For Quick Alerts
ALLOW NOTIFICATIONS  
For Daily Alerts

  ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬೇಕು-ಇಂಗು

  By Staff
  |

  ನಿತ್ಯದ ಅಡುಗೆಗಳಲ್ಲಿ ಇಂಗಿನ ಪಾತ್ರ ಬಹಳ ಕಿರಿಯದು, ಅಂದರೆ ಮನೆಯ ಸದಸ್ಯರಿಗೆಲ್ಲಾ ಸಾಕಾಗುವಷ್ಟು ಸಾಂಬಾರ್ ಮಾಡಲಿಕ್ಕೆ ಬೇಕಾಗಿರುವುದು ಚಿಟಿಕೆಯಷ್ಟು ಇಂಗು ಮಾತ್ರ. ಇದು ಕೊಂಚ ಕಹಿಯಾದ ರುಚಿ ಹೊಂದಿದ್ದು ಬಿಸಿ ಎಣ್ಣೆಯಲ್ಲಿ ಕರಗಿದ ಬಳಿಕ ಒಗ್ಗರಣೆಯಲ್ಲಿ ರುಚಿ ಹೆಚ್ಚಿಸುತ್ತದೆ. ನಮಗೆ ತಿಳಿದಿರುವಂತೆ ಇಂಗಿನ ಉಪಯೋಗ ಕೇವಲ ಒಗ್ಗರಣೆಗೆ ಮೀಸಲಾಗಿದೆ. ಇನ್ನೂ ಹೆಚ್ಚೆಂದರೆ ಪೆಚ್ಚಾದ ಸಂದರ್ಭವನ್ನು ಪ್ರಸ್ತಾಪಿಸಲು ಇಂಗು ತಿಂದ ಮಂಗ ಎಂಬ ನಾಣ್ಣುಡಿಯಲ್ಲಿ ಬಳಸುತ್ತೇವೆ ಅಷ್ಟೇ.

  ವಾಸ್ತವವಾಗಿ ಇಂಗು ಇರಾನ್‌ ದೇಶದಿಂದ ಬಂದಂತಹ ಫೆರುಲಾ ಎಂಬ ಸಸ್ಯದ (Ferula assafoetida) ವಿವಿಧ ಭಾಗಗಳನ್ನು ಒಣಗಿಸಿ ಮಾಡಿದ ಪುಡಿಯಾಗಿದೆ. ಇದನ್ನು ಒಣಗಿಸಿ ಪುಡಿಯ ರೂಪದಲ್ಲಿಯೂ ಕೊಂಚ ತೇವದ ರೂಪದ ತುಣುಕುಗಳ ರೂಪದಲ್ಲಿಯೂ ದೊರಕುತ್ತದೆ. ಉಪ್ಪಿನಕಾಯಿಯನ್ನು ವರ್ಷಗಟ್ಟಲೇ ಕೆಡದಿರುವಂತೆ ಇಡಲು ಇಂಗು ಅಗತ್ಯವಾದ ಪರಿಕರವಾಗಿದೆ. ಇಂಗು ಸಾರಿಗಷ್ಟೇ ಅಲ್ಲ, ಕ್ಯಾನ್ಸರ್ ಬಲಿ ಹಾಕಲು ಬೇಕು 

  ಇನ್ನುಳಿದಂತೆ ಇದರ ಉಪಯೋಗ ಹಲವು ಔಷಧಿಗಳಲ್ಲಿದ್ದರೂ ನೇರವಾಗಿ ಔಷಧಿಯಂತೆ ಉಪಯೋಗಿಸಬಹುದು ಎಂದು ನಮಗೆಲ್ಲಾ ಇದುವರೆಗೆ ತಿಳಿದೇ ಇರಲಿಲ್ಲ. ಇದರಲ್ಲಿ ಹಲವು ಪೋಷಕಾಂಶಗಳಿವೆ. ಅಲ್ಪಪ್ರಮಾಣದ ಕರಗುವ ನಾರು, ಕಾರ್ಬೋಹೈಡ್ರೇಟುಗಳು, ಕ್ಯಾಲ್ಸಿಯಂ, ಗಂಧಕ, ನಿಯಾಸಿನ್, ಕೆರೋಟಿನ್ ಮತ್ತು ರೈಬೋಪ್ಲೋವಿನ್ ಎಂಬ ಪೋಷಕಾಂಶಗಳು ಪ್ರಮುಖವಾಗಿವೆ. ಇದು ಒಂದು ಉತ್ತಮವಾದ ಆಂಟಿ ಆಕ್ಸಿಡೆಂಟು ಸಹಾ ಆಗಿದ್ದು ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ, ವೈರಸ್ ವಿರೋಧಿ ಮತ್ತು ಉತ್ತಮ ವಾತಹರ(carmanative) ಗುಣಗಳನ್ನೂ ಹೊಂದಿದೆ. ರುಚಿ ನೀಡುವ ಇಂಗು ಸೌಂದರ್ಯಕ್ಕೂ ಬೇಕಂತೆ

  ಈ ಗುಣಗಳ ಕಾರಣದಿಂದ ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉಪಕಾರಿಯಾಗಿದೆ. ಹಲ್ಲುನೋವು, ತಲೆನೋವು, ಹೊಟ್ಟೆಯ ಸಂಕಟ ಮತ್ತು ಕಿವಿನೋವು ಮೊದಲಾದ ಸಾಮಾನ್ಯ ತೊಂದರೆಗಳಿಗೆ ಇದು ತಕ್ಷಣದ ಔಷಧಿಯಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಇದರ ಉಪಯೋಗಗಳ ಬಗ್ಗೆ ಅರಿತಿದ್ದರೆ ಮನೆಯಲ್ಲಿ ಸದಾ ಇರುವ ಇಂಗು ಯಾವುದೇ ತಕ್ಷಣದ ಅಗತ್ಯದ ಸಮಯದಲ್ಲಿ ಆಪತ್ಬಾಂಧವನಾಗುತ್ತದೆ. ಇಂತಹ ಗುಣಗಳ ಬಗ್ಗೆ ಬೋಲ್ಡ್ ಸ್ಕೈ ತಂಡ ಹಲವು ಮಾಹಿತಿಗಳನ್ನು ಕಲೆಹಾಕಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತದೆ ಮುಂದೆ ಓದಿ... 

  ಉಸಿರಾಟದ ತೊಂದರೆಗಳನ್ನು ಸರಿಪಡಿಸುತ್ತದೆ

  ಉಸಿರಾಟದ ತೊಂದರೆಗಳನ್ನು ಸರಿಪಡಿಸುತ್ತದೆ

  ಇದರ ಉರಿಯೂತ ನಿವಾರಕ, ವೈರಸ್ ನಿವಾರಕ ಮತ್ತು ಜೀವಿರೋಧಿ ಗುಣಗಳ ಕಾರಣ ಇಂಗು ಒಣಕೆಮ್ಮು ಮತ್ತು ಅಸ್ತಮಾ ರೋಗಗಳಿಗೆ ಔಷಧದಂತೆ ಕೆಲಸ ಮಾಡುತ್ತದೆ. ಅಲ್ಲದೇ ಎದೆ ಮತ್ತು ಗಂಟಲಲ್ಲಿ ಕಟ್ಟಿಕೊಂಡಿರುವ ಕಫವನ್ನು ಕರಗಿಸಿ ನಿವಾರಿಸಲು ಪ್ರಚೋದಕದಂತೆ ವರ್ತಿಸುವ ಮೂಲಕ ಕಫದ ನಿವಾರಣೆಗೆ ಸಹಕರಿಸುತ್ತದೆ.

  Most Read:ಒಂದೆರಡು ಚಮಚ, 'ಕೊತ್ತಂಬರಿ ಕಾಳು'-ಹಲವಾರು ಸಮಸ್ಯೆಗಳಿಗೆ ರಾಮಬಾಣ!

  ಉಸಿರಾಟದ ತೊಂದರೆಗಳನ್ನು ಸರಿಪಡಿಸುತ್ತದೆ

  ಉಸಿರಾಟದ ತೊಂದರೆಗಳನ್ನು ಸರಿಪಡಿಸುತ್ತದೆ

  ಇದಕ್ಕಾಗಿ ಚಿಟಿಕೆಯಷ್ಟು ಇಂಗನ್ನು ಒಂದು ಚಿಕ್ಕ ಚಮಚ ಒಣಶುಂಠಿಯ ಪುಡಿ ಮತ್ತು ಒಂದು ದೊಡ್ಡಚಮಚದಷ್ಟು ಜೇನುತುಪ್ಪವನ್ನು ಉಗುರುಬೆಚ್ಚನೆಯ ನೀರಿನಲ್ಲಿ ಕರಗಿಸಿ ದಿನಕ್ಕೆ ಮೂರು ಲೋಟ ಕುಡಿಯಬೇಕು.

  ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ

  ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ

  ಹೊಟ್ಟೆಯ ವಿವಿಧ ತೊಂದರೆಗಳನ್ನು ನಿವಾರಿಸಲು ಇಂಗು ಉತ್ತಮವಾಗಿದೆ. ಅಜೀರ್ಣ, ಅಪಾನವಾಯು, ಕರುಳಿನಲ್ಲಿ ಕಚ್ಚಿಕೊಂಡಿರುವ ಲಾಡಿಹುಳ ಮೊದಲಾದ ಕ್ರಿಮಿಗಳು, ಮಲವಿಸರ್ಜನೆಯ ಸಮಯದಲ್ಲಿ ಉರಿ ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ. ಇದಕ್ಕಾಗಿ ಪ್ರತಿದಿನ ನಿಮ್ಮ ಆಹಾರದಲ್ಲಿ ತಪ್ಪದೇ ಚಿಟಿಕೆಯಷ್ಟು ಇಂಗು ಸೇರಿಸಿದರೆ ಸಾಕು, ಬೇರೇನೂ ಬೇಕಾಗಿಲ್ಲ.

  ತಲೆನೋವನ್ನು ಕಡಿಮೆಗೊಳಿಸುತ್ತದೆ

  ತಲೆನೋವನ್ನು ಕಡಿಮೆಗೊಳಿಸುತ್ತದೆ

  ಇದರ ಉರಿಯೂತ ನಿವಾರಕ ಗುಣ ತಲೆನೋವನ್ನು ನಿವಾರಿಸಲೂ ಉತ್ತಮವಾಗಿದೆ. ಒಂದು ವೇಳೆ ತಲೆನೋವು ನರಗಳ ಉರಿಯೂತದಿಂದ ಬಂದಿದ್ದರೆ, ಅಂದರೆ ಶೀತವಾದಾಗ ಹೆಚ್ಚಾಗುತ್ತಿದ್ದರೆ, ತಣ್ಣನೆಯ ಗಾಳಿ ಬೀಸಿದಾಗ, ದೊಡ್ಡ ಶಬ್ಧ ಕೇಳಿಸಿದಾಗ ಹೆಚ್ಚಾಗುವಂತಿದ್ದರೆ ಇದಕ್ಕೆ ಇಂಗು ಉತ್ತಮ ಪರಿಹಾರ ನೀಡಬಲ್ಲುದು.

  ತಲೆನೋವನ್ನು ಕಡಿಮೆಗೊಳಿಸುತ್ತದೆ

  ತಲೆನೋವನ್ನು ಕಡಿಮೆಗೊಳಿಸುತ್ತದೆ

  ಇದಕ್ಕಾಗಿ ಒಂದು ಕಪ್ ಉಗುರುಬೆಚ್ಚನೆಯ ನೀರಿಗೆ ಚಿಟಿಕೆ ಇಂಗು ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ಸಾಕು.

  ಹಲ್ಲುನೋವನ್ನು ಕಡಿಮೆ ಮಾಡುತ್ತದೆ

  ಹಲ್ಲುನೋವನ್ನು ಕಡಿಮೆ ಮಾಡುತ್ತದೆ

  ಇದರ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಗುಣ ಹಲ್ಲುನೋವನ್ನು ಕಡಿಮೆಗೊಳಿಸಲೂ ಸಮರ್ಥವಾಗಿದೆ. ಅಲ್ಲದೇ ಒಸಡಿನಲ್ಲಿ ರಕ್ತ, ಬಾಯಿಯೊಳಗಣ ಸೋಂಕು ಇತ್ಯಾದಿಗಳನ್ನು ಸಹಾ ಶಮನಗೊಳಿಸುತ್ತದೆ.

  ಹಲ್ಲುನೋವನ್ನು ಕಡಿಮೆ ಮಾಡುತ್ತದೆ

  ಹಲ್ಲುನೋವನ್ನು ಕಡಿಮೆ ಮಾಡುತ್ತದೆ

  ಇದಕ್ಕಾಗಿ ಇಂಗು ಬೆರೆಸಿದ ಬಿಸಿನೀರಿನಿಂದ ಮುಕ್ಕಳಿಸಿದರೆ ಸಾಕು. ಹಲ್ಲು ಹುಳುಕಾಗಿದ್ದು ನೋವುಂಟಾಗಿದ್ದರೆ ತಾತ್ಕಾಲಿಕ ಶಮನಕ್ಕೆ ಹುಳುಕಿನಲ್ಲಿ ಕೊಂಚವೇ ಇಂಗನ್ನು ಸುರಿಯುವುದು ಅಥವಾ ಇಂಗಿನ ನೀರಿನಲ್ಲಿ ಅದ್ದಿದ ಹತ್ತಿಯನ್ನು ಹುಳುಕುಹಲ್ಲಿನ ಮೇಲಿಟ್ಟು ಕಚ್ಚಿಕೊಳ್ಳುವ ಮೂಲಕ ನೋವು ಕಡಿಮೆಯಾಗುತ್ತದೆ.

  ಕಿವಿನೋವನ್ನು ಕಡಿಮೆ ಮಾಡುತ್ತದೆ

  ಕಿವಿನೋವನ್ನು ಕಡಿಮೆ ಮಾಡುತ್ತದೆ

  ಇದರ ಉರಿಯೂತ ನಿವಾರಕ ಗುಣ ಮತ್ತು ಬ್ಯಾಕ್ಟ್ರೀರಿಯಾ ನಿವಾರಕ ಗುಣಗಳು ಸೋಂಕಿನಿಂದ ಉಂಟಾದ ಕಿವಿನೋವನ್ನೂ ಕಡಿಮೆಗೊಳಿಸಲು ಸಮರ್ಥವಾಗಿವೆ. ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದಕ್ಕೆ ಚಿಟಿಕೆಯಷ್ಟು ಇಂಗು ಸೇರಿಸಿ ಮಿಶ್ರಣ ಮಾಡಿ ತಣಿಯಲು ಬಿಡಿ.

  Most Read:ಬಾಯಿ ವಾಸನೆ ಬರುತ್ತಿದೆಯೇ? ಹಾಗಾದರೆ ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ

  ಕಿವಿನೋವನ್ನು ಕಡಿಮೆ ಮಾಡುತ್ತದೆ

  ಕಿವಿನೋವನ್ನು ಕಡಿಮೆ ಮಾಡುತ್ತದೆ

  ಇದು ತಣಿದ ಬಳಿಕ ಈ ಮಿಶ್ರಣವನ್ನು ಅಡ್ಡಮಲಗಿ ಕಿವಿಯೊಳಕ್ಕೆ ಒಂದೊಂದಾಗಿ ಹನಿಯಂತೆ ಬಿಡಿ. ಕೊಂಚ ಸಮಯ ಹಾಗೇ ಮಲಗಿದ್ದು ಬಳಿಕ ನಿಂತು ಹೆಚ್ಚಿನ ದ್ರವ ಹೊರಹರಿಯುವಂತೆ ಮಾಡಿ. ಇದರಿಂದ ಕಿವಿನೋವು ಕಡಿಮೆಯಾಗುತ್ತದೆ.

  ಕ್ಯಾನ್ಸರ್ ಬರದಂತೆ ತಡೆಯುತ್ತದೆ

  ಕ್ಯಾನ್ಸರ್ ಬರದಂತೆ ತಡೆಯುತ್ತದೆ

  ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ತಡೆಯುವಲ್ಲಿ ಸಕ್ಷಮವಾಗಿದ್ದು ದೇಹವನ್ನು ಹಲವು ರೀತಿಯ ಕ್ಯಾನ್ಸರ್ ನಿಂದ ಕಾಪಾಡುತ್ತದೆ. ಅಲ್ಲದೇ ಈಗಾಗಲೇ ಯಾವುದಾದರೊಂದು ಅಂಗ ಅನವರತವಾಗಿ ಬೆಳವಣಿಗೆ ಪ್ರಾರಂಭಿಸಿದ್ದರೆ ಇದನ್ನು ತಡೆದು ಉಲ್ಬಣಗೊಳಿಸದಂತೆ ಕಾಪಾಡುತ್ತದೆ.

   

  English summary

  Unknown Health Benefits Of Asafoetida (Hing)

  Asafoetida, popularly known as Hing in India, is an ingredient that is extracted from several species of the herb named Ferula. Likewise, there are some more health benefits of this tangy ingredient that you should be aware of. Therefore, in this article, we at Boldsky will be listing out some of the benefits of hing or asafoetida. Read on to know more about it.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more