Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹದಿಂದ ಕಲ್ಮಶ ಹೊರಹಾಕಲು ಸೇವಿಸಿ ಕಲ್ಲಂಗಡಿ ಸ್ಮೂತಿ
ಬೇಸಿಗೆಯಲ್ಲಿ ಬೆವರಿನ ಮೂಲಕ ದೇಹ ಹೆಚ್ಚಿನ ನೀರನ್ನು ಕಳೆದುಕೊಳ್ಳುವ ಕಾರಣ ದೇಹದೊಳಗೆ ವಿಷಕಾರಿ ವಸ್ತುಗಳ ಸಾಂದ್ರತೆ ಹೆಚ್ಚುತ್ತದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ನೀರು ಮತ್ತು ಇತರ ತಣ್ಣನೆಯ ಹಣ್ಣಿನ ರಸಗಳನ್ನು ಹೆಚ್ಚು ಕುಡಿಯಲು ತಜ್ಞರು ಸಲಹೆ ಮಾಡುತ್ತಾರೆ. ಆದರೆ ಹಣ್ಣುಗಳ ರಸದಲ್ಲಿಯೂ ಹೆಚ್ಚಿನ ವಿಟಮಿನ್ ಮತ್ತು ವಿಶೇಷವಾಗಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುವ ಕಾರಣ ನೀರಿನ ಕೊರತೆ ಪೂರ್ಣಗೊಂಡರೂ ಕ್ಯಾಲೋರಿಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಿ ಕೊಬ್ಬು ಹೆಚ್ಚುತ್ತದೆ ಮತ್ತು ಪರಿಣಾಮವಾಗಿ ತೂಕವೂ ಹೆಚ್ಚುತ್ತದೆ.
ಆದ್ದರಿಂದ ತೂಕ ಇಳಿಸುವ ನಿಟ್ಟಿನಲ್ಲಿ ಮತ್ತು ಬೇಸಿಗೆಯಲ್ಲಿ ಸಾಂದ್ರಗೊಂಡಿದ್ದ ಕಲ್ಮಶ ನಿವಾರಿಸುವ ಗುಣಗಳನ್ನು ಹೊಂದಿರುವ ಜ್ಯೂಸ್ ಬೇಸಿಗೆಯಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ರಾಸಾಯನಿಕ ಆಧಾರಿತ ಪ್ರಬಲ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಇವುಗಳ ಕೆಟ್ಟ ಅಡ್ಡಪರಿಣಾಮಗಳು ಭೀತಿ ಹುಟ್ಟಿಸುತ್ತವೆ.
ಇವೆಲ್ಲಾ ಗುಣಗಳಿರುವ ಹಣ್ಣು ಅಥವಾ ತರಕಾರಿಗಳ ರಸವನ್ನು ಕುಡಿಯುವುದು ಉತ್ತಮವಾದರೂ ಇದರ ತಿರುಳನ್ನು ನುಣ್ಣಗೆ ಅರೆದು ನೀರಿನೊಂದಿಗೆ ಬೆರೆಸಿ ಅತಿ ತೆಳ್ಳಗೂ ಅಲ್ಲದ, ಅತಿ ಗಾಢವೂ ಅಲ್ಲದ ಸ್ಮೂತಿ ಬೇಸಿಗೆಯ ಸೇವನೆಗೆ ಹೇಳಿ ಮಾಡಿಸಿದಂತಿದೆ. ಈ ಸ್ಮೂತಿಗಳನ್ನು ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಹೊತ್ತು, ಸಂಜೆಯ ಹೊತ್ತಿನ ಉಪಾಹಾರದ ರೂಪದಲ್ಲಿಯೂ ಸೇವಿಸಬಹುದು. ಇವು ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಾದ ಹೆಚ್ಚಿನ ಪ್ರಮಾಣದ ನೀರು, ಲವಣಗಳು, ಪೋಷಕಾಂಶಗಳು, ಕಡಿಮೆ ಸಕ್ಕರೆಗಳನ್ನು ನೀಡುವ ಜೊತೆಗೇ ವಿಷಕಾರಿ ವಸ್ತುಗಳನ್ನು ಹೊರಹಾಕಲೂ ನೆರವಾಗುತ್ತವೆ.

ಸ್ಮೂತಿಗಳನ್ನು ವಿವಿಧ ಹಣ್ಣು, ತರಕಾರಿಗಳು, ಜ್ಯೂಸ್ ಮತ್ತು ಹಾಲಿನ ಉತ್ಪನ್ನಗಳಿಂತ ತಯಾರಿಸಬಹುದು. ಅಥವಾ ಇವುಗಳಲ್ಲಿ ನಿಮ್ಮ ಆಯ್ಕೆಯ ಎರಡು ಅಥವಾ ಹೆಚ್ಚಿನ ಸಾಮಾಗ್ರಿಗಳನ್ನು ಜೊತೆಗೂಡಿಸಿಯೂ ಭಿನ್ನ ರುಚಿಯನ್ನು ಪಡೆಯಬಹುದು. ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದಾದ ಸ್ಮೂತಿಗಳಲ್ಲಿ ಅತ್ಯುತ್ತಮವಾದ ಆಯ್ಕೆ ಎಂದರೆ ವಿವಿಧ ಬೆರಿ ಹಣ್ಣುಗಳು, ಕ್ಯಾರೆಟ್, ದಪ್ಪನೆಯ ಹಸಿರು ಸೊಪ್ಪುಗಳು ಇತ್ಯಾದಿ.
ಬಿಸಿಲಿನ ಝಳ ಹೆಚ್ಚಿದ್ದ ಸಮಯದಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಹಣ್ಣುಗಳ ಆಯ್ಕೆ ಜಾಣತನದ ಕ್ರಮವಾಗಿದೆ. ಇದರಲ್ಲಿ ಕ್ರ್ಯಾನ್ಬೆರಿ, ಕಲ್ಲಂಗಡಿ ಹಣ್ಣು, ಅನಾನಾಸು, ಕಿವಿ ಹಣ್ಣು, ತರಬೂಜ ಅಥವಾ ಕರಬೂಜದ ಹಣ್ಣುಗಳು ಇತ್ಯಾದಿಗಳು ಉತ್ತಮ ಆಯ್ಕೆಯಾಗಿವೆ. ಇವುಗಳ ರುಚಿಯಲ್ಲಿ ಯಾವುದೇ ಕಡಿತ ಮಾಡದೇ ಪೋಷಕಾಂಶದ ಪ್ರಮಾಣವನ್ನು ಹೆಚ್ಚಿಸಲು ಒಂದು ಲೋಟಕ್ಕೆ ಒಂದು ಚಿಕ್ಕಚಮದಷ್ಟು ಕಾಮಕಸ್ತೂರಿ ಬೀಜ (Chia seed) ಗಳನ್ನು ಸೇರಿಸಿದರೆ ಈ ಪೇಯದ ಮೌಲ್ಯ ಇನ್ನಷ್ಟು ಹೆಚ್ಚುತ್ತದೆ.
ಇದರಲ್ಲಿ ಸಾಲ್ಮನ್ ಮೀನಿಗಿಂತಲೂ ಎಂಟು ಪಟ್ಟು ಹೆಚ್ಚು ಒಮೆಗಾ 3 ಕೊಬ್ಬಿನ ಆಮ್ಲ, ಹಾಲಿಗಿಂತಲೂ ಆರು ಪಟ್ಟು ಹೆಚ್ಚಿನ ಕ್ಯಾಲ್ಸಿಯಂ, ಪಾಲಕ್ ಸೊಪ್ಪಿನಲ್ಲಿರುವುದಕ್ಕಿಂತಲೂ ಮೂರು ಪಟ್ಟು ಹೆಚ್ಚಿನ ಕಬ್ಬಿಣ, ಬಾಳೆಹಣ್ಣಿನಲ್ಲಿರುವುದಕ್ಕಿಂತಲೂ ದುಪ್ಪಟ್ಟು ಪ್ರಮಾಣದ ಪೊಟ್ಯಾಶಿಯಂ, ಬ್ರೋಕೋಲಿ ಕೋಸಿನಲ್ಲಿರುವುದಕ್ಕಿಂತಲೂ ಹದಿನೈದು ಪಟ್ಟು ಹೆಚ್ಚಿನ ಮೆಗ್ನೀಶಿಯಂ, ಗೋಧಿಯ ಹೊಟ್ಟಿನಲ್ಲಿರುವುದಕ್ಕಿಂತಲೂ ದುಪ್ಪಟ್ಟು ಕರಗದ ನಾರು, ರಾಜ್ಮಾ ಬೀಜಗಳಲ್ಲಿರುವುದಕ್ಕಿಂತಲೂ ಆರು ಪಟ್ಟು ಹೆಚ್ಚು ಪ್ರೋಟೀನು, ಅಗಸೆಬೀಜದಲ್ಲಿರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಸೆಲೆನಿಯಂ, ಒಂದು ಕಪ್ ಹಾಲಿನಲ್ಲಿರುವುದಕ್ಕಿಂತ ಒಂಭತ್ತು ಪಟ್ಟು ಹೆಚ್ಚು ಫಾಸ್ಪರಸ್ ಮತ್ತು ಬ್ಲೂಬೆರಿ ಹಣ್ಣಿನಲ್ಲಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟುಗಳಿವೆ.
ಆದರೆ ಕಾಮಕಸ್ತೂರಿ ಬೀಜಗಳು ತಮ್ಮದೇ ರುಚಿಯನ್ನು ಹೊಂದಿರದೇ ಇರುವ ಕಾರಣ ಇವು ಯಾವುದೇ ಜ್ಯೂಸ್ ಅಥವಾ ಸ್ಮೂತಿಯೊಂದಿಗೆ ಸುಲಭವಾಗಿ ಬೆರೆತು ಮೂಲ ರುಚಿಯನ್ನು ಉಳಿಸಿಕೊಳ್ಳಲು ಸಹಕರಿಸುತ್ತವೆ. ನಿಮ್ಮ ವಾಸಸ್ಥಳದಲ್ಲಿ ಸುಲಭವಾಗಿ ಲಭ್ಯವಿರುವ ಹಣ್ಣುಗಳನ್ನು ಆಯ್ದುಕೊಂಡು ಸ್ಮೂತಿ ತಯಾರಿಸಿ ಕಾಮಕಸ್ತೂರಿ ಬೀಜ ಸೇರಿಸಿ ಸೇವಿಸ ಬಳಿಕ ಬೇಸಿಗೆಯ ಝಳದಲ್ಲಿಯೂ ಹೇಗೆ ಲವಲವಿಕೆಯಿಂದಿರಬಹುದು ಎಂಬುದನ್ನು ಸ್ವತಃ ಕಂಡುಕೊಳ್ಳಿ. ಬನ್ನಿ ಬಿರುಬಿಸಿಲಿನ ದಾಹವನ್ನು ತಣಿಸಲು, ನಿಮಗಾಗಿ ಕಲ್ಲಂಗಡಿ ಜ್ಯೂಸ್ ತಯಾರಿಸುವ ವಿಧಾನವನ್ನು ನೀಡಿದ್ದೇವೆ, ಲಿಂಕ್ ಕ್ಲಿಕ್ ಮಾಡಿ... ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
