For Quick Alerts
ALLOW NOTIFICATIONS  
For Daily Alerts

ಬೆಳ್ಳಂ ಬೆಳಿಗ್ಗೆ ಎದ್ದು ಎಳೆ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

By Manu
|

ಸಮುದ್ರತೀರದ ಬೆಳೆಯಾದ ತೆಂಗಿನ ಮರವನ್ನು ಕಲ್ಪವೃಕ್ಷವೆಂದು ನಮ್ಮ ಹಿರಿಯರು ಪರಿಗಣಿಸಿ ಪ್ರತಿ ಮನೆಯಲ್ಲಿಯೂ ನೆಟ್ಟಿದ್ದರಿಂದ ಇಂದು ಇಡಿಯ ಭಾರತದಲ್ಲಿ ತೆಂಗಿನ ಮರಗಳು ಇಲ್ಲದ ಊರೇ ಇಲ್ಲವೆಂದು ಹೇಳಬಹುದು. ಗಾತ್ರದಲ್ಲಿ ಕೊಂಚ ಚಿಕ್ಕ ದೊಡ್ಡದಾಗಿರಬಹುದಷ್ಟೇ ಹೊರತು ಎಳನೀರು ಪ್ರತಿ ಊರಿನಲ್ಲಿಯೂ ಬಹುತೇಕ ಇಡಿಯ ವರ್ಷ ದೊರಕುತ್ತದೆ. ನವಿರಾದ ಸಿಹಿ, ನೀರಿನಷ್ಟೇ ಗಾಢವಾದ ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ.

ಈ ಪೋಷಕಾಂಶಗಳನ್ನು ಪಡೆದ ದೇಹ ಶೀಘ್ರ ತನ್ನ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಲ್ಲಿ ನಿರ್ವಹಿಸಲು ಸಬಲಗೊಳ್ಳುತ್ತದೆ. ಅದರಲ್ಲೂ ಮೂತ್ರವನ್ನು ಸ್ವಚ್ಛಗೊಳಿಸಲು ಮತ್ತು ದೇಹದಲ್ಲಿ ನೀರು ಮತ್ತು ಶಕ್ತಿಯ ಕೊರತೆಯಾದಾಗ ಕುಡಿಯಬಹುದಾದ ಅತ್ಯುತ್ತಮ ದ್ರವ ಎಂದರೆ ಎಳನೀರು. ಆದರೆ ಈ ನೀರನ್ನು ಮುಂಜಾನೆ ಎದ್ದ ಬಳಿಕ ಪ್ರಥಮ ಆಹಾರವಾಗಿ ಕುಡಿಯುವುದರ ಮಹತ್ವ ನಿಮಗೆ ತಿಳಿದಿದೆಯೇ?

ಹೌದು, ಎಳೆನೀರಿನ ಆರೋಗ್ಯಕರ ಪರಿಣಾಮಗಳನ್ನು ಪಟ್ಟಿ ಮಾಡಲು ಹೊರಟರೆ ದೊಡ್ಡ ಪಟ್ಟಿಯೇ ಬೇಕಾಗಬಹುದು. ಆಯಾಸದಿಂದ ತಣಿದ ದೇಹಕ್ಕೆ ಪುನರ್ಚೇತನ ನೀಡುವುದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಹಲವು ರೋಗಗಳಿಂದ ರಕ್ಷಣೆ ನೀಡುವುದು, ತೂಕ ಇಳಿಯುವಲ್ಲಿ ಸಹಕರಿಸುವುದು, ಹೊಟ್ಟೆಯ ಉರಿಯನ್ನು ತಣಿಸುವುದು, ಮೂತ್ರವನ್ನು ಹೆಚ್ಚಿಸಿ ದೇಹದ ಕಲ್ಮಶವನ್ನು ನಿವಾರಿಸಲು ನೆರವಾಗುವುದು, ರೋಗಿಗಳಿಗೆ ಶೀಘ್ರವೇ ಗುಣವಾಗಲು ಸಹಕರಿಸುವುದು ಮೊದಲಾದ ಹಲವು ಪ್ರಯೋಜನಗಳಿವೆ.

ಕ್ರೀಡೆ, ಮೊದಲಾದ ದೈಹಿಕ ಚಟುವಟಿಕೆಗಳ ಬಳಿಕ ಬಳಲಿದ ಶರೀರಕ್ಕೆ ಶಕ್ತಿ ನೀಡಲು ಸಹಾ ಎಳನೀರಿನಲ್ಲಿರುವ ಎಲೆಕ್ಟ್ರೋಲೈಟುಗಳೆಂಬ ಕಣಗಳು ಸಹಕರಿಸುತ್ತವೆ. ಒಂದು ವೇಳೆ ಇದರೊಂದಿಗೆ ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿದರೆ ಪ್ರೋಟೀನುಯುಕ್ತ ಜೀವಜಲವನ್ನು ಪಡೆಯಬಹುದು. ಬನ್ನಿ, ಎಳೆನೀರು ದೇಹಕ್ಕೆ ಇನ್ನು ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂಬುದನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡೋಣ...

ಥೈರಾಯ್ಡ್ ಗ್ರಂಥಿಯ ನಿಯಂತ್ರಣ

ಥೈರಾಯ್ಡ್ ಗ್ರಂಥಿಯ ನಿಯಂತ್ರಣ

ನಮ್ಮ ಗಂಟಲ ಧ್ವನಿಪೆಟ್ಟಿಗೆಯ ಬಳಿ ಇರುವ ಥೈರಾಯ್ಡ್ ಗ್ರಂಥಿಯಿಂದ ಸ್ರವಿಸುವ ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿರಬೇಕು. ಕಡಿಮೆಯಾದರೂ ಹೆಚ್ಚಾದರೂ ಇದರ ಪ್ರಭಾವ ವಿಪರೀತವಾಗುತ್ತದೆ. ಬೆಳಗ್ಗಿನ ಎಳನೀರಿನ ಸೇವನೆ ಈ ಗ್ರಂಥಿಯ ಸ್ರವಿಕೆಯನ್ನು ಸೂಕ್ತ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತದೆ.

ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುತ್ತದೆ

ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುತ್ತದೆ

ಎಳನೀರು ಅತ್ಯುತ್ತಮವಾದ ಮೂತ್ರವರ್ಧಕವಾಗಿದೆ. ಅಂದರೆ ಮೂತ್ರವನ್ನು ಹೆಚ್ಚಿಸಿ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಮೂತ್ರಪಿಂಡಗಳಲ್ಲಿ ಈಗಾಗಲೇ ಕಲ್ಲುಗಳಾಗಲು ಪ್ರಾರಂಭವಾಗಿದ್ದರೆ ಅವನ್ನು ಕರಗಿಸಿ ಕಲ್ಲುಗಳಾಗದಂತೆ ರಕ್ಷಿಸುತ್ತದೆ. ಇವೆರಡೂ ಕಾರಣಗಳಿಂದ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ವಿಶೇಷವಾಗಿ ಮೂತ್ರಕೋಶ, ಮೂತ್ರವ್ಯವಸ್ಥೆ ಮತ್ತು ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುವ ಮೂಲಕ ಮೂತ್ರವ್ಯವಸ್ಥೆಯಲ್ಲಿ ಕಂಡುಬರುವ ಸೋಂಕು, ಜ್ವರ ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ವಿಶೇಷವಾಗಿ ಒಸಡುಗಳಲ್ಲಿ ರಕ್ತ ಬರುವ, ಸಡಿಲವಾಗುವ, ಸೋಂಕು ಉಂಟಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಎಳನೀರು ಅಪ್ಪಟ ನೀರಿನಂತೆ ಸೂಕ್ತ ಪಿ ಎಚ್ ಮಟ್ಟ ಹೊಂದಿರುವ ಕಾರಣ ಆಹಾರದಲ್ಲಿ ಆಮ್ಲೀಯತೆ ಅಥವಾ ಕ್ಷಾರೀಯತೆ ಹೆಚ್ಚಾಗಿದ್ದರೆ ಅದನ್ನು ಸರಿಪಡಿಸಲು ನೆರವಾಗುತ್ತದೆ. ಎಳನೀರು ಅತಿ ಸುಲಭವಾಗಿ ಜೀರ್ಣವಾಗುವ ಕಾರಣ ಜೀರ್ಣರಸಗಳು ಇತರ ಆಹಾರಗಳತ್ತ ಹೆಚ್ಚು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಎಳನೀರಿನಲ್ಲಿ ಕ್ಯಾಲೋರಿಗಳು ಅತಿ ಕಡಿಮೆ ಪ್ರಮಾಣದಲ್ಲಿವೆ ಹಾಗೂ ಕೊಬ್ಬು ಇಲ್ಲವೇ ಇಲ್ಲ. ಆದ್ದರಿಂದ ಈ ನೀರನ್ನು ಎಷ್ಟು ಬೇಕಾದರೂ ಕುಡಿಯಬಹುದು. ವಾಸ್ತವವಾಗಿ ತೂಕ ಕಳೆದುಕೊಳ್ಳುವ ಇರಾದೆ ಇದ್ದರೆ ಹೆಚ್ಚು ಕುಡಿಯಬೇಕು. ಇದು ಆಹಾರದ ಸ್ಥಾನವನ್ನು ಆಕ್ರಮಿಸಿ ಅಗತ್ಯಕ್ಕಿಂತ ಹೆಚ್ಚು ಕುಡಿಯುವುದರಿಂದ ತಡೆಯುವ ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ.

ಸುಸ್ತು ನಿವಾರಿಸುತ್ತದೆ

ಸುಸ್ತು ನಿವಾರಿಸುತ್ತದೆ

ಯಾವುದಾದರೂ ತೊಂದರೆಯಿಂದ ಸುಸ್ತು ಆವರಿಸಿದ್ದರೆ ಮತ್ತು ನಿತ್ಯದ ಕೆಲಸಗಳಿಗೆ ತೊಂದರೆಯಾಗಿದ್ದರೆ ನಿತ್ಯವೂ ಅರವತ್ತು ಮಿ.ಲೀ ಎಳನೀರನ್ನು ಪ್ರಥಮ ಆಹಾರವಾಗಿ ಸೇವಿಸುತ್ತಾ ಬಂದರೆ ಕ್ರಮೇಣ ದೇಹ ತನ್ನ ಮೊದಲ ಶಕ್ತಿಯನ್ನು ಪಡೆಯುತ್ತದೆ.

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

ಚರ್ಮದ ಆರೈಕೆಯಲ್ಲಿ ಎಳನೀರು ಮಹತ್ವದ ಪಾತ್ರ ವಹಿಸುತ್ತದೆ ವಿಶೇಷವಾಗಿ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ಒಳಗಿನಿಂದ ನೀಡುವ ಮೂಲಕ ಚರ್ಮವನ್ನು ಆರೋಗ್ಯಕರ, ಕಾಂತಿಯುತವಾಗಿಡಲು ನೆರವಾಗುತ್ತದೆ.

ವ್ಯಾಯಾಮದ ಬಳಿಕ ಕುಡಿಯಲು ಅತ್ಯುತ್ತಮವಾಗಿದೆ

ವ್ಯಾಯಾಮದ ಬಳಿಕ ಕುಡಿಯಲು ಅತ್ಯುತ್ತಮವಾಗಿದೆ

ವ್ಯಾಯಾಮದ ಬಳಿಕ ದಣಿದ ದೇಹ ಹೆಚ್ಚಿನ ಪೋಷಕಾಂಶಗಳಿರುವ ಆಹಾರವನ್ನು ಬೇಡುತ್ತದೆ. ಹೆಚ್ಚಿನವರು ಗ್ಲೂಕೋಸ್ ನೀರನ್ನು ಕುಡಿಯುವುದು ಉತ್ತಮ ಎಂಬ ಅಭಿಪ್ರಾಯ ಹೊಂದಿದ್ದಾರೆ. ಕೆಲವು ಸಂಸ್ಥೆಗಳು ಈ ಬೇಡಿಕೆಯನ್ನೇ ಬಂಡವಾಳವಾಗಿಸಿ ಎನರ್ಜಿ ಡ್ರಿಂಕ್ ಎಂಬ ಅಪಾಯಕಾರಿಯಾದ ಪೇಯವನ್ನು ದುಬಾರಿ ಬೆಲೆಗೆ ಮಾರುತ್ತಿದೆ.

ವ್ಯಾಯಾಮದ ಬಳಿಕ ಕುಡಿಯಲು ಅತ್ಯುತ್ತಮವಾಗಿದೆ

ವ್ಯಾಯಾಮದ ಬಳಿಕ ಕುಡಿಯಲು ಅತ್ಯುತ್ತಮವಾಗಿದೆ

ಆ ಕ್ಷಣಕ್ಕೆ ಇದು ಶಕ್ತಿಯನ್ನು ನೀಡಿದರೂ ನಂತರ ಇದರ ಪರಿಣಾಮ ಭೀಕರವಾಗಿರುತ್ತದೆ. ಬದಲಿಗೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ಗೊಟಾಯಿಸಿದ ಎಳನೀರು ಅದ್ಭುತ ಪೇಯವಾಗಿದ್ದು ಯಾವುದೇ ಎನರ್ಜಿ ಡ್ರಿಂಕ್ ಗಿಂತಲೂ ಹೆಚ್ಚಿನ ಪ್ರೋಟೀನ್ ಮತ್ತು ಶಕ್ತಿಯನ್ನು ಯಾವುದೇ ಅಡ್ಡಪರಿಣಾಮವಿಲ್ಲದೇ ನೀಡುತ್ತದೆ.

ಮದ್ಯಪಾನದ ಬಳಿಕದ ಮಂಪರು ಮತ್ತು ತಲೆನೋವನ್ನು ನಿವಾರಿಸುತ್ತದೆ

ಮದ್ಯಪಾನದ ಬಳಿಕದ ಮಂಪರು ಮತ್ತು ತಲೆನೋವನ್ನು ನಿವಾರಿಸುತ್ತದೆ

ಒಂದು ವೇಳೆ ರಾತ್ರಿಯ ಕೂಟಗಳಲ್ಲಿ ಮದ್ಯಪಾನ ಮಾಡಿ ತಡವಾಗಿ ಬಂದು ಮನೆ ಸೇರಿದ್ದರೆ ಎದ್ದಾಗ ಇನ್ನೂ ಮಂಪರು ಇದ್ದು ತಲೆನೋವೂ ಆವರಿಸಿಕೊಂಡಿದ್ದರೆ ತಕ್ಷಣ ಒಂದು ಇಡಿಯ ಎಳನೀರನ್ನು ಕುಡಿದು ಕೊಂಚ ವಿರಮಿಸಿ ಶೀಘ್ರವೇ ದೇಹ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ.

English summary

Why Drink Coconut Water In The Morning?

Coconut water has detoxifying properties and many medicinal properties. What would be the best time to drink it if not in the morning? It refreshes you, energises you, boosts your immunity, protects you from certain diseases and also helps in weight loss. Also, when you drink coconut water in the morning, it can harmonise the electrolytes and keep your body functioning well. Now, let us discuss the benefits of coconut water.
Story first published: Saturday, February 20, 2016, 12:37 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more