ರಕ್ತ ಹೆಪ್ಪುಗಟ್ಟಲು ಇವುಗಳೂ ಕೂಡ ಕಾರಣವಾಗಿರಬಹುದು..

By Su.Ra

ರಕ್ತ ಹೇಗಿರುತ್ತೆ ಕೇಳಿದ್ರೆ ಪ್ರತಿಯೊಬ್ಬರೂ ಹೇಳ್ತಾರೆ ಕೆಂಪು ಬಣ್ಣದಲ್ಲಿರುತ್ತೆ. ಗಾಯವಾದಾಗ ನಮ್ಮ ದೇಹದಿಂದ ಹರಿದು ಹೊರ ಬರುತ್ತೆ. ಅಂದ್ರೆ ರಕ್ತ ದ್ರವರೂಪದಲ್ಲಿರುತ್ತೆ ಅಂತ. ಆದ್ರೆ ಈ ದ್ರವರೂಪದ ರಕ್ತ ಕೆಲವರಲ್ಲಿ ದೇಹದ ಕೆಲವು ಭಾಗದಲ್ಲಿ ಗಟ್ಟಿಯಾಗಿ ಬಿಡಬಹುದು. ಆಗ ಸಮಸ್ಯೆ ಕಟ್ಟಿಟ್ಟ ಬುತ್ತಿ. ಅದನ್ನೇ ಬ್ಲಡ್ ಕ್ಲಾಟಿಂಗ್ ಅಂತ ಇಂಗ್ಲೀಷಿನಲ್ಲಿ ಕರೆಯೋದು. ಬ್ಲಡ್ ಕ್ಲಾಟಿಂಗ್ ಸಮಸ್ಯೆಗೆ ಹಲವು ಕಾರಣಗಳಿರುತ್ತೆ. ಸಹಜವಾಗಿ ಬ್ಲಡ್‌ ಕ್ಲಾಟ್ ಆದ ಸಂದರ್ಭದಲ್ಲಿ ನೋವು ಕಾಣಿಸಿಕೊಳ್ಳೋದು ಇಲ್ಲವೇ ರಕ್ತ ಹರಿದಾಡಲು ಸಹಾಯಕವಾಗಿರುವ ನರಗಳು ಊದಿಕೊಳ್ಳೋದು, ಚರ್ಮ ಕೆಂಪಗಾಗುವುದು ಇತ್ಯಾದಿಗಳಾಗುತ್ತೆ. ಆದ್ರೆ ವಿಪರೀತ ರೂಪದಲ್ಲಿ ಬ್ಲಡ್ ಕ್ಲಾಟಿಂಗ್ ಸಮಸ್ಯೆ ಇದ್ದಲ್ಲಿ ಮನುಷ್ಯ ಸಾಯಲೂ ಬಹುದು.

ನಿಮಗೆ ಗೊತ್ತಾ ವಿಷಪೂರಿತ ಹಾವು ಕಚ್ಚಿದಾಗ ಆಗೋದು ಇದೇ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆ, ಹಾವಿನ ವಿಷ ಮನುಷ್ಯನ ರಕ್ತವನ್ನು ದ್ರವರೂಪದಿಂದ ಘನರೂಪಕ್ಕೆ ತೆರಳುವಂತೆ ಮಾಡಿ ಬಿಡುತ್ತೆ. ಆಗ ದೇಹದಲ್ಲಿ ರಕ್ತಸಂಚಾರ ಸಹಜವಾಗಿ ನಿಲ್ಲುತ್ತೆ. ಹೃದಯಕ್ಕೆ ರಕ್ತವೇ ಸಂಚಾರವಾಗದೇ ಇದ್ದಾಗ ಮನುಷ್ಯ ಇನ್ನೇನು ಮುಗಿದ ಕಥೆಯೇ. ಆದ್ರೆ ಕೆಲವು ನಮ್ಮ ದೈನಂದಿನ ಪ್ರಕ್ರಿಯೆಯಲ್ಲೂ ಕೂಡ ರಕ್ತ ಕ್ಲಾಟ್ ಆಗಬಹುದು.

ಈ ದೈನಂದಿನ ಪ್ರಕ್ರಿಯೆಯಲ್ಲಿ ಬ್ಲಡ್ ಕ್ಲಾಟ್ ಆದಾಗ ಕೆಲವೊಮ್ಮೆ ಸಣ್ಣ ಪ್ರಮಾಣದಿಂದ ಹಿಡಿದು ದೊಡ್ಡ ಪ್ರಮಾಣದವರೆಗೂ ಸಮಸ್ಯೆಗೆ ಕಾರಣವಾಗಿರಬಹುದು. ಹಾಗಾದ್ರೆ ನಮ್ಮ ಯಾವೆಲ್ಲ ಚಟುವಟಿಕೆಗಳು ನಮ್ಮ ರಕ್ತಸಂಚಾರಕ್ಕೆ ಸಮಸ್ಯೆ ಉಂಟು ಮಾಡಬಹುದು. ಮುಂದೆ ಓದಿ..

ಒಂದೇ ಪೊಸಿಷನ್‌ನಲ್ಲಿ ತುಂಬಾ ಸಮಯದವರೆಗೆ ಕುಳಿತುಕೊಳ್ಳೋದು

ಒಂದೇ ಪೊಸಿಷನ್‌ನಲ್ಲಿ ತುಂಬಾ ಸಮಯದವರೆಗೆ ಕುಳಿತುಕೊಳ್ಳೋದು

ಯಾರು ಒಂದೇ ಪೊಸಿಷನ್ ನಲ್ಲಿ ಗಂಟೆಗಳ ಕಾಲ ಕುಳಿತುಕೊಂಡಿರ್ತಾರೋ ಅಂತವರಿಗೆ ರಕ್ತ ಸಂಚಾರ ವ್ಯತ್ಯಯವಾಗುತ್ತೆ. ಹಾಗಾಗಿ ಕುಳಿತುಕೊಂಡಾಗ ಅಥವಾ ನೀವೇನೇ ಕೆಲಸ ನಿರ್ವಹಿಸುತ್ತಿರುವಾಗ ಆದಷ್ಟು ಒಂದೇ ಪೊಸಿಷನ್‌ನಲ್ಲಿ ತುಂಬಾ ಸಮಯದವರೆಗೆ ಇರಬೇಡಿ. ಕಾಲು ಮರಗಟ್ಟುವುದು, ಝುಮ್ ಅನ್ನುವ ಸಮಸ್ಯೆಗೆ ಕಾರಣವೇ ಈ ಬ್ಲಡ್ ಕ್ಲಾಟಿಂಗ್.. ರಕ್ತಸಂಚಾರದಲ್ಲಿ ವ್ಯತ್ಯಯವಾದಾಗ ಹೀಗಾಗುವುದು ಸಹಜ.

ಗರ್ಭಾವಸ್ಥೆ

ಗರ್ಭಾವಸ್ಥೆ

ಮಹಿಳೆ ಗರ್ಭಾವಸ್ಥೆಯಲ್ಲಿರುವ ಸಂದರ್ಭದಲ್ಲಿ ಹೆಚ್ಚಿನ ಮಹಿಳೆಯರು ರಕ್ತ ಸಂಚಾರದಲ್ಲಿ ವ್ಯತ್ಯಯವಾಗುವ ಸಮಸ್ಯೆಯನ್ನು ಎದುರಿಸ್ತಾರೆ. ಮತ್ತು ಕೈಕಾಲುಗಳು ಹಿಡಿದುಕೊಳ್ಳುವಂತಾಗುವುದು ಮತ್ತು ಝೂಮ್ ಹಿಡಿದಂತಾಗುವ ಸಮಸ್ಯೆಯನ್ನು ಎದುರಿಸ್ತಾರೆ. ಇದು ಕೂಡ ರಕ್ತಸಂಚಾರದಲ್ಲಿ ಏರುಪೇರಾಗಿ ಬ್ಲಡ್ ಕ್ಲಾಟ್ ಆಗಿರುವ ಸಾಧ್ಯತೆಯಾಗಿರುತ್ತೆ. ಹಾಗಾಗಿ ಪ್ರಗ್ನೆಂಟ್ ಮಹಿಳೆ ಹೆಚ್ಚು ವ್ಯಾಯಾಮ ಅಭ್ಯಾಸ ಮಾಡಿಕೊಳ್ಳೋದು ಉತ್ತಮ. ಆಗ ಈ ಸಮಸ್ಯೆಯಿಂದ ದೂರವಿರಬಹುದು.

ನಿಮ್ಮ ತೂಕ ಮತ್ತು ಎತ್ತರ

ನಿಮ್ಮ ತೂಕ ಮತ್ತು ಎತ್ತರ

ತೂಕ ಮತ್ತು ಎತ್ತರ ಹೊಂದಾಣಿಕೆಯಾಗಿರಬೇಕು. ನಿಮ್ಮ ಎತ್ತರಕ್ಕೆ ಸರಿಯಾಗಿ ನಿಮ್ಮ ತೂಕವಿದ್ದರೆ ಓಕೆ. ಓವರ್ ವೈಟ್ ಇದ್ದಲ್ಲಿ ಖಂಡಿತ ಬ್ಲಡ್ ಕ್ಲಾಟಿಂಗ್ ಸಮಸ್ಯೆ ಇದ್ದೇ ಇರುತ್ತೆ. ನಿಮ್ಮ ತೂಕ ಇಳಿಸಿಕೊಳ್ಳದೇ ಇದ್ದಲ್ಲಿ ಖಂಡಿತ ಅದು ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬಿರುತ್ತೆ. ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಿ. ಆ ನಿಟ್ಟಿನಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇರುವ ಆಹಾರ ಸೇವನೆ ಒಳಿತು.

ಇರ್ರೆಗ್ಯುಲರ್ ಹಾರ್ಟ್ ಬೀಟ್

ಇರ್ರೆಗ್ಯುಲರ್ ಹಾರ್ಟ್ ಬೀಟ್

ಅದ್ಯಾರಿಗೆ ಇರ್ರೆಗ್ಯುಲರ್ ಹಾರ್ಟ್ ಬೀಟ್ ಇರುತ್ತೆ. ಹುಟ್ಟಿದಾಗಿನಿಂದ ಸಾಯೋತನಕ ಹೃದಯ ಲಬ್ ಡಬ್ ಅಂತ ಬಡ್ಕೊಳ್ತಾನೆ ಇರುತ್ತಲ್ಲ ಅಂತ ನೀವು ಹೇಳ್ಬಹುದು. ನಿಜ ನೀವು ಹೇಳೋದು ಕರೆಕ್ಟ್ ಬಡ್ಕೊಳ್ತಾನೆ ಇರುತ್ತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇರ್ರೆಗ್ಯುಲರ್ ಹಾರ್ಟ್ ಬೀಟ್

ಇರ್ರೆಗ್ಯುಲರ್ ಹಾರ್ಟ್ ಬೀಟ್

ಇರ್ರೆಗ್ಯುಲರ್ ಹಾರ್ಟ್ ಬೀಟ್ ಅಂದ್ರೆ ಸಿಂಪಲ್ ಭಾಷೆಯಲ್ಲಿ ಹೇಳೋದಾದ್ರೆ ಒಮ್ಮೊಮ್ಮೆ ಸ್ಲೋ, ಒಮ್ಮೊಮ್ಮೆ ಫಾಸ್ಟ್ ಆಗಿ ರಕ್ತಪಂಪಾಗುವಿಕೆ ಅಂತ ಹೇಳಬಹುದು. ಹೈ ಬ್ಲಡ್ ಪ್ರೆಷರ್, ಲೋ ಬ್ಲಡ್ ಪ್ರಷರ್ ಸಮಸ್ಯೆ ಅಂತಲೂ ಹೇಳ್ಬಹುದು. ಯಾರಲ್ಲಿ ಈ ಸಮಸ್ಯೆ ಇರುತ್ತೋ ಅಂತವರಿಗೆ ಆಗಾಗ ರಕ್ತ ಸಂಚಾರದಲ್ಲಿ ವ್ಯತ್ಯಯ ಕಾಣಿಸಿಕೊಳ್ಳಬಹುದು. ಬ್ಲಡ್ ಕ್ಲಾಟ್ ಆಗಿರಬಹುದು.

ಹುಟ್ಟು ನಿಯಂತ್ರಕ ಮಾತ್ರೆಗಳು

ಹುಟ್ಟು ನಿಯಂತ್ರಕ ಮಾತ್ರೆಗಳು

ನೈಸರ್ಗಿಕವಾಗಿ ಪ್ರಗ್ನೆಂಟ್ ಆಗದಂತೆ ಜಾಗೃತೆ ವಹಿಸುವವರಿಗಿಂತ ಇತ್ತೀಚೆಗೆ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಮಾತ್ರೆಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಅಧಿಕಗೊಂಡಿದೆ. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಅನ್ನೋದು ಎರಡು ಹಾರ್ಮೋನುಗಳು. ಇವು ಮಹಿಳೆ ಪ್ರಗ್ನೆಂಟ್ ಆಗಲು ಪ್ರಮುಖ ಕಾರಣವಾಗಿರುತ್ತೆ. ಇವುಗಳನ್ನು ಮಾತ್ರೆಗಳ ಮೂಲಕ ನಿಯಂತ್ರಿಸುವ ಪ್ರಕ್ರಿಯೆಯಿಂದಾಗಿ ನಿಮ್ಮ ರಕ್ತಸಂಚಾರದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು.. ಹಾರ್ಮೋನಲ್ ಓರಿಯೆಂಟೆಂಡ್ ಥೆರಪಿಗಳ ಮೊರೆ ಹೋಗೋದ್ರಿಂದ ಕೂಡ ಬ್ಲಡ್ ಕ್ಲಾಟ್ ಆಗುತ್ತೆ.

ಕ್ಯಾನ್ಸರ್ ಸಮಸ್ಯೆಯಿಂದ ಬಳಲುವವರು

ಕ್ಯಾನ್ಸರ್ ಸಮಸ್ಯೆಯಿಂದ ಬಳಲುವವರು

ಮೆದುಳು, ಕಿಡ್ನಿ, ಲಂಗ್ಸ್, ಹೊಟ್ಟೆಯ ಕ್ಯಾನ್ಸರ್ ಇರುವವರಿಗೆ ಬ್ಲಡ್ ಕ್ಲಾಟ್ ಆಗುವ ಸಂದರ್ಬ ಹೆಚ್ಚು. ಕ್ಯಾನ್ಸರ್ ನಿಮ್ಮ ಬ್ಲಡ್ ವೆಸಲ್ಸ್ ಗಳನ್ನು ಡ್ಯಾಮೇಜ್ ಮಾಡುತ್ತೆ. ಬ್ಲಡ್ ಕ್ಲಾಟ್ ಆಗದಂತೆ ತಡೆಯುವ ಪ್ರೋಟೀನ್ ಗಳ ಉತ್ಪತ್ತಿಯನ್ನು ನಿಯಂತ್ರಿಸುತ್ತೆ.

ಕ್ಯಾನ್ಸರ್ ಸಮಸ್ಯೆಯಿಂದ ಬಳಲುವವರು

ಕ್ಯಾನ್ಸರ್ ಸಮಸ್ಯೆಯಿಂದ ಬಳಲುವವರು

ಅದರಲ್ಲೂ ಬ್ಲಡ್ ಕ್ಯಾನ್ಸರ್ ಸಮಸ್ಯೆ ಇರುವವರಿಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅವರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಕಂಡುಬಂದೇ ಬರುತ್ತೆ. ಇಂತಹ ಕೇಸ್ ಗಳಲ್ಲಿ ವೈದ್ಯರ ಮಾರ್ಗದರ್ಶನವಿಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ.

ಸಿಗರೇಟ್ ಸೇದುವುದು

ಸಿಗರೇಟ್ ಸೇದುವುದು

ಸರ್ವ ರೋಗಗಳಿಗೂ ಕಾರಣವಾಗುವ ಕೆಟ್ಟ ಚಟಗಳಲ್ಲಿ ಒಂದು ಸಿಗರೇಟ್ ಸೇದುವಿಕೆ. ಯಾರು ಅತಿಯಾಗಿ ಸಿಗರೇಟು ಸೇದುತ್ತಾರೋ ಅವರ ರಕ್ತ ಶುದ್ಧವಾಗಿರಲು ಸಾಧ್ಯವೇ ಇಲ್ಲ. ಕಾಯಿಲೆಗಳ ಸರಮಾಲೆಯನ್ನೇ ಹೊದ್ದುಕೊಳ್ಳಬೇಕಾಗುವ ಪರಿಸ್ಥಿತಿ ಅವರಿಗೆ ಶಾಪದಂತೆ. ರಕ್ತಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಈ ಕೆಟ್ಟ ಚಟದಿಂದ ಎಷ್ಟು ದೂರವಿರುತ್ತಿರೋ ಅಷ್ಟು ಒಳ್ಳೇದು. ಹಂತಹಂತವಾಗಿ ಮನುಷ್ಯನ ಸಾವಿನ ಕೂಪಕ್ಕೆ ತಳ್ಳುವ ಕೆಟ್ಟ ಚಟ ಅಂದ್ರೆ ಸಿಗರೇಟ್ ಸೇದುವಿಕೆ.

ಹಳೆಯ ಆಪರೇಷನ್‌ಗಳು

ಹಳೆಯ ಆಪರೇಷನ್‌ಗಳು

ಕೆಲವು ಸಂದರ್ಭದಲ್ಲಿ, ಕೆಲವರಿಗೆ ಅವರ ಜೀವನದಲ್ಲಿ ನಡೆದ ಹಳೆಯ ಯಾವುದೋ ಆಪರೇಷನ್ ಕಾರಣವೇ ಇಲ್ಲದೇ ಬ್ಲಡ್ ಕ್ಲಾಟ್ ಸಮಸ್ಯೆಗೆ ಕಾರಣವಾಗಬಹುದು. ಉದಾಹರಣೆಗೆ ಮೂಳೆ ಪ್ರಾಕ್ಚರ್ ಆದಾಗ ನಡೆದ ಆಪರೇಷನ್ ಇತ್ಯಾದಿಗಳು ಭವಿಷ್ಯದಲ್ಲಿ ಸುಮ್ಮನೇ ಕೂತಿದ್ದಾಗ ರಕ್ತ ಹಿಡಿದುಹೊಂಡಂತ ಫೀಲಿಂಗ್ ನೀಡಬಹುದು.

ಫ್ಯಾಮಿಲಿ ಹಿಸ್ಟರಿ ಕೂಡ ಕೆಲವೊಮ್ಮೆ ಕಾರಣವಾಗುತ್ತೆ

ಫ್ಯಾಮಿಲಿ ಹಿಸ್ಟರಿ ಕೂಡ ಕೆಲವೊಮ್ಮೆ ಕಾರಣವಾಗುತ್ತೆ

ಮಾಯೋ ಕ್ಲಿನಿಕ್ ರಿಸರ್ಚ್ ಸೆಂಟರ್ ಈ ಬಗ್ಗೆ ರಿಚರ್ಸ್ ಮಾಡಿದೆ. ಹೆಚ್ಚಿನವ್ರಿಗೆ ತಮಗಿರೋ ಈ ಸಮಸ್ಯೆಯ ಬಗ್ಗೆ ಗೊತ್ತೇ ಇರೋದಿಲ್ಲವಂತೆ. ನಿಮ್ಮ ಹಿಂದಿನ ತಲೆಮಾರಿನವರಿಗೆ ಯಾರಿಗಾದ್ರೂ ಆಗಾಗ ಬ್ಲಡ್ ಕ್ಲಾಟ್ ಆಗುವ ಸಮಸ್ಯೆ ತಲೆದೋರಿದ್ದಲ್ಲಿ ಅದು ನಿಮ್ಮನ್ನೂ ಬಾಧಿಸುವ ಸಾಧ್ಯತೆಗಳಿರುತ್ತದೆಯಂತೆ. ಆದ್ರೆ ತೀರಾ ರೇರ್ ಕೇಸ್ ಗಳಲ್ಲಿ ಅನ್ನುವುದನ್ನು ಮರೆಯುವಂತಿಲ್ಲ.

ನಿಮ್ಮ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತೆ

ನಿಮ್ಮ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತೆ

ಯಾವ ವಯಸ್ಸಲ್ಲಿ ಬೇಕಾದ್ರೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ರೆ 60 ರ ನಂತ್ರ ಈ ಸಮಸ್ಯೆ ಹೆಚ್ಚೆಂದು ಹೇಳ್ಬಹುದು. ಡಾಕ್ಟರ್ ಬಳಿ ಕಾಲಕಾಲಕ್ಕೆ ಸರಿಯಾಗಿ ಚೆಕ್ ಅಪ್ ಮಾಡಿಸಿಕೊಳುತ್ತಾ ಇರಬೇಕು, ನಿಮ್ಮ ಲೈಫ್ ಸ್ಟೈಲ್ ಮತ್ತು ನಿಮ್ಮ ಆಹಾರ ರಕ್ತಸಂಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತೆ.ಉತ್ತಮ ಆಹಾರ ಸೇವನೆಯಿಂದ ರಕ್ತದ ಪರಿಚಲನೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯಯುತವಾದ ಜೀವನ ನಡೆಸಲು ಸಾಧ್ಯವಾಗುತ್ತೆ.

X
Desktop Bottom Promotion