Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಇದು ಭ್ರಮೆಯಲ್ಲವೋ ಅಣ್ಣ ನೋವಿನ ನಂಟು!
ಚಳಿಗಾಲ-ಮಳೆಗಾಲ ಬಂತೆಂದರೆ, ನೋವಿನಿಂದ ನರಳುವ ಮಂದಿ ಧೃತಿಗೆಡುತ್ತಾರೆ. ಗಂಟು ನೋವು, ಉಬ್ಬಸ, ಫ್ರೋಝನ್ ಶೋಲ್ಡರ್, ಜತೆಗೆ, ಆಘಾತದಿಂದ ಉಂಟಾದ ಹಳೆಯ ನೋವುಗಳೆಲ್ಲ ಈ ಕಾಲದಲ್ಲಿ ಜಿಗಿದೇಳುತ್ತವೆ. ವ್ಯಕ್ತಿಯನ್ನು ಹೈರಾಣಮಾಡುವ ತೀವ್ರತೆರನಾದ ನೋವುಗಳು ಋತುಮಾನದಲ್ಲಿ ಉಂಟಾಗುವ ವಾಯುಭಾರ ಒತ್ತಡದಿಂದಾಗಿ ಹೆಚ್ಚುತ್ತದೆ.

ಇದು ವೈದ್ಯಕೀಯ ಪರೀಕ್ಷೆಗಳ ಕೈಗೆ ಸಿಗದೇ ಹೋಗಲೂ ಬಹುದು .ಹಾಗೆಂದ ಮಾತ್ರಕ್ಕೆ ಇದು ಕೇವಲ ಭಾಂತಿಯಾಗಿರದೆ,ನೋವಿನ ಅಸ್ತಿತ್ವವು ವ್ಯಕ್ತಿಯನ್ನು 24/7 ಬೆಂಬಿಡದೆ ಕಾಡುವುದು.
ನೋವು ನಮ್ಮೆಲ್ಲರ ಜೀವನದಲ್ಲಿ ಹಾಸು ಹೊಕ್ಕು, ಒಂದಿಲ್ಲೊಂದು ರೀತಿಯಲ್ಲಿ ಇದು ತನ್ನ ಸ್ಥಾನ ಗಿಟ್ಟಿಸಿಕೊಂಡಿದೆ. ಹಾಗೆಂದ ಮಾತ್ರಕ್ಕೆನೋವಿಗೆ ಶರಣಾಗಿ, ದೀರ್ಘ ಕಾಲ ವಿರಮಿಸುವಂತಿಲ್ಲ; ಅದು ನೋವಿಗೆ ಉಪಶಮನವೂ ಅಲ್ಲ. ಆರೋಗ್ಯ ಟಿಪ್ಸ್: ನೋವು ನಿವಾರಕ ಪವರ್ ಫುಲ್ 'ಆಹಾರ ಪಥ್ಯ'
ಉದಾಹರಣೆಗೆ, ಬೆನ್ನು ನೋವೆಂದು ಹೆಚ್ಚು ಕಾಲ ಮಲಗಿದರೆ, ಅದರಿಂದ ನೋವು ಹೆಚ್ಚುವುದೇ ವಿನಃ ಕುಗ್ಗದು. ಗುಣಾತ್ಮಕ ಚಿಂತನೆ ನೋವನ್ನು ಓಡಿಸುವ ಮೊದಲ ಹೆಜ್ಜೆ.. ಅನಂತರ ಎದ್ದು ಚಟುವಟಿಕೆಯಿಂದ ಇದ್ದರೆ ನೋವು ಕಡಿಮೆ ಆಗುವುದು. ಆರೋಗ್ಯಕಾರಿ ಟಿಪ್ಸ್: ಕಾಡುವ ಮೈ ಕೈ ನೋವಿಗೆ ಅಕ್ಕಿ ರೆಸಿಪಿ!
ಯಾವುದೇ ತೆರನಾದ ನೋವು ಅಸಡ್ಡೆಗೆ ಅರ್ಹವಲ್ಲ. ಹಾಗೆಂದ ಮಾತ್ರಕ್ಕೆ ನೋವು ನಿವಾರಕ ಗುಳಿಗೆಗಳು ಇದಕ್ಕೆ ಶಾಶ್ವತ ಪರಿಹಾರವೂ ಅಲ್ಲ. ಕುಟುಂಬದ ವೈದ್ಯರ ಸಲಹೆ ಅತ್ಯಗತ್ಯ. ದೈನಂದಿನ ಜೀವನದಲ್ಲಿ ವ್ಯಾಯಾಮದಿಂದ ಕೂಡಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಮತ್ತು ಸಮತೋಲಿತ ಆಹಾರ ಸೇವನೆ - ಇವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದಾಗಲೇ ನೋವು ನಮ್ಮ ಜೀವನದಿಂದ ದೂರಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


