Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ತೋಳಿನ ನೋವನ್ನು ಅಲಕ್ಷ್ಯ ಮಾಡಬೇಡಿ, ಜೋಕೆ!
ಈಗಿನ ಬಿಡುವಿಲ್ಲದ ಬದುಕಿನಲ್ಲಿ ದೇಹಕ್ಕೆ ಹೆಚ್ಚು ಆಯಾಸವುಂಟಾಗಿ ಕೆಲ ಅಂಗಾಂಗಗಗಳಲ್ಲಿ ನೋವುಂಟಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲವರಿಗೆ ಜಾಸ್ತಿ ಹೊತ್ತು ಒಂದೇ ಕಡೆ ನಿಂತರೂ ಸಹ ದೇಹಕ್ಕೆ ಆಯಾಸವಾಗಿ ಕೆಲ ಅಂಗಗಳು ನೋವುಂಟಾಗಿ ಬಳಲುತ್ತಿರುತ್ತಾರೆ. ಇನ್ನು ಕೆಲವರಿಗೆ ಸಹಜಕ್ಕಿಂತ ಹೆಚ್ಚು ಕೆಲಸ ನಿರ್ವಹಿಸಿದರೆ ನೋವುಂಟಾಗುತ್ತದೆ. ಇದು ಬರೀ ಒಬ್ಬರ ಮಾತಲ್ಲ ಅನೇಕರಿಗೆ ಈ ಸಮಸ್ಯೆ ಇದೆ. ಈಗಿನ ಆಧುನಿಕ ಯುಗದಲ್ಲಿ ಯಾವುದೇ ಕಚೇರಿಗಳಿರಲಿ ಅಥವಾ ಕೆಲಸಗಳಿರಲಿ ಕಂಪ್ಯೂಟರ್ ಯಂತ್ರದ ಬಳಕೆ ಸಾಮಾನ್ಯ.
ಕಂಪ್ಯೂಟರ್ ಯಂತ್ರದ ಅಧಿಕ ಬಳಕೆಯಿಂದ ಕೆಲಸವನ್ನೇನೋ ಸುಲಭವಾಗಿ ಮುಗಿಸಬಹುದು ಹಾಗೆಯೇ ದೇಹದಲ್ಲಿಯೂ ಕೂಡ ಅಧಿಕ ಆಯಾಸವಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದರೆ ಈ ಸಮಸ್ಯೆಯನ್ನು ಉದಾಸೀನ ಮಾಡಿ ತಮ್ಮ ತಮ್ಮ ಕಾರ್ಯಗಳನ್ನು ಕಂಪ್ಯೂಟರ್ ಯಂತ್ರಗಳಲ್ಲಿ ಮುಂದುವರೆಸಿಕೊಂಡು ಹೋಗುತ್ತಾರೆ. ಅದು ಹೆಚ್ಚಿನವರಿಗೆ ಅನಿವಾರ್ಯತೆಯೂ ಹೌದು. ಹೀಗಿರುವಾಗ ಕೈ ಮತ್ತು ತೋಳು ನೋವು ಬರುವುದು ಸಾಮಾನ್ಯ ಸಂಗತಿ. ತೋಳಿನ ಬೊಜ್ಜು ಕಮ್ಮಿ ಮಾಡುವ ವ್ಯಾಯಾಮಗಳು

ಹಾಗಾಗಿ, ನಿಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡಿರುವ ಕೆಲವು ಅಭ್ಯಾಸಗಳಿಂದ ನಿಮಗೆ ಆಗಾಗ ಕೈ ನೋವು ತೋಳಿನ ನೋವು ಬರುವುದು ಸಹಜ. ಆದರೆ ಈ ನೋವನ್ನು ನಿರ್ಲಕ್ಷಿಸಿದಷ್ಟು ಅಪಾಯವು ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ಪ್ರಾರಂಭದಲ್ಲೇ ಶಮನಮಾಡುವುದು ನಿಮ್ಮ ಹೊಣೆಯಾಗಿದೆ. ಇಲ್ಲದಿದ್ದರೆ ಅದರ ಪರಿಣಾಮವನ್ನು ದೀರ್ಘಾವಧಿಯಲ್ಲಿ ಎದುರಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ನಿಮ್ಮ ತೋಳಿನ ನೋವನ್ನು ನಿರ್ಲಕ್ಷಿಸದಿರಲು ಕೆಲವು ಸೂಕ್ತ ಕಾರಣಗಳನ್ನು ನಿಮಗಾಗಿ ನೀಡಲಾಗಿದೆ. ಮುಂದೆ ಓದಿ...
ಕಾರ್ಪಲ್ ಟನ್ನಲ್ ಸಿಂಡ್ರೋಮ್
ಮೊದಲೇ ಹೇಳಿದಂತೆ, ನೀವು ಕಂಪ್ಯೂಟರ್ ಯಂತ್ರದಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸಿದರೆ ಕೈಗಳ ಮತ್ತು ತೋಳುಗಳ ನೋವಿನಿಂದ ಬಳಲುವಿಕೆಯ ಅಪಾಯ ಹೆಚ್ಚಾಗುತ್ತದೆ. ಕಂಪ್ಯೂಟರ್ ಯಂತ್ರದಲ್ಲಿ ಕೀಬೋರ್ಡ್‌ಗೆ ನಿಮ್ಮ ಬೆರಳುಗಳನ್ನು ಸುದೀರ್ಘವಾಗಿ ಒತ್ತುತ್ತಿದ್ದರೆ ನಿಮ್ಮ ಹಸ್ತದಲ್ಲಿನ ನರಗಳು ಚುಚ್ಚಿದಂತಾಗಿ ಹೆಚ್ಚು ಒತ್ತಡದಿಂದಾಗಿ ಹಸ್ತ ಮತ್ತು ತೋಳುಗಳಿಗೆ ಹೆಚ್ಚಿನ ನೋವಾಗುತ್ತದೆ. ನೀವು ಟೈಪ್ ಮಾಡುವಾಗ ಅಥವಾ ಹೆಚ್ಚಿನ ಕೆಲಸದ ಒತ್ತಡದಿಂದ ಆಗಾಗ ತೋಳು ನೋವು ಬರುತ್ತಿದ್ದರೆ ಅಲಕ್ಷ್ಯ ಮಾಡದೇ ಕೂಡಲೇ ವೈದ್ಯರ ಸಲಹೆಯನ್ನು ಪಡೆಯಿರಿ. ಅವರ ಸಲಹೆಯಂತೆ ಅನುಸರಿಸಿ.
ಹೃದಯಾಘಾತ
ಹೃದಯಾಘಾತಕ್ಕೆ ಮೂಲವೇ ಎದೆ ನೋವು. ಎದೆ ನೋವಿನಿಂದಲೇ ಹೃದಯಾಘಾತದ ಚಿಹ್ನೆಗಳನ್ನು ತಕ್ಷಣಕ್ಕೆ ಗುರುತಿಸಬಹುದು. ಆದರೆ ನಿಮ್ಮ ಎಡ ಕೈಗೆ ಹೆಚ್ಚು ಕೆಲಸ ಕೊಟ್ಟಲ್ಲಿ, ಇದು ನಿಮ್ಮ ಎದೆಯ ಭಾಗಕ್ಕೆ ಪ್ರಭಾವ ಬೀರಿ, ಅದರಿಂದ ಹೃದಯಕ್ಕೆ ಪರೋಕ್ಷವಾಗಿ ಪರಿಣಾಮ ಬೀರಿ ಹೃದಯಾಘಾತದಂತಹ ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ. ನಿಮ್ಮ ತೋಳಿನಲ್ಲಿ ನೋವುಂಟಾಗಿ ಎದೆ ನೋವು ಕಾಣಿಸಿಕೊಂಡಲ್ಲಿ ಇದು ಅಪಾಯದ ಚಿಹ್ನೆಯೆಂಬುದು ಎಚ್ಚರವಿರಲಿ.
ದುರ್ಬಲ ದೇಹಸ್ಥಿತಿ
ಸುದೀರ್ಘವಾಗಿ ಕೂತಲ್ಲೇ ಕೂತು ಹೆಚ್ಚು ಹೊತ್ತು ಮೇಜಿನಲ್ಲಿ ಕೆಲಸ ನಿರ್ವಹಿಸಿದರೆ, ನೀವು ಕುಳಿತಿರುವ ದೇಹದ ಹಿಂದಿನ ಭಾಗಕ್ಕೆ ಹೆಚ್ಚು ಒತ್ತಡ ಉಂಟಾಗಿ ನೋವು ಬರಲು ಪ್ರಾರಂಭಿಸುತ್ತದೆ. ಇದು ಸಹಜವಾಗಿ ನಿಮ್ಮ ಬೆನ್ನು ಮತ್ತು ಸೊಂಟಕ್ಕೆ ಹಾನಿಯುಂಟು ಮಾಡಿ ನಿಮ್ಮ ಬೆನ್ನಿನ ಮೂಳೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿ ಬಿಡುವಿಲ್ಲದೆ ಕುಳಿತಲ್ಲೇ ಕುಳಿತು ಹೆಚ್ಚು ಹೊತ್ತು ಕೆಲಸ ನಿರ್ವಹಿಸಿದರೆ ನಿಮ್ಮ ಶಾರೀರಕ್ಕೆ ನೋವುಂಟಾಗಿ, ನರಮಂಡಲಕ್ಕೂ ಹೆಚ್ಚು ಹಾನಿಯಾಗಿ ತೋಳಿನ ನೋವು ತಾನಾಗಿಯೇ ಹೆಚ್ಚಾಗುತ್ತದೆ.
ಗಾಯ ಅಥವಾ ಕೀಲು ನೋವು
ಕೆಲವು ಪ್ರಕರಣಗಳಲ್ಲಿ, ನರಮಂಡಲಕ್ಕೆ ಮತ್ತು ಬೆನ್ನಿನ ಮೂಳೆಗೆ ಹೆಚ್ಚು ಒತ್ತಡ ಉಂಟಾಗಿ ನೋವು ಬರಲು ಕಾರಣವಾಗುತ್ತದೆ. ವ್ಯಾಯಾಮಕ್ಕೂ ಮುಂಚೆ ತಾಲೀಮು ಮಾಡದಿದ್ದಲ್ಲಿ ತೋಳಿನ ನೋವು ಬರುವುದು ಸಾಮಾನ್ಯ. ನಿಮ್ಮ ತೋಳಿನ ಕೀಲು ನೋವುಗಳೂ ಸಹ ಹೆಚ್ಚು ನೋವುಂಟಾಗಿ ತೋಳಿನ ಭಾಗಕ್ಕೆ ಸಂಕಟವಾದಂತೆ ಭಾಸವಾಗುತ್ತದೆ. ಈ ರೀತಿಯ ಅನುಭವಗಳು ನಿಮಗಾದಲ್ಲಿ ಕೂಡಲೇ ಇದಕ್ಕೆ ಸೂಕ್ತವಾದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. ಏಕೆಂದರೆ ಇದನ್ನು ಹೆಚ್ಚು ನಿರ್ಲಕ್ಷಿಸಿದಲ್ಲಿ ನಿಮಗೇ ಅಪಾಯ ಹೆಚ್ಚು. ಇದರಿಂದ ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಕೂಡಲೇ ಎಚ್ಚರವಹಿಸಿ ಈ ರೀತಿಯ ನೋವುಗಳಿಂದ ಮುಕ್ತವಾಗಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
