For Quick Alerts
ALLOW NOTIFICATIONS  
For Daily Alerts

ಲವಲವಿಕೆಯ ಜೀವನಶೈಲಿಗೆ 'ಓಂಕಾರ ಮಂತ್ರ ಪಠಿಸಿ'

By Deepu
|

ಓಂ ಎಂಬುದು ಪ್ರಣವ ನಾದ. ಶಿವನ ನೆಚ್ಚಿನ ಬೀಜ ಮಂತ್ರಗಳಲ್ಲಿ "ಓಂ" ಗೆ ಅಗ್ರ ಸ್ಥಾನ. ನಮ್ಮ ಬ್ರಹ್ಮಾಂಡದಲ್ಲಿ ಸೃಷ್ಟಿಕ್ರಿಯೆ ಆರಂಭವನ್ನು ಮೊದಲು ಸೂಚಿಸಿದ್ದು ಓಂ ನಾದವನ್ನು ಮಾಡುವ ಮೂಲಕವಂತೆ. ಅಷ್ಟರ ಮಟ್ಟಿಗೆ 'ಓಂ' ಬೀಜಾಕ್ಷರಕ್ಕೂ, ನಮ್ಮ ಪುರಾಣಗಳಿಗೂ ಸಂಬಂಧವಿದೆ. ಓಂ ಎಂಬುದನ್ನು ಶುಭಸೂಚಕವಾಗಿ ನಾವು ಬಳಸುತ್ತೇವೆ. ಸೈಕೊನ್ಯೂರೊ ಎಂಡೊಕ್ರೈನಾಲಜಿ ಪತ್ರಿಕೆಯಲ್ಲಿ ಪ್ರಕಟಗೊಂಡು ಒಂದು ಅಧ್ಯಯನದ ಪ್ರಕಾರ, ಓಂ ನಿಮಗೆ ವಿಶ್ರಾಂತಿಯನ್ನು ನೀಡುವುದರ ಜೊತೆಗೆ, ನಿಮ್ಮನ್ನು ಧ್ಯಾನ ಸ್ಥಿತಿಗೆ ತರುತ್ತದೆಯಂತೆ.

ಅಲ್ಲದೆ ನಿಮ್ಮ ಮೇಲೆ ಉಂಟಾಗುವ ಒತ್ತಡದಿಂದ ಬೇಗ ಪಾರು ಮಾಡುವ ಒಂದು ಉತ್ತಮ ಮಾರ್ಗವೆಂದರೆ, ಅದು ಓಂ ಪಠಣೆ ಮಾಡುವುದು. ಓಂ ಅನ್ನು ಅದಕ್ಕಾಗಿ ಯಾವಾಗಲು ಶಾಂತವಾದ ಮತ್ತು ಆರಾಮವಾದ ಸ್ಥಳದಲ್ಲಿ ಪಠಣೆ ಮಾಡಿ. ಓಂ ಅನ್ನು ಪಠಣೆ ಮಾಡುವಾಗ ಅಧಿಕ ಪರಿಣಾಮವನ್ನು ಬೀರುವ ಅಡಚಣೆಗಳನ್ನು ನಿವಾರಿಸಿಕೊಳ್ಳಿ ಮತ್ತು ನಿಮ್ಮ ಉಸಿರಿನ ಮೇಲೆ ನಿಗಾ ಇರಿಸಿ. ಬನ್ನಿ ಓಂಕಾರ ಪಠಣೆ ಮಾಡಲು ಇರುವ 5 ಉತ್ತಮ ಕಾರಣಗಳನ್ನು ನಾವು ಪಟ್ಟಿ ಮಾಡಿದ್ದೇವೆ, ಮುಂದೆ ಓದಿ...

ಆತ್ಮ ಮತ್ತು ಮನಸ್ಸು ಎರಡನ್ನು ಶಾಂತಗೊಳಿಸುತ್ತದೆ

ಆತ್ಮ ಮತ್ತು ಮನಸ್ಸು ಎರಡನ್ನು ಶಾಂತಗೊಳಿಸುತ್ತದೆ

ಆರ್ಟ್ ಆಫ್ ಲಿವಿಂಗ್‌ನ ಧ್ಯಾನ ಶಿಕ್ಷಕಿಯಾದ ಭಾನುಮತಿ ನರಸಿಂಹನ್‌ರವರ ಪ್ರಕಾರ ಓಂ ಪಠಣೆಯಿಂದ ಕೆಲವೊಂದು ತರಂಗಗಳು ಸೃಷ್ಟಿಯಾಗುತ್ತವೆಯಂತೆ. ಈ ತರಂಗಗಳು ನಿಮ್ಮ ಸುತ್ತ ಪಸರಿಸಿ, ಆ ಪರಿಸರವನ್ನು ಧನಾತ್ಮಕ ಗೊಳಿಸುತ್ತವೆಯಂತೆ. ಹೀಗೆ ನಿಮ್ಮ ಆತ್ಮ ಮತ್ತು ಮನಸ್ಸಿಗೆ ಒಂದು ಬಗೆಯ ಪ್ರಶಾಂತತೆಯನ್ನು ಓಂ ಒದಗಿಸುತ್ತದೆಯಂತೆ.

ಖಿನ್ನತೆಯನ್ನು ಕಡಿಮೆ ಮಾಡುತ್ತದೆ

ಖಿನ್ನತೆಯನ್ನು ಕಡಿಮೆ ಮಾಡುತ್ತದೆ

ನಿಮ್ಹಾನ್ಸ್‌ನಲ್ಲಿ ನಡೆದ ಒಂದು ಮೆದುಳಿನ ಕಾರ್ಯ ವೈಖರಿಯ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಮೆದುಳಿನ ಕೆಲವೊಂದು ಭಾಗಗಳು, ಭಯ, ಕೋಪ ಮತ್ತು ಭಾವನೆಗಳ ಜೊತೆಗೆ ನಿಕಟ ಸಂಬಂಧವನ್ನು ಹೊಂದಿವೆಯಂತೆ. ನಕಾರಾತ್ಮಕ ಭಾವನೆಗಳನ್ನು ಕಡಿಮೆ ಮಾಡಿಕೊಂಡಷ್ಟು, ನಮ್ಮ ಮೆದುಳು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯಂತೆ. ಆ ಮೂಲಕ ಖಿನ್ನತೆ ಮತ್ತು ಉದ್ವೇಗವನ್ನು ದೂರ ಮಾಡಿಕೊಳ್ಳಬಹುದಂತೆ.

ಏಕಾಗ್ರತೆಯನ್ನು ಹೆಚ್ಚಿಸುತ್ತದೆ

ಏಕಾಗ್ರತೆಯನ್ನು ಹೆಚ್ಚಿಸುತ್ತದೆ

ಓಂ ಪಠಣೆ ಮಾಡುವುದರ ಮೂಲಕ, ನಿಮ್ಮ ಮನಸ್ಸು ವರ್ತಮಾನದ ಮೇಲೆ ಚೆನ್ನಾಗಿ ನಿಗಾವಹಿಸುತ್ತದೆಯಂತೆ. ಇದರಿಂದಾಗಿ ನಿಮ್ಮ ಮೂಡ್ ಮತ್ತಷ್ಟು ಸುಧಾರಿಸುತ್ತದೆಯಂತೆ. ಒತ್ತಡ ಕಡಿಮೆಯಾಗಿ, ನಿಮ್ಮ ರೋಗ ನಿರೋಧಕ ಶಕ್ತಿ ಸಹ ಹೆಚ್ಚಾಗುತ್ತದೆ.

ಏಕಾಗ್ರತೆಯನ್ನು ಹೆಚ್ಚಿಸುತ್ತದೆ

ಏಕಾಗ್ರತೆಯನ್ನು ಹೆಚ್ಚಿಸುತ್ತದೆ

ಜರ್ನಲ್ ಆಫ್ ಆಲ್ಟರ್‌ನೇಟಿವ್ ಅಂಡ್ ಕಂಪ್ಲಿಮೆಂಟರಿ ಮೆಡಿಸಿನ್ ಪತ್ರಿಕೆಯಲ್ಲಿ ಪ್ರಕಟಗೊಂಡ ಒಂದು ಅಧ್ಯಯನದ ಪ್ರಕಾರ ಓಂ ಪಠಣೆ ಮಾಡುವುದರಿಂದ ನಮ್ಮ ದೇಹದಲ್ಲಿ ಮೆಲಟೊನಿನ್ ಹೆಚ್ಚು ಬಿಡುಗಡೆಯಾಗುತ್ತದೆಯಂತೆ. ಇದರಿಂದ ನಮ್ಮ ಆರೋಗ್ಯ ಮತ್ತಷ್ಟು ಸುಧಾರಣೆಯಾಗುತ್ತದೆಯಂತೆ.

ಒತ್ತಡವನ್ನು ಕಡಿಮೆ ಮಾಡುತ್ತದೆ

ಒತ್ತಡವನ್ನು ಕಡಿಮೆ ಮಾಡುತ್ತದೆ

ಓಂ ಪಠಣೆ ಮಾಡುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಓಂ ನಿಮ್ಮ ಮನಸ್ಸಿಗೆ ಶಾಂತಿ ಮತ್ತು ಆಹ್ಲಾದಕತೆಯನ್ನು ನೀಡುತ್ತದೆ. ಇದು ನಿಮ್ಮ ಅವಲೋಕನ ಸಾಮರ್ಥ್ಯ, ಗ್ರಹಿಕೆ ಮತ್ತು ಅಭಿವ್ಯಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ನೀವು ನಿಮ್ಮ ಕೆಲಸಗಳನ್ನು ಅನಾಯಾಸವಾಗಿ ಮಾಡಿಕೊಂಡು ಹೋಗುವುದರಿಂದಾಗಿ, ನಿಮಗೆ ಒತ್ತಡವು ಹೆಚ್ಚಾಗಿ ಭಾದಿಸುವುದಿಲ್ಲ. ದೈಹಿಕ ಆಯಾಸವು ಸಹ ಓಂ ಪಠಣೆಯಿಂದ ಕಡಿಮೆಯಾಗುತ್ತದೆ. ಹೀಗೆ ಓಂ ಇಡೀ ದೇಹಕ್ಕೆ ಒಂದು ಬಗೆಯ ವಿಶ್ರಾಂತ ಮತ್ತು ಪ್ರಶಾಂತ ಸ್ಥಿತಿಯನ್ನು ತರುತ್ತದೆ.

ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತದೆ

ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತದೆ

ಓಂ ಕುರಿತಾಗಿ ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿರುವ ಇನ್ಸಿಟ್ಯೂಟ್ ಆಫ್ ಬಯೋಮೆಡಿಕಲ್ ರಿಸರ್ಚ್ ಆಫ್ ಬಾರ್ಸಿಲೋನಾದಲ್ಲಿ ನಡೆದ ಅಧ್ಯಯನದ ಮುಖ್ಯಸ್ಥೆಯಾಗಿದ್ದ ಪೆರ್ಲಾ ಕಲಿಮನ್‌ರವರ ಪ್ರಕಾರ ಓಂ ಅನ್ನು ಪಠಣೆ ಮಾಡುವುದರಿಂದಾಗಿ, ಹಾರ್ಮೋನುಗಳಲ್ಲಿ ಶೀಘ್ರ ಗತಿಯಲ್ಲಿ ಬದಲಾವಣೆಗಳು ಸಂಭವಿಸುತ್ತವೆಯಂತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತದೆ

ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತದೆ

ಇವು ಉರಿಬಾವು ಮತ್ತು ನೋವು ನಿವಾರಕ ಔಷಧಿಗಳಿಂದ ನಮ್ಮ ದೇಹದ ಮೇಲೆ ಉಂಟಾಗುವ ಪರಿಣಾಮಗಳನ್ನು ತಡೆಯುತ್ತವೆಯಂತೆ. ವೈದ್ಯಕೀಯ ಅಧ್ಯಯನದ ಪ್ರಕಾರ ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒತ್ತಡಕ್ಕೆ ಸಂಬಂಧಿಸಿದ ರಕ್ತದೊತ್ತಡ, ಆತಂಕ ಮತ್ತು ಇನ್ಸೋಮ್ನಿಯಾವನ್ನು ಸಹ ನಿವಾರಿಸುತ್ತದೆಯಂತೆ.

English summary

Ways chanting Omkar fills you with positivity and peace

Chanting Om the correct way can help provide ultimate relief and bring you to a meditative state, speeding up recovery from any stressful situation. Always chant in a peaceful and comfortable place. Focus on breathing and avoid any distractions for higher efficacy. Here are reasons you must chant OM every day.
Story first published: Wednesday, January 13, 2016, 19:27 [IST]
X
Desktop Bottom Promotion