For Quick Alerts
ALLOW NOTIFICATIONS  
For Daily Alerts

ಬಿಳಿ ಬ್ರೆಡ್: ಹಣ ಕೊಟ್ಟು ಕಾಯಿಲೆ ಖರೀದಿಸಬೇಡಿ!

By Super
|

ಸುಂದರವಾಗಿರುವ ವ್ಯಕ್ತಿಗಳು ಉತ್ತಮರೇ? ಅಲ್ಲ ಎಂದು ಎಲ್ಲರೂ ಥಟ್ಟನೇ ಉತ್ತರ ಕೊಡುತ್ತಾರೆ. ಹಾಗಾದರೆ ಸುಂದರವಾಗಿ ಕಾಣುವ ಆಹಾರ? ಇದಕ್ಕೆ ಉತ್ತರ ಅಷ್ಟು ಸುಲಭವಲ್ಲ. ಏಕೆಂದರೆ ಸುಂದರವಾಗಿ ಕಾಣುವ ಬಿಳಿಯ ಮೈದಾ ಹಿಟ್ಟು ಆರೋಗ್ಯಕರವಲ್ಲ. ಮೈದಾಹಿಟ್ಟಿನಿಂದ ಮಾಡಿದ ಯಾವುದೇ ಖಾದ್ಯವೂ ಆರೋಗ್ಯಕರವಲ್ಲ, ಆದರೆ ಎಂದಾದರೊಮ್ಮೆ ತಿಂದರೆ ದೇಹಕ್ಕೆ ಹಾನಿ ಅಷ್ಟೊಂದು ಆಗುವುದಿಲ್ಲ.

ಆದರೆ ನಿತ್ಯವೂ ತಿಂದರೆ ಮಾತ್ರ ನಿಧಾನವಾಗಿ ಹಲವು ತೊಂದರೆಗಳನ್ನು ನಾವಾಗಿಯೇ ಎಳೆದುಕೊಂಡಂತೆ ಆಗುತ್ತದೆ. ಸಮಯದ ಆಭಾವದಿಂದಾಗಿ ಹೆಚ್ಚಿನವರು ಈಗ ಸಿದ್ಧ ಅಹಾರ, ಥಟ್ಟನೇ ಬೆಣ್ಣೆ ಜಾಮ್ ಹಚ್ಚಿ ತಿನ್ನಬಹುದಾದ ಬಿಳಿ ಬ್ರೆಡ್, ಬನ್ ಮೊದಲಾದವುಗಳನ್ನೇ ಸೇವಿಸಿ ತಮ್ಮ ಆರೋಗ್ಯವನ್ನು ಪಣಕ್ಕಿಡುತ್ತಿದ್ದಾರೆ. ಇದರ ಪರಿಣಾಮಗಳ ಬಗ್ಗೆ ಅರಿವು ಇಲ್ಲದ ಕಾರಣ ಹೆಚ್ಚಿನವರು ಯಾವುದೇ ಅನುಮಾನವಿಲ್ಲದೇ ತಿನ್ನುತ್ತಿದ್ದಾರೆ.

ವಾಸ್ತವವಾಗಿ ಮೈದಾ ಎಂದರೆ ಗೋಧಿಹಿಟ್ಟೇ, ಆದರೆ ಇದರ ಹೊರಕವಚವನ್ನು ಮತ್ತು ಮೊಳಕೆ ಬರುವ ಮೂಲಬಿಂದುವನ್ನು ನಿವಾರಿಸಲಾಗಿರುತ್ತದೆ. ಆದರೆ ಹೊರಕವಚದಲ್ಲಿ ಅತ್ಯುತ್ತಮ ಪ್ರಮಾಣದ ನಾರು (ಕರಗದ ನಾರು) ಹಾಗೂ ಮೊಳಕೆಯ ಮೂಲಬಿಂದುವಿನಲ್ಲಿ ಪೌಷ್ಟಿಕಾಂಶದ ಕೇಂದ್ರೀಕೃತವಾಗಿರುತ್ತದೆ. (ಇದೇ ಕಾರಣಕ್ಕೆ ಮೊಳಕೆ ಬರಿಸಿದ ಕಾಳುಗಳು ಅತಿ ಹೆಚ್ಚಿನ ಪ್ರೊಟೀನುಗಳನ್ನು ಹೊಂದಿರುತ್ತವೆ) ಇವೆರಡೂ ಇಲ್ಲದ ಹಿಟ್ಟೇ ಮೈದಾ. ಇದು ನೋಡಲು ಬಿಳಿಯದಾಗಿದ್ದು ಇದರಲ್ಲಿ ನಾರು ಇಲ್ಲದ ಕಾರಣ ಮಲಬದ್ಧತೆಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಬ್ರೆಡ್ ಹೆಚ್ಚಾಗಿ ತಿನ್ನುವುದನ್ನು ಇಂದೇ ನಿಲ್ಲಿಸಿ!

ಕರಗದ ನಾರು ಜೀರ್ಣಕ್ರಿಯೆ ಮತ್ತು ವಿಸರ್ಜನೆಗೆ ಅತ್ಯಂತ ಅಗತ್ಯವಾದ ಅಂಶಗಳಾಗಿದ್ದು ಇವುಗಳ ಕೊರತೆಯಿಂದ ಹಲವು ವಿಧದ ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಆರೋಗ್ಯಕ್ಕೆ ಪೂರ್ಣ ಗೋಧಿಯ ಹಿಟ್ಟು (whole wheat flour) ಅಥವಾ ಚಕ್ಕಿ ಫ್ರೆಶ್ ಆಟಾ ಎಂದು ಸಿಗುವ ಗೋಧಿಹಿಟ್ಟೇ ಉತ್ತಮ. ಇದು ನೋಡಲು ಕೊಂಚ ಕಂದು ಬಣ್ಣ ಹೊಂದಿದ್ದರೂ ಆರೋಗ್ಯದ ವಿಷಯದಲ್ಲಿ ಮಾತ್ರ ಪರಿಪೂರ್ಣವಾಗಿದೆ. ಮೈದಾ ಏಕೆ ತಿನ್ನಬಾರದು? ಪೂರ್ಣ ಗೋಧಿಹಿಟ್ಟನ್ನೇ ಏಕೆ ಬಳಸಬೇಕು? ಮೈದಾ ಇಷ್ಟು ದಿನದಿಂದ ತಿನ್ನುತ್ತಾ ಬಂದಿಲ್ಲವೇ, ಏನಾಗಿದೆ ನಮಗೆ, ಎಂದೆಲ್ಲಾ ಅನುಮಾನಗಳನ್ನು ಮೂಡಿಸುವವರಿಗೆ ಕೆಳಗಿನ ಸ್ಲೈಡ್ ಶೋ ಸೂಕ್ತ ಉತ್ತರ ನೀಡಲಿದೆ...

ಮೈದಾ ತೂಕದಲ್ಲಿ ಹೆಚ್ಚಳವಾಗಲು ಸಹಕರಿಸುತ್ತದೆ

ಮೈದಾ ತೂಕದಲ್ಲಿ ಹೆಚ್ಚಳವಾಗಲು ಸಹಕರಿಸುತ್ತದೆ

ಪ್ರತಿದಿನ ಬೆಳಿಗ್ಗೆ ಮೈದಾ ಆಧಾರಿತ ಉತ್ಪನ್ನಗಳನ್ನೇ ತಿನ್ನುವ ಮೂಲಕ ತೂಕ ಹೆಚ್ಚುತ್ತದೆ. ಏಕೆಂದರೆ ಒಂದು ಕೇಜಿ ಗೋಧಿಹಿಟ್ಟಿನಲ್ಲಿ ಕನಿಷ್ಟ ನೂರು ಗ್ರಾಂ ನಾರು ಇರುತ್ತದೆ. ಇದನ್ನು ಕರಗಿಸಲು ಮತ್ತು ವಿಸರ್ಜಿಸಲು ಹೆಚ್ಚಿನ ಪ್ರಮಾಣದ ಕೊಬ್ಬು ಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೈದಾ ತೂಕದಲ್ಲಿ ಹೆಚ್ಚಳವಾಗಲು ಸಹಕರಿಸುತ್ತದೆ

ಮೈದಾ ತೂಕದಲ್ಲಿ ಹೆಚ್ಚಳವಾಗಲು ಸಹಕರಿಸುತ್ತದೆ

ಆದರೆ ಮೈದಾದಲ್ಲಿ ಇದು ಇಲ್ಲದೇ ಇರುವ ಕಾರಣ ಈ ಕೊಬ್ಬು ಬಳಸಲ್ಪಡದೇ ಉಳಿಯುತ್ತದೆ. ಅಲ್ಲದೇ ಮೈದಾ ರುಚಿಯಾಗಿರುವ ಕಾರಣ ಇನ್ನಷ್ಟು ಹೆಚ್ಚು ತಿನ್ನಲು ಪ್ರೇರೇಪಿಸಿ ಅನಗತ್ಯ ಕ್ಯಾಲೋರಿಗಳನ್ನು ದೇಹಕ್ಕೆ ನೀಡುತ್ತದೆ.

ಮೈದಾ ಸೇವನೆಯಿಂದ ಸೋಮಾರಿತನ ಹೆಚ್ಚುತ್ತದೆ

ಮೈದಾ ಸೇವನೆಯಿಂದ ಸೋಮಾರಿತನ ಹೆಚ್ಚುತ್ತದೆ

ಮೈದಾ ಸೇವನೆಯ ಬಳಿಕ ದೇಹಕ್ಕೆ ಸುಸ್ತು ಆವರಿಸುತ್ತದೆ. ಇಡಿಯ ರಾತ್ರಿ ನಿದ್ದೆ ಮಾಡಿದ್ದರೂ ಬೆಳಗ್ಗಿನ ಉಪಾಹಾರದ ಬಳಿಕ ನಿದ್ದೆ ಬಂದಂತಾಗುತ್ತದೆ.ಏಕೆಂದರೆ ಮೈದಾ ಸೇವನೆಯ ಬಳಿಕ ಥಟ್ಟನೇ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರುತ್ತದೆ ಹಾಗೂ ಅಷ್ಟೇ ವೇಗವಾಗಿ ಖಾಲಿಯೂ ಆಗುತ್ತದೆ. ಇದು ನಿದ್ದೆ ಬರಲು ಕಾರಣ.

ಮಧುಮೇಹದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ

ಮಧುಮೇಹದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ

ಮಧುಮೇಹ ಆವರಿಸುವ ಸಾಧ್ಯತೆ ಮೈದಾಹಿಟ್ಟನ್ನು ಸೇವಿಸುವ ಮೂಲಕ ಅಪಾರವಾಗಿ ಹೆಚ್ಚುತ್ತದೆ. ಏಕೆಂದರೆ ಇದರಲ್ಲಿರುವ ಸಕ್ಕರೆ ಅತಿ ಶೀಘ್ರವಾಗಿ ರಕ್ತವನ್ನು ಸೇರುವ ಮೂಲಕ ರಕ್ತದಲ್ಲಿ ಅತಿಹೆಚ್ಚಿನ ಇನ್ಸುಲಿನ್ ಅನ್ನು ನಮ್ಮ ಮೇದೋಜೀರಕ ಗ್ರಂಥಿ ಉತ್ಪಾದಿಸಬೇಕು. ಇದು ಈ ಗ್ರಂಥಿಯ ಮೇಲೆ ಅಪಾರ ಒತ್ತಡ ಹೇರುತ್ತದೆ.

ಮಧುಮೇಹದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ

ಮಧುಮೇಹದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ

ಅಲ್ಲದೆ ಅನುವಂಶೀಯ ಅಥವಾ ಇತರ ಕಾರಣಗಳಿಂದ ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳಿಗೆ ಮಧುಮೇಹ ಆವರಿಸಲು ಈ ಚಿಕ್ಕ ಒತ್ತಡವೇ ಸಾಕು. ಅದರಲ್ಲೂ ಸ್ಥೂಲಕಾಯದ ವ್ಯಕ್ತಿಗಳು ಇನ್ನಷ್ಟು ಸ್ಥೂಲರಾಗುವ ಮೂಲಕ ದೂರದಲ್ಲಿದ್ದ ಮಧುಮೇಹವನ್ನು ಬೇಗ ಬನ್ನಿ ಎಂದು ಆಹ್ವಾನ ನೀಡುತ್ತಾರೆ.

ಇಡಿಯ ದಿನ ತಿನ್ನುತ್ತಿರಲು ಪ್ರೇರೇಪಿಸುತ್ತದೆ

ಇಡಿಯ ದಿನ ತಿನ್ನುತ್ತಿರಲು ಪ್ರೇರೇಪಿಸುತ್ತದೆ

ಮೈದಾದ ಅತಿ ಕೆಟ್ಟ ಪರಿಣಾಮ ಎಂದರೆ ಇದರ ಸಕ್ಕರೆ ಥಟ್ಟನೇ ರಕ್ತಕ್ಕೆ ಲಭ್ಯವಾಗಿ ಥಟ್ಟನೇ ಖಾಲಿಯಾಗುವುದು. ಖಾಲಿಯಾದ ಸಕ್ಕರೆಯ ಕಾರಣ ದೇಹ ಸಕ್ಕರೆಯ ಬೇಡಿಕೆಯನ್ನು ನೀಡುತ್ತದೆ. ಈ ಬೇಡಿಕೆ ಈಡೇರಿಸಲು ಹೊಟ್ಟೆ ಹಸಿವನ್ನು ಪ್ರಕಟಿಸುತ್ತದೆ. ಕಣ್ಣಿಗೆ ಕಂಡ ತಿಂಡಿಗಳನ್ನೆಲ್ಲಾ ತಿನ್ನಲು ಪ್ರೇರೇಪಿಸುತ್ತದೆ.

ಇಡಿಯ ದಿನ ತಿನ್ನುತ್ತಿರಲು ಪ್ರೇರೇಪಿಸುತ್ತದೆ

ಇಡಿಯ ದಿನ ತಿನ್ನುತ್ತಿರಲು ಪ್ರೇರೇಪಿಸುತ್ತದೆ

ಈ ಪ್ರೇರಣೆಯೇ ಬ್ರಂಚ್ ಎಂಬ ಅನಾರೋಗ್ಯಕರ ಆಹಾರವಿಧಾನಕ್ಕೆ ಬಾಗಿಲು ತೆರೆದಿದೆ. ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುವುದು, ಕುಡಿಯುವುದರ ಮೂಲಕ ಅನಗತ್ಯವಾಗಿ ಇನ್ನಷ್ಟು ತಿನ್ನುವ, ಅದರಲ್ಲೂ ಇನ್ನಷ್ಟು ಮೈದಾವನ್ನೇ ತಿನ್ನುವ ಮೂಲಕ ಆರೋಗ್ಯ ಹದಗೆಡುತ್ತಾ ಹೋಗುತ್ತದೆ.

ಇಡಿಯ ದಿನ ಅಸಹನೆ, ಸಿಟ್ಟು ಹೆಚ್ಚುತ್ತದೆ

ಇಡಿಯ ದಿನ ಅಸಹನೆ, ಸಿಟ್ಟು ಹೆಚ್ಚುತ್ತದೆ

ದಿನವಿಡೀ ಸಂತೋಷವಾಗಿರಬೇಕಾದರೆ ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತ ಉತ್ತಮ ಪ್ರಮಾಣದಲ್ಲಿ ಹರಿಯುತ್ತಿರಬೇಕು. ಇದರಿಂದ ನಿತ್ಯದ ಚಟುವಟಿಕೆ ಸುಲಲಿತವಾಗಿ ಸಾಗುತ್ತದೆ. ಕೆಲಸದ ಹೊತ್ತಿನಲ್ಲಿ ಹಾಡುತ್ತಾ ಇರುವುದು ಈ ರಸದೂತ ಸ್ರವಿಸಲು ಮುಖ್ಯ ಕಾರಣವಾಗಿದೆ.

ಇಡಿಯ ದಿನ ಅಸಹನೆ, ಸಿಟ್ಟು ಹೆಚ್ಚುತ್ತದೆ

ಇಡಿಯ ದಿನ ಅಸಹನೆ, ಸಿಟ್ಟು ಹೆಚ್ಚುತ್ತದೆ

ಆದರೆ ನಿತ್ಯದ ಮೈದಾ ಸೇವನೆಯಿಂದ ರಕ್ತದಲ್ಲಿ ಥಟ್ಟನೇ ಸಕ್ಕರೆ ಏರಿ ಇಳಿಯುವ ಕಾರಣ ಮೆದುಳಿನ ರಕ್ತದ ಸಕ್ಕರೆಯಲ್ಲಿಯೂ ಏರುಪೇರು ಉಂಟಾಗುತ್ತದೆ. ಇದು ಸೆರೋಟೋನಿನ್ ರಸದೂತವನ್ನು ಸ್ರವಿಸಲು ಅಡ್ಡಿಯುಂಟುಮಾಡುತ್ತದೆ. ಪರಿಣಾಮವಾಗಿ ಇಡಿಯ ದಿನ ಮೆದುಳು ಪ್ರಕ್ಷುಬ್ದ ಸ್ಥಿತಿಯಲ್ಲಿದ್ದು ಸಿಟ್ಟು, ಅಸಹನೆ ಮೊದಲಾದವು ಹೆಚ್ಚುತ್ತವೆ.

ಮಲಬದ್ಧತೆ ಹೆಚ್ಚುತ್ತದೆ

ಮಲಬದ್ಧತೆ ಹೆಚ್ಚುತ್ತದೆ

ಮೈದಾದಲ್ಲಿ ನಾರು ಇಲ್ಲದೇ ಇರುವ ಕಾರಣ ಹೆಚ್ಚಿನ ಭಾಗ ಜೀರ್ಣಗೊಂಡು ಅಜೀರ್ಣವಾದ ಭಾಗದಿಂದ ದೊಡ್ಡ ಕರುಳು ನೀರು ಹೀರಿದ ಬಳಿಕ ಅತ್ಯಂತ ಗಟ್ಟಿಯಾಗಿದ್ದು ಕಟ್ಟಿಗೆ ತುಂಡಿನಂತಾಗುತ್ತದೆ.

ಮಲಬದ್ಧತೆ ಹೆಚ್ಚುತ್ತದೆ

ಮಲಬದ್ಧತೆ ಹೆಚ್ಚುತ್ತದೆ

ಇದನ್ನು ವಿಸರ್ಜಿಸಲು ಕರುಳುಗಳು ಹಾಗೂ ದೊಡ್ಡ ಕರುಳಿನ ಕೆಳತುದಿಯ ಭಾಗ (rectum)ಕ್ಕೆ ಅತಿ ಹೆಚ್ಚಿನ ಒತ್ತಡ ಹೇರಬೇಕಾಗುತ್ತದೆ. ಈ ಒತ್ತಡ ಮಲಬದ್ಧತೆ, ಮೂಲವ್ಯಾಧಿ, ಕರುಳುಗಳಲ್ಲಿ ಹುಣ್ಣು ಮೊದಲಾದವುಗಳಿಗೆ ಕಾರಣವಾಗುತ್ತದೆ.

ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆ

ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆ

ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಬೇಕಾದರೆ ನಮ್ಮ ಆಹಾರದಲ್ಲಿ ಇಡಿಯ ಧಾನ್ಯಗಳ ಪ್ರಮಾಣ ಹೆಚ್ಚಿರಬೇಕು. ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಗೆ ಈ ನಾರುಗಳು ಮಹತ್ವದ ಪಾತ್ರ ವಹಿಸುತ್ತವೆ. ಆದರೆ ಇದರಲ್ಲಿ ನಾರು ಇಲ್ಲದೇ ಇರುವ ಕಾರಣ ಕೆಟ್ಟಕೊಲೆಸ್ಟ್ರಾಲ್ ತೊಲಗಿಸಲು ಮೈದಾ ವಿಫಲವಾಗುತ್ತದೆ.

ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆ

ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆ

ಪರಿಣಾಮವಾಗಿ ನಿತ್ಯವೂ ಬಿಳಿಯ ಬ್ರೆಡ್ ತಿನ್ನುವ ಮೂಲಕ ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯ ಸಂಬಂಧಿ ರೋಗಗಳಿಗೆ ರತ್ನಗಂಬಳಿ ಹಾಸಿ ನಾವೇ ಆತ್ಮೀಯ ಆಹ್ವಾನ ಕೋರಿದಂತಾಗುತ್ತದೆ.

ಕೆಲವು ಸಲಹೆಗಳು

ಕೆಲವು ಸಲಹೆಗಳು

* ಮೈದಾ ಬದಲಿಗೆ ಇಡಿಯ ಗೋಧಿಯ ಹಿಟ್ಟನ್ನೇ ಬಳಸಿ

* ಮಾರುಕಟ್ಟೆಯಲ್ಲಿ ಬ್ರೌನ್ ಬ್ರೆಡ್ ಎಂದು ಬರೆದಿರುವ ಬ್ರೆಡ್‌ಗಳನ್ನೇ ಕೊಳ್ಳಿ

* ಮೈದಾ ಆಧಾರಿತ ಪರೋಟ, ರೊಟ್ಟಿ, ಬ್ರೆಡ್, ಬನ್, ಪಿಜ್ಜಾ, ಸಮೋಸ ಮೊದಲಾದ ತಿಂಡಿಗಳ ರೂಪಕ್ಕೆ ಮರುಳಾಗಬೇಡಿ.

ಕೆಲವು ಸಲಹೆಗಳು

ಕೆಲವು ಸಲಹೆಗಳು

* ಮೈದಾ, ಸಕ್ಕರೆಯ ಜೋಡಿ ಅತ್ಯಂತ ಅಪಾಯಕರ. ಇವುಗಳ ತಂಟೆಗೆ ಹೋಗದಿರುವುದೇ ಲೇಸು, ಎಷ್ಟೇ ಆಕರ್ಷಕವಾಗಿದ್ದರೂ.

* ಮೈದಾ ಮತ್ತು ಲಘು ಪಾನೀಯಗಳೂ ಅಪಾಯಕರ ಜೋಡಿ. ಲಘುಪಾನೀಯದಲ್ಲಿಯೂ ಅಪಾರ ಪ್ರಮಾಣದ ಸಕ್ಕರೆ ಇರುವ ಕಾರಣ ಇದರೊಂದಿಗೆ ಮೈದಾ ಸೇವನೆಯಿಂದ ಅತಿ ಹೆಚ್ಚಿನ ಸಕ್ಕರೆ ಲಭ್ಯವಾಗಿ ಆರೋಗ್ಯವನ್ನು ಕೆಡಿಸುತ್ತದೆ.

English summary

Things That Happen When You Eat White Bread Daily

White bread is a favourite food for many during breakfast. However, do you know how this time-saver food can mess up your health for good, but There are many hidden effects of eating white bread on your health, which you may not be aware of. White bread may be tasty to eat, especially if some sugar is added to it and toasted.
X
Desktop Bottom Promotion