Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭೂತದ ಚಲನಚಿತ್ರ, ಅಪಾಯ ಮೈಮೇಲೆ ಎಳೆದುಕೊಂಡಂತೆ!
ಚಲನಚಿತ್ರಗಳು ಹಲವಾರು ವರ್ಷಗಳಿಂದ ನಮ್ಮ ಮನರಂಜನೆಯ ಮುಖ್ಯ ಅಂಗವಾಗಿವೆ. ಅದರಲ್ಲೂ ಭೂತದ ಕಥೆ ಇರುವ ಚಿತ್ರಗಳು ಕೆಲವು ಜನರನ್ನು ಇನ್ನಿಲ್ಲದಷ್ಟು ಹೆಚ್ಚಾಗಿ ಆಕರ್ಷಿಸುತ್ತವೆ. ಪುನರ್ಜನ್ಮ, ಕೊಲೆಯಾದ ವ್ಯಕ್ತಿಯ ಆತ್ಮ ಸೇಡು ತೀರಿಸಿಕೊಂಡು ಮುಕ್ತಿ ಪಡೆಯುವುದು, ಕಾಟ ನೀಡುವ ಅತೃಪ್ತ ಆತ್ಮ, ಹಿಂದಿನ ಜನ್ಮದ ಪ್ರಿಯಕರನನ್ನು ಇಂದಿಗೂ ಹುಡುಕುತ್ತಿರುವ ಪ್ರೇಯಸಿಯ ಭೂತ, ರಕ್ತ ಹೀರುವ ವ್ಯಾಂಪೈರ್ ಎಂಬ ಕೋರೆಹಲ್ಲುಗಳ ವ್ಯಕ್ತಿಗಳ ಕಥೆಗಳು ಮೊದಲಾದ ಹತ್ತು ಹಲವು ಕಥೆಗಳನ್ನಾಧರಿಸಿದ ಚಲನಚಿತ್ರಗಳು ಜನಪ್ರಿಯವಾಗಿವೆ.
ವಾಸ್ತವವಾಗಿ ಇವೆಲ್ಲವೂ ಚಲನಚಿತ್ರದ ಕೆಲವು ತಂತ್ರಜ್ಞಾನಗಳನ್ನು ಬಳಸಿ ಭೂತದ ಬಗ್ಗೆ ಇರುವ ನಮ್ಮ ನಂಬಿಕೆಗಳಿಗೆ ಇನ್ನಷ್ಟು ಕುಮ್ಮಕ್ಕು ಮತ್ತು ಹೊಸ ಆಯಾಮ ನೀಡುವುದೇ ಇವುಗಳ ಜನಪ್ರಿಯತೆಗೆ ಕಾರಣ. ಧ್ವನಿ, ಬೆಳಕು ಮತ್ತು ಕಥಾವಸ್ತುಗಳನ್ನು ಒಂದು ಹಂತದಲ್ಲಿ ಥಟ್ಟನೇ ಪ್ರೇಕ್ಷಕರ ಮೇಲೆ ಎರಗುವಂತೆ ಮಾಡಿ ಹೊಟ್ಟೆಯಲ್ಲಿ ಚುರುಗುಟ್ಟುವಂತೆ ಮಾಡುವುದೇ ಈ ಚಿತ್ರಗಳ ಮುಖ್ಯ ಉದ್ದೇಶ. ಈ ಅನುಭವವನ್ನು ಚಿತ್ರಮಂದಿರದಲ್ಲಿ ನೋಡುವಾಗ ರೋಮಾಂಚನವಾದರೂ ಈ ಅನುಭವವನ್ನು ಒಂಟಿಯಾಗಿ ಅನುಭವಿಸಬೇಡಿ ಎಂದು ತಜ್ಞರು ಸಲಹೆ ಮಾಡುತ್ತಾರೆ.

ಏಕೆಂದರೆ ಈ ಸಮಯದಲ್ಲಿ ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳು ಅತಿ ಕ್ಷಿಪ್ರ ಕಾಲದಲ್ಲಿ ಆಗುತ್ತವೆ. ಅತ್ಯಂತ ಭಯಭೀತರಾದ ಆ ಕ್ಷಣದಲ್ಲಿ ಅಡ್ರಿನಲಿನ್ ಎಂಬ ರಸದೂತ ಸ್ರವಿಕೆಯಾಗಿ ರಕ್ತ ಕಟ್ಟೆ ಒಡೆದಂತೆ ಒಮ್ಮೆಲೇ ನುಗ್ಗುತ್ತದೆ. ಇದು ಅತಿ ಅಪಾಯಕಾರಿಯಾಗಿದ್ದು ಒಬ್ಬಂಟಿಯಾಗಿ ನೋಡಿದ ಕ್ಷಣದಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ ಹಾಗೂ ಪ್ರಾಣಾಪಾಯಕ್ಕೂ ಕಾರಣವಾಗಬಹುದು.
ಈ ನಿಟ್ಟಿನಲ್ಲಿ ನಡೆಸಿದ ಸಂಶೋಧನೆಯೊಂದರಲ್ಲಿ ಸುಮಾರು ಮೂವತ್ತು ವರ್ಷದ ಇಪ್ಪತ್ತೈದು ಯುವಜನತೆಯನ್ನು ಆಯ್ದುಕೊಳ್ಳಲಾಯಿತು. ಇದರಲ್ಲಿ ಅರ್ಧದಷ್ಟು ಜನರಿಗೆ ಮೊದಲು ಉತ್ತಮ ಕಥಾವಸ್ತುವಿರುವ ಸಾಂಸಾರಿಕ ಚಿತ್ರವನ್ನು ಮೊದಲೂ ಆ ಬಳಿಕ ಭೂತದ ಕಥಾವಸ್ತುವಿರುವ ಭಯಾನಕ ಚಿತ್ರವನ್ನು ನೋಡಲು ಸಲಹೆ ನೀಡಲಾಯಿತು.
ಇನ್ನುಳಿದವರಿಗೆ ಇದರ ವಿರುದ್ಧ ಅಂದರೆ ಮೊದಲು ಭೂತದ, ಬಳಿಕ ಸಾಂಸಾರಿಕ ಚಿತ್ರ ನೋಡಲು ಸಲಹೆ ನೀಡಲಾಯಿತು. ಅಷ್ಟೂ ಜನರ ರಕ್ತದ ಮಾದರಿಗಳನ್ನು ಎರಡೂ ಚಿತ್ರಗಳನ್ನು ವೀಕ್ಷಿಸುವ ಮೊದಲು ಮತ್ತು ನಂತರ ಸಂಗ್ರಹಿಸಿ ಪರೀಕ್ಷಿಸಲಾಯಿತು. ಇದರ ಫಲಿತಾಂಶ ಮಾತ್ರ ಅಚ್ಚರಿ ತರಿಸಿತ್ತು. ಭೂತದ ಚಿತ್ರ ನೋಡಿದ ಬಳಿಕ ಎಲ್ಲರ ರಕ್ತದಲ್ಲಿಯೂ ಹೆಪ್ಪುಗಟ್ಟಿದ ಕಣಗಳಿದ್ದವು! ಆದರೆ ಸಾಂಸಾರಿಕ ಚಿತ್ರ ನೋಡಿದ ಬಳಿಕ ಅವರ ರಕ್ತ ಸಮಾನ್ಯವಾಗಿತ್ತು.
ಈ ಪರೀಕ್ಷೆಗಳ ಫಲಿತಾಂಶವನ್ನು ಆಧರಿಸಿ ತಜ್ಞರು ರಕ್ತ ಹೆಪ್ಪುಗಟ್ಟಲು, ಭಯಭೀತರಾಗುವ ವ್ಯಕ್ತಿಯ ನಂಬಿಕೆ ಮತ್ತು ಜೊತೆಯಲ್ಲಿ ಯಾರಾದರೂ ಇದ್ದರೆ ಅನುಭವಿಸುವ ಸುರಕ್ಷಿತ ಭಾವನೆಗೆ ಗಾಢ ಸಂಬಂಧವನ್ನು ಕಂಡುಕೊಂಡರು. ಈ ಪ್ರಕ್ರಿಯೆ ಅಪಾಯಕರವಾಗಿದ್ದು ನಿರ್ಲಕ್ಷಿಸಿದವರಿಗೆ ಇದು ಪ್ರಾಣಾಪಾಯಕರವಾಗಿ ಪರಿಣಮಿಸಬಹುದು.
ಆದರೆ ಈ ಅನುಭವವನ್ನು ಪಡೆಯಲೆಂದೇ ಹೆಚ್ಚಿನವರು ಭೂತದ ಚಿತ್ರ ನೋಡಲು ಹೋಗುತ್ತಾರೆ. ಇದರಲ್ಲಿರುವುದು ಸುಳ್ಳು, ಎಲ್ಲವೂ ತಂತ್ರಜ್ಞಾನದ ಮಹಿಮೆ ಎಂದು ಗೊತ್ತಿದ್ದರೂ ಆ ಸಮಯದಲ್ಲಿ ಚಲನಚಿತ್ರದ ವಿಶೇಷ ಪರಿಣಾಮಗಳನ್ನು ಅನುಭವಿಸುವುದು ಇವರಿಗೆ ಒಂದು ಪುಳಕದ ವಿಷಯ. ಒಂದು ಹಂತದವರೆಗೆ ಇದರ ಪರಿಣಾಮವನ್ನು ದೇಹ ತಾಳಿಕೊಳ್ಳಬಲ್ಲುದಾದರೂ ವಯಸ್ಸಾದಂತೆ ಈ ಶಕ್ತಿಯೂ ಕ್ಷೀಣಿಸುತ್ತದೆ.
ವಾಸ್ತವವಾಗಿ ಪ್ರಬುದ್ಧತೆ ಪಕ್ವವಾಗುತ್ತಿದ್ದಂತೆಯೇ ಜೀವನದಲ್ಲಿ ಕಂಡುಬರುವ ಹತ್ತು ಹಲವು ವಿಷಯಗಳ ಬಗ್ಗೆ ಚಿಂತನೆ ನಡೆಸುತ್ತಾ ಭೂತದ ಚಿತ್ರಗಳು ಮೊದಲಾದ ಅನಗತ್ಯ ರೋಮಾಂಚನಗಳಿಗೆ ವಿದಾಯ ಹೇಳುವುದೇ ಉತ್ತಮ. ಅದರಲ್ಲೂ ಮಕ್ಕಳಿಗೆ ಭೂತದ ಚಿತ್ರಗಳನ್ನು ತೋರದಿರುವುದೇ ಉತ್ತಮ. ಏಕೆಂದರೆ ಕೆಲವೊಮ್ಮೆ ಮನೆಯಲ್ಲಿ ಮಕ್ಕಳು ಒಂಟಿಯಾಗಿದ್ದಾಗ ಭೂತದ ಚಿತ್ರದ ರೋಮಾಂಚಕ ಘಳಿಗೆಯಲ್ಲಿ ಒಮ್ಮೆಲೇ ನುಗ್ಗುವ ರಕ್ತ ಮತ್ತು ಅಡ್ರಿನಲಿನ್ ಮಕ್ಕಳ ದೇಹದ ಮೇಲೆ ಅಪಾರವಾದ ಪರಿಣಾಮ ಬೀರಬಹುದು ಹಾಗೂ ಈ ಆಘಾತ ಮಕ್ಕಳ ಮನಸ್ಸಿನ ಮೇಲೆ ವಿಪರೀತವಾದ ಪರಿಣಾಮವನ್ನು ಉಂಟುಮಾಡಬಹುದು.
ಸಂಶೋಧಕರ ಪ್ರಕಾರ ಮಕ್ಕಳಿಗೆ ಕೇವಲ ಉತ್ತಮ ಕಥಾವಸ್ತುವಿರುವ, ಜೀವನದ ಮೌಲ್ಯ ಮತ್ತು ಸಂದೇಶಗಳನ್ನು ಸಾರುವ ಉತ್ತಮ ಚಿತ್ರಗಳನ್ನು ಮಾತ್ರ ತೋರಿಸುವುದು ಉತ್ತಮ. ಇನ್ನುಳಿದಂತೆ ಹಿರಿಯರನ್ನು ಭೂತದ ಚಿತ್ರಗಳನ್ನು ನೋಡುವುದರಿಂದ ತಡೆಯಲು ಸಾಧ್ಯವಾಗದಿದ್ದರೂ ಒಂಟಿಯಾಗಿ ನೋಡದೇ ಇರುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಏಕೆಂದರೆ ಜೊತೆಯಲ್ಲಿ ಯಾರಾದರೂ ಇದ್ದರೆ ಉಂಟಾಗುವ ಸುರಕ್ಷಿತ ಭಾವನೆ ಹೆಚ್ಚಿನ ಅಡ್ರಿನಲಿನ್ ಸ್ರಾವವನ್ನು ತಡೆಯುತ್ತದೆ. ಅಲ್ಲದೇ ಇಂತ ಅನುಭವಗಳನ್ನು ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಪಡೆದರೆ ಸಾಕು ಎನ್ನುತ್ತಾರೆ. ಇದು ಕೇವಲ ಭೂತದ ಚಿತ್ರಗಳನ್ನು ನೋಡುವುದರಿಂದ ಮಾತ್ರವಲ್ಲ, ಅಮ್ಯೂಸ್ ಮೆಂಟ್ ಪಾರ್ಕ್ ಗಳಲ್ಲಿ ಲಭ್ಯವಿರುವ ಭಯಾನಕ ಅನುಭವ ನೀಡುವ ಸವಾರಿಗಳಿಗೂ ಅನ್ವಯಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications





