Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯ ಟಿಪ್ಸ್: ಮೊಟ್ಟೆ+ ಕರಿಮೆಣಸಿನ ಪವರ್‌ಫುಲ್ ಕಾಂಬಿನೇಷನ್
ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ ಎಂಬುದೊಂದು ಸುಭಾಷಿತ. ಅಡುಗೆಗೆ ಸಮಯವಿಲ್ಲದವರಿಗೆ ಹೇಳಿ ಮಾಡಿಸಿದ ಪೌಷ್ಟಿಕ ಆಹಾರವಾದ ಮೊಟ್ಟೆಯನ್ನು ಹಲವಾರು ಖಾದ್ಯಗಳಲ್ಲಿ ಬಳಸಲಾಗುತ್ತದೆ. ಅದರಲ್ಲೂ ಬೆಳಗ್ಗಿನ ಉಪಾಹಾರಕ್ಕೆ ಮೊಟ್ಟೆ ಹೆಚ್ಚಿನವರ ನೆಚ್ಚಿನ ಆಯ್ಕೆಯಾಗಿದೆ. ಥಟ್ ಅಂತ ತಯಾರಾಗುವುದು ಮಾತ್ರವಲ್ಲ, ಆರೋಗ್ಯವನ್ನೂ ವೃದ್ಧಿಸುವ ಮೊಟ್ಟೆಯನ್ನು ಎಷ್ಟೋ ದೇಶಗಳಲ್ಲಿ ಸಸ್ಯಾಹಾರವೆಂದೇ ಪರಿಗಣಿಸಲಾಗುತ್ತದೆ. ವಿಶ್ವದ ಜನತೆ ಬೆಳಗ್ಗಿನ ಉಪಾಹಾರಕ್ಕೆ ಸೇವಿಸುವ ಆಹಾರದಲ್ಲಿ ಮೊಟ್ಟೆ ಪ್ರಮುಖವಾಗಿದೆ.
ಮೊಟ್ಟೆಯಲ್ಲಿ ಏನೇನಿದೆ ಎಂದು ಪಟ್ಟಿ ಮಾಡಿದರೆ ಮುಖ್ಯವಾಗಿ ಪ್ರೋಟೀನುಗಳು, ಪೊಟ್ಯಾಶಿಯಂ, ವಿಟಮಿನ್ A, D, B-12 ಪ್ರಮುಖವಾಗಿದ್ದು ಆರೋಗ್ಯವನ್ನು ವೃದ್ಧಿಸುವ ಆಹಾರಗಳಲ್ಲಿ ಪ್ರಮುಖವಾದುದು ಎಂಬ ಹಣೆಪಟ್ಟಿ ಪಡೆಯುತ್ತದೆ. ಉಪಾಹಾರಕ್ಕೆ ರುಚಿಕರ ಆಮ್ಲೆಟ್, ಬುರ್ಜಿ ಮೊದಲಾದವುಗಳನ್ನು ತಯಾರಿಸಲು ಹೆಚ್ಚಿನ ಸಮಯ ಬೇಡ. ಉಪ್ಪು+ಕರಿಮೆಣಸಿನ ಪುಡಿ+ಲಿಂಬೆ=ಉತ್ತಮ ಆರೋಗ್ಯ!
ಒಂದು ಸಮೀಕ್ಷೆಯಲ್ಲಿ ಸಂಶೋಧಕರು ಮೊಟ್ಟೆಯನ್ನೇ ಸೇವಿಸದವರಿಂದ ಪ್ರಾರಂಭಿಸಿ ಮೊಟ್ಟೆಯನ್ನೇ ದಿನವಿಡೀ ತಿನ್ನಬಯಸುವ ವಿವಿಧ ವ್ಯಕ್ತಿಗಳ ಆಯ್ಕೆ ಮತ್ತು ಆರೋಗ್ಯವನ್ನು ತಪಾಸಿಸಿ ಅಂಕಿ ಅಂಶಗಳನ್ನು ಕಲೆಹಾಕಿದ ಬಳಿಕ ಅಚ್ಚರಿಯ ಫಲಿತಾಂಶವನ್ನು ಕಂಡುಕೊಂಡರು. ಇದರ ಪ್ರಕಾರ ನಿಯಮಿತವಾಗಿ ಮೊಟ್ಟೆಯನ್ನು ದಿನದ ಆಹಾರದಲ್ಲಿ ಒಂದು ಭಾಗವಾಗಿ ಸೇವಿಸಿದವರ ಆರೋಗ್ಯ ಮತ್ತು ರೋಗ ನಿರೋಧಕ ವ್ಯವಸ್ಥೆ ಇತರರಿಗಿಂತ ಉತ್ತಮವಾಗಿತ್ತು. ಮಧ್ಯಾಹ್ನ ಊಟದ ಜೊತೆ, ಒಂದು ಮೊಟ್ಟೆಯೂ ಇರಲಿ!
ಆದರೆ ಕೇವಲ ಮೊಟ್ಟೆಯನ್ನು ಮಾತ್ರ ತಿನ್ನುವ ಬದಲು ಇದಕ್ಕೆ ಕೊಂಚ ಕಾಳುಮೆಣಸಿನ ಪುಡಿಯನ್ನು ಚಿಮುಕಿಸಿಕೊಂಡು ತಿಂದರೆ ಇದರ ರುಚಿ ಹೆಚ್ಚಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಆದರೆ ಇದು ಆರೋಗ್ಯವನ್ನೂ ವೃದ್ಧಿಸುತ್ತದೆ ಎಂದು ಹೆಚ್ಚಿನವರು ತಿಳಿದಿರಲಿಕ್ಕಿಲ್ಲ. ಬನ್ನಿ, ಈ ಬಗ್ಗೆ ತಜ್ಞರು ಏನು ಕಂಡುಕೊಂಡಿದ್ದಾರೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ
ಕಾಳುಮೆಣಸಿನ ಪುಡಿ ಚಿಮುಕಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ದೇಹದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ. ತನ್ಮೂಲಕ ಒಟ್ಟಾರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ ಹಾಗೂ ದಿನದ ಚಟುವಟಿಕೆಗಳಿಗಾಗಿ ಹೆಚ್ಚಿನ ಶಕ್ತಿ ಲಭ್ಯವಾಗುತ್ತದೆ.

ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶ ಹೆಚ್ಚಿಸುತ್ತದೆ
ಮೊಟ್ಟೆ ಮತ್ತು ಕಾಳುಮೆಣಸಿನ ಪುಡಿಯ ಮಿಶ್ರನ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ನೆರವಾಗುತ್ತದೆ. ಏಕೆಂದರೆ ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು ಕೆಂಪುರಕ್ತಕಣಗಳ ಬೆಳವಣಿಗೆಗೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ಪರಿಣಾಮವಾಗಿ ರಕ್ತಪರಿಚಲನೆಯ ಮೂಲಕ ಹೆಚ್ಚಿನ ಆಮ್ಲಜನಕ ಲಭ್ಯವಾಗಿ ಆರೋಗ್ಯ ಹೆಚ್ಚುತ್ತದೆ.

ಸ್ನಾಯುಗಳನ್ನು ಬೆಳೆಸಲು ಸಹಕರಿಸುತ್ತದೆ
ಕಾಳುಮೆಣಸಿನ ಪುಡಿ ಚಿಮುಕಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ಲಭ್ಯವಾಗುವ ಪ್ರೋಟೀನುಗಳು ಸ್ನಾಯುಗಳನ್ನು ಬೆಳೆಸಲು ಮತ್ತು ಹುರಿಗಟ್ಟಿಸಲು ನೆರವಾಗುತ್ತದೆ. ಇದು ನಿಮ್ಮ ವ್ಯಾಯಾಮದ ಪ್ರಯತ್ನಗಳಿಗೆ ಹೆಚ್ಚಿನ ಫಲ ನೀಡಿ ಸುದೃಢ ಶರೀರ ಮತ್ತು ಉತ್ತಮ ಆರೋಗ್ಯ ಹೊಂದಲು ನೆರವಾಗುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ
ಕಾಳುಮೆಣಸಿನ ಪುಡಿ ಚಿಮುಕಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ತೂಕ ಕಳೆದುಕೊಳ್ಳುವ ನಿಮ್ಮ ಪ್ರಯತ್ನಗಳಿಗೆ ಹೆಚ್ಚಿನ ಫಲ ಸಿಗುತ್ತದೆ. ವಿಶೇಷವಾಗಿ ಬೆಳಗ್ಗಿನ ಉಪಾಹಾರಕ್ಕೆ ಕಾಳುಮೆಣಸಿನ ಪುಡಿ ಚಿಮುಕಿಸಿದ ಮೊಟ್ಟೆ ನಿಮ್ಮ ಆಯ್ಕೆಯಾಗಿದ್ದರೆ ಇದು ದಿನದ ಇತರ ವೇಳೆಯಲ್ಲಿ ಏನಾದರೂ ತಿನ್ನಬೇಕೆಂಬ ಬಯಕೆಯನ್ನು ಹತ್ತಿಕ್ಕಿ ಬೇಡದ ಅನಾರೋಗ್ಯಕರ ಆಹಾರ ಸೇವಿಸದಿರಲು ನೆರವಾಗುತ್ತದೆ. ಇದರಿಂದ ಹೆಚ್ಚಬಹುದಾಗಿದ್ದ ತೂಕ ಏರದಿರುತ್ತದೆ ಹಾಗೂ ಕಾಳು ಮೆಣಸನ್ನು ಜೀರ್ಣಿಸಲು ಹೆಚ್ಚಿನ ಕೊಬ್ಬು ಅವಶ್ಯವಿರುವ ಕಾರಣ ತೂಕ ಶೀಘ್ರವಾಗಿ ಇಳಿಯುತ್ತದೆ.

ಮೆದುಳಿನ ಕ್ಷಮತೆ ಹೆಚ್ಚುತ್ತದೆ
ಕಾಳುಮೆಣಸಿನ ಪುಡಿ ಚಿಮುಕಿಸಿದ ಮೊಟ್ಟೆಯನ್ನು ನಿತ್ಯವೂ ನಿಮ್ಮ ಉಪಾಹಾರದ ಒಂದು ಭಾಗವಾಗಿ ಇರಿಸಿದರೆ ಇದರಿಂದ ಸ್ಮರಣಶಕ್ತಿ ಮತ್ತು ಮೆದುಳಿನ ಕ್ಷಮತೆ ಹೆಚ್ಚುತ್ತದೆ ಎಂದು ಕಂಡುಕೊಳ್ಳಲಾಗಿದೆ. ಏಕೆಂದರೆ ಮೊಟ್ಟೆಯಲ್ಲಿರುವ ಕೋಲೀನ್ (choline) ಎಂಬ ಪೋಷಕಾಂಶ ಮೆದುಳಿನ ಜೀವಕೋಶಗಳನ್ನು ಆರೋಗ್ಯಕರ ಮಟ್ಟದಲ್ಲಿ ವೃದ್ಧಿಸಲು ನೆರವಾಗುತ್ತದೆ.



Click it and Unblock the Notifications
