Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕಾರ್ಪಲ್ ಟನಲ್ ಸಿಂಡ್ರೋಮ್‌ನ ರೋಗ ಲಕ್ಷಣಗಳು
ಈಗಿನ ಆಧುನಿಕ ಜಗತ್ತಿನಲ್ಲಿ ಯಾವುದೇ ಉದ್ಯಮವಿರಲಿ ಅಲ್ಲಿ ಕಂಪ್ಯೂಟರ್ ಬಳಕೆ ಇದ್ದೇ ಇರುತ್ತದೆ. ಕಂಪ್ಯೂಟರ್ ಅಥವಾ ಟೈಪ್ ರೈಟರ್‌ನಲ್ಲಿ ಕಾರ್ಯನಿರ್ವಹಿಸುವ ಹೆಚ್ಚಿನ ವೃತ್ತಿಪರರರು ತಮ್ಮ ಬೆರಳು ಮತ್ತು ಕೈಗಳನ್ನು ಹೆಚ್ಚು ಉಪಯೋಗಿಸಬೇಕಾವುದು ಅನಿವಾರ್ಯವೇ ಸರಿ. ಈ ಬಿಡುವಿಲ್ಲದೇ ಬೆರಳುಗಳನ್ನು ಕೀ ಬೋರ್ಡ್‌ನ ಮೇಲೆ ಒತ್ತಿಕೊಂಡು ಗಂಟೆಗಟ್ಟಲೆ ಕೆಲಸ ಮಾಡಿದರೆ ಕೆಲವರಲ್ಲಿ ಕೈನೋವು ಮತ್ತು ಬೆರಳು ನೋವು ಉಂಟಾಗುತ್ತದೆ.
ಅಲ್ಲದೆ ಕೈಗಳ ಮೇಲೆ ಒತ್ತಡವು ಹೆಚ್ಚಾಗಿ ಕಾರ್ಪಲ್ ಟನಲ್ ಸಿಂಡ್ರೋಮ್ ಸಮಸ್ಯೆಗೆ ಎಡೆಮಾಡಿಕೊಡುತ್ತದೆ. ತಜ್ಞರ ಪ್ರಕಾರ ಕಾರ್ಪನ್ ಟನಲ್ ಸಿಂಡ್ರೋಮ್ ಎಂಬ ಸಮಸ್ಯೆಯು ಕೈಗಳಿಗೆ ಮತ್ತು ಬೆರಳುಗಳಿಗೆ ಹೆಚ್ಚಿನ ನೋವುಂಟು ಮಾಡುವುದರ ಜೊತೆಗೆ, ನೀವು ಬೆರಳುಗಳಿಗೆ ಹೆಚ್ಚು ಹೊತ್ತು ಶ್ರಮ ನೀಡಿದಾಗ ನರದ ಮೇಲೆ ಹೆಚ್ಚು ಒತ್ತಡವುಂಟಾಗಿ ಈ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ.
ಆದ್ದರಿಂದ ದೀರ್ಘಕಾಲದಲ್ಲಿ ಕಂಪ್ಯೂಟರ್ನಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ನಿಮಗಿದ್ದಲ್ಲಿ, ನಾವು ನೀಡಿರುವ ಕೆಲವು ವಿಧಾನಗಳನ್ನು ಅನುಸರಿಸಬಹುದಾಗಿದೆ. ಇದರಿಂದ ನಿಮ್ಮ ಬೆರಳುಗಳಿಗೆ ಮತ್ತು ಕೈಗಳಿಗೆ ದೀರ್ಘಾವಧಿಯಲ್ಲಿ ಹೆಚ್ಚು ಶ್ರಮ ಉಂಟಾಗದಂತೆ ತಡೆದು ಮೇಲಿನ ಸಮಸ್ಯೆಯಿಂದ ಪಾರಾಗಬಹುದು. ವಿವರಗಳಿಗೆ ಮುಂದೆ ಓದಿ...

ಬೆರಳುಗಳ ನೋವು
ನೀವು ಟೈಪ್ ಮಾಡುವಾಗ ನಿಮ್ಮ ಹಸ್ತದ ತುದಿ ಮತ್ತು ಬೆರಳ ತುದಿಯಲ್ಲಿ ಕಂಡುಬರುವ ಟೆಂಡೋನೈಟಿಸ್ ಗೆ ಹೆಚ್ಚು ಒತ್ತಡ ಉಂಟಾಗಿ ಅದು ಬೆರಳುಗಳ ನೋವಿಗೆ ಕಾರಣವಾಗುತ್ತದೆ. ನಂತರ ಸಹಜವಾಗಿ ಅದು ನಿಮ್ಮ ಕೈಗಳು ಮತ್ತು ತೋಳಿನ ಭಾಗಕ್ಕೆ ಹರಡುತ್ತದೆ.
ನೋವುಳ್ಳ ತೋಳಿನ ಚಲನೆ
ವಿರಾಮವಿಲ್ಲದೇ ಸುದೀರ್ಘವಾಗಿ ಕೀಗಳನ್ನು ಟೈಪ್ ಮಾಡುವಾಗ ನಿಮ್ಮ ಹಸ್ತದಲ್ಲಿನ ನರಗಳಿಗೆ ಚಿವುಟಿದಂತಾಗಿ ನೋವುಂಟಾಗುತ್ತದೆ. ಇದು ನಂತರ ನಿಮ್ಮ ತೋಳಿಗೆ ಹರಡಿ, ನಿಮ್ಮ ತೋಳನ್ನು ಚಾಚಲು ಅಡ್ಡಿಪಡಿಸಿ ಹೆಚ್ಚು ನೋವುಂಟು ಮಾಡುತ್ತದೆ. ನೀವು ಸಹಜ ಸ್ಥಿತಿಗೆ ಮರಳಲು ವಿಶ್ರಾಂತಿ ಅತ್ಯಗತ್ಯ.
ಬೆರಳುಗಳ ಮರಗಟ್ಟುವಿಕೆ
ದೀರ್ಘವಾಗಿ ಟೈಪ್ ಮಾಡುವುದರಿಂದ ಹಸ್ತದಲ್ಲಿನ ಮತ್ತು ಬೆರಳುಗಳಲ್ಲಿನ ನರಗಳಿಗೆ ಒತ್ತಡ ಹೆಚ್ಚಾಗಿ ಒಂದು ಹಂತದಲ್ಲಿ ನಿಮ್ಮ ಬೆರಳುಗಳು ಮರಗಟ್ಟುವಂತೆ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಬೆಳಗ್ಗೆ ನಿದ್ರೆಯಿಂದ ಎಚ್ಚರಗೊಂಡಾಗ ನಿಮ್ಮ ಬೆರಳುಗಳು ಮರಗಟ್ಟಿರುವುದನ್ನು ನೀವು ಗಮಹಿಸಬಹುದು. ಕೂಡಲೇ ನಿಮ್ಮ ತೋಳುಗಳನ್ನು ಚಾಚಿ ಕೈಗಳನ್ನು ಚಲನವಲನ ಮಾಡಿಕೊಳ್ಳಿ.
ವಸ್ತುಗಳನ್ನು ಹಿಡಿದುಕೊಳ್ಳಲು ತೊಂದರೆ
ಹಸ್ತದಲ್ಲಿನ ನರಗಳಿಗೆ ಒತ್ತಡ ಹೆಚ್ಚಾಗಿ ನಿಮ್ಮ ಕೈಗಳ ಸಾಮರ್ಥ್ಯವು ದುರ್ಬಲಗೊಂಡು ಸ್ಪರ್ಶದ ಅನುಭವದ ಕೊರತೆಯಿಂದ ನೀವು ಕೈಗಳಲ್ಲಿ ಹಿಡಿದುಕೊಳ್ಳುವ ವಸ್ತುಗಳು ನಿಮಗೆ ಅರಿವಿಲ್ಲದಂತೆ ಕೆಳಗೆ ಬೀಳುವ ಅಪಾಯವಿರುತ್ತದೆ. ಇದೊಂದು ಸಾಮಾನ್ಯ ಸಂಗತಿಯಾಗಿದ್ದು, ಇದಕ್ಕೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
