For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ನೋವು ನಿವಾರಕ ಪವರ್ ಫುಲ್ 'ಆಹಾರ ಪಥ್ಯ'

By Manu
|

ದೇಹವನ್ನು ಭಾದಿಸುವ ಪ್ರತಿಯೊಂದು ನೋವುಗಳು ನಮಗೆ ಹಲವಾರು ಸಮಸ್ಯೆಯನ್ನು ಉಂಟುಮಾಡಬಹುದು. ಅದರಲ್ಲೂ ಕೆಲವು ನೋವುಗಳು ನಮ್ಮ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ನೋವುಗಳಲ್ಲಿ ಬೆನ್ನು ನೋವು ಇನ್ನಿಲ್ಲದಂತೆ ಕಾಡುತ್ತದೆ. ಕೆಲವೊಮ್ಮೆ ನೋವು ನಿವಾರಕ ಔಷಧಿ ತೆಗೆದುಕೊಂಡು ಬೆನ್ನು ನೋವು ಅಥವಾ ದೇಹದ ಇನ್ನಿತರ ನೋವುಗಳನ್ನು ನಿವಾರಿಸುತ್ತೇವೆ. ಎಡೆಬಿಡದೆ ಕಾಡುವ ಇಂತಹ ನೋವನ್ನು ಮಾತ್ರ ನಿರ್ಲಕ್ಷಿಸಬೇಡಿ!

ನೋವು ನಿವಾರಕ ತೆಗೆದುಕೊಂಡರೆ ನಮಗೆ ಆರಾಮವೆನಿಸುತ್ತದೆ. ಆದರೆ ಇದರಿಂದ ಆಗುವಂತಹ ಅಡ್ಡಪರಿಣಾಮಗಳು ಹಲವಾರು ಇದೆ. ದೇಹದ ಯಾವುದೇ ನೋವನ್ನಾದರೂ ಕಡೆಗಣಿಸಲೇ ಬಾರದು. ಯಾಕೆಂದರೆ ಕೈಮೀರಿ ಹೋದರೆ ಇದು ಚಿಕಿತ್ಸೆಗೆ ಬಗ್ಗದು. ದೇಹದ ನೋವುಗಳು ಗಾಯ, ಸೋಂಕು, ಬೊಜ್ಜು, ಶಸ್ತ್ರಚಿಕಿತ್ಸೆ ಬಳಿಕದ ಪರಿಣಾಮ, ಕೆಲವೊಂದು ಅನಾರೋಗ್ಯ ಇತ್ಯಾದಿ. ಆರೋಗ್ಯಕಾರಿ ಟಿಪ್ಸ್: ಕಾಡುವ ಮೈ ಕೈ ನೋವಿಗೆ ಅಕ್ಕಿ ರೆಸಿಪಿ!
ಆದರೆ ಪ್ರತೀ ಸಲ ನೀವು ನೋವು ನಿವಾರಕ ಔಷಧಿಯನ್ನು ತೆಗೆದುಕೊಳ್ಳುತ್ತಾ ಹೋದರೆ ಅದರಿಂದ ಬೇರೆ ಸಮಸ್ಯೆ ಕಾಣಿಸಿಕೊಳ್ಳಬಹುದು. ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಸುಲಭವಾಗಿ ದೇಹದ ನೋವನ್ನು ನಿವಾರಿಸುವಂತಹ ಕೆಲವೊಂದು ಆಹಾರಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಬೆನ್ನು ನೋವನ್ನು ಶಮನಗೊಳಿಸಲು ಸೂಕ್ತ ಸಲಹೆಗಳು

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ ಮತ್ತು ಇದರಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ. ಇದು ಮಾಂಸಖಂಡಗಳಲ್ಲಿ ಇರುವ ಉರಿಯೂತವನ್ನು ಕಡಿಮೆ ಮಾಡಿ ದೇಹದ ನೋವನ್ನು ನಿವಾರಿಸುವುದು. ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಗೆಣಸು

ಗೆಣಸು

ಗೆಣಸಿನಲ್ಲಿ ಬೆಟಾಕ್ಯಾರೊಟಿನ್ ಮತ್ತು ವಿಟಮಿನ್ ಎ ಇದ್ದು, ಇದು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ ಮತ್ತು ದೇಹದ ನೋವನ್ನು ನಿವಾರಿಸುವಲ್ಲಿ ಸಹಕಾರಿ.ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ

ಲಿಂಬೆ ಹಣ್ಣು

ಲಿಂಬೆ ಹಣ್ಣು

ಲಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರಿಂದ ಒಂದು ಲೋಟ ನಿಂಬೆಹಣ್ಣಿನ ಜ್ಯೂಸ್ ನ್ನು ಕುಡಿದರೆ ದೇಹದಲ್ಲಿನ ಉರಿಯೂತವು ಕಡಿಮೆಯಾಗಿ ನಿಮಗೆ ಆರಾಮ ಸಿಗುವುದು.

ಬಸಳೆ ಹಾಗೂ ಪಾಲಕ್ ಸೊಪ್ಪು

ಬಸಳೆ ಹಾಗೂ ಪಾಲಕ್ ಸೊಪ್ಪು

ಬಸಳೆ ಹಾಗೂ ಪಾಲಕ್ ಸೊಪ್ಪು ದೇಹದಲ್ಲಿನ ರಕ್ತದ ಆಮ್ಲಜನಕವನ್ನು ಹೆಚ್ಚಿಸುತ್ತದೆ. ಇದರಿಂದ ನೈಸರ್ಗಿಕವಾಗಿ ದೇಹದ ನೋವು ನಿವಾರಣೆಯಾಗುವುದು.

ಈರುಳ್ಳಿ

ಈರುಳ್ಳಿ

ಹಸಿ ಈರುಳ್ಳಿ ಅಥವಾ ಈರುಳ್ಳಿ ಜ್ಯೂಸ್ ನ್ನು ಕುಡಿದರೆ ದೇಹದ ನೋವನ್ನು ಕಡಿಮೆ ಮಾಡಬಹುದು. ಈರುಳ್ಳಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಸಮೃದ್ಧವಾಗಿದೆ.ಈರುಳ್ಳಿ ಹಾಕಿದ ಸಾಕ್ಸ್‌ ಧರಿಸಿ-ವ್ಯತ್ಯಾಸ ನೀವೇ ನೋಡಿ!

ನೇರಳೆ ಹಣ್ಣು

ನೇರಳೆ ಹಣ್ಣು

ಹಲವಾರು ಮಂದಿ ಅಥ್ಲೆಟಿಕ್ ಗಳು ನೇರಳೆ ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರಂತೆ. ಇದರಲ್ಲಿರುವ ಉರಿಯೂತ ಶಮನಕಾರಿ ಗುಣಗಳು ದೇಹದಲ್ಲಿನ ನೋವನ್ನು ನಿವಾರಿಸುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಈರುಳ್ಳಿಯಂತೆಯೇ ಬೆಳ್ಳುಳ್ಳಿ ಕೂಡ ದೇಹದಲ್ಲಿನ ನೋವನ್ನು ನೈಸರ್ಗಿಕ ವಿಧಾನದಿಂದ ನಿವಾರಿಸುವುದು. ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಬೆಳ್ಳುಳ್ಳಿ ದೇಹದ ನೋವಿಗೆ ಕಾರಣವಾಗುವ ಸೋಂಕನ್ನು ನಿವಾರಣೆ ಮಾಡುತ್ತದೆ. ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!

English summary

Natural Ingredients to treat body pain

Relying upon painkillers every time you experience pain in one or more parts of your body can prove to be a bad idea, as excess use of painkillers can only harm your system. So, here is a list of natural ingredients that can be added to your diet, as they are more effective in treating body pain, have a look!
X
Desktop Bottom Promotion