Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮೂಲವ್ಯಾಧಿಯ ನಿಯಂತ್ರಣಕ್ಕೆ-ಆಪಲ್ ಸೈಡರ್ ವಿನೆಗರ್!
ಆ ನೋವು, ಕಿರಿಕಿರಿ ಶತ್ರುವಿಗೆ ಬೇಡ, ಅದು ನನ್ನಿಂದಲೇ ಕೊನೆಗೊಳ್ಳಲಿ ಎಂದು ಪ್ರತಿಯೊಬ್ಬ ಪೈಲ್ಸ್ (ಮೂಲವ್ಯಾಧಿ) ರೋಗಿಯು ಬೇಡಿಕೊಳ್ಳುತ್ತಾನೆ. ಅದರ ನೋವು ಅಪಾರ. ಕೆಲವೊಮ್ಮೆ ಶೌಚಾಲಯದಲ್ಲಿ ಕುಳಿತುಕೊಳ್ಳಲು ಆಗದು. ನೋವಿನಿಂದ ನರಳಾಟ ಯಾರಿಗೂ ಬೇಡ ಎನ್ನುವಂತಾಗುತ್ತದೆ. ಆದರೆ ಜೀವನಶೈಲಿಯಿಂದಾಗಿ ಬರುವ ಇದನ್ನು ನಾವು ಸ್ವೀಕರಿಸಲೇ ಬೇಕು ಮತ್ತು ನೋವನ್ನು ಅನುಭವಿಸಬೇಕು.

ರಕ್ತನಾಳಗಳು ಗುದನಾಳದ ಪ್ರದೇಶದಲ್ಲಿ ಉಬ್ಬಿ ಮತ್ತು ಊತ ಉಂಟಾದಾಗ ನೋವು ಹಾಗೂ ಅತಿಯಾದ ರಕ್ತಸ್ರಾವ ಉಂಟಾಗುತ್ತದೆ. ಮಲಬದ್ಧತೆ, ಜೀರ್ಣಾಂಗದ ಸಮಸ್ಯೆ, ಭಾರವಾದ ವಸ್ತುಗಳನ್ನು ಎತ್ತುವುದು, ಕರುಳನ್ನು ಕೆರಳಿಸುವ ಸಹಲಕ್ಷಣಗಳು, ಗರ್ಭಧಾರಣೆ ವೇಳೆ ಕರುಳಿಗೆ ಒತ್ತಡ ಬೀಳುವುದು, ಬೊಜ್ಜು ಮತ್ತು ಗುದ ಸಂಭೋಗ ಇತ್ಯಾದಿ ಪೈಲ್ಸ್ ಅಥವಾ ಮೂಲವ್ಯಾಧಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ.
ಪೈಲ್ಸ್ ಇರುವ ರೋಗಿಯು ಹಲವಾರು ಸಮಸ್ಯೆ, ಖಿನ್ನತೆ ಮತ್ತು ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ. ಪೈಲ್ಸ್ ನಿಂದಾಗಿ ರಕ್ತಸ್ರಾವ, ಊತ, ಕೆರೆತ ಮತ್ತು ಸೋಂಕು, ನೋವು ಗುದನಾಳದಲ್ಲಿ ಉಂಟಾಗುವ ಸಾಧ್ಯತೆಗಳಿವೆ. ಆರಂಭಿಕ ಹಂತದಲ್ಲೇ ಇದಕ್ಕೆ ಚಿಕಿತ್ಸೆ ನೀಡಿಲ್ಲವೆಂದಾದರೆ ಮುಂದೆ ಇದರಿಂದ ದೊಡ್ಡ ಸಮಸ್ಯೆ ಎದುರಾಗಬಹುದು. ಹಲವಾರು ರೋಗಿಗಳು ಇದಕ್ಕೆ ಮದ್ದು ಮಾಡಿದರೂ ಇದರಿಂದ ಮುಕ್ತಿ ಪಡೆಯಲು ಅವರಿಗೆ ಸಾಧ್ಯವಾಗಿಲ್ಲ.
ಆದರೆ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಒಂದು ಸಾಮಗ್ರಿಯು ಕೇವಲ 24 ಗಂಟೆಯಲ್ಲಿ ಪೈಲ್ಸ್ ಅನ್ನು ನಿವಾರಿಸಬಲ್ಲದು ಎನ್ನುವುದು ನಿಮಗೆ ತಿಳಿದಿದೆಯಾ? ಆಪಲ್ ಸೈಡರ್ ವಿನೆಗರ್ ಪೈಲ್ಸ್ ರೋಗಿಗಳಿಗೆ ರಾಮಬಾಣ. ಪೈಲ್ಸ್ ನ್ನು ದೂರ ಓಡಿಸಲು ಇದನ್ನು ಹೇಗೆ ಬಳಸುವುದು ಎನ್ನುವುದು ನೀವು ತಿಳಿದುಕೊಳ್ಳಿ. ಮೂಲವ್ಯಾಧಿ ಗುಣವಾಗಲು ಪಾಲಿಸಲೇಬೇಕಾದ ಪಥ್ಯ
ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್‌ನಲ್ಲಿ ಸೋಂಕು ನಿವಾರಕ ಗುಣಗಳಿದ್ದು, ಇದು ಗುದನಾಳದಲ್ಲಿ ಸೋಂಕಿನಿಂದ ಉಂಟು ಮಾಡುವ ನೋವಿನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ನಲ್ಲಿರುವ ಉರಿಯೂತ ಶಮನಕಾರಿ ಗುಣಗಳು ನೋವು ಹಾಗೂ ಊತವನ್ನು ಕಡಿಮೆ ಮಾಡುವುದು.
ಇದರಿಂದಾಗಿ ಪೈಲ್ಸ್ ನಿಂದ ಉಂಟಾಗುವ ನೋವು ತುಂಬಾ ಕಡಿಮೆಯಾಗುವುದು. ಆಪಲ್ ಸೈಡರ್ ವಿನೆಗರ್ ಅನ್ನು ಇತರ ನೈಸರ್ಗಿಕ ಸಾಮಗ್ರಿ ಅಲೋವೆರಾದೊಂದಿಗೆ ಬೆರೆಸಿಕೊಂಡು ಬಳಸಿದಾಗ ಉರಿಯೂತ ಶಮನಕಾರಿ ಗುಣವು ಹೆಚ್ಚುವುದು ಮತ್ತು ಪೈಲ್ಸ್ ಅನ್ನು ಪರಿಣಾಮಕಾರಿಯಾಗಿ ನಿವಾರಿಸಲು ನೆರವಾಗುವುದು. ಈ ವಿಧಾನದಿಂದ ಮೂಲವ್ಯಾಧಿ ಗುಣಪಡಿಸಬಹುದು
ಇದನ್ನು ಬಳಸುವುದು ಹೇಗೆ?
*ಒಂದು ಸಣ್ಣ ಪಿಂಗಾಣಿಯಲ್ಲಿ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಹಾಕಿ. ಇದರಲ್ಲಿ ಸ್ವಚ್ಛವಾಗಿರುವ ಬಟ್ಟೆ ಅಥವಾ ಹತ್ತಿ ಉಂಡೆಯನ್ನು ಅದ್ದಿಕೊಳ್ಳಿ. ಇದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿ. ನಿಮಗೆ ನೋವಿನಿಂದ ಪರಿಹಾರ ಸಿಗುವ ತನಕ ಹಚ್ಚುತ್ತಿರಿ. ಆಪಲ್ ಸೈಡರ್ ವಿನೆಗರ್‌ನ ಹತ್ತಾರು ಅನುಕೂಲಗಳು...
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


