Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಬ್ಯಾಗ್‌ಗಳನ್ನು ಹೇಗೆ ಹಿಡಿದುಕೊಳ್ಳಬೇಕು ಗೊತ್ತಾ?
ಮಹಿಳೆಯರು ಫ್ಯಾಷನ್ ಪ್ರಿಯರು. ಅವ್ರ ವಾಲ್ ಡ್ರೋಬ್ ನಲ್ಲಿ ಅದೆಷ್ಟೋ ವೆರೈಟಿಯ ಆಕ್ಸಸರೀಸ್ ಗಳಿರುತ್ತೆ. ಅದ್ರಲ್ಲೂ ಕಾಲೇಜು ಹುಡುಗಿಯರಿಗಂತೂ ತಾವು ಕಾಲೇಜಿಗೆ ತೆಗೆದುಕೊಂಡು ಹೋಗುವ ಬ್ಯಾಗ್ ಬಗ್ಗೆ ವಿಶೇಷವಾದ ಕ್ರೇಝ್ ಇರುತ್ತೆ. ಅದಕ್ಕಾಗಿ ವೆರೈಟಿ ವೆರೈಟಿ ಬ್ಯಾಗ್ ಗಳ ಕಲೆಕ್ಷನ್ ಇಟ್ಟಿರುತ್ತಾರೆ. ಕೇವಲ ಕಾಲೇಜು ಹುಡುಗಿಯರು ಮಾತ್ರವಲ್ಲ ಬ್ಯಾಗ್ ಗಳ ಬಗೆಗಿನ ಕ್ರೇಝ್ ಇತ್ತೀಚಿಗೆ ಪ್ರತಿಯೊಬ್ಬರಲ್ಲೂ
ಹೆಚ್ಚಾಗಿದೆ. ಮಹಿಳೆಯರಂತೂ ತರಕಾರಿ ತರೋಕೆ ಹೋಗುವಾಗಲೂ ಮ್ಯಾಚಿಂಗ್ ಬ್ಯಾಗ್ ತೆಗೆದುಕೊಂಡು ಹೋಗೋದನ್ನು ಗಮನಿಸ್ಬಹುದು. ಇನ್ನು ಪರ ಊರಿಗೆ ಹೊರಡುವಾಗ ಎಷ್ಟು ಬಾರಿ ಬ್ಯಾಗ್ ಗಳನ್ನು ಸೇರಿಸಿಕೊಂಡ್ರೂ ಸಾಕಾಗೋದಿಲ್ಲ. ಇನ್ನು ಪುರುಷರೂ ಕೂಡ ಇದಕ್ಕೆ ಹೊರತಾಗಿಲ್ಲ.
ಅವರಿಗೂ ಕೂಡ ಬ್ಯಾಗ್ ಗಳ ಬಗ್ಗೆ ವಿಶೇಷವಾದ ಆಸಕ್ತಿ ಇದೆ. ಆದ್ರೆ ಈ ಬ್ಯಾಗ್ ಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮಗಳನ್ನು ಬೀರುತ್ತಾ ಇರಬಹುದು. ಒಮ್ಮೆ ನೀವು ನಿಮ್ಮ ಬ್ಯಾಗ್ ಗಳನ್ನು ಹೇಗೆ ಹಿಡಿದುಕೊಳ್ತೀರಿ ನೆನಪು ಮಾಡ್ಕೊಳ್ಳಿ. ಸರಿಯಾದ ಕ್ರಮದಲ್ಲಿ ಬ್ಯಾಗ್‌ಗಳನ್ನು ಕ್ಯಾರಿ ಮಾಡಿಲ್ಲ ಅಂದ್ರೆ ನಿಮ್ಮ ಮಾಂಸಖಂಡಗಳಿಗೆ ತೊಂದರೆಯಾಗಬಹುದು. ನಿಮ್ಮ ದೈಹಿಕ ಸ್ವಾಸ್ಥ್ಯ ಹಾಳು ಮಾಡುವಲ್ಲಿ ನಿಮ್ಮ ಬ್ಯಾಗ್‌ಗಳು ಕೂಡ ಕಾರಣವಾಗಿರಬಹುದು. ಹಾಗಾಗಿ ಸರಿಯಾದ ಕ್ರಮದಲ್ಲಿ ಬ್ಯಾಗ್‌ಗಳನ್ನು ಹಿಡಿದುಕೊಳ್ಳಬೇಕಾಗುತ್ತೆ. ಅದಕ್ಕಾಗಿ ಕೆಲವು ಟಿಪ್ಸ್‌ಗಳು ಇಲ್ಲಿವೆ. ಮುಂದೆ ಓದಿ.. ಹ್ಯಾಂಡ್ ಬ್ಯಾಗ್‍ಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು
ಹೆಗಲು ಬದಲಿಸುತ್ತಿರಿ
ಒಂದೇ ಹೆಗಲಿನಲ್ಲಿ ವ್ಯಾನಿಟಿ ಬ್ಯಾಗ್ ಹಿಡಿದುಕೊಳ್ಳೋದ್ರಿಂದ ನಿಮ್ಮ ಒಂದೇ ಪಾರ್ಶ್ವದ ಮಾಂಸಖಂಡಗಳಿಗೆ ಒತ್ತಡ ಹೆಚ್ಚಾಗುತ್ತೆ. ಮುಂದೆ ಆ ಮಾಂಸಖಂಡಗಳು ತೊಂದರೆಗೆ ಒಳಗಾಗಿ ಶಾಶ್ವತವಾಗಿ ನಿಮ್ಮ ಆಕಾರವನ್ನು ಅಥವಾ ನಡಿಗೆಯ ಶೈಲಿಯನ್ನು ಬದಲಿಸಿಬಿಡಬಹುದು. ಇದನ್ನು ತಪ್ಪಿಸಿಕೊಳ್ಳಲು ನಿಮ್ಮ ವ್ಯಾನಿಟಿ ಬ್ಯಾಗ್‌ನ ಆಗಾಗ ಹೆಗಲು ಬದಲಿಸಿ ಹಿಡಿದುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ

ಓವರ್ ಲೋಡ್ ಕಡಿಮೆ ಮಾಡಿ
ಒಂದೇ ಬ್ಯಾಗ್ ನಲ್ಲಿ ಎಲ್ಲವನ್ನೂ ತುಂಬಿಕೊಂಡು ಹೆಗಲಿಗೆ ಹಾಕಿಕೊಳ್ಳಬೇಡಿ. ಅಷ್ಟೇ ಅಲ್ಲ ಭಾರವಾದ ಬ್ಯಾಗನ್ನು ತೋಳು ಅಥವಾ ಹೆಗಲಿನಲ್ಲಿ ಹಿಡಿದುಕೊಳ್ಳುವ ಬದಲಾಗಿ ಕೈಗಳಲ್ಲಿ ಹಿಡಿದುಕೊಳ್ಳೋದು ಅತ್ಯುತ್ತಮ ವಿಧಾನ.ಭಾರವಾದ ಒಂದು ಬ್ಯಾಗ್ ಹಿಡಿದುಕೊಳ್ಳುವ ಬದಲು ಅದನ್ನು ಸ್ಪ್ಲಿಟ್ ಮಾಡಿ . ಅಂದ್ರೆ ಎರಡು ಪ್ರತ್ಯೇಕ ಬ್ಯಾಗ್ ಗಳಲ್ಲಿ ತುಂಬಿಸಿಕೊಳ್ಳೋದು ಉತ್ತಮ.
ಟೈಟ್ ಬಟ್ಟೆ ಧರಿಸಿದಾಗ ಬ್ಯಾಗ್ ಹಿಡಿಯೋದು ಸೂಕ್ತವಲ್ಲ
ಕೆಲವರು ತಮ್ಮ ಎಬ್ಡಾಮಿನಲ್ ಅಂದ್ರೆ ಹೊಟ್ಟೆಯ ಭಾಗದಲ್ಲಿ ಟೈಟ್ ಬಟ್ಟೆಗಳನ್ನು ಧರಿಸುತ್ತಾರೆ. ಉದಾಹರಣೆಗೆ ಟೈಟ್ ಜೀನ್ಸ್ ಧರಿಸಿ ಹೊಟ್ಟೆ ಹಿಡಿದಿರುವಂತೆ ಮಾಡಿಕೊಳ್ಳುತ್ತಾರೆ. ಇಂತವರು ಭಾರದವಾದ ಬ್ಯಾಗ್ ಅನ್ನು ತೋಳಿನಲ್ಲಿ ಇಲ್ಲವೇ ಹೆಗಲಿನಲ್ಲಿ ಹಿಡಿದಾಗ ಒತ್ತಡ ಕಾಲುಗಳಿಗೆ ಟ್ರಾನ್ಸ್ ಫರ್ ಆಗುತ್ತೆ. ಅಷ್ಟೇ ಅಲ್ಲ ಹೈ ಹೀಲ್ಸ್ ಹಾಕಿದ್ರಂತೂ ಮುಗಿದೇ ಹೋಯ್ತು.. ಮತ್ತಷ್ಟು ಒತ್ತಡದಿಂದಾಗಿ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಬಹುದು.
ಡಯಾಗನಲ್ ಆಗಿ ಬ್ಯಾಗ್ ಹಿಡಿದುಕೊಳ್ಳಿ
ಭಾರವಾದ ಬ್ಯಾಗ್ ಗಳನ್ನು ಹಿಡಿದುಕೊಳ್ಳುವಾಗ ಅವುಗಳ ಹಗ್ಗ ಅಥವಾ ಅವುಗಳನ್ನು ಹಿಡಿದುಕೊಳ್ಳಲು ಇರುವ ಸ್ಟ್ರೈಪ್ಸ್ ಗಳನ್ನು ಸರಿಯಾಗಿ ಅಡ್ಜೆಸ್ಟ್ ಮಾಡ್ಕೊಳ್ಳಿ. ನಿಮ್ಮ ಹೈಟಿಗೆ ಸರಿಯಾಗಿ ಹೊಂದಿಕೊಂಡಿರಲಿ.. ಸ್ಟೈಲ್ ಎಂದು ತೀರಾ ಉದ್ದ ಮಾಡಿಕೊಂಡು ಭಾರವಾದ ಬ್ಯಾಗ್ ಹಿಡಿದರೆ ಅದು ನಿಮ್ಮ ದೇಹದ ಬ್ಯಾಲೆನ್ಸ್ ಮೇಲೆ ಪರಿಣಾಮಗಳನ್ನು ಉಂಟು ಮಾಡುತ್ತೆ. ಹೆಗಲಿಗೆ ಇಂತಹ ಭಾರದ ಬ್ಯಾಗ್ ಗಳನ್ನು ಹಾಕಿಕೊಂಡಾಗ ದೇಹದ ಎರಡೂ ಪಾರ್ಶ್ವಕ್ಕೂ ಸಮವಾಗಿ ಭಾರ ಹಂಚಿಕೆಯಾಗುವಂತೆ ಬ್ಯಾಗ್ ಗಳನ್ನು ಹಿಡಿದುಕೊಳ್ಳೋದು ಉತ್ತಮ. ಅದಕ್ಕಾಗಿ ಬ್ಯಾಗ್ ಗಳನ್ನು ಡಯಾಗನಲ್ ಆಗಿ ಹಿಡಿದುಕೊಳ್ಳೋದು ಬೆಸ್ಟ್ ವಿಧಾನ ಅನ್ನೋದು ತಜ್ಞರ ಅಭಿಪ್ರಾಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
