Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೆನಪಿಡಿ 'ತಿನ್ನುವ ಕಾಯಿಲೆ' ಅತಿಯಾದರೆ ಚಿಕಿತ್ಸೆ ಅತ್ಯಗತ್ಯ
ಇಂದು ಹಲವರು, ಆಹಾರ ಸೇವನೆಯ ಪದ್ಧತಿಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅತಿಯಾಗಿ ಆಹಾರ ಸೇವನೆ, ಭಾವನಾತ್ಮಕ ಕಾರಣಗಳಿಂದ ಆಹಾರ ಸೇವನೆ, ರಾತ್ರಿ ಹೊತ್ತಿನಲ್ಲಿ ಆಹಾರ ಸೇವನೆ, ಆಹಾರ ಸೇವನೆಯನ್ನೇ ಒಂದು ಚಟವನ್ನಾಗಿಸಿಕೊಳ್ಳುವಿಕೆ.. ಇದಕ್ಕೆ ಈಟಿಂಗ್ ಡಿಸಾರ್ಡರ್ (ತಿನ್ನುವ ಕಾಯಿಲೆ) ಎಂದು ಕರೆಯುತ್ತಾರೆ. ಇನ್ನೂ ಹಲವಾರು ಸಮಸ್ಯೆಗಳ ಪಟ್ಟಿ ಮುಂದುವರೆಯುತ್ತದೆ. ಅವ್ಯವಸ್ಥಿತ ಆಹಾರ ಸೇವನೆಯ ಪದ್ಧತಿ ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತದೆ. ತಿನ್ನುವ ಕಾಯಿಲೆ ಚಿಕಿತ್ಸೆಗೆ ವಿಧಾನಗಳು
ಇಂದು ನಾವು ಪುರುಷರಲ್ಲಿ ಅವ್ಯವಸ್ಥಿತ ಆಹಾರ ಸೇವನೆ ಬಗ್ಗೆ ತಿಳಿದುಕೊಳ್ಳೋಣ. ಪುರುಷರಲ್ಲಿ ಇಂತಹ ಸಮಸ್ಯೆಗೆ ಸಾಕಷ್ಟು ಅಂಶಗಳು ಕಾರಣವಾಗುತ್ತದೆ. ಆತ್ಮವಿಶ್ವಾಸದ ಕೊರತೆ ಇರಬಹುದು, ಒಂದು ಸಂಸ್ಥೆ ಅಥವಾ ಒಂದು ತಂಡಕ್ಕೆ ತಮ್ಮನ್ನು ತಾವು ಸರಿದೂಗಿಸಿಕೊಳ್ಳಬೇಕೆಂಬ ಬಯಕೆ ಇರಬಹುದು, ಒತ್ತಡ, ಗಾಯಗಳು ಹಾಗು ಆದರ್ಶವಾಗಿರಬೇಕೆಂಬ ಹಂಬಲ.. ಹೀಗೆ ಹಲವಾರು ಕಾರಣಗಳು ಸಮಸ್ಯೆಗೆ ಕಾರಣವಾಗಬಹುದು.

ಆಹಾರ ಸೇವನೆಯಿಂದ ಬಳಲುತ್ತಿರುವವರು ಕೆಲವು ಬಾರಿ ತಮ್ಮ ಜೊತೆಗಿರುವವರನ್ನು ನಿಯಂತ್ರಿಸಬೇಕೆಂಬ ಹಂಬಲ ಹೊಂದಿರುತ್ತಾರೆ ಮತ್ತು ನಿಯಂತ್ರಿಸಲು ಯತ್ನಿಸುತ್ತಾರೆ. ಆದರೆ, ಜೊತೆಗಿರುವವರು ಅವರು ಹೇಳಿದಂತೆ ನಡೆದುಕೊಳ್ಳಲಿಲ್ಲವೆಂದರೆ ಅಥವಾ ಅವರನ್ನು ಒಪ್ಪಿಕೊಳ್ಳಲಿಲ್ಲವೆಂದರೆ ವಿಚಲಿತರಾಗುತ್ತಾರೆ, ಅವರ ಆಹಾರ ಸೇವನೆ ಏರುಪೇರಾಗುತ್ತದೆ.
ಮಹಿಳೆಯರಲ್ಲಿ ಇದು ಸರ್ವೇಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಪುರುಷರು ಕೂಡ ಈ ನ್ಯೂನತೆಯಿಂದ ಬಳಲು ಆರಂಭಿಸಿದ್ದಾರೆ. ಆದರೆ, ಪುರುಷರು ತಮ್ಮ ಸಮಸ್ಯೆಯನ್ನು ಮುಕ್ತವಾಗಿ ಹಂಚಿಕೊಳ್ಳುವುದಿಲ್ಲವಾದ್ದರಿಂದ, ಮಹಿಳೆಯರಿಗೆ ಹೋಲಿಸಿದರೆ ಪುರುಷರ ಸಮಸ್ಯೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ. ಮೊದಲು ಇದನ್ನು ಮಹಿಳೆಯರ ಸಮಸ್ಯೆ ಎಂದೇ ಪರಿಗಣಿಸಲಾಗಿತ್ತು.
ಏಕೆಂದರೆ, ಪುರುಷರು ಸಮಾಜದಲ್ಲಿ ಅವಮಾನ ಎದುರಿಸಬೇಕಾಗುತ್ತದೆ ಎಂಬ ಕಾರಣದಿಂದ ಮುಕ್ತವಾಗಿ ಹೇಳಿಕೊಳ್ಳುತ್ತಿರಲಿಲ್ಲ ಮತ್ತು ಚಿಕಿತ್ಸೆಯನ್ನೂ ಪಡೆಯುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಪುರುಷರು ಕೂಡ ಆಹಾರ ಸೇವನೆ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಮುಂದೆ ಬರುತ್ತಿದ್ದಾರೆ.
ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸುವ ಸಮಸ್ಯೆಗಳೆಂದರೆ, ಅನೋಕ್ಸೇರಿಯಾ ನರ್ವೋಸಾ, ಬುಲಿಮಿಯಾ ನರ್ವೋಸಾ ಮತ್ತು ಬಿಂಜ್. ಆಹಾರ ಸೇವನೆಯ ಸಮಸ್ಯೆಯನ್ನು ತಡೆಗಟ್ಟಲು ಮಾಡಬೇಕಾದ ಮೊಟ್ಟಮೊದಲ ಕ್ರಮವೆಂದರೆ ಪ್ರಾರಂಭದ ಹಂತದಲ್ಲಿಯೇ ಈ ಸಮಸ್ಯೆಯ ಇರುವಿಕೆಯನ್ನು ಕಂಡುಹಿಡಿಯುವುದು. ಇದನ್ನು ಕಂಡುಹಿಡಿಯಲು ಕುಟುಂಬದ ಸದಸ್ಯರು ಸಹಕರಿಸಬಹುದು. ಇದಕ್ಕೆ ಚಿಕಿತ್ಸೆ ಕೊಡಿಸಬಹುದು ಅರಿತುಕೊಳ್ಳುವುದು ಮುಂದಿನ ಹಂತ.
ಕೆಲ ಪುರುಷರು ಸಮಾಜದಲ್ಲಿ ಎದುರಿಸಬೇಕಾದ ಮುಜುಗರದಿಂದ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುವುದರಿಂದ ಅವರ ಕುಟುಂಬದವರು, ಸ್ನೇಹಿತರು, ಇತರ ಬಂಧುಗಳು ಅವರು ಚಿಕಿತ್ಸೆ ಪಡೆಯಲು ಮನವೊಲಿಸಬೇಕು ಮತ್ತು ಆರೋಗ್ಯ ಮರಳಿ ಪಡೆಯಲು ಒತ್ತಾಸೆಯಾಗಿರಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

