Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ತರಕಾರಿ ಜ್ಯೂಸ್-ಆರೋಗ್ಯಕ್ಕೂ ಸೈ, ಸೌಂದರ್ಯಕ್ಕೂ ಜೈ
ಮುಖವನ್ನು ತೊಳೆಯಬೇಕು ಎಂದರೆ ನೀರು ಮಾತ್ರ ಇದ್ದರೆ ಸಾಲದು, ಮುಖದಲ್ಲಿ ಅಂಟಿಕೊಂಡು ಕುಳಿತ ಜಿಡ್ಡು, ಕೊಳೆ, ಇತ್ಯಾದಿಗಳನ್ನು ನಿವಾರಿಸಲು ನಮ್ಮಗೆ ಕ್ಲೀನ್ಸಿಂಗ್ ಉತ್ಪನ್ನಗಳು ಬೇಕಾಗುತ್ತವೆ. ಈ ಉತ್ಪನ್ನಗಳು ನಮಗೆ ಬೇಕಾದ ಆರೋಗ್ಯಕರವಾದ ತ್ವಚೆಯನ್ನು ಮತ್ತು ಹೊಳಪು ಎರಡನ್ನೂ ನೀಡುತ್ತವೆ. ಸಂಜೆಯ ಹೊತ್ತು ಸುಸ್ತಾಗಿ ಮನೆಗೆ ಬಂದ ಮೇಲೆ ನಿಮ್ಮ ತ್ವಚೆಗೆ ಅಗತ್ಯವಾದ ಆರೈಕೆಯನ್ನು ನೀಡುವುದರಿಂದ ಮುಂದಿನ ದಿನ ನಿಮ್ಮ ತ್ವಚೆ ನಳನಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ನಿಮ್ಮ ಕರುಳು ಮತ್ತು ದೇಹವನ್ನು ಡಿಟಾಕ್ಸ್ ಮಾಡಿಕೊಳ್ಳಲು ನೀವು ಆಲೋಚಿಸುತ್ತಿದ್ದಲ್ಲಿ, ಅದಕ್ಕಾಗಿ ನೀವು ನಿಮ್ಮ ಹೊಟ್ಟೆ ಶುಚಿಯಾಗಿಸುವ ರಸಗಳನ್ನು ಸೇವಿಸಬೇಕಾಗುತ್ತದೆ. ಜೊತೆಗೆ ಈ ರಸಗಳನ್ನು ಸೇವಿಸುವುದರಿಂದ ನಿಮ್ಮ ನಿದ್ದೆಯ ಭಂಗಿಗಳು ಸಹ ಸುಧಾರಿಸಲ್ಪಡುತ್ತವೆ.
ಇಂದು ನಾವು ನಿಮಗಾಗಿ ಒಂದು ತರಕಾರಿ ಜ್ಯೂಸ್ ಅನ್ನು ತಿಳಿಸುತ್ತಿದ್ದೇವೆ. ಇದರಲ್ಲಿ ಖನಿಜಾಂಶಗಳು ಮತ್ತು ಕ್ಲೋರೊಫಿಲ್ ಅಧಿಕ ಪ್ರಮಾಣದಲ್ಲಿರುತ್ತದೆ. ಪಾಲಕ್ ಮುಂತಾದ ಹಸಿರು ಸೊಪ್ಪುಗಳನ್ನು ಇದರಲ್ಲಿ ಬಳಸಲಾಗಿರುತ್ತದೆ. ಇದು ತ್ವಚೆಯನ್ನು ಶುದ್ಧಗೊಳಿಸಲು ಬಳಸಲ್ಪಡುತ್ತದೆ, ಕೋಶಗಳನ್ನು ಮರು ಸೃಷ್ಟಿಸುತ್ತದೆ ಮತ್ತು ರಕ್ತವನ್ನು ಸಹ ಶುದ್ಧಿಗೊಳಿಸುತ್ತದೆ. ಒಂದು ವೇಳೆ ನೀವು ಅಧಿಕವಾಗಿ ಊಟ ಮಾಡಿದರೆ, ಈ ರಸವನ್ನು ಸೇವಿಸಲು ಮರೆಯಬೇಡಿ.
ಇದನ್ನು ತಯಾರಿಸುವ ಬಗೆ: ಸ್ವಲ್ಪ ಪುದೀನಾ ರಸ ಅಥವಾ ತುಳಸಿ ಎಲೆಗಳನ್ನು ತೆಗೆದುಕೊಳ್ಳಿ, 2 ಕಪ್ ಪಾಲಕ್ ತೆಗೆದುಕೊಳ್ಳಿ, ಒಂದು ಕಪ್ ಸೌತೆಕಾಯಿ ಮತ್ತು ಸಣ್ಣ ಪ್ರಮಾಣದಲ್ಲಿ ದಂಟುಗಳನ್ನು ಸಹ ತೆಗೆದುಕೊಳ್ಳಿ. ಇವೆಲ್ಲವನ್ನು ಸೇರಿಸಿ ರಸ ಮಾಡಿಕೊಳ್ಳಿ, ಇದನ್ನು ಶೋಧಿಸಲು ಹೋಗಬೇಡಿ. ಇದಕ್ಕೆ ಸ್ವಲ್ಪ ನಿಂಬೆರಸವನ್ನು ಸೇರಿಸಿ ಮತ್ತು ಮಲಗುವ ಮುನ್ನ ಇದನ್ನು ಸೇವಿಸಿ...

ತುಳಸಿ
ತುಳಸಿಯ ಔಷಧೀಯ ಗುಣಗಳು ಮತ್ತು ಅವುಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಹಾಗು ಆಂಟಿಬ್ಯಾಕ್ಟೀರಿಯಾ ಗುಣಗಳು ನಿಮ್ಮ ದೇಹವನ್ನು ನಿದ್ದೆ ಮಾಡುವಾಗ ಶುದ್ಧಗೊಳಿಸುತ್ತವೆ. ಈ ಎಲೆಗಳಲ್ಲಿ ಮ್ಯಾಂಗನೀಸ್, ಮೆಗ್ನಿಷಿಯಂ ಮತ್ತು ವಿಟಮಿನ್ ಎ ಇರುತ್ತದೆ.

ಸೌತೆಕಾಯಿ
ಸೌತೆಕಾಯಿ ನಿಮ್ಮ ದೇಹವನ್ನು ತಂಪು ಮಾಡುತ್ತದೆ. ಜೊತೆಗೆ ಕೋಶಗಳಿಗೆ ನೀರಿನಂಶವನ್ನು ಒದಗಿಸುತ್ತದೆ, ಇದು ಡೀಯುರೆಟಿಕ್ ಆಗಿ ವರ್ತಿಸುತ್ತದೆ, ಇದು ನಿಮ್ಮ ಉಷ್ಣಾಂಶವನ್ನು ನಿಯಂತ್ರಿಸುತ್ತದೆ. ಇದು ನಿಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಸಹ ಕರಗಿಸುತ್ತದೆ. ಇದು ತ್ವಚೆಗೆ ಹೇಳಿ ಮಾಡಿಸಿದ ತರಕಾರಿಯಾಗಿರುತ್ತದೆ. ಇದು ಜ್ವರವನ್ನು ನಿವಾರಿಸುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ನಿಮ್ಮ ದೇಹದಲ್ಲಿರುವ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿ ವಿಟಮಿನ್ ಎ, ಬಿ, ಕ್ಲೋರಿನ್, ಸಲ್ಫರ್, ಪೊಟಾಶಿಯಂ ಮತ್ತು ಅಮೈನೋ ಆಮ್ಲಗಳು ಸಹ ಇರುತ್ತವೆ. ಇವು ದೇಹಕ್ಕೆ ಒಳ್ಳೆಯದು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಪಾಲಕ್
ಇದು ಕೋಶಗಳನ್ನು ಶಕ್ತಿಶಾಲಿಗೊಳಿಸುವ ಅಂಶಗಳನ್ನು ಹೊಂದಿರುತ್ತದೆ. ಇದು ನಿಮ್ಮ ರಕ್ತ ಕಣಗಳಿಗೆ ಆಮ್ಲಜನಕವನ್ನು ಸರಬರಾಜು ಮಾಡುತ್ತದೆ ಮತ್ತು ಕರುಳುಗಳನ್ನು ಶುದ್ಧಗೊಳಿಸುತ್ತದೆ. ಜೊತೆಗೆ ಇದು ಕೆಲವು ಬಗೆಯ ಕ್ಯಾನ್ಸರ್‌ಗಳನ್ನು ಸಹ ನಿವಾರಿಸುತ್ತದೆ. ಇದರಲ್ಲಿ ಮ್ಯಾಂಗನೀಸ್, ಸೋಡಿಯಂ, ರಂಜಕ, ಮೆಗ್ನಿಷಿಯಂ, ಕ್ಯಾಲ್ಸಿಯಂ, ಪೊಟಾಶಿಯಂ, ಐಯೋಡಿನ್, ವಿಟಮಿನ್ ಎ,ಬಿ,ಸಿ,ಕೆ ಮತ್ತು ಕ್ಯಾರೊಟಿನಾಯ್ಡ್‌ಗಳು ಸಹ ಇರುತ್ತವೆ. ಒಂದೇ ಮಾತಿಗೆ ಹೇಳಬೇಕು ಎಂದರೆ ಪಾಲಕ್ ನಿಮ್ಮ ದೇಹಕ್ಕೆ ಆಲ್ಕಾಲೈಸ್ ಮಾಡುತ್ತದೆ.

ನಿಂಬೆ
ನಿಂಬೆಯು ನಿಮ್ಮ ದೇಹವನ್ನು ಮತ್ತು ಕರುಳು ಎರಡನ್ನೂ ಡೀಟಾಕ್ಸಿಫೈ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿಯು ನಿಮಗೆ ತಾಜಾ ಅನುಭವ ನೀಡುತ್ತದೆ. ನಿಂಬೆ ಹಣ್ಣುಗಳಲ್ಲಿ ಫ್ಲಾವೊನಾಯ್ಡ್‌ಗಳು ಇರುತ್ತವೆ, ಇವು ಕ್ಯಾನ್ಸರ್ ವಿರುದ್ಧ ಹೋರಾಡುತ್ತವೆ.

ಸರಿಯಾದ ಸಮಯ ಯಾವುದು?
ಖಾಲಿ ಹೊಟ್ಟೆಯಲ್ಲಿ ಈ ಕ್ಲೀನ್ಸಿಂಗ್ ರಸವನ್ನು ಸೇವಿಸುವುದು ಒಳ್ಳೆಯದು. ಸಾಮಾನ್ಯವಾಗಿ ಈ ರಸಗಳನ್ನು ಬೆಳ್ಳಂಬೆಳಗ್ಗೆ ಸೇವಿಸುವು ಒಳ್ಳೆಯದು. ತರಕಾರಿ ರಸಗಳನ್ನು ಸಂಜೆ ಸಹ ಸೇವಿಸಬಹುದು. ಆದರೆ ಒಳ್ಳೆಯದನ್ನು ಸೇವಿಸಲು ಯಾವುದೇ ಸಮಯ ನೋಡುವ ಅವಶ್ಯಕತೆ ಇಲ್ಲ ಎಂಬುದು ನಮ್ಮ ಅಭಿಪ್ರಾಯ.

ನಾರಿನಂಶ
ಫಿಲ್ಟರ್ ಮಾಡುವಿಕೆ ಅಥವಾ ಶೋಧಿಸುವಿಕೆ ಮಾಡುವುದರಿಂದ ಈ ರಸದಲ್ಲಿರುವ ನಾರಿನಂಶಗಳು ಹಾಳಾಗುತ್ತವೆ. ಆಗ ಅವು ಒಳ್ಳೆಯ ಫಲಿತಾಂಶವನ್ನು ನೀಡುವುದಿಲ್ಲ. ಜೊತೆಗೆ ಇವುಗಳಿಗೆ ಸಕ್ಕರೆಯನ್ನು ಸಹ ಬೆರೆಸಬೇಡಿ.




Click it and Unblock the Notifications










