Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಜುಗರ ತರಿಸುವ ದೇಹದ ದುರ್ವಾಸನೆ! ಕಾರಣ ಏನು ಗೊತ್ತೇ?
ಸಾಕಷ್ಟು ಸ್ವಚ್ಛತೆಯ ವಿಧಾನಗಳಾದ ಸ್ನಾನ, ಸುಗಂಧ ಮೊದಲಾದ ಕೆಲವು ಕ್ರಮಗಳನ್ನು ಕೈಗೊಂಡರೂ ಮೈ ದುರ್ಗಂಧ ಕಡಿಮೆಯಾಗದೇ ಇದ್ದರೆ ತಕ್ಷಣ ಇದಕ್ಕೆ ಕಾರಣವನ್ನು ಕಂಡುಕೊಳ್ಳುವುದು ಉತ್ತಮ.
ಇತ್ತೀಚೆಗೆ ನಿಮ್ಮ ಶರೀರದಿಂದ ದುರ್ಗಂಧ ಹೊಮ್ಮುತ್ತಿದೆಯೇ? ಸ್ನಾನ ಮಾಡಿಕೊಂಡು, ಸುಗಂಧ ಪೂಸಿಕೊಂಡರೂ ಈ ಪರಿಮಳ ಮೈದುರ್ಗಂಧವನ್ನು ಮರೆಮಾಚಲು ವಿಫಲವಾಗಿದೆಯೇ? ಇದರಿಂದಂದಾಗಿ ನಾಲ್ಕು ಜನರ ಮುಂದೆ ಮುಜುಗರ ಉಂಟಾಗುತ್ತಿದೆಯೇ?
ಹೌದು ಎಂಬ ಉತ್ತರ ನಿಮ್ಮದಾದರೆ ನಿಮ್ಮ ಶರೀರ ನಿಮಗೇನೂ ಹೇಳುತ್ತಿದೆ ಎಂದು ಅರ್ಥೈಸಿಕೊಳ್ಳಬೇಕು. ನಾವೆಲ್ಲರೂ ಬೆವರು ಹರಿಸುತ್ತೇವೆ. ಸಾಕಷ್ಟು ದುರ್ಗಂಧವೂ ಉಂಟಾಗುತ್ತದೆ. ಆದರೆ ಇದನ್ನು ನಿಯಂತ್ರಿಸಲು ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಸಾಕು.
ಆದರೆ ಸಾಕಷ್ಟು ಸ್ವಚ್ಛತೆಯ ವಿಧಾನಗಳಾದ ಸ್ನಾನ, ಸುಗಂಧ ಮೊದಲಾದ ಕೆಲವು ಕ್ರಮಗಳನ್ನು ಕೈಗೊಂಡರೂ ಮೈ ದುರ್ಗಂಧ ಕಡಿಮೆಯಾಗದೇ ಇದ್ದರೆ ತಕ್ಷಣ ಇದಕ್ಕೆ ಕಾರಣವನ್ನು ಕಂಡುಕೊಳ್ಳುವುದು ಉತ್ತಮ. ಬನ್ನಿ, ಈ ದುರ್ಗಂಧ ಏನು ಹೇಳುತ್ತದೆ ಎಂಬುದನ್ನು ನೋಡೋಣ...

ಮೀನಿನ ವಾಸನೆ
ಒಂದು ವೇಳೆ ನಿಮ್ಮ ಶರೀರದಿಂದ ಮೀನಿನ ವಾಸನೆ ಬರುತ್ತಿದ್ದರೆ ಇದು ದೇಹದ ಜೀವರಾಸಾಯನಿಕ ಕ್ರಿಯೆ ಬಾಧೆಗೊಳಗಾಗಿರುವ trimethylaminuria ಎಂಬ ಕಾಯಿಲೆಯಿಂದ ಬಳಲುತ್ತಿರುವ ಸೂಚನೆಯಾಗಿರಬಹುದು. ಈ ಕಾಯಿಲೆ ಇದ್ದವರ ದೇಹದಲ್ಲಿ ಪೋಟೀನ್ ಗಳನ್ನು ಒಡೆಯಲು ಸಾಕಷ್ಟು ಶಕ್ತಿ ಇಲ್ಲದೇ ಇರುವ ಕಾರಣ ಇದು ಮೀನಿನ ವಾಸನೆ ಮೂಡಿಸುತ್ತದೆ.

ಮಲದ ವಾಸನೆ
ಒಂದು ವೇಳೆ ಮೈವಾಸನೆ ಮಲದ ವಾಸನೆಯನ್ನು ಹೋಲುತ್ತಿದ್ದರೆ ಇದು ನಿಮ್ಮ ದೇಹದ ಜೀರ್ಣಾಂಗಗಳಲ್ಲಿ ತೊಂದರೆ ಇರುವುದನ್ನು ಸೂಚಿಸುತ್ತದೆ. ಅಜೀರ್ಣ, ಮಲಬದ್ಧತೆ ಮೊದಲಾದವುಗಳ ಮೂಲಕ ಬೆವರಿನಲ್ಲಿಯೂ ಮಲದ ವಾಸನೆ ಸೂಸುತ್ತದೆ.

ಬೆವರಿನ ವಾಸನೆ
ಸಾಮಾನ್ಯವಾಗಿ ಬೆವರಿನ ವಾಸನೆ ಹೆಚ್ಚು ಘಾಟು ಹೊಂದಿರುವುದಿಲ್ಲ ಅತಿ ಹತ್ತಿರದಲ್ಲಿ ಮಾತ್ರ ಅನುಭವಕ್ಕೆ ಬರುತ್ತದೆ. ಒಂದು ವೇಳೆ ಇದು ಸ್ವಲ್ಪ ದೂರದವರೆಗೆ ಅನುಭವಕ್ಕೆ ಬಂದಿದ್ದು ತೀಕ್ಷ್ಣವಾಗಿದ್ದರೆ ಇದು hyperhidrosis ಎಂಬ ಸ್ಥಿತಿಯ ಸೂಚನೆಯಾಗಿರಬಹುದು. ಈ ಕಾಯಿಲೆ ಇರುವ ವ್ಯಕ್ತಿಗಳು ಅಗತ್ಯಕ್ಕೂ ಹೆಚ್ಚು ಬೆವರುತ್ತಾರೆ.

ತುಕ್ಕಿನ ವಾಸನೆ
ಒಂದು ವೇಳೆ ಕಬ್ಬಿಣ ತುಕ್ಕು ಹಿಡಿದಿದ್ದರೆ ಬರುವಂತಹ ವಾಸನೆ ಬರುತ್ತಿದ್ದರೆ ಇದು ನಿಮ್ಮ ಯಕೃತ್‌ನಲ್ಲಿ (ಲಿವರ್) ತೊಂದರೆ ಇರುವುದನ್ನು ಸೂಚಿಸುತ್ತದೆ. ಅಲ್ಲದೇ ಕೆಲವು ಜೀವರಾಸಾಯನಿಕ ಕ್ರಿಯೆಯಲ್ಲಿ ಇರುವ ತೊಂದರೆಗಳು ಮತ್ತು ಜೀರ್ಣಾಂಗಗಳಲ್ಲಿ ತೊಂದರೆ ಇರುವುದನ್ನೂ ಸೂಚಿಸುತ್ತದೆ.

ಸ್ನಾನದ ಬಳಿಕ ಸೂಸುವ ವಾಸನೆ
ಮಹಿಳೆಯರು ಒಂದು ವೇಳೆ ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡಿದ ಬಳಿಕವೂ ಬೆವರಿನ ವಾಸನೆ ಸೂಸುತ್ತಿದ್ದರೆ ಇದು ಗರ್ಭಿಣಿಯಾಗಿರುವ ಅಥವಾ ರಜೋನಿವೃತ್ತಿ ಕಾಲ ನಿಕಟವಾಗಿರುವ ಸಮಯವನ್ನು ಸೂಚಿಸುತ್ತದೆ.

ನಸು ಘಾಟಿನ ವಾಸನೆ
ಒಂದು ವೇಳೆ ಜೀವಮಾನವಿಡೀ ನಿಮ್ಮ ಬೆವರು ಘಾಟಿನಿಂದ ಕೂಡಿದ್ದು ಈಗ ಈ ಘಾಟು ಕಡಿಮೆಯಾಗಿದ್ದರೆ ಇದು ವೃದ್ದಾಪ್ಯ ಹತ್ತಿರಾಗುತ್ತಿರುವ ಸೂಚನೆಯನ್ನು ಸೂಚಿಸುತ್ತದೆ. ಏಕೆಂದರೆ ವೃದ್ದಾಪ್ಯ ಆವರಿಸುತ್ತಿದ್ದಂತೆಯೇ ಬೆವರಿನ ಗ್ರಂಥಿಗಳೂ ನಿಧಾನವಾಗಿ ಕ್ಷಮತೆ ಕಳೆದುಕೊಳ್ಳುತ್ತವೆ.

ಮದ್ಯದ ವಾಸನೆ
ಒಂದು ವೇಳೆ ನಿಮ್ಮ ಬೆವರಿನ ವಾಸನೆ ಮದ್ಯದ ವಾಸನೆಯನ್ನು ಹೋಲುತ್ತಿದ್ದರೆ ಇದು ನೀವು ಮದ್ಯಕ್ಕೆ ವ್ಯಸನಿಯಾಗಿರುವ ಸೂಚನೆಯನ್ನು ನೀಡುತ್ತದೆ.



Click it and Unblock the Notifications
