ಅರಿಶಿನ ಬೆರೆಸಿದ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

By Super
Subscribe to Boldsky

ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಏನಾದರೂ ಮಾಡುತ್ತಲೇ ಇರಬೇಕಾಗುತ್ತದೆ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾವು ತೆಗೆದುಕೊಳ್ಳುವಂತಹ ಕೆಲವೊಂದು ಆಹಾರಗಳು, ಪಾನೀಯ ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದಕ್ಕಾಗಿಯೇ ನಾವು ಬೆಳಿಗ್ಗೆ ಎದ್ದು ಬಿಸಿ ನೀರಿಗೆ ಲಿಂಬೆ ರಸ ಹಾಕಿ ಕುಡಿಯುವುದು, ಯಾವುದಾದರೂ ಹಣ್ಣುಗಳು ಜ್ಯೂಸ್ ಕುಡಿಯುವುದು ನಮ್ಮ ದೇಹಕ್ಕೆ ಒಳ್ಳೆಯದೇ. ಆದರೆ ನಾವು ಅಡುಗೆಯಲ್ಲಿ ಬಳಸುವಂತಹ ಅರಿಶಿನವು ನಮ್ಮ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ ಎಂದು ನಿಮಗೆ ತಿಳಿದಿದೆಯಾ?  ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಹೌದು, ಇದರಲ್ಲಿರುವ ಊರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು, ಆಗಾಧ ಪ್ರಮಾಣದಲ್ಲಿರುವುದರಿಂದ. ಅರಿಶಿನ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಕರ್ಕ್ಯೂಮಿನಂತಹ ಅಂಶವು ವೈಜ್ಞಾನಿಕ ವಲಯದಲ್ಲಿ ಅರಿಶಿನಕ್ಕೆ ಒಂದು ಉನ್ನತ ಸ್ಥಾನವನ್ನು ನೀಡಿದೆ. ಅರಿಶಿನಲ್ಲಿ ಶಮನಕಾರಿ ಗುಣಗಳು ಇವೆ ಎನ್ನುವುದು ಇತ್ತೀಚಿನ ಕೆಲವೊಂದು ಅಧ್ಯಯನಗಳಿಂದ ತಿಳಿದುಬಂದಿದೆ.  ಅರಿಶಿನ ಪುಡಿಯಲ್ಲಿ ಅಡಗಿದೆ ತ್ವಚೆಯ ಸೌಂದರ್ಯದ ರಹಸ್ಯ

ಅರಿಶಿನದ ನೀರನ್ನು ಸೇವಿಸಿದರೆ ಆರೋಗ್ಯ ವೃದ್ಧಿಸುವುದು. ಹಾಗಾದರೆ ಅರಿಶಿನದ ನೀರನ್ನು ಮಾಡುವುದು ಹೇಗೆ ಎನ್ನುವುದು ನೀವು ತಿಳಿದುಕೊಳ್ಳಿ. ಒಂದು ಲೋಟ ಬಿಸಿ ನೀರಿಗೆ ಒಂದು ಚಿಟಿಕೆಯಷ್ಟು ಅರಿಶಿನ ಪುಡಿ ಮತ್ತು ಒಂದು ಚಮಚ ಕರಿಮೆಣಸಿನ ಪುಡಿಯನ್ನು ಹಾಕಿ. ಇದನ್ನು ಸರಿಯಾಗಿ ಕಳಸಿ. ಇದನ್ನು ಬೆಳಗ್ಗಿನ ವೇಳೆ ಬಿಸಿ ಇರುವಾಗಲೇ ಬರೀ ಹೊಟ್ಟೆಗೆ ಸೇವಿಸಿ. ಬನ್ನಿ ಅರಿಶಿನ ನೀರನ್ನು ದಿನಾಲೂ ಕುಡಿದರೆ ಏನಾಗುತ್ತದೆ ಎನ್ನುವುದನ್ನು ತಿಳಿಯೋಣ..

ಅರಿಶಿನವು ರಕ್ಷಣೆ ನೀಡುವುದು

ಅರಿಶಿನವು ರಕ್ಷಣೆ ನೀಡುವುದು

ಅರಿಶಿನದ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಅದು ನಿಮ್ಮ ದೇಹಕ್ಕೆ ರಕ್ಷಣೆಯನ್ನು ನೀಡುವುದು. ದೇಹದಲ್ಲಿ ಸೃಷ್ಟಿಯಾಗಬಹುದಾದ ಕೆಲವೊಂದು ರೀತಿಯ ಕ್ಯಾನ್ಸರ್ ಅನ್ನು ಇದು ಬರದಂತೆ ತಡೆಯುವುದು

ಮಧುಮೇಹ ತಡೆಯುವುದು

ಮಧುಮೇಹ ತಡೆಯುವುದು

ಅರಿಶಿನ ನೀರನ್ನು ಕುಡಿಯುವುದರಿಂದ ಎರಡನೇ ಹಂತದ ಮಧುಮೇಹವನ್ನು ನಿವಾರಿಸಬಹುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.

ಯಕೃತ್‌ಗೆ ಒಳ್ಳೆಯದು

ಯಕೃತ್‌ಗೆ ಒಳ್ಳೆಯದು

ವಿಷಕಾರಿ ಅಂಶಗಳು ಯಕೃತ್ (ಲಿವರ್) ನ್ನು ನಾಶ ಮಾಡಲು ಪ್ರಯತ್ನಿಸುತ್ತದೆ. ಆದರೆ ಅರಿಶಿನವು ಇದನ್ನು ತಡೆದು ಯಕೃತ್ ಪುನರ್ಜೀವನ ಪಡೆಯಲು ನೆರವಾಗುವುದು.

ವಯನ್ಸಾಗುವುದನ್ನು ನಿಧಾನಗೊಳಿಸುವುದು

ವಯನ್ಸಾಗುವುದನ್ನು ನಿಧಾನಗೊಳಿಸುವುದು

ಅರಿಶಿನದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮವು ನೆರಿಗೆ ಬೀಳದಂತೆ ತಡೆದು ನಿಮಗೆ ವಯಸ್ಸಾಗುವುದನ್ನು ನಿಧಾನಗೊಳಿಸುವುದು.

ಉರಿಯೂತ ನಿವಾರಣೆ

ಉರಿಯೂತ ನಿವಾರಣೆ

ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಉರಿಯೂತ ನಿವಾರಕ ಔಷಧಿಗಳಿಗಿಂತ ಅರಿಶಿನವು ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳಿವೆ.

ಸಂಧಿನೋವು ನಿವಾರಣೆ

ಸಂಧಿನೋವು ನಿವಾರಣೆ

ಅರಿಶಿನದಲ್ಲಿ ಉರಿಯೂತ ನಿವಾರಣ ಗುಣಗಳು ಇರುವ ಕಾರಣದಿಂದ ಇದು ಸಂಧಿಯಲ್ಲಿ ಉಂಟಾಗುವ ಊತ ಮತ್ತು ನೋವನ್ನು ಶಮನ ಮಾಡುವುದು.

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ಅರಿಶಿನದಲ್ಲಿ ಕರ್ಕ್ಯೂಮಿನ್ ಎನ್ನುವ ಅಂಶವಿದೆ. ಇದು ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟದಂತೆ ತಡೆಯುವುದು. ಇದರಿಂದ ಇದು ನಿಮ್ಮ ಹೃದಯಕ್ಕೆ ಒಳ್ಳೆಯದು.

ಕೆಲವೊಂದು ಕ್ಯಾನ್ಸರ್ ನಿವಾರಕ

ಕೆಲವೊಂದು ಕ್ಯಾನ್ಸರ್ ನಿವಾರಕ

ಅರಿಶಿನದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್‌ನಿಂದ ಹಾನಿಗೊಳಗಾಗಿರುವ ಕೋಶಗಳನ್ನು ಸರಿಪಡಿಸುವುದು.

 
For Quick Alerts
ALLOW NOTIFICATIONS
For Daily Alerts

    English summary

    What Happens If You Drink Turmeric Water

    You must have tried many remedies like drinking lemon water in the morning and starting your day with a vegetable juice. They are all healthy habits. Warm turmeric water joins that list. As turmeric is anti-inflammatory and contains anti-oxidants, it is a good idea to try this. Now, let us discuss what happens when you dink it regularly, turmeric Water
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more