Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯದ ಸರದಾರ ಪಾಲಕ್ ಸೊಪ್ಪಿನ ಪವರ್...
ನಮ್ಮಲ್ಲಿ ಹಲವರಿಗೆ ಸೊಪ್ಪು ಎಂದರೆ ಬೇಡ ಎನ್ನಬೇಕಾದ ಪದಾರ್ಥವಾಗಿದೆ. ಅದರಲ್ಲೂ ಗಾಢ ಹಸಿರು ಬಣ್ಣದ ಬಸಲೆ, ಹರಿವೆ, ಪಾಲಕ್, ಮೆಂತೆ ಮೊದಲಾದ ಸೊಪ್ಪುಗಳನ್ನು ನೋಡಿದಾಕ್ಷಣ ಮೂಗು ಮುರಿಯುತ್ತಾರೆ. ಆದರೆ ಈ ಸೊಪ್ಪುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ನು, ಖನಿಜಗಳು ಮತ್ತು ಮುಖ್ಯವಾಗಿ ಕಬ್ಬಿಣದ ಅಂಶವಿದೆ. ಸರಳ ತಯಾರಿಕೆಯ ಹರಿಕಾರ: ಪಾಲಕ್ ರೈಸ್ ಬಾತ್
ದಪ್ಪನೆಯ ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚೇ ಇದೆ. ಇದರೊಂದಿಗೆ ಫೈಟೋ ನ್ಯೂಟ್ರಿಯೆಂಟ್ ಎಂಬ ಪೋಷಕಾಂಶಗಳ ಜೊತೆಗೆ ಕ್ಯಾಲೋರಿಗಳೂ ಕಡಿಮೆ ಇರುವ ಕಾರಣ ಇದನ್ನೊಂದು ಸುಪರ್ ಆಹಾರ ಎಂದೂ ಕರೆಯಬಹುದು. ನಿಯಮಿತವಾಗಿ ಪಾಲಕ್ ಸೊಪ್ಪನ್ನು ಸೇವಿಸುತ್ತಾ ಇರುವ ಮೂಲಕ ಆರೋಗ್ಯಕ್ಕೆ ಹಲವಾರು ಲಾಭಗಳಿವೆ. ಇವುಗಳಲ್ಲಿ ಪ್ರಮುಖವಾದವು ಹೀಗಿವೆ...

ಅತಿ ಹೆಚ್ಚಿನ ಕಬ್ಬಿಣದ ಪ್ರಮಾಣ
ಕಬ್ಬಿಣ ಅತಿ ಹೆಚ್ಚಿರುವ ಸೊಪ್ಪುಗಳೆಂದರೆ ಬಸಲೆ ಮತ್ತು ಪಾಲಕ್. ಬಸಲೆ ಆಗಾಗ ಸಿಗದೇ ಹೋದರೂ ಪಾಲಕ್ ಮಾತ್ರ ವರ್ಷವಿಡೀ ಸಿಗುತ್ತದೆ. ನಮ್ಮ ರಕ್ತದ ಕೆಂಪುಕಣಗಳ ಉತ್ಪತ್ತಿಗೆ ಕಬ್ಬಿಣ ಅತಿ ಅವಶ್ಯಕ. ಇದೇ ಕಾರಣದಿಂದ ಮಹಿಳೆಯರ ಮಾಸಿಕ ದಿನಗಳಲ್ಲಿ ಸೇವಿಸಲು ಬಸಲೆ ಮತ್ತು ಪಾಲಕ್ ಉತ್ತಮವಾದ ಆಹಾರಗಳಾಗಿವೆ. ಅಲ್ಲದೇ ಈ ಸೊಪ್ಪಿನ ದ್ರವಾಂಶ ಕ್ಷಾರೀಯವಾಗಿದ್ದು ಸಂಧಿವಾತ (rheumatoid arthritis) ಮತ್ತು ಆಮ್ಲವ್ಯಾಧಿ (acidosis) ಎಂಬ ತೊಂದರೆಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಒಸಡುಗಳಲ್ಲಿ ರಕ್ತ ಒಸರುತ್ತಿದ್ದರೆ ಕಡಿಮೆ ಮಾಡುತ್ತದೆ.

ಅಪಧಮನಿಕಾಠಿಣ್ಯ (atherosclerosis) ನಿವಾರಿಸುತ್ತದೆ
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಫೋಲಿಕ್ ಆಮ್ಲದ ಪರಿಣಾಮವಾಗಿ ಅಪಧಮನಿಕಾಠಿಣ್ಯ ಎಂಬ ಸ್ಥಿತಿ (ರಕ್ತನಾಳಗಳ ಒಳಗೆ ಜಿಡ್ಡು ತುಂಬಿ ಕಠಿಣವಾಗುವುದು) ಕಡಿಮೆಯಾಗುತ್ತದೆ. ಇದರಲ್ಲಿರುವ ಹರಿತ್ತು ಮತ್ತು ಫ್ಲೇವನಾಯ್ಡುಗಳು ಕ್ಯಾನ್ಸರ್ ಗೆ ಕಾರಣವಾಗುವ ಕಣಗಳ ವಿರುದ್ದ ಹೋರಾಡುವ ಗುಣ ಹೊಂದಿವೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿರುವ ಕ್ಯಾರೋಟಿನಾಯ್ಡ್ ಎಂಬ ಪೋಷಕಾಂಶ ಮತ್ತು ವಿಟಮಿನ್ ಎ ಕಣ್ಣುಗಳಿಗೆ ಉತ್ತಮವಾಗಿದ್ದು ವಿಶೇಷವಾಗಿ ರಾತ್ರಿಹೊತ್ತು ಆವರಿಸುವ ಅಂಧತ್ವವನ್ನು ನಿವಾರಿಸುತ್ತದೆ. ಅಲ್ಲದೇ ಒಣದಾಗುವ ಕಣ್ಣುಗಳು, ಕಣ್ಣಿನ ತುರಿಕೆ, ಕಣ್ಣಿನ ಅಲ್ಸರ್ ಮೊದಲಾದ ಸ್ಥಿತಿಗಳಿಂದಲೂ ರಕ್ಷಿಸುತ್ತದೆ. ಇದರ ಉರಿಯೂತ ನಿವಾರಕ ಗುಣ ಕಣ್ಣುಗಳ ಕೆಳಗಿನ ಚರ್ಮದಲ್ಲಿ ತುಂಬಿಕೊಂಡಂತಾಗುವ ಸ್ಥಿತಿಯಿಂದಲೂ ಕಾಪಾಡುತ್ತದೆ.

ಮಲಬದ್ಧತೆಯಿಂದ ರಕ್ಷಿಸುತ್ತದೆ
ಪಾಲಕ್ ನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ನಿಯಮಿತವಾದ ಸೇವನೆಯಿಂದ ಮಲಬದ್ಧತೆಯಾಗದೇ ಇರುವಂತೆ ನೋಡಿಕೊಳ್ಳಬಹುದು. ತನ್ಮೂಲಕ ಹೊಟ್ಟೆಯ, ಕರುಳಿನ ಹುಣ್ಣು, ಅಜೀರ್ಣ, ಮೂಲವ್ಯಾಧಿ ಮೊದಲಾದ ತೊಂದರೆಗಳಿಂದಲೂ ಕಾಪಾಡಿದಂತಾಗುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಕೆ ಮೂಳೆಗಳಲ್ಲಿ ಟೊಳ್ಳಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಇದರಲ್ಲಿರುವ ಓಸ್ಟಿಯೋಕ್ಯಾಲ್ಸಿನ್ (osteocalcin) ಎಂಬ ಪೋಷಕಾಂಶ ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಿ ಇನ್ನಷ್ಟು ದೃಢಗೊಳಿಸಲು ನೆರವಾಗುತ್ತವೆ.

ಗರ್ಭಿಣಿಯರಿಗೂ ಉತ್ತಮವಾಗಿದೆ
ಇದರಲ್ಲಿರುವ ಫೋಲೇಟ್ ಎಂಬ ಪೋಷಕಾಂಶ ಗರ್ಭಿಣಿಯರಿಗೆ ಉತ್ತಮವಾಗಿದ್ದು ಶಿಶುವಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಅಲ್ಲದೇ ಇದರ ಮೂಲಕ ಮಗುವಿನಲ್ಲಿ ಸೀಳುತುಟಿ, ಬೆನ್ನಿನಲ್ಲಿ ಬರುವ ಗುಳ್ಳೆ (spina bifida) ಎಂಬ ಸ್ಥಿತಿಯಿಂದಲೂ ರಕ್ಷಿಸಬಹುದು. ಪಾಲಕ್ ನಲ್ಲಿರುವ ವಿಟಮಿನ್ ಎ ಮಗುವಿನ ಶ್ವಾಸಕೋಶದ ಬೆಳವಣಿಗೆಯಲ್ಲಿ ಸಹಕರಿಸುತ್ತದೆ.

ಹಾಲೂಡಿಸುವ ತಾಯಂದಿರಿಗೂ ಉತ್ತಮವಾಗಿದೆ
ಹಾಲೂಡಿಸುವ ತಾಯಂದಿರು, ಬಾಣಂತಿಯರು ನಿತ್ಯವೂ ಪಾಲಕ್ ಅಥವಾ ಬಸಲೆ ಸೊಪ್ಪನ್ನು ಸೇವಿಸಬೇಕು. ಏಕೆಂದರೆ ಇದರಲ್ಲಿರುವ ಕಬ್ಬಿಣದ ಅಂಶ ಕಳೆದುಕೊಂಡ ರಕ್ತವನ್ನು ಮತ್ತೆ ನಿರ್ಮಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ಎದೆಹಾಲಿನ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಅದರಲ್ಲೂ ರಕ್ತದ ಒತ್ತಡ ಹೆಚ್ಚಿರುವ ತಾಯಂದಿರಿಗೆ ಇದು ಹೆಚ್ಚಿನ ಪೊಟ್ಯಾಶಿಯಂ ಮತ್ತು ಕಡಿಮೆ ಸೋಡಿಯಂ ಇರುವ ಅದ್ಭುತವಾದ ಆಹಾರವಾಗಿದ್ದು ರಕ್ತದಲ್ಲಿ ಸೋಡಿಯಂ ಅಂಶವನ್ನು ಕಡಿಮೆ ಮಾಡಿ ರಕ್ತದ ಒತ್ತಡವನ್ನು ಆರೋಗ್ಯಕರ ಮಟ್ಟಕ್ಕೆ ಇಳಿಸಲು ನೆರವಾಗುತ್ತದೆ.



Click it and Unblock the Notifications
