Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಆರೋಗ್ಯ ಟಿಪ್ಸ್: ಗ್ರೀನ್ ಟೀ ಕುಡಿಯುವ ಮುನ್ನ....
ಆರೋಗ್ಯದ ಬಗ್ಗೆ ಜಾಗೃತಿ ಮೂಡುತ್ತಿರುವ ಇಂದಿನ ದಿನಗಳಲ್ಲಿ ಆಹಾರ ಕ್ರಮಗಳನ್ನು ಸರಿಯಾಗಿ ಅನುಸರಿಸಿಕೊಂಡು ಹೋಗಲು ಒಂದಿಷ್ಟು ಮಂದಿಯಾದರೂ ನಿರ್ಧರಿಸಿದ್ದಾರೆ. ಇದರಿಂದಾಗಿಯೇ ಸಾವಯವ, ಪೌಷ್ಠಿಕ ಮತ್ತು ಆರೋಗ್ಯದಾಯಕ ಆಹಾರಗಳು ಹೆಚ್ಚು ಬೇಡಿಕೆಯಲ್ಲಿದೆ. ಆರೋಗ್ಯಕ್ಕೆ ಸಹಕಾರಿಯಾಗಬಲ್ಲ ಪಾನೀಯವೊಂದು ಈಗ ಸಾಕಷ್ಟು ಜನರನ್ನು ಸೆಳೆಯುತ್ತಿದೆ. ತುಳಸಿ-ಗ್ರೀನ್ ಟೀಯ ಜೋಡಿ-ಮಾಡಲಿದೆ ಕಮಾಲಿನ ಮೋಡಿ
ಈ ಲೇಖನದಲ್ಲಿ ಹೇಳಲು ಹೊರಟಿರುವುದು ಗ್ರೀನ್ ಟೀ (ಹಸಿರು ಚಹಾ)ಬಗ್ಗೆ. ಬೊಜ್ಜು ಕರಗಿಸಲು, ತೂಕ ಕಡಿಮೆ ಮಾಡಲು, ಜೀರ್ಣ ಶಕ್ತಿ ಹೆಚ್ಚಿಸಲು, ಚುರುಕು ಹಾಗೂ ಯೌವನಭರಿತವಾಗಿ ಮತ್ತು ಆರೋಗ್ಯವಾಗಿರಲು ಗ್ರೀನ್ ಟೀ ತುಂಬಾ ಸಹಕಾರಿ. ಆದರೆ ಹೆಚ್ಚಾದರೆ ಅಮೃತವು ವಿಷ ಎನ್ನುವ ಗಾದೆಯಿದೆ. ರಾತ್ರಿ ಮಲಗುವ ಮುನ್ನ 'ಗ್ರೀನ್ ಟೀ' ಕುಡಿದರೆ ದುಪ್ಪಟ್ಟು ಲಾಭ!
ಇದರಿಂದಾಗಿ ಗ್ರೀನ್ ಟೀಯನ್ನು ಪದೇ ಪದೇ ಕುಡಿಯಬಾರದು ಮತ್ತು ಯಾವುದೋ ಸಮಯದಲ್ಲಿ ಇದನ್ನು ಕುಡಿದರೆ ಅದರಿಂದ ಅಡ್ಡಪರಿಣಾಮಗಳು ಉಂಟಾಗಲಿದೆ. ಗ್ರೀನ್ ಟೀಯಲ್ಲಿ ಕೆಫೀನ್ ಮತ್ತು ಟಾನ್ನಿನ್ಸ್ ಇದೆ. ಇದು ಗ್ಯಾಸ್ಟ್ರಿಕ್‌ನ ರಸವನ್ನು ಹೆಚ್ಚಿಸಿ ಹೊಟ್ಟೆಗೆ ತೊಂದರೆ ಉಂಟು ಮಾಡಬಹುದು. ಇದರಿಂದ ವಾಕರಿಕೆ, ಗ್ಯಾಸ್ಟ್ರಿಕ್ ನೋವು ಮತ್ತು ಹೊಟ್ಟೆಯ ಆ್ಯಸಿಡಿಟಿ ಉಂಟಾಗಬಹುದು. ಗ್ರೀನ್ ಟೀಯನ್ನು ಯಾವ್ಯಾವ ಸಮಯದಲ್ಲಿ ಕುಡಿಯಬೇಕು ಮತ್ತು ಯಾವ್ಯಾವ ಸಮಯದಲ್ಲಿ ಕುಡಿಯಬಾರದು ಎನ್ನುವ ಬಗ್ಗೆ ತಿಳಿದುಕೊಳ್ಳಿ. ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯಬೇಡಿ
ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ಅದು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ ಎನ್ನುವ ನಂಬಿಕೆಯಿದೆ. ಇದನ್ನು ಕಡೆಗಣಿಸಬೇಕು. ಗ್ರೀನ್ ಟೀಯಲ್ಲಿ ಕೆಫೀನ್ ಇದೆ. ಇದು ಗ್ಯಾಸ್ಟ್ರಿಕ್ ಜ್ಯೂಸ್ ಅನ್ನು ಹೆಚ್ಚಿಸುವ ಕಾರಣದಿಂದ ಪ್ಲೀಹ ಮತ್ತು ಹೊಟ್ಟೆಯಲ್ಲಿ ತೊಂದರೆ ಉಂಟು ಮಾಡಬಹುದು.

ಗ್ರೀನ್ ಟೀ ಕುಡಿಯಲು ಸರಿಯಾದ ಸಮಯ
ಗ್ರೀನ್ ಟೀ ಪರಿಣಾಮಕಾರಿಯಾಬೇಕೆಂದರೆ ಊಟಕ್ಕೆ ಅರ್ಧ ಗಂಟೆಗೆ ಮೊದಲು ಅಥವಾ ಊಟವಾದ 1-2 ಗಂಟೆ ಬಳಿಕ ಕುಡಿಯಬೇಕು.

ಹಾಲು ಮತ್ತು ಸಕ್ಕರೆ ಸೇರಿಸಬೇಡಿ
ಗ್ರೀನ್ ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಥೇನೈನ್ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹಾಲಿನ ಪ್ರೋಟೀನ್ ಮತ್ತು ಸಕ್ಕರೆಯಲ್ಲಿನ ಕ್ಯಾಲರಿ ಗ್ರೀನ್ ಟೀಯಲ್ಲಿ ಸೇರಿದಾಗ ಅದು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ದೇಹಕ್ಕೆ ಆರೋಗ್ಯ ಲಾಭಗಳು ಸಿಗುವುದಿಲ್ಲ.

ಜೇನುತುಪ್ಪ ಹಾಕಿ ಗ್ರೀನ್ ಟೀ ಕುಡಿಯಿರಿ
ಗ್ರೀನ್ ಟೀಯಲ್ಲಿರುವ ಕೆಫಿನ್ ಮತ್ತು ಜೇನಿನಲ್ಲಿರುವ ವಿಟಮಿನ್ ನರಗಳನ್ನು ಪುರ್ನಯೌವನಗೊಳಿಸಿ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಜೇನು ಕ್ಯಾಲರಿ ಕಡಿಮೆ ಮಾಡಲು ಮತ್ತು ಗ್ರೀನ್ ಟೀ ಚಯಾಪಚಾಯ ಕ್ರಿಯೆ ಸುಧಾರಿಸಲು ನೆರವಾಗುವುದು.

ಊಟವಾದ ಕೂಡಲೇ ಗ್ರೀನ್ ಟೀ ಸೇವನೆ ಮಾಡಬೇಡಿ
ಊಟವಾದ ತಕ್ಷಣ ಗ್ರೀನ್ ಟೀ ಸೇವನೆ ಮಾಡಬಾರದು. ಗ್ರೀನ್ ಟೀಯಲ್ಲಿನ ಕೆಫೀನ್ ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುವುದು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಕಷ್ಟವಾಗುವುದು.

ದಿನದಲ್ಲಿ 2-3 ಕಪ್
ಆರೋಗ್ಯಕದ ಲಾಭವನ್ನು ಪಡೆಯಬೇಕೆಂದರೆ ದಿನದಲ್ಲಿ 2-3 ಕಪ್ ಗ್ರೀನ್ ಟೀ ಕುಡಿಯಲೇಬೇಕು. ಗ್ರೀನ್ ಟೀ ಆ್ಯಂಟಿಆಕ್ಸಿಡೆಂಟ್ ಮತ್ತು ಫ್ಲಾವೋನಾಯಿಡ್ ನಿಂದ ಸಮೃದ್ಧವಾಗಿದೆ. ಇದನ್ನು ಅತಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಇದರಿಂದ ವಿಷತ್ವ ಸಂಗ್ರಹವಾಗಿ ಯಕೃತ್ ಮೇಲೆ ದುಷ್ಪರಿಣಾಮ ಬೀರಬಹುದು.



Click it and Unblock the Notifications
