For Quick Alerts
ALLOW NOTIFICATIONS  
For Daily Alerts

ಸೇಬು ಹಣ್ಣನ್ನು ಸಿಪ್ಪೆ ಸಹಿತ ತಿನ್ನಿ, ವೈದ್ಯರನ್ನು ದೂರವಿರಿಸಿ

By Arshad
|

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸಬಲ್ಲುದು ಎಂಬುದೊಂದು ಆಂಗ್ಲ ಸುಭಾಷಿತವಾಗಿದೆ. ಆದರೆ ಈ ಸೇಬನ್ನು ಸಿಪ್ಪೆ ಸಹಿತ ತಿನ್ನಬೇಕೋ, ಸಿಪ್ಪೆ ನಿವಾರಿಸಿ ತಿನ್ನಬೇಕೋ ಎಂದು ಸ್ಪಷ್ಟವಾಗಿ ತಿಳಿಸದ ಕಾರಣ ಕೆಲವರು ಸಿಪ್ಪೆಯನ್ನು ನಿವಾರಿಸಿ ಕೇವಲ ಒಳಗಿನ ತಿರುಳನ್ನು ಮಾತ್ರ ತಿನ್ನುತ್ತಾರೆ. ಆಯುರ್ವೇದದ ಪ್ರಕಾರ ಯಾವ ಯಾವ ಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನಲು ಸಾಧ್ಯವೋ ಅವನ್ನೆಲ್ಲಾ ಸಿಪ್ಪೆ ಸಹಿತವೇ ತಿನ್ನಬೇಕು.

ಸೇಬುಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ಇ. ಮತ್ತು ಕರಗದ ನಾರು ಇದೆ. ನಿತ್ಯದ ಸೇಬು ಸೇವನೆಯಿಂದ ಹೃದಯ ತೊಂದರೆಗಳು ಕಡಿಮೆಯಾಗುವುದು, ಅತಿಸಾರ, ಮಲಬದ್ಧತೆ ನಿವಾರಣೆಯಾಗುವುದು ಮೊದಲಾದ ಪ್ರಯೋಜನಗಳಿವೆ. ಆದರೆ ಈ ಪ್ರಯೋಜನಗಳು ದಕ್ಕಬೇಕಾದರೆ ಸಿಪ್ಪೆ ಸಹಿತ ತಿನ್ನಬೇಕು. ಇಲ್ಲದಿದ್ದರೆ ಕೆಲವು ಪೋಷಕಾಂಶಗಳು ದೊರಕುವುದಿಲ್ಲ. the Journal of Agriculture and Food Chemistry ಎಂಬ ವೈದ್ಯಕೀಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಪ್ರಕಾರ ಸೇಬುಹಣ್ಣಿನ ಕ್ಯಾನ್ಸರ್ ನಿವಾರಕ ಗುಣಗಳು ಪಡೆಯಬೇಕೆಂದರೆ ಸಿಪ್ಪೆಸಹಿತ ತಿನ್ನುವುದು ಅನಿವಾರ್ಯ.

ಇನ್ನೊಂದು ವೈದ್ಯಕೀಯ ಲೇಖನದಲ್ಲಿ ಸೇಬಿನ ಸಿಪ್ಪೆಯಲ್ಲಿ ಉತ್ತಮ ಪ್ರಮಾಣದ quercetin ಮತ್ತು anthocyanins ನಂತಹ phenolics ಅಥವಾ carbolic acid ಎಂಬ ಕಣಗಳು ಕ್ಯಾನ್ಸರ್ ತಡೆಗಟ್ಟಲು ಸಮರ್ಥವಾಗಿವೆ. ಆದ್ದರಿಂದ ಸಿಪ್ಪೆ ತಿನ್ನದೇ ಇದ್ದರೆ ಸೇಬಿನ ಈ ಮಹತ್ವದ ಗುಣ ದಕ್ಕುವುದಿಲ್ಲ. ಸೇಬಿನ ಇನ್ನೂ ಹಲವು ಉತ್ತಮ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಕ್ಯಾನ್ಸರ್ ಬರುವುದರಿಂದ ಕಾಪಾಡುತ್ತದೆ

ಕ್ಯಾನ್ಸರ್ ಬರುವುದರಿಂದ ಕಾಪಾಡುತ್ತದೆ

ಸೇಬಿನ ಸಿಪ್ಪೆಯಲ್ಲಿ ಅಲ್ಪಪ್ರಮಾಣದಲ್ಲಿರುವ ಕಾರ್ಬಾಲಿಕ್ ಆಸಿಡ್ ಮತ್ತು ಉತ್ತಮ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಕಣಗಳನ್ನು ತಡೆಯುವ ಮತ್ತು ಇನ್ನಷ್ಟು ವೃದ್ಧಿಗೊಳ್ಳುವ ಸಂಭವವನ್ನು ತಪ್ಪಿಸುತ್ತವೆ. ಪರಿಣಾಮವಾಗಿ ಕಾಡಬಹುದಾಗಿದ್ದ ಕ್ಯಾನ್ಸರ್ ರೋಗದಿಂದ ಕಾಪಾಡಿದಂತಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕ್ಯಾನ್ಸರ್ ಬರುವುದರಿಂದ ಕಾಪಾಡುತ್ತದೆ

ಕ್ಯಾನ್ಸರ್ ಬರುವುದರಿಂದ ಕಾಪಾಡುತ್ತದೆ

journal Nutrition and Cancer ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಸೇಬಿನ ಈ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಣಗಳು ವೃದ್ಧಿಯಾಗುವುದನ್ನು ತಡೆಯುತ್ತದೆ ತನ್ಮೂಲಕ ಸ್ತನ, ಪ್ರಾಸ್ಟ್ರೇಟ್ ಮೊದಲಾದ ಕ್ಯಾನ್ಸರ್‌ಗಳನ್ನು ಉಲ್ಬಣಗೊಳ್ಳದಂತೆ ತಡೆಯಲು ಮತ್ತು ಮೂಲದಿಂದ ನಿವಾರಿಸಲು ನೆರವಾಗುತ್ತವೆ ಎಂದು ಪ್ರಕಟಿಸಲಾಗಿದೆ. ಸೇಬಿನ ಸಿಪ್ಪೆಯಿಂದ ಹೊರತೆಗೆಯಲಾದ ಮಾಸ್ಪಿನ್ (maspin) ಎಂಬ ಪ್ರೋಟೀನು ಕ್ಯಾನ್ಸರ್ ಹರಡುವುದರಿಂದ ಮತ್ತು ಬೆಳೆಯುವುದರಿಂದ ತಡೆಗಟ್ಟಲು ಸಮರ್ಥವಾಗಿದೆ.

ಉರಿಯೂತ ನಿವಾರಿಸುತ್ತದೆ

ಉರಿಯೂತ ನಿವಾರಿಸುತ್ತದೆ

ಸೇಬಿನ ಸಿಪ್ಪೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಫ್ಲೇವನಾಯ್ಡುಗಳು ಉರಿಯೂತ ನಿವಾರಕ ಗುಣವನ್ನು ಹೊಂದಿದ್ದು ವಿಶೇಷವಾಗಿ ಜಠರ ಮತ್ತು ಜೀರ್ಣಾಂಗಗಳಲ್ಲಿ ಉಂಟಾಗುವ ಉರಿಯೂತವನ್ನು ಶಮನಗೊಳಿಸುತ್ತವೆ.

ಜೀವಕೋಶಗಳಿಗೆ ಆಗುವ ಹಾನಿಯನ್ನು ತಪ್ಪಿಸುತ್ತದೆ

ಜೀವಕೋಶಗಳಿಗೆ ಆಗುವ ಹಾನಿಯನ್ನು ತಪ್ಪಿಸುತ್ತದೆ

ಸಿಪ್ಪೆಯಲ್ಲಿರುವ ಫ್ಲೇವನಾಯ್ಡುಗಳು ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ವಿರುದ್ದ ಹೋರಾಡಿ ಇವನ್ನು ಬೆಳೆಯುವುದರಿಂದ ತಡೆಯುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೀವಕೋಶಗಳಿಗೆ ಆಗುವ ಹಾನಿಯನ್ನು ತಪ್ಪಿಸುತ್ತದೆ

ಜೀವಕೋಶಗಳಿಗೆ ಆಗುವ ಹಾನಿಯನ್ನು ತಪ್ಪಿಸುತ್ತದೆ

ಅಲ್ಲದೆಈ ಕಣಗಳು ಜೀವಕೋಶಗಳಿಗೆ ಅತ್ಯಾವಶ್ಯವಾಗಿ ಅಗತ್ಯವಿರುವ ಆಮ್ಲಜನಕದ ಕಣಗಳನ್ನು ಕದ್ದು ಜೀವಕೋಶಗಳು ಬಳಲಿ ಸಾಯುವಂತೆ ಮಾಡುತ್ತವೆ. ಸೇಬಿನ ಸಿಪ್ಪೆ ಈ ಕಣಗಳಿಸೆ ಸರಿಯಾದ ಬುದ್ದಿ ಕಲಿಸುತ್ತದೆ.

ಹೃದಯವನ್ನೂ ರಕ್ಷಿಸುತ್ತದೆ

ಹೃದಯವನ್ನೂ ರಕ್ಷಿಸುತ್ತದೆ

ಸೇಬಿನ ಸಿಪ್ಪೆಯಲ್ಲಿರುವ quercetin ಎಂಬ ಫ್ಲೇವನಾಯ್ಡು ಉರಿಯೂತ ನಿವಾರಿಸುವ ಜೊತೆಗೇ ಆಂಟಿ ಆಕ್ಸಿಡೆಂಟುಗಳ ಗುಣವನ್ನೂ ಹೊಂದಿದೆ. ನಮ್ಮ ರಕ್ತದಲ್ಲಿ ಪ್ಲೇಟ್ಲೆಟ್ ಗಳೆಂಬ ಚಿಕ್ಕ ಕಣಗಳಿವೆ. ಒಂದು ವೇಳೆ ಗಾಯದ ಕಾರಣ ರಕ್ತ ದೇಹದಿಂದ ಹೊರಗೆ ಒಸರಿದರೆ ಗಾಳಿಗೆ ಒಡ್ಡಿದ ಈ ಕಣಗಳು ಒಂದಕ್ಕೊಂದು ಅಂಟಿಕೊಂಡು ಗೋಡೆಯಂತೆ ಅಡ್ಡನಿಂತ ಗಾಯದಿಂದ ಇನ್ನಷ್ಟು ರಕ್ತ ಹೊರಬರದಂತೆ ಮಾಡುತ್ತದೆ. ಇದನ್ನೇ ರಕ್ತ ಹೆಪ್ಪುಗಟ್ಟುವುದು ಎನ್ನುತ್ತೇವೆ. ಮುಂದಿನ ಸ್ಲೈಡ್ ಕ್ಕಿಕ್ ಮಾಡಿ

ಹೃದಯವನ್ನೂ ರಕ್ಷಿಸುತ್ತದೆ

ಹೃದಯವನ್ನೂ ರಕ್ಷಿಸುತ್ತದೆ

ಕೆಲವೊಮ್ಮೆ ಈ ಕಣಗಳು ದೇಹದೊಳಗಿನ ರಕ್ತನಾಳಗಳ ಒಳಗೇ ಹೆಪ್ಪುಗಟ್ಟಿ ಅಲ್ಲಿಂದ ರಕ್ತ ಸಂಚಾರಕ್ಕೆ ಅಡಚಣೆಯುಂಟುಮಾಡುತ್ತದೆ. ಈ ಪರಿಸ್ಥಿತಿಯಲ್ಲಿ ಸೇಬಿನ ಸಿಪ್ಪೆಯಲ್ಲಿರುವ ಪೋಷಕಾಂಶ ಈ ಹೆಪ್ಪುಗಟ್ಟಿದ್ದ ರಕ್ತವನ್ನು ಸಡಿಲಗೊಳಿಸಿ ಮುಂದುವರೆಯಲು ಅನುವು ಮಾಡಿಕೊಡುತ್ತದೆ ಹಾಗೂ ಸ್ನಾಯುಗಳ ಸೆಡೆತವನ್ನೂ ಕಡಿಮೆ ಮಾಡುತ್ತವೆ. ಪರಿಣಾಮವಾಗಿ ಈ ಮೂಲಕ ಎದುರಾಗಬಹುದಾಗಿದ್ದ ಹೃದಯದ ತೊಂದರೆಗಳಿಂದ ಕಾಪಾಡುತ್ತದೆ.

English summary

Reasons you should eat an apple with its skin

An apple a day does keep the doctor away, but do you peel the apples just because you don’t like the way the skin tastes? Apples are a rich source of vitamin C, vitamin E and fibre. They help in preventing heart diseases, treat diarrhea and constipation and more. However, if you just eat the apple core and throw away the apple skin, you are missing on most of its nutrition.
X
Desktop Bottom Promotion