ಶಸ್ತ್ರಚಿಕಿತ್ಸೆಯ ದಿನ, ಚಿಂತೆ ಬಿಡಿ-ಕೂಲ್ ಆಗಿರಿ!

By Jaya subramanya
Subscribe to Boldsky

ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವ ಮೊದಲು ನೀವು ಕೆಲವೊಂದು ಅಂಶಗಳತ್ತ ಗಮನ ಹರಿಸಲೇಬೇಕು. ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಂಡು ಶಸ್ತ್ರಚಿಕಿತ್ಸೆಗೆ ನಿಮ್ಮನ್ನು ನೀವು ಸಿದ್ಧಮಾಡಿಕೊಳ್ಳಬೇಕು. ನೀವು ಅಧಿಕ ಒತ್ತಡಕ್ಕೆ ಒಳಗಾಗಿದ್ದೀರಿ ಎಂದಾದಲ್ಲಿ ಇದು ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿ ತೊಂದರೆಯನ್ನುಂಟು ಮಾಡಬಹುದು.

ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ನೀವು ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸಿದಲ್ಲಿ ಆ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ನೀಗಿಸಿಕೊಳ್ಳಬಹುದು. ಕೆಲವೊಂದು ಜವಬ್ದಾರಿಗಳನ್ನು ನಿಮ್ಮಷ್ಟಕ್ಕೆ ನೀವು ತೆಗೆದುಕೊಂಡು ನಿಮ್ಮನ್ನು ನೀವು ಶಸ್ತ್ರಚಿಕಿತ್ಸೆಗೆ ಒಳಪಡಿಸಿಕೊಳ್ಳಲು ಸಿದ್ಧರಾಗಿರಬೇಕು. ಸಿದ್ಧರಾಗುವುದು ಎಂದರೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸುವುದಾಗಿದೆ. ಅನಾರೋಗ್ಯಕರ ಆಹಾರ ಪದ್ಧತಿಯನ್ನು ಹಿಂಬಾಲಿಸದೇ ಆದಷ್ಟು ಆಸ್ಪತ್ರೆಯಲ್ಲಿ ಕಡಿಮೆ ನಿಂತು ಬೇಗನೇ ಗುಣಮುಖರಾಗುವಂತೆ ನೋಡಿಕೊಳ್ಳಬೇಕು. ಇಂದಿನ ಲೇಖನದಲ್ಲಿ ನಾವು ನೀಡುವಂತಹ ಕೆಲವೊಂದು ಅಂಶಗಳು ನಿಮ್ಮನ್ನು ನಿಮ್ಮ ಹಿಂದಿನ

ಆರೋಗ್ಯಕರ ಜೀವನ ಪದ್ಧತಿಗೆ ಮರಳಿ ತರುತ್ತವೆ ಮತ್ತು ಇನ್ನಷ್ಟು ಆರೋಗ್ಯವಂತರಾಗಿ ನೀವಿರಬಹುದಾಗಿದೆ. ಹಾಗಿದ್ದರೆ ಶಸ್ತ್ರಚಿಕಿತ್ಸೆಗೆ ಮುನ್ನ ನೀವು ಹೇಗಿರಬೇಕು, ನಿಮ್ಮ ಆಹಾರ ಪದ್ಧತಿ ಹೇಗಿರಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಅವುಗಳನ್ನು ಅನುಸರಿಸಿ ಆದಷ್ಟು ಬೇಗನೇ ಗುಣಮುಖರಾಗಲು ನೋಡಿ....

ನಿಮ್ಮದೇ ಸ್ವಂತ ಸಂಶೋಧನೆ

ನಿಮ್ಮದೇ ಸ್ವಂತ ಸಂಶೋಧನೆ

ನಿಮ್ಮ ವೈದ್ಯರೊಂದಿಗೆ ನೀವು ಸುದೀರ್ಘ ಸಮಾಲೋಚನೆಯನ್ನು ನಡೆಸಬೇಕು. ನಿಮ್ಮ ಹಿಂದಿನ ಕೇಸ್, ನಿಮಗೆ ಒದಗಿಸಿರುವ ಸೌಲಭ್ಯಗಳು ಹೀಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಬೇಕು. ಅಂತೆಯೇ ನಿಮ್ಮ ವೈದ್ಯರು ಮತ್ತು ಆಸ್ಪತ್ರೆಯ ಬಗ್ಗೆ ಮಾಹಿತಿ ಕಲೆಹಾಕಿ.

ಸುಲಭ ಆಯ್ಕೆಗಳತ್ತ ಚರ್ಚಿಸಿ

ಸುಲಭ ಆಯ್ಕೆಗಳತ್ತ ಚರ್ಚಿಸಿ

ಕಡಿಮೆ ಅಪಾಯಗಳನ್ನು ಹೊಂದಿರುವ ಸುಲಭ ಆಯ್ಕೆಗಳಿವೆಯೇ ಎಂಬುದನ್ನು ನಿಮ್ಮ ವೈದ್ಯರೊಂದಿಗೆ ಕೇಳಿ ತಿಳಿದುಕೊಳ್ಳಿ. ಹಾಗಿದ್ದರೆ ಈ ಆಯ್ಕೆಯನ್ನೇ ನಿಮ್ಮದಾಗಿಸಿ. ಇದರಿಂದ ಆದಷ್ಟು ಕಡಿಮೆ ಸಮಯ ನಿಮಗೆ ಆಸ್ಪತ್ರೆಯಲ್ಲಿ ನಿಲ್ಲಬಹುದಾಗಿದೆ.

ಶಸ್ತ್ರಚಿಕಿತ್ಸೆ ವಿಧಾನಗಳನ್ನು ಅರಿತುಕೊಳ್ಳಿ

ಶಸ್ತ್ರಚಿಕಿತ್ಸೆ ವಿಧಾನಗಳನ್ನು ಅರಿತುಕೊಳ್ಳಿ

ಶಸ್ತ್ರಚಿಕಿತ್ಸೆಯ ವಿಧಾನಗಳತ್ತ ಸಂಪೂರ್ಣವಾಗಿ ನೀವು ಅರಿತುಕೊಂಡಿರುವುದರಿಂದ ಸ್ಥಿತಿಯ ಬಗ್ಗೆ ನೀವು ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.

ಉತ್ತಮ ಆಕಾರ

ಉತ್ತಮ ಆಕಾರ

ನಿಮ್ಮ ಶ್ವಾಸಕೋಶವನ್ನು ಅಭಿವೃದ್ಧಿಪಡಿಸಲು ವರ್ಕ್ ಔಟ್ ಕ್ರಿಯೆಯನ್ನು ಆರಂಭಿಸಿಕೊಳ್ಳಿ. ಇದರಿಂದ ಅನಾಸ್ತೇಶಿಯಾ ಸಮಯದಲ್ಲಿ ಅಲ್ವೊಲಿ ಕುಸಿಯುವುದಿಲ್ಲ.

ಸುಲಭ ಆಯ್ಕೆಗಳತ್ತ ಚರ್ಚಿಸಿ

ಸುಲಭ ಆಯ್ಕೆಗಳತ್ತ ಚರ್ಚಿಸಿ

ಕಡಿಮೆ ಅಪಾಯಗಳನ್ನು ಹೊಂದಿರುವ ಸುಲಭ ಆಯ್ಕೆಗಳಿವೆಯೇ ಎಂಬುದನ್ನು ನಿಮ್ಮ ವೈದ್ಯರೊಂದಿಗೆ ಕೇಳಿ ತಿಳಿದುಕೊಳ್ಳಿ. ಹಾಗಿದ್ದರೆ ಈ ಆಯ್ಕೆಯನ್ನೇ ನಿಮ್ಮದಾಗಿಸಿ. ಇದರಿಂದ ಆದಷ್ಟು ಕಡಿಮೆ ಸಮಯ ನಿಮಗೆ ಆಸ್ಪತ್ರೆಯಲ್ಲಿ ನಿಲ್ಲಬಹುದಾಗಿದೆ.

ಧೂಮಪಾನ ಬೇಡ

ಧೂಮಪಾನ ಬೇಡ

ಸಿಗರೇಟ್‎ನಲ್ಲಿರುವ ನಿಕೋಟಿನ್ ರಕ್ತನಾಳಗಳ ಸಂಕೋಚನಕ್ಕೆ ಕಾರಣವಾಗುತ್ತದೆ. ಇದರಿಂದ ಗಾಯ ಗುಣವಾಗಲು ಬೇಕಾಗುವ ಆಮ್ಲಜನಕ ಪ್ರಮಾಣ ಶೂನ್ಯವಾಗುತ್ತದೆ.

ವಾರಾಂತ್ಯದಲ್ಲಿ ಶಸ್ತ್ರಚಿಕಿತ್ಸೆ ಅಷ್ಟೊಂದು ಉತ್ತಮ ಉಪಾಯವಲ್ಲ

ವಾರಾಂತ್ಯದಲ್ಲಿ ಶಸ್ತ್ರಚಿಕಿತ್ಸೆ ಅಷ್ಟೊಂದು ಉತ್ತಮ ಉಪಾಯವಲ್ಲ

ವಾರಾಂತ್ಯದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಅಷ್ಟೊಂದು ಕಿರಿಕಿರಿಯನ್ನುಂಟು ಮಾಡುವುದಿಲ್ಲ ಎಂದೇ ಹೆಚ್ಚಿನವರು ಭಾವಿಸುತ್ತಾರೆ. ಆದರೆ ಈ ಸಮಯದಲ್ಲಿ ನುರಿತ ವೈದ್ಯರು ಮತ್ತು ದಾದಿಯರು ರಜೆಯಲ್ಲಿರುತ್ತಾರೆ.

 ಮೇಕಪ್ ಬೇಡ

ಮೇಕಪ್ ಬೇಡ

ಬ್ಯಾಕ್ಟೀರಿಯಾ ವಿರೋಧಿ ಸೋಪು ಬಳಸಿ ಸ್ನಾನ ಮಾಡಿದರೆ ಸಾಕು ಮೇಕಪ್ ಅವಶ್ಯಕತೆ ಇರುವುದಿಲ್ಲ. ಅಂತೆಯೇ ಉಗುರು ಬಣ್ಣಗಳನ್ನು ಹಚ್ಚಿಕೊಳ್ಳಬೇಡಿ ನಿಮ್ಮ ಶಸ್ತ್ರಚಿಕಿತ್ಸೆಯ ದಿನ ಉಗುರುಬಣ್ಣಗಳನ್ನು ಅಳಿಸಿಕೊಳ್ಳಿ.

ನಿಮ್ಮೊಂದಿಗೆ ಜೊತೆಗಾರರು ಇರಲಿ

ನಿಮ್ಮೊಂದಿಗೆ ಜೊತೆಗಾರರು ಇರಲಿ

ಶಸ್ತ್ರಚಿಕಿತ್ಸೆಯ ನಂತರ ಮತ್ತು ಮೊದಲು ನಿಮ್ಮೊಂದಿಗೆ ನಿಮ್ಮ ಆಪ್ತರು ಇರಲಿ. ನಿಮ್ಮೊಂದಿಗೆ ಹೆಚ್ಚಿನ ಜನರನ್ನು ಕರೆದುಕೊಂಡು ಹೋಗಬೇಡಿ. ಒಬ್ಬರು ನಿಮ್ಮ ಸಹಾಯಕ್ಕೆ ಸಾಕು.

ಧನಾತ್ಮಕವಾಗಿರಿ

ಧನಾತ್ಮಕವಾಗಿರಿ

ಆದಷ್ಟು ಶಾಂತರಾಗಿ ಧನಾತ್ಮಕವಾಗಿರಿ. ನಿಮ್ಮಲ್ಲಿರುವ ಆತ್ಮಸ್ಥೈರ್ಯವನ್ನು ನೀವೇ ದೃಢಪಡಿಸಿಕೊಳ್ಳಬೇಕಾಗಿರುವುದರಿಂದ ಕುಗ್ಗದಿರಿ. ದಿನವಿಡೀ ಶಾಂತಚಿತ್ತರಾಗಿರಿ.

 
For Quick Alerts
ALLOW NOTIFICATIONS
For Daily Alerts

    English summary

    Things To Remember Before Going For A Surgery

    If you’re having a surgery, there can be a number of things to consider before surgery, so as to make the entire procedure not so tough on you. You need to toughen up physically as well as mentally to reduce the amount of complications that might occur during the operative process. A number of questions must be popping up in your head, which definitely need an instant clarification.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more