Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲವಲವಿಕೆಯ ಆರೋಗ್ಯಕ್ಕೆ- ಬೀಟ್‌ರೂಟ್+ಲಿಂಬೆಯ ಜ್ಯೂಸ್
ಸ್ವಲ್ಪ ಶುಂಠಿ, ಲಿಂಬೆರಸ ಮತ್ತು ಬೀಟ್ ರೂಟ್ ಅನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಜ್ಯೂಸ್ ಮಾಡಿಕೊಳ್ಳಿ. ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಅನ್ನು ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆಯುರ್ವೇದ ಚಿಕಿತ್ಸೆಯನ್ನು ಹೆಚ್ಚು ನೆಚ್ಚಿಕೊಂಡಿರುವವರು ಗಿಡಮೂಲಿಕೆಗಳಿಂದ ಕೂಡಿರುವಂತಹ ಪಾನೀಯ ಹಾಗೂ ಜ್ಯೂಸ್ ಗಳಿಂದ ಹಲವಾರು ರೋಗಗಳನ್ನು ತಡೆಯಬಹುದು ಮತ್ತು ನಿವಾರಣೆ ಮಾಡಬಹುದು ಎಂದು ಭಾವಿಸಿದ್ದಾರೆ. ಇದು ನಿಜ ಕೂಡ. ಯಾಕೆಂದರೆ ತರಕಾರಿ ಅಥವಾ ಹಣ್ಣುಗಳಿಂದ ಮಾಡಿದಂತಹ ಕೆಲವೊಂದು ಜ್ಯೂಸ್‌ಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಬೀಟ್ ರೂಟ್, ಶುಂಠಿ ಮತ್ತು ಲಿಂಬೆರಸದಿಂದ ಮಾಡಿದಂತಹ ಜ್ಯೂಸ್ ಕೂಡ ಒಳಗೊಂಡಿದೆ. ಜೇನು ಬೆರೆಸಿದ ಬೀಟ್‌ರೂಟ್ ಜ್ಯೂಸ್ ಕುಡಿದರೆ ಹತ್ತಾರು ಲಾಭ!
ಸ್ವಲ್ಪ ಶುಂಠಿ, ಲಿಂಬೆರಸ ಮತ್ತು ಬೀಟ್ ರೂಟ್ ಅನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಜ್ಯೂಸ್ ಮಾಡಿಕೊಳ್ಳಿ. ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಅನ್ನು ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಶುಂಠಿ, ಲಿಂಬೆರಸ ಹಾಗೂ ಬೀಟ್ ರೂಟ್ ನಿಂದ ಮಾಡಿದ ಜ್ಯೂಸ್‌ನ ಆರೋಗ್ಯ ಲಾಭಗಳು ಏನು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಿ...

ಅತಿ ರಕ್ತದೊತ್ತಡ ನಿವಾರಣೆ
ಆರೋಗ್ಯಕರವಾದ ಈ ಜ್ಯೂಸ್ ಅತಿ ರಕ್ತದೊತ್ತಡವನ್ನು ನಿವಾರಣೆ ಮಾಡುತ್ತದೆ. ಈ ಜ್ಯೂಸ್ ನಲ್ಲಿರುವ ನೈಟ್ರೇಟ್ ರಕ್ತನಾಳಗಳನ್ನು ಹಿಗ್ಗಿಸಿ ರಕ್ತವು ಸರಿಯಾಗಿ ಸರಬರಾಜು ಆಗುವಂತೆ ನೋಡಿಕೊಳ್ಳುತ್ತದೆ. ಅಧಿಕ ರಕ್ತದೊತ್ತಡ ತಡೆಯಲು ಗಿಡಮೂಲಿಕೆಗಳು

ಪಾರ್ಶ್ವವಾಯು ತಡೆಯುವುದು
ಬೀಟ್ ರೂಟ್, ಶುಂಠಿ ಮತ್ತು ನಿಂಬೆರಸದಿಂದ ಮಾಡಿದ ಜ್ಯೂಸ್ ಪಾರ್ಶ್ವವಾಯುವನ್ನು ತಡೆಯುತ್ತದೆ. ಮೆದುಳಿಗೆ ರಕ್ತವು ಸರಿಯಾಗಿ ಸಂಚಾರವಾಗುವಂತೆ ಮಾಡಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದು.

ಪ್ರತಿರಕ್ಷಣಾ ವ್ಯವಸ್ಥೆ ಸುಧಾರಣೆ
ಇದರಲ್ಲಿ ಪೋಷಕಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿರುವ ಕಾರಣದಿಂದಾಗಿ ದೇಹದಲ್ಲಿರುವ ಪ್ರತಿಯೊಂದು ಕೋಶಗಳಿಗೂ ಇದು ಪೋಷಣೆಯನ್ನು ನೀಡುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಿ ಯಾವುದೇ ರೋಗ ಬರದಂತೆ ತಡೆಯುತ್ತದೆ.

ಅಜೀರ್ಣ ನಿವಾರಣೆ
ಈ ಜ್ಯೂಸ್ ಹೊಟ್ಟೆಯಲ್ಲಿರುವ ಆಮ್ಲವು ತಟಸ್ಥವಾಗಿರುವಂತೆ ನೋಡಿಕೊಳ್ಳುತ್ತದೆ. ಇದು ಅಜೀರ್ಣ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡುತ್ತದೆ.

ಆರೋಗ್ಯಕರ ಚರ್ಮ
ಬೀಟ್ ರೂಟ್, ಶುಂಠಿ ಮತ್ತು ಲಿಂಬೆರಸವನ್ನು ಹಾಕಿರುವ ಜ್ಯೂಸ್ ಕುಡಿದರೆ ಆರೋಗ್ಯಕರ, ಕಾಂತಿಯುತ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಜ್ಯೂಸ್ ಚರ್ಮದ ಕೋಶಗಳಿಗೆ ಪೋಷಕಾಂಶವನ್ನು ನೀಡುತ್ತದೆ.

ಕರುಳನ್ನು ಸ್ವಚ್ಛತೆಗೆ
ಕರುಳಿನಲ್ಲಿ ಶೇಖರಣೆಗೊಂಡಿರುವ ತ್ಯಾಜ್ಯ ಹಾಗೂ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಿಂದ ನಿಮ್ಮ ಕರುಳು ಸ್ವಚ್ಛ ಹಾಗೂ ಆರೋಗ್ಯಕರವಾಗಿರುತ್ತದೆ.

ತೂಕ ಕಳೆದುಕೊಳ್ಳಲು ಸಹಕಾರಿ
ಈ ಜ್ಯೂಸ್ ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸಿ ಕ್ಯಾಲರಿ ದಹಿಸುವ ಕಾರಣದಿಂದಾಗಿ ತೂಕ ಇಳಿಸಿಕೊಳ್ಳಲು ತುಂಬಾ ಪರಿಣಾಮಕಾರಿ.



Click it and Unblock the Notifications
