Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಹೃದಯ ವೈಫಲ್ಯತೆಗೆ ತುತ್ತಾಗದಿರಿ, ಎಚ್ಚರ!
ಪ್ರತಿಯೊಬ್ಬರೂ ಸಹ ತಮ್ಮ ತಮ್ಮ ಆರೋಗ್ಯದ ಬಗ್ಗೆ ಖಂಡಿತವಾಗಿಯೂ ಕಾಳಜಿ ವಹಿಸಲೇಬೇಕು. ಏಕೆಂದರೆ ನಿಮ್ಮ ಆರೋಗ್ಯದಲ್ಲೇ ನೀವು ಜೀವಿಸುತ್ತಿರುವಿರಿ ಎಂಬ ಸತ್ಯವನ್ನು ಮೊದಲು ತಿಳಿಯುವ ಕಾಲ ಬಂದಿದೆ. ಈಗಿನ ಆಹಾರ ಪದ್ಧತಿ, ಜೀವನ ಶೈಲಿ, ವಾತಾವರಣ ಮತ್ತು ನಿಮ್ಮ ಕೆಲವು ಅಭ್ಯಾಸಗಳು ನಿಮ್ಮ ಹೃದಯಕ್ಕೆ ಮಾರಕ ಎಂಬುದು ನಿಮಗೆ ತುಂಬಾ ತಡವಾಗಿ ಗೊತ್ತಾಗುವ ಹೊತ್ತಿಗೆ, ಆರೋಗ್ಯವು ವಿಧಿಯ
ಕೈಲಿರುತ್ತದೆ. ಹೀಗೆ ತಮ್ಮ ದುರಭ್ಯಾಸಗಳಿಂದ ಅದೆಷ್ಟೋ ಜನ ಪ್ರತಿನಿತ್ಯ ತಮ್ಮ ಸುಂದರವಾದ ಜೀವನವನ್ನು ಕಳೆದುಕೊಂಡು ಹೃದಯ ರೋಗಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೃದಯದ ಸಿಡಿತವು ಹೃದಯದ ಮಿಡಿತವನ್ನು ಬಲ್ಲವರಿಗೆ ಮಾತ್ರ ಗೊತ್ತಿರುತ್ತದೆ. ನೀವು ಜಾಗರೂಕರಾಗಿದ್ದರೆ ಖಂಡಿತಾ ಹೃದಯ ವೈಫಲ್ಯದಿಂದ ರಕ್ಷಿಸಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ಸಾಬೀತುಪಡಿಸಿದೆ.

ಉದಾಹರಣೆಗೆ - ಧೂಮಪಾನ ನಿಲ್ಲಿಸುವುದು, ದೇಹದ ತೂಕವನ್ನು ಕಡಿಮೆಮಾಡುವುದು, ಬೊಜ್ಜನ್ನು ನಿಯಂತ್ರಿಸುವುದು, ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು, ಕ್ರಮವಾದ ವ್ಯಾಯಮ, ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವುದು ಮತ್ತು ನಿಮ್ಮ ರಕ್ತದೊತ್ತಡವನ್ನು ಹತೋಟಿಯಲ್ಲಿಡುವುದು.
ಈ ರೀತಿಯ ವಿಧಾನಗಳಿಂದ ನಿಮ್ಮ ಹೃದಯವು ಅತ್ಯಂತ ಆರೋಗ್ಯಕರವಾಗಿರುತ್ತದೆ. ಈ ನಿಟ್ಟಿನಲ್ಲಿ ಹೃದಯದ ವೈಫಲ್ಯತೆಗೆ ನಾನಾ ರೀತಿಯ ಕಾರಣಗಳಿದ್ದು, ಕೂಡಲೇ ಈ ಬಗ್ಗೆ ಜಾಗೃತಿ ವಹಿಸಿರಿ. ಅಧ್ಯಯನದ ಭಾಗವಾಗಿ, ಸಂಶೋಧಕರು ಸುಮಾರು 3000 ಜನರನ್ನು 12 ವರ್ಷಗಳ ಅವಧಿಯನ್ವಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಭಾಗವಹಿಸಿದ ಹೆಚ್ಚಿನವರು 35 ರ ವಯಸ್ಸಿನ ಆಸುಪಾಸಿನಲ್ಲಿರುವವರಾಗಿದ್ದಾರೆ.
ಭಾಗವಹಿಸಿದ ಕೆಲವರು ಹೃದಯ ಸಂಬಂಧಿ ಖಾಯಿಲೆಯನ್ನು ಅನುಭವಿಸಿದಂತವರು. ಹೀಗಾಗಿ ಕೆಲವರು ಅವರ ಜೀವನ ಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಂಡು ಅಪಾಯದ ಪ್ರಮಾಣವನ್ನು ಶೇಖಡಾ 23 ರಷ್ಟು ತಗ್ಗಿಸಿಕೊಂಡಿದ್ದಾರೆ. ಉಳಿದವರು ಹೆಚ್ಚಿನ ವ್ಯಾಯಾಮದ ಅಭ್ಯಾಸದಿಂದ ಶೇಖಡಾ 50 ರಷ್ಟು ಅಪಾಯದ ಪ್ರಮಾಣವನ್ನು ತಗ್ಗಿಸಿಕೊಂಡಿರುತ್ತಾರೆ. ಸಂಶೋಧಕರು ಹೇಳುವ ಪ್ರಕಾರ ನಿಮ್ಮ ಆರೋಗ್ಯದ ಸ್ಥಿತಿಯನ್ನು
ಚೆನ್ನಾಗಿ ಅರಿತರೆ, ಮುಂದೆ ಸಂಭವಿಸಬಹುದಾದ ಅನಾರೋಗ್ಯದ ಅಪಾಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಬಹುದು ಹಾಗೂ ಪ್ರಾರಂಭಿಕ ಹಂತದಲ್ಲಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಪುಟ್ಟ ಹೃದಯದ ಆರೋಗ್ಯಕ್ಕೂ ಸ್ವಲ್ಪ ಆದ್ಯತೆ ನೀಡಿ!
ಉದಾಹರಣೆಗೆ, ಪ್ರಾರಂಭಿಕ ಹಂತದಲ್ಲಿರುವ ಧೂಮಪಾನದ ಚಟವನ್ನು ಕೂಡಲೇ ಅರಿತು ಅದನ್ನು ನಿಲ್ಲಿಸಲು ಪ್ರಯತ್ನಿಸಿ ಅದರ ವ್ಯತ್ಯಾಸವನ್ನು ಕಂಡುಕೊಳ್ಳುವುದು. ನಿಮ್ಮ ದೇಹದ ಆರೋಗ್ಯದ ಸ್ಥಿತಿಯು ನಿಮಗೆ ಚೆನ್ನಾಗಿ ತಿಳಿದಿದ್ದರೆ ಅದಕ್ಕೆ ತಕ್ಕಂತೆ ವ್ಯಾಯಾಮದ ಕ್ರಮವನ್ನು ಅನುಸರಿಸಬಹುದು. ಒಂದು ವೇಳೆ ನಿಮ್ಮ ದೇಹದ ತೂಕವು ಅಸಹಜವೆನಿಸಿದರೆ ತಕ್ಷಣವೇ ದೇಹದ ತೂಕವನ್ನು ಇಳಿಸುವ ಸೂಕ್ತವಾದ ವ್ಯಾಯಾಮದ ಅಭ್ಯಾಸವನ್ನು ಪ್ರಾರಂಭಿಸಬಹುದು.
ಈ ರೀತಿಯ ಸಕಾರಾತ್ಮಕ ಅಭ್ಯಾಸಗಳಿಂದ ಹೃದಯಾಘಾತದ ಅಪಾಯವನ್ನು ಸುಲಭವಾಗಿ ತಡೆಯಬಹುದು. ಮುಖ್ಯವಾಗಿ 25 ವರ್ಷ ಮೇಲ್ಪಟ್ಟವರು ಕ್ರಮವಾದ ತಪಾಸಣೆ ಮಾಡಿಸುವುದು ಸೂಕ್ತ. ಒಂದು ವೇಳೆ ವೈದ್ಯರು ನಿಮ್ಮ ಹೃದಯ ದುರ್ಬಲ ಎಂದು ತಿಳಿಸಿದರೆ ಕೂಡಲೇ ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿ ಅಪಾಯದ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡುವುದು. ಹೃದಯವನ್ನು ಹೀಗೆ ಜೋಪಾನ ಮಾಡಿ
ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ರಕ್ತದೊತ್ತಡ ಬಹುಮುಖ್ಯ ಪಾತ್ರವಹಿಸುತ್ತವೆ. ಊಟದ ಪದ್ಧತಿ ಹಾಗೂ ವ್ಯಾಯಾಮದ ಪದ್ಧತಿಯನ್ನು ನಿಮ್ಮ ಕುಟುಂಬದ ವೈದ್ಯರ ನೆರವನ್ನು ಪಡೆದು ಕ್ರಮವಾಗಿ ಅನುಸರಿಸುವುದು. ಹೃದಯ ಸಂಬಂಧಿ ಸಮಸ್ಯೆಗಳು ಪ್ರಾರಂಭಿಕ ಹಂತದಲ್ಲೇ ತಿಳಿದುಬಂದರೆ, ಅದನ್ನು ಗುಣಪಡಿಸಲು ಅವಶ್ಯವಿರುವ ಹಾಗೂ ಅಪಾಯವನ್ನು ತಗ್ಗಿಸುವ ಜೀವನ ಶೈಲಿಯನ್ನು ಅನುಸರಿಸಿದರೆ ನಿಜಕ್ಕೂ ಹೃದಯವನ್ನು ಅನೇಕ ಸಮಸ್ಯೆಗಳಿಂದ ಸುಲಭವಾಗಿ ರಕ್ಷಿಸಬಹುದು ಎಂದು ಈ ಸಂಶೋಧನೆಯಿಂದ ಅಂತಿಮವಾಗಿ ಸಾಬೀತಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


