ಚಳಿಗಾಲದಲ್ಲಿ ಅನಾನಸ್ ಹಣ್ಣಿನ ಸಹವಾಸವೇ ಬಿಟ್ಟುಬಿಡಿ

By Arshad

ಚಳಿಗಾಲದಲ್ಲಿ ಸಾಮಾನ್ಯವಾಗಿ ಹಣ್ಣು ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಏಕೆಂದರೆ ಚಳಿಯನ್ನು ಓಡಿಸಲು ಬಿಸಿಪೇಯವನ್ನೇ ಹೆಚ್ಚಿನವರು ಇಷ್ಟಪಡುತ್ತಾರೆ. ಆದರೆ ಆರೋಗ್ಯದ ರಕ್ಷಣೆಗೆ ಇತರ ಕಾಲದಂತೆಯೇ ಚಳಿಗಾಲದಲ್ಲಿಯೂ ವಿವಿಧ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಅಗತ್ಯ. ಹಣ್ಣುಗಳಲ್ಲಿರುವ ಕರಗುವ ಮತ್ತು ಕರಗದ ನಾರು ಜೀರ್ಣಕ್ರಿಯೆ ಸುಲಭವಾಗಿಸುವ ಜೊತೆಗೇ ತೂಕವನ್ನು ಇಳಿಸಲೂ ನೆರವಾಗುತ್ತವೆ. ಇದರಲ್ಲಿರುವ ವಿವಿಧ ವಿಟಮಿನ್‌ಗಳು ನಿತ್ಯದ ವಿವಿಧ ಚಟುವಟಿಕೆಗಳನ್ನು ಸುಲಭಸಾಧ್ಯವಾಗಿಸುತ್ತದೆ.

ಈ ನಿಟ್ಟಿನಲ್ಲಿ ಅನಾನಸ್ ಒಂದು ಉತ್ತಮ ಆಯ್ಕೆಯಾಗಿದೆ, ಆದರೆ ಚಳಿಗಾಲದಲ್ಲಿ ಸೇವಿಸಲು ತಕ್ಕುದಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ಏಕೆಂದರೆ ಇದರ ಕೆಲವು ಅಡ್ಡಪರಿಣಾಮಗಳು ಚಳಿಗಾಲದಲ್ಲಿ ಆರೋಗ್ಯ ಕೆಡಿಸಬಹುದು. ಇದನ್ನು ಚರ್ಚಿಸುವ ಮುನ್ನ ಅನಾನಸ್ ತಿನ್ನುವುದರಿಂದ ಯಾವ ರೀತಿಯ ಲಾಭಗಳಿವೆ ಎಂದು ಮೊದಲು ತಿಳಿದುಕೊಳ್ಳುವುದು ಅಗತ್ಯ. ಅನಾನಸ್ ಹಣ್ಣಿನಲ್ಲಿ ವಿಶೇಷವಾಗಿರುವ ಬ್ರೋಮಿಲೈನ್ (bromelain) ಎಂಬ ಕಿಣ್ವ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ಅಲ್ಲದೇ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ ಮತ್ತು ರಕ್ತದ ಶುದ್ಧೀಕರಣ, ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸಲು, ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೇ ಚರ್ಮದ ತೊಂದರೆಗಳನ್ನೂ ನಿವಾರಿಸುತ್ತದೆ. ಅಲ್ಲದೇ ನಿತ್ಯ ಕೆಲವು ತುಂಡುಗಳನ್ನು ಸೇವಿಸುತ್ತಾ ಬಂದವರಲ್ಲಿ ತೂಕ ಸಹಾ ಕಡಿಮೆಯಾಗಿರುವುದು ಕಂಡುಬಂದಿದೆ. ಹುಳಿ ಮಿಶ್ರಿತ ಸಿಹಿಯಾದ ಅನಾನಸ್‌ ಜ್ಯೂಸ್‌‌ನ‌ ಮಹತ್ವ ಅರಿಯಿರಿ!

ಇಷ್ಟೆಲ್ಲ ಉಪಯೋಗಗಳಿರುವ ಅನಾನಾಸಿನಲ್ಲಿ ಅಡ್ಡಪರಿಣಾಮಗಳೂ ಇವೆಯೇ ಎಂದರೆ ಸೋಜಿಗವಾಗದಿರದು. ಚಳಿಗಾಲದಲ್ಲಿ ಅನಾನಸ್ ಹಣ್ಣು ತಿಂದರೆ ನಾವಂದುಕೊಂಡಷ್ಟು ಕೆಟ್ಟ ಪರಿಣಾಮವೇನೂ ಆಗುವುದಿಲ್ಲ, ಆದರೆ ಕಳಗಿನ ಸ್ಲೈಡ್ ಶೋ ಮೂಲಕ ನೀಡಿರುವ ತೊಂದರೆಗಳ ಕಾರಣ ಚಳಿಗಾಲದಲ್ಲಿ ಇದನ್ನು ತಿನ್ನದೇ ಇರುವುದು ಉತ್ತಮ. ವಿಶೇಷವಾಗಿ ಗರ್ಭಿಣಿಯರು, ಅದರಲ್ಲೂ ಪ್ರಥಮ ತಿಂಗಳುಗಳಲ್ಲಿರುವವರಿಗೆ ಅನಾನಸ್ ಸರ್ವಥಾ ತಕ್ಕುದಲ್ಲ. ಏಕೆಂದರೆ ಇದರಲ್ಲಿರುವ ಪೋಷಕಾಂಶಗಳು ಗರ್ಭಾಪಾತದ ಸಂಭವವನ್ನು ಅತಿಯಾಗಿ ಹೆಚ್ಚಿಸುತ್ತವೆ. ಬನ್ನಿ ಈಗ ಇದರ ಅಡ್ಡಪರಿಣಾಮಗಳತ್ತ ಗಮನ ಹರಿಸೋಣ:

ಅಲರ್ಜಿಯಿದ್ದರೆ ಹೆಚ್ಚಿಸುತ್ತದೆ

ಅಲರ್ಜಿಯಿದ್ದರೆ ಹೆಚ್ಚಿಸುತ್ತದೆ

ಸಾಮಾನ್ಯವಾಗಿ ಚಳಿಗಾಲದಲ್ಲಿ ಅಲರ್ಜಿಕಾರಕ ತೊಂದರೆಗಳು ಹೆಚ್ಚು. ಏಕೆಂದರೆ ಚಳಿಯಿಂದ ನಡುಗುವ ದೇಹವನ್ನು ಬೆಚ್ಚಗಿರಿಸಲು ದೇಹ ಹೆಚ್ಚಿನ ಶಕ್ತಿಯನ್ನು ಈ ನಿಟ್ಟಿನತ್ತ ಹರಿಸುತ್ತದೆ. ಸ್ವಾಭಾವಿಕವಾಗಿ ಕೆಲವು ಕಡೆ ಕಡಿಮೆಯಾಗುತ್ತದೆ. ಅಲ್ಲದೇ ಒಂದು ವೇಳೆ ಅಲರ್ಜಿಯಿದ್ದರೆ ಅನಾನಾಸು ಈ ಅಲರ್ಜಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಲರ್ಜಿಯಿದ್ದರೆ ಹೆಚ್ಚಿಸುತ್ತದೆ

ಅಲರ್ಜಿಯಿದ್ದರೆ ಹೆಚ್ಚಿಸುತ್ತದೆ

ವಿಶೇಷವಾಗಿ ಇದರಲ್ಲಿರುವ ಕಿಣ್ವಗಳು ತುಟಿಗಳನ್ನು ದಪ್ಪಗಾಗಿಸುವುದು ಮತ್ತು ಗಂಟಲಿನಲ್ಲಿ ಕೆರೆತ ಮೊದಲಾದ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಒಂದು ವೇಳೆ ಅನಾನಾಸನ್ನು ತಿನ್ನದಿರಲು ಸಾಧ್ಯವೇ ಇಲ್ಲ ಎನ್ನುವಷ್ಟು ಇದರ ಅಭಿಮಾನಿಯಾಗಿದ್ದರೆ ಉಪ್ಪುನೀರಿನಲ್ಲಿ ನೆನೆಸಿಟ್ಟ ತುಂಡುಗಳನ್ನು ತಿನ್ನಬಹುದು.

ಗರ್ಭಿಣಿಯರಿಗೆ ತಕ್ಕುದಲ್ಲ

ಗರ್ಭಿಣಿಯರಿಗೆ ತಕ್ಕುದಲ್ಲ

ಪ್ರಥಮ ಮೂರು ಹಾಗೂ ಬಳಿಕದ ಮೂರು ತಿಂಗಳುಗಳಲ್ಲಿ ಗರ್ಭಿಣಿಯರು ಅನಾನಾಸು ತಂಟೆಗೆ ಹೋಗದೇ ಇರುವುದೇ ಉತ್ತಮ. ಏಕೆಂದರೆ ಈ ಅವಧಿಯಲ್ಲಿ ತಿಂದ ಅನಾನಾಸು ಗರ್ಭಪಾತದ ಸಾಧ್ಯತೆಯನ್ನು ಅಪಾರವಾಗಿ ಹೆಚ್ಚಿಸುತ್ತದೆ. ಇದಕ್ಕೆ ಚಳಿಗಾಲ, ಬೇಸಿಗೆ ಎಂಬ ಭೇದವಿಲ್ಲ. ಆದರೆ ನಂತರದ ತಿಂಗಳಲ್ಲಿ ಸೇವಿಸಬಹುದು.

ಸಂಧಿವಾತವನ್ನು ಹೆಚ್ಚಿಸುತ್ತದೆ

ಸಂಧಿವಾತವನ್ನು ಹೆಚ್ಚಿಸುತ್ತದೆ

Arthritis ಅಥವಾ ಸಂಧಿವಾತದ ತೊಂದರೆ ಇದ್ದವರಿಗೆ ಚಳಿಗಾಲದ ಅನಾನಾಸು ಸೇವನೆ ತಕ್ಕುದಲ್ಲ. ಏಕೆಂದರೆ ಇದು ಗಂಟುಗಳ ನೋವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಚಳಿಗಾಲದಲ್ಲಿ ಅನಾನಾಸಿನ ರಸ ಅಲ್ಕೋಹಾಲ್ ಆಗಿ ಪರಿವರ್ತಿತವಾಗುತ್ತದೆ ಮತ್ತು ಜೀರ್ಣಾಂಗಗಳಿಗೆ ತಲುಪಿದ ಬಳಿಕ ಸಂದುಗಳಲ್ಲಿ ನೋವು ಹೆಚ್ಚಾಗಲು ಕಾರಣವಾಗುತ್ತದೆ.

ಕಫವನ್ನು ಹೆಚ್ಚಿಸುತ್ತದೆ

ಕಫವನ್ನು ಹೆಚ್ಚಿಸುತ್ತದೆ

ಸೈನಸ್ ತೊಂದರೆ, ಮೂಗು ಕಟ್ಟುವುದು, ಗಂಟಲಬೇನೆ, ಕಫ ಮೊದಲಾದ ತೊಂದರೆ ಇದ್ದವರು ಚಳಿಗಾಲದಲ್ಲಿ ಅನಾನಾಸನ್ನು ತಿನ್ನದೇ ಇರುವುದು ಉತ್ತಮ. ಏಕೆಂದರೆ ಇದು ಒಂದು ಉತ್ತಮ ಕಫಕಾರಕವಾಗಿದ್ದು ಈಗಾಗಲೇ ಇದ್ದ ಕಫವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಪರಿಣಾಮವಾಗಿ ಗಂಟಲಬೇನೆ ಮತ್ತು ಹೊಟ್ಟೆನೋವು ತೀವ್ರವಾಗುತ್ತದೆ.

ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ

ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ

ಅನಾನಾಸಿನಲ್ಲಿ ಉತ್ತಮ ಪ್ರಮಾಣದ ಸುಕ್ರೋಸ್ ಸಕ್ಕರೆ ಇದೆ (ಸುಮಾರು ಶೇಖಡಾ ಹತ್ತರಷ್ಟು) ಗ್ಲುಕೋಸ್ ಗಿಂತಲೂ ಸುಕ್ರೋಸ್ ಹೆಚ್ಚು ಪ್ರಭಾವಶಾಲಿಯಾದ ಸಕ್ಕರೆಯಾಗಿದ್ದು ಇದನ್ನು ಅರಗಿಸಿಕೊಳ್ಳಲು ದೇಹ ಹೆಚ್ಚು ಕಷ್ಟಪಡಬೇಕಾಗುತ್ತದೆ. ವಿಶೇಷವಾಗಿ ಮಧುಮೇಹಿಗಳಿಗೆ ಈ ಸಕ್ಕರೆಯನ್ನು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದ ಮಧುಮೇಹಿಗಳು ಚಳಿಗಾಲದಲ್ಲಿ ಅನಾನಾಸು ಸೇವಿಸಲೇಬಾರದು.

ಇತರ ಔಷಧಿಗಳ ಪರಿಣಾಮವನ್ನು ಏರುಪೇರು ಮಾಡುತ್ತದೆ

ಇತರ ಔಷಧಿಗಳ ಪರಿಣಾಮವನ್ನು ಏರುಪೇರು ಮಾಡುತ್ತದೆ

ಒಂದು ವೇಳೆ ನೀವು ಆಂಟಿ ಬಯಾಟಿಕ್ ಗಳನ್ನು ಸೇವಿಸುತ್ತಿದ್ದರೆ ಅನಾನಾಸಿನಲ್ಲಿರುವ ಬ್ರೋಮಿಲೈನ್ ಕಿಣ್ವ ಈ ಔಷಧಗಳ ಪ್ರಭಾವಗಳನ್ನು ಏರುಪೇರಾಗಿಸುತ್ತದೆ. ಇದು ಆರೋಗ್ಯವನ್ನು ಇನ್ನಷ್ಟು ಕೆಡಿಸಬಲ್ಲುದು. ಚಳಿಗಾಲದಲ್ಲಿ ಈ ತೊಂದರೆ ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಅನಾನಾಸು ತಿನ್ನುವುದನ್ನು ಬಿಟ್ಟರೇ ಉತ್ತಮ.

X
Desktop Bottom Promotion