For Quick Alerts
ALLOW NOTIFICATIONS  
For Daily Alerts

ಟ್ಯಾಟೂ ಹಾಕಿಸಿ, ಮದ್ಯಪಾನ ಪರೀಕ್ಷೆ ಮಾಡಿ!

By Manorama Hejmadi
|

ಜಗತ್ತು ವಿಶಾಲವಾಗಿದೆ. ವಿಜ್ಞಾನಿಗಳ ಸಂಶೋಧನೆಗಳ ವಿಷಯಗಳೂ ಅಷ್ಟೇ ವೈಶಾಲ್ಯ ಉಳ್ಳದ್ದು. ಪ್ರತಿದಿನ ಹೊಸ ಹೊಸ ವಿಷಯದ ಕುರಿತು ಸಂಶೋಧನೆ ನಡೆಯುತ್ತಲೆ ಇರುತ್ತದೆ. ಇದೀಗ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದ ಸಂಶೋಧಕ ಜೋಸೆಫ್ ವಾಂಗ್ ಇತ್ತೀಚೆಗೆ ಹೊಸ ವಿಷಯ ಬಿತ್ತರಿಸಿದರು. ಅದೇ ಟ್ಯಾಟೂ ಧರಿಸಿ, ಮದ್ಯಪಾನ ಪರೀಕ್ಷೆ!

Try This Tattoo And Get The Blood Alcohol Level Tested!

ಇವರು ಹೇಳುವುದೇನೆಂದರೆ , ಒಂದು ಸೆನ್ಸರ್ ನಿಂದ ಕೂಡಿದ ತಾತ್ಕಾಲಿಕ ಟ್ಯಾಟೂವನ್ನು ಧರಿಸಿಕೊಂಡರೆ, ತನ್ನನ್ನು ಧರಿಸಿದಾತನ ಬೆವರನ್ನು ಹೀರಿಕೊಂಡು 15 ನಿಮಿಷಗಳಲ್ಲಿ ಆತನು ಸೇವಿಸಿರಬಹುದಾದ ಮದ್ಯಪಾನದ ಮಟ್ಟವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

ಇದಕ್ಕೆ ಸಂಬಂಧಪಟ್ಟಂತೆ ಒಂದು ಅತಿ ಚಿಕ್ಕ ಮ್ಯಾಗ್ನೆಟ್ ಉಳ್ಳ ತಂತ್ರಜ್ಞಾನವಿದ್ದು, ಅದು ಫಲಿತಾಂಶವನ್ನು (ನೀಡಲಾದ) ಮೊಬೈಲ್ ನಂಬರಿಗೆ ಬ್ಲೂ ಟೂತ್ ಮೂಲಕ ರವಾನಿಸುತ್ತದೆ!

"ಇಂದು ಬಹಳಷ್ಟು ಜನ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವುದರಿಂದ ಅಪಘಾತಕ್ಕೊಳಗಾಗುತ್ತಿರುವುದನ್ನು ಕಾಣುತ್ತೇವೆ. ಇಂತಹ ಸಂದರ್ಭಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಉಪಯೋಗಕ್ಕೆ ಬರುತ್ತದೆ." ಎನ್ನುತ್ತಾರೆ, ವಾಂಗ್. ಈ ವಸ್ತುವನ್ನು ಕಾರಿನ ಆಲ್ಕೋಹಾಲ್ ಇಗ್ನಿಶನ್ ಇಂಟರ್ ಲಾಕ್ ನೊಂದಿಗೆ ಸಂಯೋಜಿಸಬಹುದಾಗಿದೆ.

ಪಾರ್ಟಿಯಲ್ಲಿ ಮದ್ಯ ಸೇವಿಸುತ್ತಿರುವ ವ್ಯಕ್ತಿಗೆ ಇದು " ನೀನು ಈಗಾಗಲೇ ಇಂತಿಷ್ಟು ಮದ್ಯ ಸೇವಿಸಿರುವೆ. " ಎಂಬ ಎಚ್ಚರಿಕೆಯ ಗಂಟೆ ಬಾರಿಸುವ ಸಂದೇಶ ನೀಡಬಲ್ಲುದು!! ವ್ಯಕ್ತಿಯ ಮದ್ಯಸೇವನಾ ಪರೀಕ್ಷೆಯಲ್ಲಿ ರಕ್ತದಲ್ಲಿರುವ ಮದ್ಯದ ಮಟ್ಟವನ್ನು ತಿಳಿಯುವುದೇ ಉತೃಷ್ಟ ಮತ್ತು ಸ್ಪಷ್ಟವಾದ ಪರೀಕ್ಷೆ ಎನ್ನಲಾಗುತ್ತದೆ. ಮದ್ಯಪಾನ ಬಿಟ್ಟ ಬಳಿಕ, ಆರೋಗ್ಯ ಹೇಗಿರುತ್ತೆ ನೋಡಿ....

ಆದರೆ, ಅದಕ್ಕಾಗಿ, ವ್ಯಕ್ತಿಯ ಬೆರಳನ್ನು ಚುಚ್ಚಿ, ನೆತ್ತರು ತೆಗೆದು ಪರೀಕ್ಷಿಸಬೇಕಾಗುತ್ತದೆ. ಉಸಿರಿನ ಪರೀಕ್ಷೆಯನ್ನೂ ನಡೆಸಬಹುದಾಗಿದೆ. ಆದರೆ, ಇದೆಲ್ಲಕ್ಕಿಂತ ಬಹಳ ಸರಳವೂ ಸ್ಪಷ್ಟವೂ ಆಗಿದೆ, ಈ ಟ್ಯಾಟೂ ಪರೀಕ್ಷೆ! ಸಂಶೋಧಕರು ಒಂಬತ್ತು ಮಂದಿಗೆ ಈ ಟ್ಯಾಟೂ ಧಾರಣೆ ಮಾಡಿಸಿ, ಪರೀಕ್ಷೆಗೊಳಪಡಿಸಿ, ಸ್ಪಷ್ಟವಾದ ಫಲಿತಾಂಶ ಪಡೆದುಕೊಂಡರು. ಇದನ್ನು ಧರಿಸಿದವರು ಚಲಿಸುತ್ತಿದ್ದಾಗಲೂ ಫಲಿತಾಂಶ ನಿಖರವಾಗಿತ್ತು. ಭಲೆ! ಹೊಸತು ಯಾವಾಗಲೂ ಸ್ವಾಗತಾರ್ಹವಾಗಿರುತ್ತದೆ. ಹಳತನ್ನು ತಿದ್ದಿದ ಸ್ಪಷ್ಟ ರೂಪವದು!

English summary

Try This Tattoo And Get The Blood Alcohol Level Tested!

Researchers have developed a flexible wearable sensor consisting of a temporary tattoo which sticks to the skin and can accurately measure a person's blood alcohol level from sweat. The device can be worn on the skin and could be used by doctors and police officers for continuous, non-invasive and real-time monitoring of blood alcohol content.
X
Desktop Bottom Promotion