For Quick Alerts
ALLOW NOTIFICATIONS  
For Daily Alerts

  ಅಧ್ಯಯನ ವರದಿ: ಆಹಾರದ ಅಲರ್ಜಿ ಸಮಸ್ಯೆಗೆ ಆಹಾರಕ್ರಮ ಹೀಗಿರಲಿ...

  By Vani Naik
  |

  ಹೊಸ ಅಧ್ಯಯನದ ಪ್ರಕಾರ , ಬೆಳಗಿನ ಹೊತ್ತು ಒಂದು ಬೌಲ್ ತುಂಬಾ ಹೆಚ್ಚು ನಾರಿನಾಂಶವುಳ್ಳ ಪದಾರ್ಥ ಮತ್ತು ಒಣಗಿದ ಏಪ್ರಿಕಾಟ್ ಜೊತೆಗೆ ವಿಟಮಿನ್ ಎ ಆಹಾರ ಸೇವನೆಯ ಪದ್ಧತಿಯನ್ನು ಪಾಲಿಸುತ್ತಾ ಬಂದರೆ, ಆಹಾರ ಅಲರ್ಜಿ ತೊಂದರೆಯನ್ನು ಬಹುತೇಕ ತಡೆಯಬಹುದು.

  ನೆಲಗಡಲೆಯ ಅಲರ್ಜಿಯಿದ್ದ ಇಲಿಗಳ ಮೇಲೆ ಹೆಚ್ಚು ನಾರಿನಾಂಶ ಇರುವ ಆಹಾರವನ್ನು ಕೊಟ್ಟು ಪ್ರಯೋಗ ನಡೆಸಿದಾಗ, ಅವು ಅಲರ್ಜಿಯಿಂದ ಸುರಕ್ಷಿತವಾದವು. ಹೆಚ್ಚು ನಾರಿನಾಂಶ ಇರುವ ಆಹಾರ ಪದಾರ್ಥಗಳು ಕರುಳು ಮತ್ತು ದೊಡ್ಡ ಕರುಳಿನ ಆಕಾರವನ್ನು ಸರಿ ಮಾಡಿ ಆಹಾರ ಅಲರ್ಜಿಯ ವಿರುದ್ಧ ಹೋರಾಡುತ್ತದೆ. ಇದು ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ಫ್ರೊಫೆಸರ್ ಆದ ಜಿಯಾನ್ ಟ್ಯಾನ್ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ.

  Vitamin A, High-Fibre Diet Keeps Food Allergies At Bay: Study Reveals
   

  ನಮ್ಮ ದೇಹದಲ್ಲಿನ ನಿರೋಧಕ ವ್ಯೆವಸ್ಥೆ ಕರುಳಿನಲ್ಲಿ ಒಳ್ಳೆ ಬ್ಯಾಕ್ಟೀರಿಯಾ (ಅಣು ಜೀವಿ) ಜೊತೆ ಕೆಲಸ ಮಾಡಿ ಜೀವ ಬೆದರಿಕೆಯೊಡ್ಡುವ ಕೆಲವು ಆಹಾರದ ಅಲರ್ಜಿಯಿಂದ ಸಂರಕ್ಷಿಸುತ್ತದೆ. ಹೀಗೆಂದು ಸಂಶೋಧನಕಾರರು ಹೇಳಿದ್ದಾರೆ.    ಆಹಾರದ ಅಲರ್ಜಿಯ ಕೆಲವೊಂದು ಲಕ್ಷಣಗಳು

  ಕರುಳಿನಲ್ಲಿರುವ ಮೈಕ್ರೋಬೈಯೋಟ ನಿರೋಧಕ ವ್ಯೆವಸ್ಥೆಗೆ ನೆರವಾಗಿ ಅಲರ್ಜಿಯಾಗುವುದನ್ನು ತಡೆಯುತ್ತದೆ. ಇವು ನಾರಿನಾಂಶದ ಪದಾರ್ಥವನ್ನು ಮುರಿದು, ಸಣ್ಣ ಸರಣಿಯ ಕೊಬ್ಬಿನ ಆಮ್ಲಗಳಾಗಿ ಮಾಡುತ್ತದೆ.

  ಈ ಸಣ್ಣ ಸರಣಿಯ ಕೊಬ್ಬಿನ ಆಮ್ಲಗಳು, ಡೆನ್ಡ್ರಿಟಿಕ್ ಸೆಲ್ಸ್ ಎಂಬ ಹೊಸ ನಿರೋಧಕ ವ್ಯೆವಸ್ಥೆಯನ್ನು ಸೃಷ್ಟಿ ಮಾಡುತ್ತದೆ. ಇದು ಆಹಾರ ಅಲರ್ಜಿಯನ್ನು ನಿಯಂತ್ರಿಸುತ್ತದೆ. ಹೆಚ್ಚಿನ ಪ್ರಮಾಣದ ಸಣ್ಣ ಸರಣಿಯ ಕೊಬ್ಬಿನ ಆಮ್ಲಗಳು ಕೋಶಗಳಿಗೆ ಅಲರ್ಜಿ ತಡೆಯುವ ಶಕ್ತಿಯನ್ನು ಕೊಡುತ್ತದೆ.

  Vitamin A, High-Fibre Diet Keeps Food Allergies At Bay: Study Reveals
    

  ಸಂಶೋಧನಕಾರರ ಪ್ರಕಾರ, ವಿಟಮಿನ್ "ಎ" ಕೊರತೆ ಕೂಡ ಆಹಾರ ಅಲರ್ಜಿಗೆ ಕಾರಣವಾಗುತ್ತದೆ, ವಿಶೇಷವಾಗಿ ಮಕ್ಕಳಲ್ಲಿ. ಈ ಅಧ್ಯಯನವು, ಆಹಾರದ ಅಲರ್ಜಿಗೆ ಸಣ್ಣ ಸರಣಿಯ ಕೊಬ್ಬಿನ ಆಮ್ಲಗಳನ್ನು ವಿತರಿಸುವ ಔಷಧೀಯ ಚಿಕಿತ್ಸೆ ಕೊಡಲು ನೆರವಾಯಿತು. ಹೀಗೆಂದು ಜರ್ನಲ್ ಸೆಲ್ ಪೋರ್ಟ್ ಪ್ರತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. 

  (ಐಎಎನ್ಎಸ್ ವರದಿ)

  English summary

  Vitamin A, High-Fibre Diet Keeps Food Allergies At Bay: Study Reveals

  Consuming a high-fibre diet consisting of a bowl of bran and some dried apricots in the morning and intake of vitamin A can help reduce food allergies, finds a new study.The findings showed that mice allergic to peanuts were protected against the allergy when fed on a high-fibre diet.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more