Latest Updates
-
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ!
ದವಡೆಗಳಲ್ಲಿ ರಕ್ತಸ್ರಾವ ಅಪ್ಪಿ ತಪ್ಪಿಯೂ ನಿರ್ಲಕ್ಷ್ಯ ಮಾಡದಿರಿ..
ನಮ್ಮ ಇಡೀ ದೇಹದ ಆರೋಗ್ಯ ಚೆನ್ನಾಗಿರಬೇಕು ಎಂದರೆ ಮೊದಲು ನಮ್ಮ ಹೊರಗಿನ ಮೈಯನ್ನು ಚೆನ್ನಾಗಿ ಇರಿಸಿಕೊಳ್ಳುವುದರ ಜೊತೆಗೆ ಬಾಯಿಯ ಆರೋಗ್ಯವನ್ನು ಸಹ ಚೆನ್ನಾಗಿ ಇರಿಸಿಕೊಳ್ಳಬೇಕೆಂದು ತಜ್ಞರು ಹೇಳುತ್ತಾರೆ. ಏಕೆಂದರೆ ನಾವು ಸೇವಿಸುವ ಆಹಾರವನ್ನು ನಾವು ಬಾಯಿಯಲ್ಲಿ ಅಗಿದು ಜಗಿದು ಸೇವಿಸುತ್ತೇವೆ. ಬಾಯಿಯ ಆರೋಗ್ಯವು ಸರಿಯಾಗಿಲ್ಲದಿದ್ದಲ್ಲಿ, ಬಾಯಿಯಲ್ಲಿರುವ ಇನ್‌ಫೆಕ್ಷನ್ ಆಹಾರ ಮತ್ತು ಜೊಲ್ಲಿನ ಮೂಲಕ ಹೊಟ್ಟೆಗೆ ಸೇರುತ್ತದೆ. ಆದರೆ ನಾವು ನಮ್ಮ ಬಾಯಿಯ ಆರೋಗ್ಯ ಚೆನ್ನಾಗಿದೆ ಬಿಡು ಎಂಬ ಉದಾಸೀನತೆಯಿಂದಲೆ ಬದುಕುತ್ತೇವೆ.
ಆದರೆ ಇದನ್ನು ನಾವು ಹಲ್ಲಿನಲ್ಲಿ ಬೆಳೆದಿರುವ ಪಾಚಿ, ಹಲ್ಲು ಹಳದಿಯಾಗುವಿಕೆ ಮತ್ತು ದವಡೆಗಳಲ್ಲಿ ರಕ್ತಸ್ರಾವವಾಗುವಿಕೆಯನ್ನು ನೋಡಿ ತಿಳಿದುಕೊಳ್ಳಬಹುದು. ಅದರಲ್ಲೂ ದವಡೆಗಳಲ್ಲಿ ರಕ್ತಸ್ರಾವವಾಗುವುದು ಬಾಯಿಯ ಆರೋಗ್ಯ ಸಮಸ್ಯೆಯ ನಿಖರ ಸೂಚನೆಯಾಗಿರುತ್ತದೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಇದು ಗಂಭೀರವಾದ ಕಾಯಿಲೆ ಅಥವಾ ಸ್ಥಿತಿಯನ್ನು ಸೂಚಿಸುತ್ತದೆ. ಬನ್ನಿ ದವಡೆಗಳಲ್ಲಿ ರಕ್ತಸ್ರಾವವಾಗುವುದಕ್ಕೆ ಕಾರಣ ಏನು ಎಂದು ನೋಡೋಣ...

ಮಧುಮೇಹ
ದವಡೆಗಳಲ್ಲಿ ರಕ್ತ ಬರುವುದಕ್ಕೂ, ಮಧುಮೇಹಕ್ಕೂ ಅತ್ಯಂತ ನಿಕಟ ಸಂಬಂಧವಿದೆ. ಮಧುಮೇಹ ಬರುವುದಕ್ಕೂ ಮೊದಲು ದವಡೆಗಳಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ಒಮ್ಮೊಮ್ಮೆ ದಂತಕುಳಿ ಸಮಸ್ಯೆ ಸಹ ಕಾಣಿಸಿಕೊಳ್ಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಧುಮೇಹ
ದವಡೆಗಳಲ್ಲಿ ರಕ್ತಸ್ರಾವವಾಗುವಾಗ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುವುದಿಲ್ಲ. ಮಧುಮೇಹಿಗಳು ಅದಕ್ಕಾಗಿ ಬಾಯಿಯ ಆರೋಗ್ಯವನ್ನು ಗಂಭೀರವಾಗಿ ತೆಗೆದುಕೊಂಡು ಸರಿಯಾಗಿ ಇರಿಸಿಕೊಳ್ಳಬೇಕಾದ ಅಗತ್ಯವಿರುತ್ತದೆ.

ತ್ರೊಂಬೊಸಿಟೊಪೆನಿಯಾ
ಇದು ರಕ್ತದಲ್ಲಿ ಕಿರುತಟ್ಟೆಗಳ ಕೊರತೆಯಿಂದ ಬರುವ ಒಂದು ಸ್ಥಿತಿ. ಇದು ಸಂಭವಿಸಿದಾಗ ದವಡೆಗಳಲ್ಲಿ ಮತ್ತು ಕೋಶಗಳಲ್ಲಿ ರಕ್ತ ಸ್ರಾವವನ್ನುಂಟು ಮಾಡುತ್ತದೆ. ಹೀಗೆ ಇರುವಾಗ ಸಣ್ಣ ತ್ರೊಂಬೊಸಿಟೊಪೆಇನಿಯಾ ಸಹ ಅಥವಾ ಒಮ್ಮೊಮ್ಮೆ ಗಾಯವು ಸಹ ದವಡೆಗಳಲ್ಲಿ ರಕ್ತಸ್ರಾವವನ್ನುಂಟು ಮಾಡುತ್ತದೆ.

ಎಚ್‌ಐವಿ
ತೊಂಬತ್ತು ಶೇಕಡಾ ಎಚ್‌ಐವಿ ಪಾಸಿಟಿವ್ ರೋಗಿಗಳಲ್ಲಿ, ಯಾವುದಾದರು ಒಂದು ದಂತ ಸಮಸ್ಯೆ ಕಂಡು ಬರುತ್ತದೆ. ಅವುಗಳಲ್ಲಿ ದವಡೆ ಸಮಸ್ಯೆಗಳು, ದವಡೆಗಳಲ್ಲಿ ರಕ್ತಸ್ರಾವ, ಹಲ್ಲು ಚಿಗುರು ಮತ್ತು ದಂತಕುಳಿಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಹಾಗೆಂದು ರಕ್ತಸ್ರಾವವಾದರೆ ಅದು ಎಚ್‌ಐವಿಯ ಮುನ್ಸೂಚನೆಯಲ್ಲ. ಆದರೆ ನಿಮ್ಮ ಬಾಯಿಯ ಆರೋಗ್ಯವು ಗಂಭೀರ ಸ್ವರೂಪವಾದ ಇನ್‌ಫೆಕ್ಷನ್‌ನಿಂದ ಕೂಡಿದ್ದರೆ, ಅದನ್ನು ಉದಾಸೀನ ಮಾಡಬೇಡಿ.

ಗರ್ಭಿಣಿಯರಲ್ಲಿ ಕಂಡು ಬರುವ ದಂತಕುಳಿ
ಗರ್ಭಿಣಿಯರಲ್ಲಿ ದಂತಕುಳಿ ಮತ್ತು ಹಲ್ಲು ಜುಮುಗುಟ್ಟುವಿಕೆ ಸಾಮಾನ್ಯ. ಗರ್ಭಿಣಿಯರಲ್ಲಿ ಕಂಡು ಬರುವ ಹಾರ್ಮೋನ್‌ಗಳು ದವಡೆಗಳಲ್ಲಿ ಊತವನ್ನುಂಟು ಮಾಡುತ್ತವೆ ಹಾಗು ಅವುಗಳಿಗೆ ಉರಿಯೂತವನ್ನು ತರುತ್ತವೆ. ಅಲ್ಲದೆ ಅವುಗಳಲ್ಲಿ ರಕ್ತಸ್ರಾವವನ್ನು ಸಹ ಉಂಟು ಮಾಡುತ್ತವೆ.

ಗರ್ಭಿಣಿಯರಲ್ಲಿ ಕಂಡು ಬರುವ ದಂತಕುಳಿ
ನೆನಪಿಡಿ ನಿಮ್ಮ ಹೊಟ್ಟೆಯಲ್ಲಿ ಬೆಳೆಯುವ ಭ್ರೂಣವು ಸಹ ನಿಮ್ಮ ಬಾಯಿಯ ಆರೋಗ್ಯವನ್ನು ಬಯಸುತ್ತದೆ. ನಿಮ್ಮ ಬಾಯಿಯ ಆರೋಗ್ಯ ಚೆನ್ನಾಗಿದ್ದರೆ ಅದು ಸಹ ಚೆನ್ನಾಗಿ ಬೆಳೆಯುತ್ತದೆ. ಆದ್ದರಿಂದ ಗರ್ಭಿಣಿಯಾಗಿರುವಾಗ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಸಲುವಾಗಿ ನಿಮ್ಮ ಹಲ್ಲುಗಳ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳಿ. ಗರ್ಭಿಣಿಯಾಗುವ ಮುನ್ನ ದಂತವೈದ್ಯರನ್ನು ಸಂಪರ್ಕಿಸಿ, ಒಮ್ಮೆ ಹಲ್ಲು ಪರೀಕ್ಷಿಸಿಕೊಳ್ಳಿ.



Click it and Unblock the Notifications