೀಡುವ ಗುಣ ಹಾಗೂ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಸಾಮರ್ಥ್ಯ ಇರುವುದನ್ನು ಕಾಣಬಹುದು. ನಿತ್ಯ ಒಂದು ಗ್ಲಾಸ್ ಎಲೆಕೋಸಿನ ರಸವನ್ನು ಸೇವಿಸುವುದರಿಂದ ದೇಹದಲ್ಲಿರುವ ರೋಗಕಾರಕ ಅಂಶಗಳ ವಿರುದ್ಧ ಹೋರಾಡಲು ಮತ್ತು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ದೃಷ್ಟಿಯ ಆರೋಗ್ಯ ಕಾಪಾಡುತ್ತದೆ

ದೃಷ್ಟಿಯ ಆರೋಗ್ಯ ಕಾಪಾಡುತ್ತದೆ

ಎಲೆಕೋಸು ಬೀಟಾ-ಕ್ಯಾರೋಟಿನ್ ಅನ್ನು ಒಳಗೊಂಡಿರುತ್ತದೆ. ಇದು ನಮ್ಮ ದೃಷ್ಟಿಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವುದು. ಎಲೆಕೋಸಿನ ನೀರನ್ನು ನಿತ್ಯವೂ ಸೇವಿಸುವುದರಿಂದ ಮೆಕ್ಯುಲಾರ್ ಡಿಜೆನೆರೇಶನ್ಅನ್ನು ಸುಧಾರಿಸುತ್ತದೆ. ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡುವುದು.

ಚರ್ಮಕ್ಕೂ ಒಳ್ಳೆಯದ್ದು

ಚರ್ಮಕ್ಕೂ ಒಳ್ಳೆಯದ್ದು

ನಿಯಮಿತವಾಗಿ ಎಲೆಕೋಸಿನ ನೀರನ್ನು ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಉತ್ತಮ ಮಟ್ಟದಲ್ಲಿ ಇರುವಂತೆ ಕಾಪಾಡಬಹುದು ಎಂದು ಹೇಳಲಾಗುತ್ತದೆ. ಇದರಲ್ಲಿ ಅಗತ್ಯವಾದ ಫೈಟೊಕೆಮಿಕಲ್ಸ್ ಮತ್ತು ಆಂಟಿ ಆಕ್ಸಿಡೆಂಟ್ಗಳ ಉಪಸ್ಥಿತಿಯಿರುತ್ತದೆ. ಆ ಕಾರಣದಿಂದ ಚರ್ಮದ ಕ್ಯಾನ್ಸರ್ಗಳ ಬೆಳವಣಿಗೆಗೆಕಾರಣವಾಗುವ ಅಂಶವನ್ನು ತಡೆಗಟ್ಟುತ್ತದೆ.

ಮೂಳೆಗಳಿಗೆ ಉತ್ತಮ

ಮೂಳೆಗಳಿಗೆ ಉತ್ತಮ

ಎಲೆಕೋಸು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಮೂಳೆಗಳನ್ನು ಕ್ಷೀಣಿಸುವುದು ಮತ್ತು ದುರ್ಬಲಗೊಳ್ಳುವುದನ್ನು ತಡೆಯುವಲ್ಲಿ ಈ ಎಲ್ಲಾ ಸಂಯೋಜನೆಗಳು ಒಟ್ಟಾಗಿ ಸಹಾಯ ಮಾಡುತ್ತವೆ. ಹಾಗಾಗಿ ನಿತ್ಯ ಒಂದು ಗ್ಲಾಸ್ ಎಲೆಕೋಸಿನ ನೀರು ಕುಡಿಯುವುದು ಉತ್ತಮ.

ಆಲ್ಕೋಹಾಲ್ ನಿರ್ವಿಶೀಕರಣ

ಆಲ್ಕೋಹಾಲ್ ನಿರ್ವಿಶೀಕರಣ

ನೀವು ಹೆಚ್ಚಿನ ಆಲ್ಕೊಹಾಲ್ ಸೇವಿಸಿದಾಗ, ಮರುದಿನ ಬೆಳಗ್ಗೆ ಒಂದು ಗ್ಲಾಸ್ ಎಲೆಕೋಸಿನ ನೀರನ್ನು ಕುಡಿಯಿರಿ. ಶ್ರೀಮಂತ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳ ಕಾರಣದಿಂದಾಗಿ, ಎಲೆಕೋಸಿನ ನೀರು ಹೊಟ್ಟೆ ಮತ್ತು ಯಕೃತ್ತನ್ನು ನಿರ್ವಿಷಗೊಳಿಸುವಲ್ಲಿ ಸಹಾಯ ಮಾಡುತ್ತದೆ.

 ಹೊಟ್ಟೆ ಹುಣ್ಣು

ಹೊಟ್ಟೆ ಹುಣ್ಣು

ಎಲೆಕೋಸು ಫೈಟೊನ್ಯೂಟ್ರಿಯಂಟ್ ಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ನೀವು ನಿಯಮಿತವಾಗಿ ಒಂದು ಗ್ಲಾಸ್ ಎಲೆಕೋಸಿನ ನೀರನ್ನು ಕುಡಿದರೆ ಆಸಿಡ್ ದಾಳಿಗೆ ಹೊಟ್ಟೆ ಲೈನಿಂಗ್ ಪ್ರತಿರೋಧವನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ. ಇದು ಹೊಟ್ಟೆ ಹುಣ್ಣು ಪರಿಣಾಮಕಾರಿಯಾಗಿ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ.

ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸುತ್ತದೆ

ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸುತ್ತದೆ

ಎಲೆಕೋಸು ತನ್ನ ಶ್ರೀಮಂತ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಎಲೆಕೋಸು ಅಥವಾ ಎಲೆಕೋಸು ನೀರು ಸೇವಿಸುವುದರಿಂದ ತೀವ್ರವಾದ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ರಕ್ತವನ್ನು ಶುದ್ಧಗೊಳಿಸಲು ಸಹಾಯ ಮಾಡುತ್ತದೆ

ರಕ್ತವನ್ನು ಶುದ್ಧಗೊಳಿಸಲು ಸಹಾಯ ಮಾಡುತ್ತದೆ

ಎಲೆಕೋಸು ತನ್ನ ಶ್ರೀಮಂತ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ರಕ್ತವನ್ನು ನಿರ್ವಿಷಗೊಳಿಸಲು ಮತ್ತು ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ

ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ

ಎಲೆಕೋಸು ನೀರು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಎಲೆಕೋಸು ದೇಹಕ್ಕೆ ಅಗತ್ಯವಿರುವ ಎಲ್ಲಾ ಅಗತ್ಯ ಪೋಷಕಾಂಶಗಳಲ್ಲೂ ಸಮೃದ್ಧವಾಗಿ ನೀಡುತ್ತದೆ. ಯಾವುದೇ ಹೆಚ್ಚುವರಿ ಕೊಬ್ಬು ಅಥವಾ ಕ್ಯಾಲೊರಿಗಳನ್ನು ಹೊಂದಿರುವುದಿಲ್ಲ. ತೂಕ ನಷ್ಟದಲ್ಲಿ ಟಾಕ್ಸಿಕ್ಯಾಂಟ್ ಗಳ ನಿರ್ವಿಷಗೊಳಿಸುವಲ್ಲಿ ಇದು ಸಹಾಯ ಮಾಡುತ್ತದೆ.

ಯಕೃತ್ತಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ

ಯಕೃತ್ತಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ

ಎಲೆಕೋಸು ನೀರು ಶ್ರೀಮಂತ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಎಲೆಕೋಸು ನೀರು 'ಇಂಡೊಲ್ -3 ಕಾರ್ಬೋನೇಲ್' ಎಂದು ಕರೆಯಲಾಗುವ ಅತ್ಯುತ್ತಮ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ಪಿತ್ತಜನಕಾಂಗವನ್ನು ನಿರ್ವಿಶೀಕರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಯಕೃತ್ತಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

ಎಲೆಕೋಸು ನೀರು ತಯಾರಿಸುವ ವಿಧಾನ

ಎಲೆಕೋಸು ನೀರು ತಯಾರಿಸುವ ವಿಧಾನ

ಎಲೆಕೋಸು ನೀರನ್ನು ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದು

- ಒಂದು ಗಾಜಿನ ಪಾತ್ರೆ/ಸಾಮಾನ್ಯ ಪಾತೆಯಲ್ಲಿ ಎಲೆಕೋಸಿನ ಚೂರನ್ನು ಹಾಕಿ. ನಂತರ ನೀರನ್ನು ಹಾಕಿ.

- ಪಾತ್ರೆ ತುಂಬುವ ವರೆಗೂ ನೀರನ್ನು ಸೇರಿಸಬೇಕು.

- ಬಳಿಕ ಒಂದು ಟೀಚಮಚ ಸಮುದ್ರ ಉಪ್ಪನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿಡಿ.

- ಒಂದು ರಾತ್ರಿ ಅಥವಾ ಒಂದು ದಿನಗಳಕಾಲ ಹಾಗೆ ನೆನೆಯಲು ಬಿಡಿ.

- ನಂತರ ಆ ನೀರನ್ನು ಸೋಸಿ, ರುಚಿಗೆ ತಕ್ಕಷ್ಟು ನಿಂಬೆ ರಸ ಮತ್ತು ಉಪ್ಪನ್ನು ಸೇರಿಸಿ.

- ಚೆನ್ನಾಗಿ ತಿರುವಿ. ನಂತರ ಸೇವಿಸಿ.

English summary

10 Amazing Health Benefits Of Drinking Cabbage Water

Consuming cabbage as a vegetable or salad is very common, but drinking cabbage water is something very unusual and not many people have heard about it. Cabbage water is known to have plenty of health benefits. So, the moment you get to learn about its benefits, you will definitely make it a point to drink it on a regular basis. So, today, we have listetd a few of the best known health benefits of drinking cabbage water. Take a look.