Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಲೆನೋವಿಗೆ ಗುಡ್ ಬೈ ಹೇಳಲು ಇಲ್ಲಿದೆ 10 ಸಲಹೆ
ಈಗಿನ ದಿನಮಾನಸದಲ್ಲಿ ಪ್ರನಿತ್ಯ ಎಲ್ಲರನ್ನೂ ಕಾಡುತ್ತಿರುವ ಲಘು ಕಾಯಿಲೆಯೆಂದರೆ ಅದು ತಲೆನೋವು ಎಂದರೆ ತಪ್ಪಾಗಲಾರದು. ಹೌದು! ಇತ್ತೀಚಿನ ಒತ್ತಡದ ಬಿಡುವಿಲ್ಲದ ಜೀವನಶೈಲಿಯಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ತಲೆನೋವು ಬಂದೇ ಬರುತ್ತದೆ. ಇದೂ ಸಹ ನಮ್ಮ ದೈನಂದಿನ ಜೀವನಶೈಲಿಯ ಭಾಗಗಳಲ್ಲೊಂದಾಗಿದೆ.
ತಲೆನೋವು ಬಂದಾಕ್ಷಣ ತಕ್ಷಣಕ್ಕೆ ಸುಗುವ ಮಾತ್ರೆಗಳು ಅಥವಾ ತಪ್ಪು ವಿಧಾನಗಳಿಂದ ಅಡ್ಡಪರಿಣಾಮಗಳು ಉಂಟಾಗಿ ಕ್ರಮವಾಗಿ ತಲೆನೋವು ಇನ್ನು ಜಾಸ್ತಿ ಆಗುವ ಅಪಾಯವಿರುತ್ತದೆ. ಈ ಲೇಖನದಲ್ಲಿ ಪ್ರಾಕೃತಿಕವಾಗಿ ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳುವ ಸರಳ ವಿಧಾನಗಳನ್ನು ಬೋಲ್ಡ್ ಸ್ಕೈ ನಿಮಗಾಗಿ ನೀಡುತ್ತಿದೆ. ಅವು ಯಾವುದು ಎಂಬುದನ್ನು ಮುಂದೆ ಓದಿ... ಈ ಮದ್ದುಗಳಿರುವಾಗ ತಲೆನೋವಿಗೆ ಮಾತ್ರೆ ಏಕೆ?

*ಕೇಸರಿ ಮತ್ತು ಬಾದಾಮಿಯನ್ನು ರುಬ್ಬಿಕೊಂದು ಮಿಶ್ರಣ ಮಾಡಿಕೊಳ್ಳಿ. ತಲೆನೋವು ಕಾಣಿಸಿಕೊಂಡಾಗಲೆಲ್ಲಾ ಈ ಮಿಶ್ರಣವನ್ನು ಆಯಿಂಟ್ ಮೆಂಟ್ ರೂಪದಲ್ಲಿ ನಿಮ್ಮ ಹಣೆಗೆ ಹಚ್ಚಿ. ಅದರ ಗಮಲನ್ನು ಸುವಾಸಿಸುವುದೂ ಸಹ ಉತ್ತಮ ಫಲಿತಾಂಶವನ್ನು ನೀಡುತ್ತದೆ.
*ಹಾಲಿಗೆ ಜಾಯಿಕಾಯಿ ತೈಲವನ್ನು ಬೆರೆಸಿ ನಿಮ್ಮ ಹಣೆಗೆ ಹಚ್ಚಿಕೊಂಡರೆ ತಲೆನೋವು ಉಪಶಮನವಾಗುತ್ತದೆ.
*ಪುದೀನಾ ಎಣ್ಣೆಯೂ ಸಹ ನಿಮ್ಮ ತಲೆನೋವನ್ನು ತಕ್ಷಣವೇ ವಾಸಿ ಮಾಡುತ್ತದೆ.
*ಈರುಳ್ಳಿಯ ತಿರುಳನ್ನು ನಿಮ್ಮ ಹಣೆಗೆ ತಿಕ್ಕುವುದರಿಂದ ತಲೆನೋವು ಶೀಘ್ರ ಗುಣಮುಖವಾಗುತ್ತದೆ.
*ತುರಿದ ಸೋರೆಕಾಯಿಯನ್ನು ಹಣೆಗೆ ಹಚ್ಚಿಕೊಂಡರೆ ತಲೆನೋವು ಮಾಯ. ನೈಸರ್ಗಿಕವಾದ 10 ನೋವು ನಿವಾರಕ ಔಷಧಿಗಳು
*ತಲೆನೋವಿನ ಸಂದರ್ಭದಲ್ಲಿ ಲಿಂಬೆ ಪಾನಕ, ಒಣದ್ರಾಕ್ಷಿ ಹಾಗೂ ಹುಣಸೇ ಪಾನಕವನ್ನು ಸವಿದರೆ ನೋವು ಶೀಘ್ರ ನಿವಾರಣೆಯಾಗುತ್ತದೆ.
* ನಿಮಗೆ ಪದೇ ಪದೇ ತಲೆನೋವು ಉಂಟಾಗುತ್ತಿದ್ದರೆ ಉಪ್ಪು ಸವರಿದ ಸೇಬಿನ ಹಣ್ಣನ್ನು ಸೇವಿಸಿ. ಇದರಿಂದ ತಲೆನೋವು ಉಪಶಮನವಾಗುತ್ತದೆ.
*ತಾಜಾ ಲಿಂಬೆ ಮತ್ತು ಬಿಸಿ ನೀರಿನ ಮಿಶ್ರಣ ಒಂದು ಲೋಟದಲ್ಲಿ ಹದವಾದ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಲಿಂಬೆರಸವನ್ನು ಬೆರೆಸಿ ಕುಡಿದರೆ ನಿಮ್ಮ ತಲೆನೋವು ತಕ್ಷಣ ಕಡಿಮೆ ಆಗುತ್ತದೆ. ಕೆಲವರಿಗೆ ಗ್ಯಾಸ್ ಸಮಸ್ಯೆಯಿಂದ ಕೂಡ ತಲೆನೋವು ಬಂದಿರುತ್ತದೆ ಅಂತವರಿಗೆ ಇದು ಸಹಕಾರಿ. ಇದು ಗ್ಯಾಸ್ ಮತ್ತು ತಲೆನೋವು ಎರಡರಿಂದಲೂ ಮುಕ್ತಿ ನೀಡುತ್ತದೆ.
*ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ 15 ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ಮಾದುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ.
*ನೀಲಗಿರಿ ಎಣ್ಣೆ ತಲೆನೋವನ್ನು ಹೋಗಲಾಡಿಸಲು ಇನ್ನೊಂದು ಉಪಾಯವೆಂದರೆ ನೀಲಗಿರಿ ಎಣ್ಣೆಯಿಂದ ಮಸಾಜ್ ಮಾಡುವುದು.ಇದು ನೋವು ನಿವಾರಕವಾದ್ದರಿಂದ ಬೇಗ ತಲೆನೋವು ನಿವಾರಿಸುತ್ತದೆ.
*ಮಸಾಲ ಚಹಾ ಒಂದು ಹಳೆಯ ನಾಣ್ಣುಡಿ- ನಿಮಗೆ ನೋವುಗಳಿದ್ದಲ್ಲಿ, ಒಂದು ಗುಟುಕು ಚಹಾ ಕುಡಿಯಿರಿ, ಎಂದು ಹೇಳುತ್ತದೆ. ಹಾಗೆಯೇ ಒಂದು ಕಪ್ ಬ್ಲ್ಯಾಕ್ ಟೀಗೆ ಒಂದು ಚಿಟಿಕೆ ಚಕ್ಕೆ ಪುಡಿಯನ್ನು ಹಾಕಿಕೊಳ್ಳಿ ಮತ್ತು ಇದಕ್ಕೆ ಸಕ್ಕರೆಯ ಬದಲಿಗೆ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ನಿಮಗೆ ಅಗತ್ಯವಾದಲ್ಲಿ ಜಜ್ಜಿದ ಶುಂಠಿಯನ್ನು ಚಕ್ಕೆಯ ಬದಲಿಗೆ ಬೆರೆಸಿಕೊಳ್ಳಬಹುದು. ಇದು ನೋವನ್ನು ನಿವಾರಿಸಲು ಮತ್ತಷ್ಟು ನೆರವು ನೀಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

