ಆರೋಗ್ಯದ ಕಣಜ-ಹಿತ್ತಲ ಗಿಡದ 'ಸಪೋಟ' ಹಣ್ಣು

By Jaya Subramanya

ಸಪೋಟ ಎಂಬ ಹಣ್ಣಿನ ಹೆಸರು ಬಹಳ ಜನಗಳಿಗೆ ಗೊತ್ತಿಲ್ಲದೇ ಇರಬಹುದು. ಸಪೋಟಾಹಣ್ಣಿಗೆ ಚಿಕ್ಕು ಇನ್ನೊಂದು ಚೆನ್ನಾಗಿ ಪರಿಚಯವಿರುವ ಹೆಸರು. ಮೂಲತಃ ನಾವು ಉಷ್ಣವಲಯದಲ್ಲಿ ಬೆಳೆಯುವ ನಿತ್ಯ ಹರಿದ್ವರ್ಣದ ಮರಕ್ಕೆ ಸಪೋಟ ಎಂದು ಕರೆಯುವ ರೂಢಿಯಾಗಿದೆ. ಸಪೋಟ ಹಣ್ಣು ಸೊಗಸಾದ ಕ್ಯಾಲರಿಯುಕ್ತ ಹಣ್ಣುಗಳಾದ ಮಾವಿನ ಹಣ್ಣು, ಬಾಳೆ ಹಣ್ಣು ಮತ್ತು ಹಲಸಿನಹಣ್ಣುಗಳ ವರ್ಗಕ್ಕೆ ಸೇರಿದೆ. ಈ ಹಣ್ಣಿಗೆ ಇತರೆ ಹೆಸರುಗಳು ನೋಸ್ ಬೆರ್ರಿ, ಸಪೋಡಿಲ್ಲಾ ಪ್ಲಮ್, ಚಿಕ್ಕು ಸಪೋಟ, ಇತ್ಯಾದಿ.

ಸಪೋಟಹಣ್ಣಿನಲ್ಲಿರುವ ವಿಶಾಲ ಶ್ರೇಣಿಯ ಪೋಷಕಾಂಶಗಳು ಆರೋಗ್ಯಕ್ಕೆ ಬಹಳ ಶ್ರೇಷ್ಠವಾಗಿರುವುದಲ್ಲದೆ ತಿನ್ನಲು ಅತ್ಯಂತ ರುಚಿಯಾಗಿಯೂ ಇರುತ್ತದೆ. ಈ ಹಣ್ಣಿನಲ್ಲಿರುವ ರುಚಿಯಾದ ತಿರುಳು ಸುಲಭವಾಗಿ ಜೀರ್ಣವಾಗುವುದು ಹಾಗೂ ಅದರಲ್ಲಿರುವ ಹೆಚ್ಚಿನ ಗ್ಲೂಕೋಸ್ ನಮ್ಮ ದೇಹಕ್ಕೆ ಪುನರ್ಚೇತನ ಕೊಡುವ ಶಕ್ತಿಯುಳ್ಳದ್ದಾಗಿದೆ.

ಆಗಲೇ ಹೇಳಿದಂತೆ ಈ ಹಣ್ಣಿನಲ್ಲಿ ಜೀವಸತ್ವಗಳು (ವಿಟಮಿನ್ಸ್), ಖನಿಜಾಂಶಗಳು ಮತ್ತು ಟ್ಯಾನಿನ್ ಇವುಗಳು ಸಮೃದ್ಧವಾಗಿವೆ. ಅಷ್ಟು ಮಾತ್ರವಲ್ಲದೆ ಇನ್ನು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ: ಸಪೋಟಹಣ್ಣಿನ ವಿವಿಧ ಆರೋಗ್ಯದ ಲಾಭಗಳ ಕಡೆಗೆ ಗಮನ ಹರಿಸೋಣ ಬನ್ನಿ....

ಕಣ್ಣಿನ ಆರೋಗ್ಯ

ಕಣ್ಣಿನ ಆರೋಗ್ಯ

ವಿಟಮಿನ್ ಎ ಅಂಶವನ್ನು ಹೊಂದಿರುವ ಚಿಕ್ಕುವಿನಿಂದ ಕಣ್ಣಿನ ದೃಷ್ಟಿ ಸುಧಾರಣೆಯಾಗುತ್ತದೆ. ಇದನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯ ವೃದ್ಧಿಯಾಗುತ್ತದೆ.

ಮಲಬದ್ಧತೆ ನಿವಾರಣೆ

ಮಲಬದ್ಧತೆ ನಿವಾರಣೆ

ಸಪೋಟ ಹಣ್ಣಿನಲ್ಲಿ ಆಹಾರಕ್ರಮದ ನಾರಿನಾಂಶ( 5.6/100 gms,) ಇರುವುದರಿಂದ ಮಲಬದ್ಧತೆಗೆ ಸಂಭಂದಪಟ್ಟ ಕೊರತೆಗಳನ್ನು ನೀಗಿಸಲು ಸಹಾಯಮಾಡುತ್ತದೆ. ಹೀಗಾಗಿ ಇದೊಂದು ಮಲಬದ್ಧತೆ ವಿಸರ್ಜನೆ ಮಾಡಿಸುವ ಔಷಧಿಯೆಂದು ಪರಿಗಣಿಸಬಹುದು. ಇದು ದೊಡ್ಡಕರುಳಿನ ಒಳಚರ್ಮವನ್ನು ಕಾಪಾಡುವುದಲ್ಲದೆ ಸೋಂಕುಗಳು ಬರುವುದನ್ನು ತಡೆಯುತ್ತದೆ.

ಗರ್ಭಾವಸ್ಥೆಯ ಸಮಯದಲ್ಲಿ ಪ್ರಯೋಜನಗಳು

ಗರ್ಭಾವಸ್ಥೆಯ ಸಮಯದಲ್ಲಿ ಪ್ರಯೋಜನಗಳು

ಈ ಹಣ್ಣಿನಲ್ಲಿ ಧಾರಾಳವಾಗಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಪೋಷಕಾಂಶಗಳು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಬಹಳ ಪ್ರಯೋಜನಕಾರಿ. ಇದು ದೌರ್ಬಲ್ಯ, ವಾಕರಿಕೆ ಮತ್ತು ತಲೆತಿರುಗುವ ಲಕ್ಷಣಗಳನ್ನು ಕಡಿಮಾಡಲು ಸಹಾಯವಾಗುತ್ತದೆ.

ಕಿಡ್ನಿ ಸ್ಟೋನ್‎ಗಳನ್ನು ಹೋಗಲಾಡಿಸುತ್ತದೆ

ಕಿಡ್ನಿ ಸ್ಟೋನ್‎ಗಳನ್ನು ಹೋಗಲಾಡಿಸುತ್ತದೆ

ಕಿಡ್ನಿ ಸ್ಟೋನ್‎ಗಳನ್ನು ನಿವಾರಣೆ ಮಾಡಲು ಶಸ್ತ್ರಕ್ರಿಯೆಯೊಂದೇ ವಿಧಾನವಲ್ಲ. ನಿತ್ಯವೂ ಚಿಕ್ಕು ಬೀಜವನ್ನು ಸೇವಿಸುವುದರಿಂದ ಕೂಡ ಕಿಡ್ನಿ ಸ್ಟೋನ್ ಅನ್ನು ತಡೆಗಟ್ಟಬಹುದಾಗಿದೆ. ಸ್ವಲ್ಪ ಚಿಕ್ಕುವನ್ನು ಬೀಜವನ್ನು ಜಜ್ಜಿಕೊಳ್ಳಿ ಮತ್ತು ಈ ಹುಡಿಯನ್ನು ನೀರಿನೊಂದಿಗೆ ಬೆರೆಸಿ ಸೇವಿಸಿ. ಈ ಹಣ್ಣಿನಲ್ಲಿರುವ ಮೂತ್ರವರ್ಧಕ ಅಂಶವು ಕಿಡ್ನಿಯಿಂದ ಕಲ್ಲುಗಳನ್ನು ಹೊರತೆಗೆಯಲು ಸಹಕಾರಿಯಾಗಿದೆ.

ಮೂಳೆಗಳನ್ನು ಸುದೃಢವಾಗಿಸುತ್ತದೆ

ಮೂಳೆಗಳನ್ನು ಸುದೃಢವಾಗಿಸುತ್ತದೆ

ಕ್ಯಾಲ್ಶಿಯಮ್ ಮತ್ತು ಇತರ ಮಿನರಲ್‎ಗಳಾದ ಫಾಸ್ಫರಸ್ ಮತ್ತು ಕಬ್ಬಿಣವನ್ನು ಚಿಕ್ಕುವು ಹೊಂದಿದ್ದು ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲಯುತವಾಗಿರಿಸುವಲ್ಲಿ ಇದು ಸಹಕಾರಿಯಾಗಿದೆ. ಚಿಕ್ಕುವನ್ನು ದಿನವೂ ಸೇವಿಸುವುದರಿಂದ ಮೂಳೆಗಳ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ ಅಂತೆಯೇ ಮೂಳೆಗಳ ದೃಢತೆ ಮತ್ತು ಗುಣಮಟ್ಟ ಕೂಡ ಅತ್ಯುತ್ತಮವಾಗಿರುತ್ತದೆ.

ಕ್ಯಾನ್ಸರ್ ನಿವಾರಣೆಗೆ

ಕ್ಯಾನ್ಸರ್ ನಿವಾರಣೆಗೆ

ಇದರಲ್ಲಿರುವ ವಿಟಮಿನ್ ಎ ಮತ್ತು ಬಿ ಗಳು ದೇಹದ ಓಳಗಿನ ಲೋಳೆಯ ಒಳಪದರದ ಆರೋಗ್ಯವನ್ನು ಕಾಪಾಡುವುದಲ್ಲದೆ, ಚರ್ಮದ ರಚನೆಯ ಆರೋಗ್ಯವನ್ನೂ ಸಹಾ ಕಾಪಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು (ಆಂಟಿ ಆಕ್ಸಿಡೆಂಟ್ಸ್), ನಾರಿನಾಂಶಗಳು ಮತ್ತು ಪೋಷಕಾಂಶಗಳು ಕ್ಯಾನ್ಸರ್ ವಿರುದ್ಧ ರಕ್ಷಣೆಯನ್ನೊದಗಿಸುತ್ತವೆ

ತಲೆಹೊಟ್ಟಿನ ನಿವಾರಣೆಗೆ

ತಲೆಹೊಟ್ಟಿನ ನಿವಾರಣೆಗೆ

ಇದರ ಬೀಜಗಳನ್ನು ಚೆನ್ನಾಗಿ ಅರೆದು ಪೇಸ್ಟ್‌ಮಾಡಿ ಹರಳೆಣ್ಣೆಯಜೊತೆ ಮಿಶ್ರಣ ಮಾಡಿಕೊಂಡು ನೆತ್ತಿಯಮೇಲೆ ಹಚ್ಚಿ. ಒಂದು ರಾತ್ರಿಕಳೆದು ಮಾರನೇ ದಿನ ಚೆನ್ನಾಗಿ ತೊಳೆಯಿರಿ. ಇದರಿಂದ ನಿಮ್ಮ ಕೂದಲು ಮೃದುವಾಗುವುದಲ್ಲದೆ ತಲೆಹೊಟ್ಟಿನ ಸಮಸ್ಯೆಯನ್ನು ನಿಯಂತ್ರಿಸಬಹುದು.

ಮೂಳೆಗಳ ಆರೋಗ್ಯ

ಮೂಳೆಗಳ ಆರೋಗ್ಯ

ಹೆಚ್ಚುವರಿ ಪ್ರಮಾಣದಲ್ಲಿ ಕ್ಯಾಲ್ಸಿಯುಮ್, ರಂಜಕ (ಫಾಸ್ಫರಸ್) ಮತ್ತು ಕಬ್ಬಿಣ ಅಂಶಗಳು ಮೂಳೆಗಳ ಸಹಿಷ್ಣುತೆಯನ್ನು ಹೆಚ್ಚಿಸಲು ಅಗತ್ಯವಿದೆ. ಈ ಹಣ್ಣಿನಲ್ಲಿ ಕ್ಯಾಲ್ಸಿಯುಮ್, ಕಬ್ಬಿಣ ಮತ್ತು ರಂಜಕಾಂಶಗಳು ಅಧಿಕಪ್ರಮಾಣದಲ್ಲಿರುವುದರಿಂದ ಮೂಳೆಗಳ ಸಹಿಷ್ಣುತೆ ಮತ್ತು ಬಲವನ್ನು ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ.

English summary

Unknown Health Benefits Of Chikoo

Chikoo is a delicious calorie-rich fruit known for its nutritional benefits. It belongs to the category of mango, banana and jackfruit in terms of the calorie content it can provide. It is one of the best known fruits to provide a quick energy. The natural fructose and sucrose sugars present in it act as energy boosters.
X
Desktop Bottom Promotion