Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಾಳಿಂಬೆ ಸಿಪ್ಪೆ ಬಳಸಿ, ಬಾಯಿಯ ದುರ್ವಾಸನೆ ಹೋಗಲಾಡಿಸಿ!
ಕೆಲವೊಮ್ಮೆ ನಮಗರಿವಿಲ್ಲದಂತೆಯೇ ನಮ್ಮ ಬಾಯಿಯಿಂದ ದುರ್ವಾಸನೆ ಸೂಸುತ್ತಿದ್ದು ಎದುರಿನವರಿಗೆ ವಾಕರಿಕೆ ಹಾಗೂ ನಮಗೆ ಬಹಳಷ್ಟು ಮುಜುಗರ ಉಂಟಾಗಬಹುದು. ಬಾಯಿಯ ದುರ್ಗಂಧಕ್ಕೆ ಹಲವಾರು ಕಾರಣಗಳಿವೆ. ಊಟದ ನಡುವೆ ಅಥವಾ ಬಳಿಕ ಸೇವಿಸಿದ್ದ ಈರುಳ್ಳಿ, ಸರಿಯಾಗಿ ಹಲ್ಲುಜ್ಜಿಕೊಳ್ಳದೇ ಇದ್ದದ್ದು, ಊಟದ ಬಳಿಕ ಮುಕ್ಕಳಿಸದೇ ಇದ್ದದ್ದು (ಸಿದ್ಧ ಆಹಾರ ತಿನ್ನುವವರದ್ದೆಲ್ಲಾ ಇದೇ ಅವಸ್ಥೆ), ಹಲ್ಲುಗಳ ಸಂದುಗಳಲ್ಲಿ ಉಳಿದಿರುವ ಆಹಾರದ ತುಣುಕುಗಳು, ಹಲ್ಲುಗಳಲ್ಲಿ ಕುಳಿ, ನೀರು ಕುಡಿಯದೇ ನಿರ್ಜಲೀಕರಣವಾಗಿರುವುದು ಮೊದಲಾದವು ಇದರ ಸಾಮಾನ್ಯ ಕಾರಣಗಳು.

ಅಷ್ಟೇ ಅಲ್ಲದೆ ನಮ್ಮ ಸೋಮಾರಿತನವೂ ಪ್ರಮುಖ ಕಾರಣವಾಗಿ ಬಿಡುತ್ತದೆ. ಪ್ರತಿಬಾರಿ ಊಟದ ಬಳಿಕ ಮುಕ್ಕಳಿಸಿ, ಆಗಾಗ ನೀರು ಕುಡಿಯುತ್ತಿರಿ, ಪದೇ ಪದೇ ತಿನ್ನಬೇಡಿ ಎಂದೆಲ್ಲಾ ಬೆತ್ತ ಹಿಡಿದು ನಮ್ಮ ಹಿರಿಯರು ತಿದ್ದಲು ಪ್ರಯತ್ನಿಸಿದ್ದರೂ ಅವರಿಗೇ ಬುದ್ಧಿ ಕಲಿಸಲು ನಾವು ಇದನ್ನೆಲ್ಲಾ ಮಾಡದೇ ಸೋಮಾರಿಗಳಾಗಿರುವುದು ಪ್ರಮುಖ ಕಾರಣ. ಕೆಲವೊಮ್ಮೆ ಎದುರಿಗೆ ಇರುವವರಿಗೆ ಬಿಡಿ, ಸ್ವತಃ ನಮಗೇ ಇದರ ದುರ್ಗಂಧ ಸಹಿಸಲು ಸಾಧ್ಯವಿಲ್ಲ. ವಾಸ್ತವವಾಗಿ ಹಲ್ಲುಗಳಲ್ಲಿ ಉಳಿದಿರುವ ಆಹಾರವನ್ನು ಬ್ಯಾಕ್ಟೀರಿಯಾಗಳು ಕೊಳೆಸಿ ಅದರಲ್ಲಿ ಗಂಧಕ ಉತ್ಪತ್ತಿಯಾಗುವಂತೆ ಮಾಡುವುದೇ ದುರ್ವಾಸನೆಗೆ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ದಾಳಿಂಬೆ ಹಣ್ಣಿನ ಸಿಪ್ಪೆಯು ನಿಮ್ಮ ಬಾಯಿಯ ದುರ್ವಾಸನೆ ಮತ್ತು ದಂತಕ್ಷಯದ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು. ಬಾಯಿ ದುರ್ನಾತ ಹೊಡೆಯುತ್ತಿದ್ದರೆ ಈ ಆಹಾರ ತಿನ್ನಿ
ದಾಳಿಂಬೆ ಹಣ್ಣನ್ನು ತಿಂದು ಉಳಿದ ಸಿಪ್ಪೆಯನ್ನು ಹೊರಗೆ ಬಿಸಾಡದೆ ನಾವು ತಿಳಿಸುವ ವಿಧಾನವನ್ನು ಬಳಸಿ ಹೆಚ್ಚು ಪ್ರಯೋಜನ ಹೊಂದಿರಿ. ಇದರಿಂದ ಕೆಟ್ಟ ದುರ್ವಾಸನೆ ಮತ್ತು ಜಿಂಜಿವೈಟಿಸ್ ಮತ್ತು ದಂತಕ್ಷಯದ ಸಮಸ್ಯೆಗಳನ್ನು ಶೀಘ್ರವಾಗಿ ಗುಣಮುಖ ಮಾಡಬಹುದು. ಈ ಲೇಖನದಲ್ಲಿ ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ಅನುಕೂಲ ಹೊಂದುವ ವಿಧಾನವನ್ನು ನಿಮಗಾಗಿ ನೀಡಲಾಗಿದೆ. ವಿವರಗಳಿಗೆ ಮುಂದೆ ಓದಿ...
ಹೇಗೆ ಉಪಯುಕ್ತ?
ದಾಳಿಂಬೆಯ ಸಿಪ್ಪೆಯಲ್ಲಿ ಎಲ್ಲಾಂಜಿಟಾನ್ನಿನ್ ಎಂಬ ಸತ್ವವಿದ್ದು, ಬ್ಯಾಕ್ಟೀರಿಯಾ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ದಂತಕ್ಷಯ ಉಂಟುಮಾಡುವ ಸೂಕ್ಷ್ಮ ಜೀವಿಗಳೊಂದಿಗೆ ಹೋರಾಡಿ ಸಮಸ್ಯೆಯನ್ನು ನಿವಾರಿಸುತ್ತದೆ. ಇತ್ತೀಚೆಗೆ ಆಲ್ಟರ್ನೇಟಿವ್ ಮೆಡಿಸಿನ್ ರಿವ್ಯೂನಲ್ಲಿ ಅಧ್ಯಯನದ ವರದಿಯೊಂದು ಪ್ರಕಟವಾಗಿದ್ದು, ಅದರ ಪ್ರಕಾರ ದಾಳಿಂಬೆ ಸಿಪ್ಪೆಯಿಂದ ಮಾಡಿದ ರಸವನ್ನು ನಿಮ್ಮ ಬಾಯಿಯ ಸ್ವಚ್ಛತೆಗೆ ಒಂದು ನಿಮಿಷಗಳ ಕಾಲ ಬಳಸಿದಲ್ಲಿ, ದಂತಕ್ಷಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಉತ್ಪತ್ತಿಯ ಪ್ರಮಾಣವನ್ನು ಶೇಖಡಾ 84 ರಷ್ಟು ತಡೆಯುತ್ತದೆ. ಇದೊಂದು ಉತ್ತಮ ಉರಿಯೂತ ನಿವಾರಕವೂ ಹೌದು. ಇದರಿಂದ ಒಸಡುಗಳ ಊತ ಮತ್ತು ನೋವು ಶೀಘ್ರ ನಿವಾರಣೆಯಾಗಿ ಒಸಡುಗಳಿಗೆ ಆರೈಕೆ ನೀಡುತ್ತದೆ.
ಉಪಯೋಗಿಸುವುದು ಹೇಗೆ?
ದುರ್ವಾಸನೆಯ ಉಸಿರಾಟವನ್ನು ನಿವಾರಿಸಲು ಒಂದು ಚಮಚ ಬಿಸಿಲಿನಿಂದ ಒಣಗಿಸಿದ ದಾಳಿಂಬೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಬೆಳಗ್ಗೆ ಎದ್ದ ಕೂಡಲೇ ಈ ಮಿಶ್ರಣದಿಂದ ನಿಮ್ಮ ಬಾಯಿಯನ್ನು ತೊಳೆಯಿರಿ. ಬಾಯಿಯ ದುರ್ವಾಸನೆ ತಡೆಯಲು 7 ಟಿಪ್ಸ್
ಒಸಡು ಸಮಸ್ಯೆ
ಒಸಡಿನ ಸಮಸ್ಯೆಯು ನಿಮ್ಮನ್ನು ಕಾಡುತ್ತಿದ್ದರೆ, ಒಸಡಿನ ಭಾಗಕ್ಕೆ ಒಣಗಿದ ದಾಳಿಂಬೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಹಲ್ಲುಜ್ಜುವ ಮುನ್ನ ಹಚ್ಚಿಕೊಳ್ಳಿ. 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿರಿ.
ದಂತಕ್ಷಯ ನಿವಾರಣೆಗೆ
ದಂತ ಕ್ಷಯವನ್ನು ನಿವಾರಿಸಲು ಮೇಲಿನಂತೆ ಮಿಶ್ರಣ ಮಾಡಿದ ದ್ರಾವಣವನ್ನು ಪ್ರತಿದಿನ ಬೆಳಗ್ಗೆ ಬಾಯಿ ಸ್ವಚ್ಛಗೊಳಿಸಲು ಉಪಯೋಗಿಸಿ. ಇದನ್ನು ಒಂದು ನಿಮಿಷಗಳ ಕಾಲ ಅನುಸರಿಸಿದರೆ ನೈಸರ್ಗಿಕವಾಗಿ ದಂತಕ್ಷಯದಿಂದ ಮುಕ್ತವಾಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

